ಮಾಸ್ಟರ್ ಆನಂದ್ ಪುತ್ರಿ ವಂಶಿಕ ಆನಂದ್ ಕಶ್ಯಪ (Master Anand daughter Vamshika Anand) ಈಗ ಇಡೀ ಕರ್ನಾಟಕಕ್ಕೆ ಗೊತ್ತು. ಎಲ್ಲರ ಪ್ರೀತಿಯ ವಂಶಿಯಾಗಿ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಇವರು ಮೊದಲಿಗೆ ನಮ್ಮಮ್ಮ ಸೂಪರ್ ಸ್ಟಾರ್ (Nammamma Superstar reality show) ಎನ್ನುವ ಕಲರ್ಸ್ ಕನ್ನಡ ವಾಹಿನಿ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡು ವಿನ್ನರ್ ಕೂಡ ಆಗಿದ್ದರು.
ಅಷ್ಟು ಚಿಕ್ಕ ವಯಸ್ಸಿಗೆ ಇಷ್ಟು ಚತುರತೆ ಹೊಂದಿದ್ದ ಈ ಬಾಲೆಯನ್ನ ನೋಡಿ ಅನೇಕರು ಬಾಯ ಮೇಲೆ ಬೆರಳಿಕೊಂಡಿದ್ದರು. ಈಕೆಯ ಹೈಪರ್ ಆಕ್ಟೀವ್ ನೆಸ್ ನಿಂದ ಇದೇ ಚಾನೆಲ್ ನಲ್ಲಿ ಪ್ರಸಾರವಾದ ಗಿಚ್ಚ ಗಿಲಿ ಗಿಲಿ (Gichcha GiliGili) ಎನ್ನುವ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಕೂಡ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು ಮತ್ತು ಆ ಶೋ ನ ವಿನ್ನರ್ ಕೂಡ ಆದರು.
ಕಿರುತೆರೆಯಲ್ಲಿ ಮಿಂಚುತ್ತಿದ್ದ ಇವರಿಗೆ ಅನೇಕ ಧಾರಾವಾಹಿಗಳಲ್ಲಿ ಹಾಗೂ ಕಿರುಚಿತ್ರಗಳಲ್ಲಿಯೂ ನಟಿಸುವ ಅವಕಾಶ ಬಂತು. ಈಗ ಯಾವ ಸೋಶಿಯಲ್ ಮೀಡಿಯಾ ಪೇಜ್ ತೆಗೆದರೂ ವಂಶಿ ಅವರ ವಿಡಿಯೋಗಳನ್ನು ನಾವು ಕಾಣುತ್ತಿರುತ್ತೇವೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ವಂಶಿಕ ಹೆಸರಲ್ಲಿ ಪೇಜ್ ಇದ್ದು ಈಗಾಗಲೇ ಲಕ್ಷಾಂತರ ಫಾಲೋಸ್ ಗಳನ್ನು ಹೊಂದಿದ್ದಾರೆ.
ವಂಶಿಕ ಅಭಿನಯಕ್ಕೆ ಬೆರಗಾಗಿ ಕರ್ನಾಟಕದ ಮನೆ ಮನೆಗಳಲ್ಲೂ ವಂಶಿಕಾಗಿ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಕೆ ಟ್ಯಾಲೆಂಟ್ ಬಗ್ಗೆ ಹೊಗಳಿಕೆ ಮಾತು ಎಷ್ಟು ಬರುತ್ತದೆ ಅದಕ್ಕೆ ಸರಿಸಮವಾಗಿ ನೆಗೆಟಿವ್ ಕಾಮೆಂಟ್ಸ್ ಗಳು ಇದ್ದೇ ಇರುತ್ತವೆ. ಇದುವರೆಗೂ ಕೂಡ ಇದನ್ನೆಲ್ಲ ನೋಡಿ ಸಹಿಸಿಕೊಂಡಿದ್ದ ಮಾಸ್ಟರ್ ಆನಂದ್ ಈಗ ಸ್ವಲ್ಪ ಖಾರವಾಗಿಯೇ ಇದಕ್ಕೆ ಪ್ರತಿಕ್ರಿಸಿದ್ದಾರೆ.
