ಸಣ್ಣ ಫ್ಯಾಮಿಲಿಗೆ, ಮಾಧ್ಯಮ ವರ್ಗದ ಜನರಿಗೆ ಹಾಗೂ ಬ್ಯಾಚುಲರ್ಸ್ ಗಳಿಗೆ ಈ ಮನೆಯೂ ತುಂಬಾ ಸೂಕ್ತವಾಗಿದೆ ಈ ಮನೆಯ ಬಗ್ಗೆ ಹೇಳುವುದಾದರೆ ಇದೊಂದು ರೂಫಿಂಗ್ ಶೀಟ್ ಮನೆಯಾಗಿದ್ದು ನೋಡಲು ತುಂಬಾ ಸುಂದರವಾಗಿದೆ ಈ ಮನೆಯು ಕಿಚನ್, ಹಾಲ್ ಮತ್ತು ಟಾಯ್ಲೆಟ್ ಅನ್ನು ಹೊಂದಿದೆ ಮನೆಯನ್ನು ತುಂಬಾ ಕಡಿಮೆ ಬಂಡವಾಳದಲ್ಲಿ ಹಾಗೂ ಮನೆಯ ಟೆರೆಸ್ ಮೇಲೆ ಜಾಗ ಇರುವವರು ಕೂಡ ಮಾಡಿಕೊಳ್ಳಬಹುದು. ಈಗ ಮನೆಯ ಬಗ್ಗೆ ತಿಳಿದುಕೊಳ್ಳೋಣ
ಈ ಮನೆಯನ್ನು ಪ್ರವೇಶಿಸಿದಾಗ ಮೊದಲು ಸಿಗುವುದು ಕಿಟಕಿಗಳು ನಂತರ ಅದರ ಪಕ್ಕದಲ್ಲಿ ಕಬೋರ್ಡ್ ಗಳನ್ನು ಮಾಡಿದ್ದಾರೆ. ಈ ಮನೆಯಲ್ಲಿ ಕಿಚನ್ ಮತ್ತು ಹಾಲ್ ಎರಡು ಒಂದೇ ಕೋಣೆಯಲ್ಲಿ ಇದೆ. ಕಿಚನ್ ಬಗ್ಗೆ ಹೇಳಬೇಕೆಂದರೆ, ಕಿಚನ್ ಅಲ್ಲಿ ಗ್ಯಾಸನ್ನು ಇಡಲು ಮಿಕ್ಸಿಯನ್ನು ಇಡುವುದಕ್ಕೆ ಸ್ವಿಚ್ ಬೋರ್ಡ್ ಗಳನ್ನು ತುಂಬಾ ಸುಂದರವಾಗಿ ಮಾಡಿದ್ದಾರೆ ಹಾಗೂ ಪಾತ್ರೆ ತೊಳೆಯುವ ಸಿಂಕನ್ನು 13*13 ಸೈಜ್ ನಲ್ಲಿ ತುಂಬಾ ಚೆನ್ನಾಗಿ ಮಾಡಿದ್ದಾರೆ.
ಕಿಚನ್ ಎದುರಿನಲ್ಲಿಯೇ ಒಂದು ಕಬೋರ್ಡ್ ಅನ್ನು 8 ಸ್ಟೆಪ್ ಅಲ್ಲಿ ಸಿಮೆಂಟಿನಲ್ಲಿ ಚೆನ್ನಾಗಿ ಮಾಡಿದ್ದಾರೆ ಆ ಕಬೋರ್ಡ್ ನಲ್ಲಿ ಸಣ್ಣಪುಟ್ಟ ಐಟಮ್ಸ್ ಗಳು ಪೌಡರ್, ವಾಚ್, ಶೋಕೇಸ್ ಐಟಮ್ಸ್ ಗಳು. ಹಾಗೂ ಮೊಬೈಲ್ ಗಳನ್ನು ಇಟ್ಟುಕೊಳ್ಳಲು ಮಾಡಿದ್ದಾರೆ. ಈ ಮನೆಯನ್ನು ವೈಟ್ ಪೈಂಟ್ ನಲ್ಲಿ ಪೇಂಟಿಂಗ್ ಮಾಡಿದ್ದಾರೆ ನೋಡಲು ತುಂಬಾ ಅಚ್ಚುಕಟ್ಟಾಗಿ ಕಾಣಿಸುತ್ತದೆ ಮತ್ತು ಮನೆಯ ಒಳಗೆ ಮತ್ತು ಕಿಚನ್ ಸೆಲ್ಫ್ ಗಳಿಗೆ ಹಾಕಿರುವ ಟೈಲ್ಸ್ ಗಳು ತುಂಬಾ ದೊಡ್ಡದಾಗಿವೆ ನೋಡಲು ತುಂಬಾ ಆಕರ್ಷಿತವಾಗಿಯೂ ಕಾಣುತ್ತದೆ.
