ಹಲವು ವರ್ಷಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಚಚೆಯಲ್ಲಿರುವ ಕಾಮನ್ ವಿಷಯ ಎಂದರೆ ಅದು ವಿಜಯ ದೇವರಕೊಂಡ ಹಾಗೂ ರಶ್ಮಿಕ (Vijay Devarakonda and Rashmika love gossip) ನಡುವೆ ಸಂಥಿಂಗ್ ಸಂಥಿಂಗ್ ಎನ್ನುವ ವಿಚಾರ. ಅಧಿಕೃತವಾಗಿ ಇಬ್ಬರು ಈ ಬಗ್ಗೆ ಎಲ್ಲೂ ನೇರವಾಗಿ ಹೇಳಿಕೊಳ್ಳದೆ ಇದ್ದರೂ ಇವರಿಬ್ಬರ ನಡವಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತಿದೆ.
ತೆಲುಗಿನ ಗೀತ ಗೋವಿಂದಂ ಸಿನಿಮಾ (Geetha Govindha) ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡ ಈ ಜೋಡಿಗೆ ಸಿನಿಮಾ ದೊಡ್ಡಮಟ್ಟದ ಹಿಟ್ ನೀಡಿತ್ತು, ಸಿನಿಮಾದಲ್ಲಿ ಇವರಿಬ್ಬರ ಕೆಮಿಸ್ಟ್ರಿ ವರ್ಕ್ ಆಗಿತ್ತು. ಈ ಸಿನಿಮಾ ರಶ್ಮಿಕಾ ಗೆ ನ್ಯಾಷನಲ್ ಕ್ರಶ್ ಎನ್ನುವ ಪಟ್ಟ ತಂದುಕೊಟ್ಟರೆ ವಿಜಯ್ ದೇವರಕೊಂಡ ಅವರಿಗೆ ಬ್ಯಾಕ್ ಟು ಬ್ಯಾಕ್ ಸಾಕಷ್ಟು ಸಿನಿಮಾಗಳಿಗೆ ನಾಯಕನಾಗುವ ಅವಕಾಶ ನೀಡಿತ್ತು.
ಮತ್ತೆ ಇವರಿಬ್ಬರೂ ಒಟ್ಟಿಗೆ ಡಿಯರ್ ಕಾಮ್ರೆಡ್ ಸಿನಿಮಾದಲ್ಲಿ (Dear Comred) ಕಾಣಿಸಿಕೊಂಡಿದ್ದರು. ಇವರಿಬ್ಬರೂ ಒಟ್ಟಿಗೆ ಜೋಡಿ ಮಾಡಿದ್ದು ಎರಡು ಸಿನಿಮಾದಲ್ಲಿ ಮಾತ್ರವಾದರೂ ಕ್ಯಾಮೆರಾ ಕಣ್ಣಿಗೆ ಆಗಾಗ ಬೀಳುತ್ತಿರುತ್ತಾರೆ. ತಾನು ಅಭಿನಯಿಸದಿದ್ದ ವಿಜಯ್ ದೇವರಕೊಂಡ ಸಿನಿಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ರಶ್ಮಿಕಾ ಅವರನ್ನು ಕಾಣಬಹುದು.
ರಶ್ಮಿಕ ಅವರ ಕುಟುಂಬದ ಯಾವುದೇ ಕಾರ್ಯಕ್ರಮ, ವಿಶೇಷ ದಿನಗಳಿದ್ದರೂ ತಪ್ಪದೆ ಅಲ್ಲಿ ದೇವರಕೊಂಡ ಹಾಜರಿರುತ್ತಾರೆ. ಇದೆಲ್ಲವೂ ನೋಡುಗರಿಗೆ ಅವರ ಅನುಮಾನಗಳಿಗೆ ಪುಷ್ಟಿ ನೀಡುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಪ್ರಚಾರವಾಗುತ್ತಿದ್ದಂತೆ ಇಬ್ಬರು ಸಿನಿಮೇತರವಾಗಿ ಕೂಡ ಒಟ್ಟಿಗೆ ಸಮಯ ಕಳೆಯುತ್ತೇವೆ ಎನ್ನುವ ವಿಚಾರ ಮುಚ್ಚಿಡಲು ಯತ್ನಿಸಿದರೂ ಅಭಿಮಾನಿಗಳ ಕಣ್ಣು ಇವರು ಹಂಚಿಕೊಳ್ಳುವ ಸೋಶಿಯಲ್ ಮೀಡಿಯಾ ಪೋಸ್ಟ್ ಗಳ ಮೂಲಕ ಒಟ್ಟಿಗೆ ಪ್ರವಾಸ ಹೋಗಿದ್ದಾರೆ.
