ವಿದ್ಯುತ್ ಬಿಲ್ ನೋಡಿ ಶಾ’ಕ್ ಆದಂತಹ ಕೊಪ್ಪಳದ ಒಬ್ಬಳು ವೃದ್ಧೆ ಎರಡೆರಡು ಲೈಟ್ ಉರಿಸಿದರು ಸಹ ಲಕ್ಷ ಬಿಲ್ ಬಂದಿರುವುದು ಬೇಸರದ ಸಂಗತಿಯನ್ನು ವ್ಯಕ್ತಪಡಿಸಿದ್ದಾರೆ 1,03,315 ಕರೆಂಟ್ ಬಿಲ್ ಬಂದಿದೆ ಈ ಕರೆಂಟ್ ಬಿಲ್ ನೋಡಿ ವೃದ್ಧೆ ಗಿರಿಜಮ್ಮ ಅವರು ಕಣ್ಣೀರು ಹಾಕಿದ್ದಾರೆ ಭಾಗ್ಯನಗರ ನಿವಾಸಿ ಗಿರಿಜಮ್ಮ ಅವರು ಶಡ್ ಮನೆಯಲ್ಲಿ ವಾಸ ಮಾಡುತ್ತಿದ್ದು ಇವರು ಎರಡೇ ಎರಡು ಬಲ್ಬನ್ನು ಉರಿಸುತ್ತಾರೆ ಇಂತಹವರ ಮನೆಗೆ 1 ಲಕ್ಷ ರೂಪಾಯಿಗಳು ಕರೆಂಟ್ ಬಿಲ್ ಬಂದಿರುವುದು ನಿಜಕ್ಕೂ ಸಹ ವಿ’ಷಾ’ದ’ನೀಯ ಎಂದೇ ಹೇಳಬಹುದು.
ಬಹಳ ವರ್ಷಗಳಿಂದಲೂ ಸಹ ಗಿರಿಜಮ್ಮ ಅವರು ಕೇವಲ 100 ರೂಪಾಯಿ ಒಳಗೆ ವಿದ್ಯುತ್ ಬಿಲ್ಲನ್ನು ಕಟ್ಟುತ್ತಿದ್ದರು ಆದರೆ ಈ ಬಾರಿ ಒಂದು ಲಕ್ಷದವರೆಗೆ ವಿದ್ಯುತ್ ಬಿಲ್ ಬಂದಿರುವುದನ್ನು ನೋಡಿ ನಿಜಕ್ಕೂ ಅವರು ಶಾ’ಕ್ ಆಗಿದ್ದಾರೆ. ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಇದೀಗ ಎಲ್ಲ ಜನತೆಗೆ 200 ಯೂನಿಟ್ ಫ್ರೀ ವಿದ್ಯತ್ತನ್ನು ನೀಡುವುದಾಗಿ ಘೋಷಣೆ ಮಾಡಿರುವ ಸಲುವಾಗಿ ಈ ತಿಂಗಳು ಎಲ್ಲರೂ ಸಹ ವಿದ್ಯುತ್ ಬಿಲ್ಲನ್ನು ಪಾವತಿ ಮಾಡಿದರೆ ಮುಂದಿನ ತಿಂಗಳಿನಿಂದ ಅವರಿಗೆ ಉಚಿತ ವಿದ್ಯುತ್ ನೀಡುವುದಾಗಿ ಇದೀಗ ಬೆಸ್ಕಾಂ ತಿಳಿಸಿದೆ.
ಗಿರಿಜಮ್ಮ ಅವರು ತಗಡಿನ ಶೆಡ್ ನಲ್ಲಿ ವಾಸವಾಗಿದ್ದಾರೆ ಇವರ ಮನೆಯಲ್ಲಿ ಯಾವುದೇ ಫ್ರಿಡ್ಜ್, ವಾಷಿಂಗ್ ಮಿಷಿನ್, ಟಿವಿ ಯಾವುದು ಸಹ ಬಳಕೆ ಮಾಡುತ್ತಿಲ್ಲ ಆದರೂ ಸಹ ಇವರಿಗೆ ಒಂದು ಲಕ್ಷದವರೆಗೆ ಕರೆಂಟ್ ಬಿಲ್ ಬಂದಿದೆ ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಫ್ರೀ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಹಲವೆಡೆ ಈ ರೀತಿಯಾದಂತಹ ಸುದ್ದಿಗಳು ಹರಿದಾಡುತ್ತಿದೆ ಬೆಳಗಾವಿಯ TVU ವಿಶ್ವವಿದ್ಯಾಲಯಕ್ಕೆ ಬೆಸ್ಕಾಂ ಬರೋಬರಿ 18 ಲಕ್ಷ ರೂ ವಿದ್ಯುತ್ ಬಿಲ್ಲನ್ನು ನೀಡಿರುವುದು ಸಹ ಇತ್ತೀಚಿಗಷ್ಟೇ ಬೆಳಕಿಗೆ ಬಂದಿದೆ.