ಕಾರ್ಯಕ್ರಮ ಒಂದರಲ್ಲಿ ಈ ಮಾತುಗಳಿಗೆ ತಿರುಗೇಟು ಕೂಡ ಕೊಟ್ಟಿದ್ದಾರೆ. ನನ್ನ ಮಗಳಿಗೆ ಸರಿಯಾಗಿ ಶಿಕ್ಷಣ ಕೊಡಿಸುತ್ತಿಲ್ಲ ಅವಳನ್ನು ದುಡಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ ಎಂದು ಅನೇಕರು ಆರೋಪ ಮಾಡುತ್ತಿದ್ದಾರೆ. ನನ್ನ ಮಗಳ ಹಣದಲ್ಲಿ ಬದುಕಬೇಕಾದ ಅವಳನ್ನು ದುಡಿಸಬೇಕಾದ ಅವಶ್ಯಕತೆ ದೇವರ ದಯೆಯಿಂದ ಇನ್ನೂ ಬಂದಿಲ್ಲ. ಅವಳು ಇಷ್ಟಪಟ್ಟು ಆಕ್ಷೇತ್ರದಲ್ಲಿ ಇದ್ದಾಳೆ ಅವಳು ಸೆಟ್ ನಲ್ಲಿ ಆಟ ಆಡಿಕೊಂಡು ಅಲ್ಲೇ ಇರಲು ಇಷ್ಟ ಪಡುತ್ತಾಳೆ.
ಅವಳನ್ನು ನೋಡುತ್ತಿದ್ದರೆ ನಮಗೆ ಅವಳು ಆಕ್ಟರ್ ಆಗಲೇ ಹುಟ್ಟಿದ್ದಾಳೆ ಎನಿಸುತ್ತದೆ ಮತ್ತು ಹೆಚ್ಚಿನ ಜನರು ಹಾಗೆ ಗುರುತಿಸಿದ್ದಾರೆ. ನಾನು ಕೂಡ ಬಾಲ ಕಲಾವಿದನಾಗಿ ಇಂಡಸ್ಟ್ರಿಗೆ ಬಂದಿದ್ದು ಅದು ನನ್ನನ್ನು ಕೈ ಹಿಡಿದು ಇಲ್ಲಿಯತನಕ ನಿಲ್ಲಿಸಿದೆ. ಈಗ ನನ್ನ ಮಗಳು ಕ್ಷೇತ್ರವನ್ನು ಆರಿಸಿಕೊಂಡಿರುವ ಆ ಕಾರಣಕ್ಕೆ ಈ ರೀತಿ ನೆಗೆಟಿವ್ ಆಗಿ ಹಬ್ಬಿಸುವುದು ಬೇಡ.
ಅವಳಿನ್ನು UKG ಓದುತ್ತಿದ್ದಾಳೆ. ಶೂಟಿಂಗ್ ಕೆಲಸದ ಸಮಯ ಓದು ಎಲ್ಲವನ್ನು ಮ್ಯಾನೇಜ್ ಮಾಡುವುದು ಎಷ್ಟು ಕಷ್ಟ ಎಂದು ಅದನ್ನು ಅನುಭವಿಸಿದವರಿಗೆ ಗೊತ್ತಿರುತ್ತದೆ. ಆದರೂ ಆದಷ್ಟು ಅವಳ ಮೇಲೆ ಕೇರ್ ಮಾಡುತ್ತಿದ್ದೇವೆ. ಅವರ ಶಾಲೆ ಕಡೆಯಿಂದಲೂ ಸಪೋರ್ಟ್ ಇದೆ ಬಹಳ ಹೆಮ್ಮೆಯಿಂದ ಅವರು ವಂಶಿಕಾಳನ್ನು ನೋಡುತ್ತಾರೆ.
ಎಲ್ಲರೂ ಓದಿನಲ್ಲಿ ಮುಂದೆ ಬರಬೇಕು ಎಂದರೆ ಉಳಿದ ಕ್ಷೇತ್ರಗಳು ಯಾಕೆ ಇವೆ ಓದಿನ ಜೊತೆಗೆ ಸಾಂಸ್ಕೃತಿಕ ಕ್ಷೇತ್ರಗಳು ಕೂಡ ಮುಖ್ಯ ಅಲ್ಲವೇ? ಈಗಾಗಲೇ ಅವಳು ಅದರಲ್ಲಿ ಹೊಂದಿರುವುದರಿಂದ ಮತ್ತು ಅದು ಅವಳಿಗೆ ಚೆನ್ನಾಗಿ ಆಗಿ ಬರುತ್ತದೆ ಎನ್ನುವುದನ್ನು ಎಲ್ಲರೂ ಅವಳ ಅಭಿನಯದಲ್ಲೇ ನೋಡಿದ್ದೀರಿ ಎಂದು ಮಗಳ ವಿಷಯದಲ್ಲಿ ದೂರಿದವರಿಗೆ ಉತ್ತರಿಸಿದ್ದಾರೆ.