ಇನ್ನೂ ಬೇಕಾದರೆ ನೀವು ನಿಮ್ಮ ಇಷ್ಟದಂತೆ ಈ ಮನೆಯನ್ನು ರೆಡಿ ಮಾಡಿಕೊಳ್ಳಬಹುದು. ಇನ್ನೂ ಹೊರಗೆ ಬಂದರೆ ಈ ಮನೆಯಲ್ಲಿ ಟಾಯ್ಲೆಟ್ ಮತ್ತು ಬಾತ್ರೂಮನ್ನು ಹೊರಗಡೆ ಮಾಡಿದ್ದಾರೆ. ಹಾಗೆಯೇ ಕೈಕಾಲುಗಳನ್ನು ತೊಳೆದುಕೊಳ್ಳಲು ನಲ್ಲಿಗಳನ್ನು ಕೂಡ ಮಾಡಿದ್ದಾರೆ ಹಾಗೆಯೇ ಟೈಲ್ಸ್ ಗಳನ್ನು ಹಾಕುವುದರ ಮೂಲಕ ನೀರು ಹೊರಗಡೆ ಹೋಗಲು ಮಾಡಿದ್ದಾರೆ. ಮನೆಯ ಹೊರಗಡೆ ಬಂದರೆ ತುಂಬಾ ದೊಡ್ಡದಾದ ವರಾಂಡವು ಇದೆ ಅದನ್ನು ಕೂಡ ತುಂಬಾ ಸುಂದರವಾಗಿ ಮಾಡಿದ್ದಾರೆ. ವರಾಂಡದಲ್ಲಿ ಕುಳಿತುಕೊಳ್ಳಲು ಹಾಗೂ ಮಾತನಾಡಲು ತುಂಬಾ ಚೆನ್ನಾಗಿಯೂ ಮಾಡಿದ್ದಾರೆ.
ಮೆಟ್ಟಿಲುಗಳು ಕೂಡ ಅಚ್ಚುಕಟ್ಟಾಗಿ ಕಟ್ಟಿಸಿದ್ದಾರೆ ಹಾಗೂ ಚೆನ್ನಾಗಿ ಪೇಂಟಿಂಗ್ ಅನ್ನು ಮಾಡಿದ್ದಾರೆ. ಈ ಮನೆಯಲ್ಲಿ ಎರಡು ರೀತಿಯ ಟಾಯ್ಲೆಟ್ ಗಳನ್ನು ಕಟ್ಟಿಸಿದ್ದಾರೆ, ಈ ಟಾಯ್ಲೆಟ್ ಗೆ ಶವರ್, ಪೈಪ್ ಗಳು ಹಾಗೂ ಟೈಲ್ಸ್ ಗಳನ್ನು ಕೂಡ ಹಾಕಿದ್ದಾರೆ ವರಾಂಡದಲ್ಲಿ ಮಳೆಗಾಲದಲ್ಲಿ ನೀರು ಹೋಗಲು ಪೈಪ್ ಲೈನ್ ಗಳನ್ನು ಮಾಡಿದ್ದಾರೆ ಇದರಿಂದ ಎಲ್ಲಿಯೂ ಕೂಡ ನೀರು ಹೋಗುವುದಿಲ್ಲ ಹಾಗೂ ಮನೆಯ ಸುತ್ತಮುತ್ತಲು ಸ್ವಿಚ್ ಬೋರ್ಡ್ ಅನ್ನು ಹಾಕಿದ್ದಾರೆ ಒಟ್ಟಾರೆ ಈ ಮನೆಯ ಪೇಂಟಿಂಗ್ ಸುತ್ತ ಮುತ್ತಲ ವಾತಾವರಣವು ತುಂಬಾ ಸುಂದರವಾಗಿದೆ. ಈ ಮನೆಯು ಮಧ್ಯಮ ವರ್ಗದವರಿಗೆ ಹಾಗೂ ಸಣ್ಣ ಫ್ಯಾಮಿಲಿಗೆ ಬ್ಯಾಚುಲರ್ಸ್ ಗಳಿಗೆ ತುಂಬಾ ಉಪಯುಕ್ತವಾಗಿರುವ ಮನೆಯಾಗಿದೆ.
ಮನೆಯನ್ನು ಕಟ್ಟಿಸಿಕೊಳ್ಳಬೇಕೆನ್ನುವ ಆಸೆ ಇರುವವರು ಇಂತಹ ಮನೆಗಳನ್ನು ಕೂಡ ಕಟ್ಟಿಸಿಕೊಳ್ಳಬಹುದು. ಹಾಗೂ ಈ ಮನೆಯ ಅತ್ಯಂತ ಕಡಿಮೆ ಬಂಡವಾಳದಲ್ಲಿ ಮಾಡಿಕೊಳ್ಳಬಹುದು. ಯಾರೆಲ್ಲ ಕಡಿಮೆ ಬಂಡವಾಳದಲ್ಲಿ ಅಚ್ಚುಕಟ್ಟಾದಂತಹ ಮನೆಯನ್ನು ನಿರ್ಮಿಸಿಕೊಳ್ಳಬೇಕೆಂಬ ಆಸೆಯನ್ನು ಹೊಂದಿರುತ್ತಾರೋ ಅಂತಹವರಿಗೆ ಇದು ಹೇಳಿ ಮಾಡಿಸಿದಂತಹ ಮನೆಯ ಸ್ಕೆಚ್ ಎಂದೇ ಹೇಳಬಹುದು. ಕಡಿಮೆ ಪ್ರದೇಶದಲ್ಲಿ ಅಚ್ಚುಕಟ್ಟಾದಂತಹ ಮನೆ ನಿರ್ಮಾಣ ವಾಗಿದೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.