ಒಂದೇ ಸ್ಥಳದಲ್ಲಿ ಇದ್ದಾರೆ ಎನ್ನುವುದನ್ನು ಗುರುತಿಸುತ್ತಿದೆ. ಇದೆಲ್ಲವೂ ಕೂಡ ಇವರಿಬ್ಬರೂ ಲವ್ ಬರ್ಡ್ಸ್ ಎನ್ನುವುದನ್ನು ಸಾರಿ ಸಾರಿ ಹೇಳದೆ ಮತ್ತೇನು?… ಈಗ ಅಧಿಕೃತವಾಗಿ ಇದು ಘೋಷಣೆ ಆಗುವ ಸಮಯ ಕೂಡಿ ಬಂದಿದೆ. ಬಲವಾದ ಮೂಲಗಳ ಮಾಹಿತಿಯ ಪ್ರಕಾರ ಕಿರಿಕ್ ಬೆಡಗಿ ರಶ್ಮಿಕ ಮಂದಣ್ಣ ಹಾಗೂ ಅರ್ಜುನ್ ರೆಡ್ಡಿ ವಿಜಯ್ ದೇವರಕೊಂಡ ಅವರ ನಿಶ್ಚಿತಾರ್ಥದ (Engagement) ಸಿದ್ಧತೆ ನಡೆಯುತ್ತಿದೆ ಎನ್ನುವ ಮಾತುಗಳಿವೆ.
ವಾರದ ಹಿಂದಷ್ಟೇ ರಶ್ಮಿಕ ಹಂಚಿಕೊಂಡಿದ್ದ instagram ಪೋಸ್ಟ್ ಕೂಡ ಇವುಗಳಿಗೆ ಹಿಂಟ್ ಕೊಡುವಂತೆ ಇತ್ತು. ಈಗ ದೃಢವಾಗಿ ಶೀಘ್ರದಲ್ಲೇ ಎಂಗೇಜ್ಮೆಂಟ್ ಮತ್ತು ಈ ವರ್ಷದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಎರಡು ಕುಟುಂಬಗಳಿಂದ ಒಪ್ಪಿಗೆ ಕೂಡ ಸಿಕ್ಕಿದೆಯಂತೆ. ಹಾಗಾಗಿ ಈ ವರ್ಷ ಮತ್ತೊಂದು ಸೆಲೆಬ್ರಿಟಿ ಚೋಡಿ ಹೊಸಮನೆ ಇರುವುದು ಪಕ್ಕ ಆಗಿದೆ.
ರಶ್ಮಿಕಾ ಆನಿಮಲ್ ಸಿನಿಮಾ ಬಳಿಕ ಪುಷ್ಪ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಖುಷಿ ಸಕ್ಸಸ್ ಬಳಿಕ ಗೀತ ಗೋವಿಂದ ನಿರ್ದೇಶಕ ಪರಶುರಾಮ್ ಜೊತೆ ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲಿ ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ. ಮೃಣಾಲ್ ನಾಯಕಿಯಾಗಿರುವ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.
ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಬೇಕಾಗಿತ್ತು ಆದರೆ ಸಿನಿಮಾ ಮತ್ತೆ ಒಂದು ತಿಂಗಳು ಮುಂದೂಡಿದೆ, ಇದರ ನಡುವೆ ಎಂಗೇಜ್ಮೆಂಟ್ ಟಾಕ್ ಶುರುವಾಗಿದೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ ಫೆಬ್ರವರಿ 14 ಪ್ರೇಮಿಗಳ ದಿನದಂದು ಜೋಡಿ ಎಂಗೇಜ್ಮೆಂಟ್ ಆಗುತ್ತಿದೆಯಂತೆ. ಜೋಡಿಗೆ ಶುಭವಾಗಲಿ ವೈಯಕ್ತಿಕ ಜೀವನದ ಜೊತೆ ಸಿನಿಮಾ ಕೆರಿಯರ್ ಕೂಡ ಇನ್ನಷ್ಟು ಅದ್ಭುತವಾಗಲಿ ಎಂದು ನಾವು ಕೂಡ ಈ ಮೂಲಕ ಹರಸೋಣ.