40 ವರ್ಷ ಮೇಲ್ಪಟ್ಟಂತಹ ವಯಸ್ಕರಿಗೆ ಈ ಒಂದು ಪಿಂಚಣಿ ಯೋಜನೆ ಸೌಲಭ್ಯ ಒದಗಿಸಿ ಕೊಡಲಾಗುತ್ತದೆ ದೇಶದ ಅತಿ ದೊಡ್ಡ ವಿಮಾ ಕಂಪನಿ ಆದಂತಹ ಎಲ್ಐಸಿ ಜೀವ ವಿಮಾ ಯೋಜನೆಯ ಜೊತೆಗೆ ವಿವಿಧ ರೀತಿಯ ಪಿಂಚಣಿ ಯೋಜನೆಗಳನ್ನು ಇದೀಗ ಜಾರಿಗೊಳಿಸಲಾಗುತ್ತಿದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ನಿವೃತ್ತಿಯ ನಂತರವೂ ಸಹ ನೀವು ಆದಾಯವನ್ನು ಪಡೆಯಬೇಕಾದರೆ ಈ ಯೋಜನೆಯ ಅಡಿಯಲ್ಲಿ ಲಾಭ ಪಡೆಯಬಹುದು ಪೋಸ್ಟ್ ಆಫೀಸ್ ನ ಜೊತೆಯಲ್ಲಿ ವಿಮಾ ಕಂಪನಿಯೂ ಕೂಡ ವಿವಿಧ ರೀತಿಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ ಸಾಮಾನ್ಯವಾಗಿ ಪಿಂಚಣಿ ಯೋಜನೆಯು 60 ವರ್ಷದಿಂದ ಪ್ರಾರಂಭವಾಗುತ್ತದೆ ಆದರೆ ಇದೀಗ ಎಲ್ಐಸಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ ಈ ಯೋಜನೆಯಡಿಯಲ್ಲಿ ಕೇವಲ 40 ವರ್ಷದಿಂದಲೇ ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ.
ಎಲ್ಐಸಿ ಸರಳ ಪಿಂಚಣಿ ಯೋಜನೆ, ಈ ಯೋಜನೆಯ ಅಡಿಯಲ್ಲಿ ಭಾರತೀಯ ಜೀವವಿಮೆ ಇದೀಗ 40 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಪಡೆಯುವಂತಹ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ ಎಲ್ಐಸಿ ಸರಳ ಪಿಂಚಣಿ ಯೋಜನೆಯಲ್ಲಿ 40 ವರ್ಷದಿಂದ 80 ವರ್ಷ ವಯಸ್ಸಿನವರು ಹೂಡಿಕೆ ಮಾಡಿ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಒಮ್ಮೆ ಮಾತ್ರ ಹೂಡಿಕೆ ಮಾಡಲಾಗುತ್ತದೆ ಅಂದರೆ ಈ ಪಾಲಿಸಿಯಲ್ಲಿ ಪ್ರೀಮಿಯಂ ಅನ್ನು ಒಂದು ಬಾರಿ ಮಾತ್ರ ಠೇವಣಿ ಮಾಡಲಾಗುತ್ತದೆ ಇನ್ನು ಪಿಂಚಣಿ ದಾರರು ಮ’ರ’ಣ ಹೊಂದಿದರೆ ವ್ಯಕ್ತಿಯು ಠೇವಣಿಯೇ ಮಾಡಿದ ಮೊತ್ತವನ್ನು ಮರಳಿ ಪಡೆಯಬಹುದಾಗಿದೆ.
ಈ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದರೆ 12500 ಪಿಂಚಣಿ ನಿಮಗೆ ಪ್ರತಿ ತಿಂಗಳು ದೊರೆಯಲಿದೆ ಎಲ್ಐಸಿ ಸರಳ ಪಿಂಚಣಿ ಯೋಜನೆಯ ಪಾಲಿಸಿದಾರರು ಆರು ತಿಂಗಳ ನಂತರ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಸೆರೆಂಡರ್ ಮಾಡಬಹುದಾಗಿದೆ.
ಪಾಲಿಸಿಯನ್ನು ಪಡೆದ ನಂತರ ನೀವು ಪಾಲಿಸಿದಾರರ ಜೀವಿತಾವಧಿಯವರೆಗೂ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ ಪಾಲಿಸಿದಾರರು ಮ’ರ’ಣ ಹೊಂದಿದ ನಂತರ ಹಣವನ್ನು ನಾಮಿನಿಗೆ ನೀಡಲಾಗುತ್ತದೆ 42 ವರ್ಷ ವಯಸ್ಸಿನ ವ್ಯಕ್ತಿಯು 30 ಲಕ್ಷ ರೂಪಾಯಿ ತೆಗೆದುಕೊಂಡರೆ ಅವರು ಮಾಸಿಕವಾಗಿ ಸುಮಾರು 12,388 ರೂಪಾಯಿಗಳ ಪಿಂಚಣಿಯನ್ನು ಪಡೆಯಬಹುದು.
ಮಾಸಿಕವಾಗಿ 1000 ರೂಪಾಯಿಯನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಒಂದು ವೇಳೆ ಜಂಟಿ ಖಾತೆಯಲ್ಲಿ ಪಾಲಿಸಿ ತೆಗೆದುಕೊಂಡಿದ್ದರೆ ಪಾಲಸಿದಾರರ ಮ’ರ’ಣ’ದ ನಂತರ ಹಣವನ್ನು ಪತಿ ಅಥವಾ ಪತ್ನಿ ಪಿಂಚಣಿಯನ್ನು ಪಡೆಯುತ್ತಾರೆ. ಇಬ್ಬರ ಮ’ರ’ಣ’ದ ನಂತರ ಠೇವಣಿಯ ಮತ್ತವು ನಾಮಿನಿಗೆ ತಲುಪುತ್ತದೆ.
ಎಲ್ಐಸಿ ಸರಳ ಪಿಂಚಣಿ ಯೋಜನೆಯ ಅಡಿಯಲ್ಲಿ ಮಾಸಿಕವಾಗಿ ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬಹುದು ಹೂಡಿಕೆಗೆ ಗರಿಷ್ಠ ಮಿತಿ ಎಂಬುದು ಇಲ್ಲ ನೀವು ಎಷ್ಟು ಬೇಕಾದರೂ ಹೂಡಿಕೆಯನ್ನು ಮಾಡಬಹುದು ಈ ಯೋಜನೆ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಪ್ರೀಮಿಯಂ ಆಯ್ಕೆಗಳನ್ನು ನೀವು ಆರಿಸಿಕೊಳ್ಳಬಹುದು.
ನಿಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ನೀವು ಯೋಜನೆಯಲ್ಲಿ ಆಯ್ಕೆಯನ್ನು ಮಾಡಿಕೊಳ್ಳಬಹುದು. ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು, ವರ್ಷ ಹೀಗೆ ಪ್ರೀಮಿಯಂ ಆಯ್ಕೆಯನ್ನು ನೀವು ನಿಮ್ಮ ಇಷ್ಟಕ್ಕೆ ತಕ್ಕ ಹಾಗೆ ನಿಮ್ಮ ಆರ್ಥಿಕತೆಗೆ ತಕ್ಕ ಹಾಗೆ ಮಾಡಿಕೊಳ್ಳಬಹುದು. ಇದಕ್ಕೆ ನಿಮಗೆ ಎಲ್ಐಸಿ ಕಂಪನಿಯು ಸಹಕಾರವನ್ನು ನೀಡುತ್ತದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.