ಚಿಕ್ಕಬಳ್ಳಾಪುರ (Chikkaballapur) ನಗರಸಭೆ ಆವರಣದಲ್ಲಿ ನಿರ್ಮಾಣವಾಗಿರುವ ಪೌರಕಾರ್ಮಿಕರ (Pourakarmika) ನೂತನ ವಿಶ್ರಾಂತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Minister Pradeep Eshwar) ಅವರು ಈ ಕಾರ್ಯಕ್ರಮಕ್ಕೆ ಚಾಲನೆ ಕೊಡುವ ಮುನ್ನ ಪೌರಕಾರ್ಮಿಕರೋರ್ವರ ಪಾದಗಳನ್ನು ತೊಳೆದು ಮನಃಪೂರ್ವಕವಾಗಿ ಅವರಿಗೆ ಗೌರವ ಸಮರ್ಪಿಸಿದರು ಜೊತೆಗೆ ಕಾರ್ಮಿಕರ ಸ್ವಚ್ಛತಾ ಕಾರ್ಯವನ್ನು ಶ್ಲಾಘಿಸಿ ಮಾತನಾಡಿದರು.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಚುನಾವಣೆ ಸಮಯದಿಂದಲೂ ಕೂಡ ಕರ್ನಾಟಕದ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಾಕ್ ಚಾತುರ್ಯದಿಂದಲೇ ಅತಿ ಹೆಚ್ಚು ಪರಿಚಿತರಾಗಿರುವ ಪ್ರದೀಪ್ ಈಶ್ವರ್ ಅವರು ಯುವಜನತೆಗೆ ತಮ್ಮ ಉತ್ಸಾಹ ಭರಿತ ಸ್ಪೂರ್ತಿದಾಯಕ ಮಾತುಗಳನ್ನಾಡಿ ಮನಪರಿವರ್ತನೆ ಮಾಡುವ ಮೂಲಕ ಹೆಸರು ವಾಸಿಯಾಗಿದ್ದಾರೆ.
ಮಾಕಳಿ ಬೇರು ಇದ್ರೆ ಸಾಕು ನಿಮ್ಮ ಎಲ್ಲ ಕೆಲಸಗಳು 100% ಸಕ್ಸಸ್ ಆಗುತ್ತೆ.!
ಅದೇ ರೀತಿಯಾಗಿ ಈಗ ಪೌರಕಾರ್ಮಿಕರನ್ನು ಉದ್ದೇಶಿಸಿ ಇವರಾಡಿರುವ ಮಾತುಗಳ ಬಗ್ಗೆ ಕೂಡ ವರದಿ ಆಗುತ್ತಿದ್ದು, ಎಲ್ಲಾ ವರ್ಗಗಳ ಬಗ್ಗೆ ಕಾಳಜಿ ವಹಿಸುವ ಶಾಸಕರ ಬಗ್ಗೆ ಕೂಡ ಪ್ರಶಂಸೆ ಕೇಳಿ ಬರುತ್ತಿದೆ. ರಾಜ್ಯದಾದ್ಯಂತ ಇರುವ ಎಲ್ಲಾ ಪೌರಕಾರ್ಮಿಕರ ಕಾರ್ಯವನ್ನು ಮೆಚ್ಚಲೇಬೇಕು.
ಪ್ರತಿದಿನ ಬೆಳಗ್ಗೆ ನಸುಕಿನಲ್ಲೇ ಎದ್ದು ನಗರಗಳನ್ನು ಸ್ವಚ್ಛ ಮಾಡುವ ಮತ್ತು ಚಳಿ ಮಳೆ ಗಾಳಿ ಇವುಗಳ ಹಂಗು ತೊರೆದು ಕೊರೋನಾ ಮಹಾಮಾರಿಯಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ಪ್ರಾಣವನ್ನು ಲೆಕ್ಕಿಸದೆ ಸ್ವಚ್ಛತಾ ಕಾರ್ಯಕ್ಕಿಳಿದ ಇವರುಗಳಿಂದಲೇ ನಾವು ಈಗ ಆರೋಗ್ಯವಾಗಿದ್ದೇವೆ ಎಂದರೆ ಅದು ಕೂಡ ತಪ್ಪಾಗಲಾರದು.
ಗೃಹಲಕ್ಷ್ಮಿ ಯೋಜನೆ ಎರಡು ಕಂತಿನ ಹಣ ಬಿಡುಗಡೆ, ಯಾವ ದಿನ ಹಣ ಸಿಗುತ್ತದೆ ಗೊತ್ತಾ.?