ಇದೇ ಸಾಲಿನಲ್ಲಿ ಇದೀಗ ಕೊಪ್ಪಳದ ವೃದ್ದೆಯ ಮನೆಗೆ ಲಕ್ಷ ಲಕ್ಷ ಬಿಲ್ ಬಂದಿದೆ ಎರಡೇ ಎರಡು ಲೈಟನ್ನು ಉರಿಸುತ್ತಿರುವ 90ರ ವರ್ಷದ ಗಿರಿಜಮ್ಮ ಎನ್ನುವ ವೃದ್ದೆ ಮನೆಗೆ ಬೆಸ್ಕಾಂ ಲಕ್ಷಗಟ್ಟಲೆ ವಿದ್ಯುತ್ ಬಿಲ್ ಕಳುಹಿಸಿದೆ. ಕೊಪ್ಪಳದ ಭಾಗ್ಯನಗರದಲ್ಲಿ ಸಣ್ಣ ತಗಡಿನ ಶೆಡ್ ನಲ್ಲಿ ವಾಸ ಮಾಡುತ್ತಿರುವ ಗಿರಿಜಮ್ಮ ಅವರ ಮನೆಗೆ ಆರು ತಿಂಗಳಲ್ಲಿ ಬರೋಬ್ಬರಿ ಒಂದು ಲಕ್ಷ ಬಿಲ್ ಬಂದಿದೆ ಈ ಅಜ್ಜಿ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಹೀಗಾಗಿ ಬೆಸ್ಕಾಂ ಪ್ರತಿ ತಿಂಗಳು 70ರಿಂದ 80 ರೂ ವಿದ್ಯುತ್ ಬಿಲ್ ನೀಡುತ್ತಿತ್ತು ಆದರೆ ಆರು ತಿಂಗಳಿಂದ ವೃದ್ದೆಯ ಮನೆಗೆ ಬರೋಬ್ಬರಿ 1,03,315 ವಿದ್ಯುತ್ ಬಿಲ್ ನೀಡಿದ್ದಾರೆ.
ಒಂದು ಹೊತ್ತಿನ ಊಟಕ್ಕೂ ಪರದಾಡುವ 90 ವರ್ಷದ ಅಜ್ಜಿ ಇದೀಗ 1 ಲಕ್ಷ ರು ವಿದ್ಯುತ್ ಬಿಲ್ ಹೇಗೆ ಕಟ್ಟುವುದು ಎಂದು ಕಣ್ಣೀರು ಹಾಕಿದ್ದಾರೆ ಮೀಟರ್ ಎಡವಟ್ಟಿನಿಂದ ಈ ರೀತಿಯ ಆಗಿದೆ ಎನ್ನುವಂತಹ ಪ್ರಶ್ನೆ ಉದ್ಬವಿಸಿದೆ ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಗಮನಹರಿಸಿ ಏಕೆ ಇಷ್ಟೊಂದು ಬಿಲ್ ಬಂದಿದೆ ಎಂದು ಪರಿಶೀಲಿಸಬೇಕಿದೆ. ವಿದ್ಯುತ್ ಸರಬರಾಜು ಇಲಾಖೆಯ ಮೀಟರ್ ರೀಡರ್ ಸಿಬ್ಬಂದಿಯ ಎಡವಟ್ಟುಗಳಿಂದ ರಾಜ್ಯದಲ್ಲಿ ವಿದ್ಯುತ್ ಬಿಲ್ ಹೆಚ್ಚಳದ ಪ್ರಕರಣಗಳು ಪದೇಪದೇ ಹೆಚ್ಚುತ್ತಿಲೆ ಈ ಬಗ್ಗೆ ಇಂಧನ ಇಲಾಖೆಯು ಇದರ ಬಗ್ಗೆ ಗಮನಹರಿಸಬೇಕು. ಈ ಮಾಹಿತಿ ಇಷ್ಟ ಆದರೆ ತಪ್ಪದೆ ಲೈಕ್ ಮಾಡಿ ಇತರರಿಗು ಶೇರ್ ಮಾಡಿ.