ಕಾಯಕವೇ ಕೈಲಾಸವೆಂದು ಪರಿಗಣಿಸಿರುವ ಮತ್ತು ನಗರಗಳನ್ನು ಸ್ವಚ್ಛವಾಗಿ ಆರೋಗ್ಯವಾಗಿಡಲು ಶ್ರಮ ಪಡುವ ಇವರುಗಳ ಕಾರ್ಯವನ್ನು ಮೆಚ್ಚಿಕೊಂಡಾಡಿದ ಶಾಸಕರು ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಭರವಸೆ ನೀಡಿದರು. ಜೊತೆಗೆ ಸರ್ಕಾರ, ಸಾರ್ವಜನಿಕರು, ಸಂಘಸಂಸ್ಥೆಗಳು ಕೂಡ ಪೌರಕಾರ್ಮಿಕರ ಏಳಿಗೆಗಾಗಿ ಮನಸ್ಸು ಮಾಡಬೇಕು ಎಂದರು.
ಪೌರ ಕಾರ್ಮಿಕರನ್ನು ಯಾರು ಕೂಡ ಕೀಳಾಗಿ ಕಾಣಬಾರದು, ಯಾವ ಉದ್ಯೋಗವು ಕೂಡ ಕೀಳು ಮಟ್ಟದ್ದಲ್ಲ. ಉನ್ನತ, ಹುದ್ದೆಗಳಲ್ಲಿರುವ ಅಧಿಕಾರಿಗಳನ್ನು ಎಲ್ಲರೂ ಗೌರವಿಸುತ್ತಾರೆ ಅದೇ ನಮ್ಮೆಲ್ಲರಿಗಾಗಿ ಕೆಲಸ ಮಾಡುತ್ತಿರುವ ಇವರಿಗೂ ಅಷ್ಟೇ ಗೌರವ ಸಲ್ಲಬೇಕು, ಈ ಸೂಕ್ಷ್ಮ ವಿಚಾರಗಳು ಎಲ್ಲರಿಗೂ ಮನವರಿಕೆ ಆಗಬೇಕು ಎಂದು ನೋಡಿದ ಅವರು ಪೌರಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳು ಹಾಗೂ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಇನ್ಮುಂದೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೂ ಸಬ್ ರಿಜಿಸ್ಟರ್ ಆಫೀಸ್ ತೆರೆಯಲು ಸರ್ಕಾರದಿಂದ ಆದೇಶ.!
ಸರ್ಕಾರವು ಪೌರಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಿದೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಕೆಲಸ ಒಂದೇ ಸಮುದಾಯಕ್ಕೆ ಸೀಮಿತವಾದದ್ದು ಎನ್ನುವ ಭಾವನೆ ಹೋಗಬೇಕು, ನಿಮ್ಮ ಮಕ್ಕಳು ನಿಮ್ಮಂತಾಗದೆ ಅವರು ಪ್ರತಿಭಾವಂತರಾಗಿದ್ದರೆ ಉತ್ತಮವಾಗಿ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳಿಗೆ ಹೋಗಲು ನೀವು ಪ್ರೋತ್ಸಾಹ ಕೊಡಬೇಕು, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿ ಹುರಿದುಂಬಿಸಿದರು.
ಅದೇ ರೀತಿ ಸರ್ಕಾರದಿಂದ ನಿಮಗೆ ಇರಬೇಕಾದ ಸವಲತ್ತುಗಳನ್ನು ಕೇಳಿ ಪಡೆಯಬೇಕು ನಿಮ್ಮ ಹಕ್ಕುಗಳಿಗಾಗಿ ನೀವು ಹೋರಾಟ ಆದರೂ ಮಾಡಿ ಪಡೆದುಕೊಳ್ಳಬೇಕು ಮುಖ್ಯವಾಗಿ ಮೊದಲಿಗೆ ನಿಮ್ಮಲ್ಲಿರುವ ಕೀಳ ಮೇಲೆ ಮನೋಭಾವನೆಯನ್ನು ಬಿಟ್ಟುಬಿಡಬೇಕು ಎಂದು ಹೇಳಿದರು. 2013ರಲ್ಲೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪೌರಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸಿದ್ದರು.
ಅದೇ ರೀತಿ ಈ ಬಾರಿಯೂ ಕೂಡ ಪ್ರಣಾಳಿಕೆ ಘೋಷಣೆ ಮಾಡಿರುವ ಭರವಸೆಗಳನ್ನು ನೆರವೇರಿಸಲಿದ್ದಾರೆ. ಪೌರಕಾರ್ಮಿಕರ ಹೊರಗುತ್ತಿಗೆ ಹುದ್ದೆಗಳು ಕಾಯಂ ಆಗಬೇಕು ಎನ್ನುವುದು ನಿಮ್ಮ ಬೇಡಿಕೆಯಾಗಿದ್ದು ಸರ್ಕಾರ ಅದಕ್ಕೆ ಖಂಡಿತವಾಗಿ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.