ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರ ಕಾಟೇರ ಸಿನಿಮಾ (Katera Cinema) ಬಿಡುಗಡೆಯಾದ ದಿನದಿಂದಲೂ ಕೂಡ ಸದ್ಯಕ್ಕೆ ಎಲ್ಲ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕಾಟೇರ ಸಿನಿಮಾದ್ದೇ ಹವಾ. ಒಂದೊಳ್ಳೆ ಸಂದೇಶವನ್ನು ಹೊತ್ತಿರುವ ಸಿನಿಮಾಗೆ ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ಪ್ರಚಾರ ಮಾಡುತ್ತಿದ್ದಾರೆ.
ಕೇವಲ ಏಳೇ ದಿನಕ್ಕೆ ದಾಖಲೆಯ ಗಳಿಕೆ ಕಂಡು 9.52 ಕೋಟಿ ರೂಪಾಯಿ ಗಳಿಕೆಯಾಗಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಕಾಟೇರ ಸಿನಿಮಾ ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ. ಇದು ಡಿ ಬಾಸ್ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತೆ ಮಾಡಿದೆ. ಇಂತಹದೊಂದು ಸಕ್ಸಸ್ ಗಾಗಿ ಕಾದು ಕುಳಿತಿದ್ದ ಡಿ ಬಾಸ್ ನಾ ಸೆಲೆಬ್ರಿಟಿಗಳು ಕಾಟೇರ ಭರ್ಜರಿ ಓಪನಿಂಗ್ ಗೆ ಸಂತಸ ಪಟ್ಟು ಹಬ್ಬ ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಬಹಳ ದಿನಗಳಿಂದ ದರ್ಶನ್ ಫ್ಯಾನ್ಸ್ ಮತ್ತು ಇಡೀ ಚಿತ್ರರಂಗ ಹಾಗೂ ಕರುನಾಡು ಕಾಯುತ್ತಿರುವ ವಿಚಾರದ ಬಗ್ಗೆ ಸಿಹಿ ಸುದ್ದಿ ಕೇಳಿ ಬರುವ ಸೂಚನೆಗೆ ಸಿಗುತ್ತಿದೆ. ಅದೇನೆಂದರೆ ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗುತ್ತಾರ ಎನ್ನುವ ಭರವಸೆಯನ್ನು ಮತ್ತಷ್ಟು ಹೆಚ್ಚಿಸುತ್ತಿರುವ ಲಕ್ಷಣವದು.
ಅಷ್ಟಕ್ಕೂ ವಿಷಯ ಏನಪ್ಪಾ ಎಂದರೆ ಶೀಘ್ರದಲ್ಲಿಯೇ ಜೀವದ ಗೆಳೆಯ ದರ್ಶನ್ ನಟನೆಯ ಕರುನಾಡು ಕೊಂಡಾಡುತ್ತಿರುವ ಕಾಟೇರ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲಿದ್ದಾರಂತೆ ಸುದೀಪ್ (Sudeep) ಅದಲ್ಲದೆ ತಾವು ಸಿನಿಮಾ ನೋಡುವುದಕ್ಕಾಗಿ ಕಾಯುತ್ತಿರುವುದಾಗಿಯೂ ಕೂಡ ಹೇಳಿದ್ದಾರೆ ಕಿಚ್ಚ, ಇದಕ್ಕೆ ಕಿಚ್ಚನ ಫ್ಯಾನ್ಸ್ ಕೂಡ ಸಂತಸ ಪಟ್ಟಿದ್ದಾರೆ.
ಕಿಚ್ಚ ಮತ್ತು ದಚ್ಚು ಒಂದಾಗಬೇಕು ಎನ್ನುವುದು ಇಡೀ ಕರ್ನಾಟಕದ ಕೂಗು ಹಲವಾರು ಬಾರಿ ಇದಕ್ಕೆ ಸಿನಿಮಾ ರಂಗ ಕೂಡ ಪ್ರಯತ್ನಪಟ್ಟಿದೆ. ಇದಕ್ಕೆ ಕಳೆದ ಬಾರಿ ಸುಮಲತಾ ಅಂಬರೀಶ್ (Sumalatha Ambareesh Birthday event ) ಅವರ ಹುಟ್ಟು ಹಬ್ಬದ ಆಚರಣೆಯೂ ಸಾಕ್ಷಿಯಾಗಿತ್ತು.
ಕುಚುಕು ಗೆಳೆಯರಂತಿದ್ದವರ ನಡುವೆ ಮೂಡಿದ ಸಣ್ಣ ಬಿರುಕು ಒಂದೇ ವೇದಿಕೆ ಮೇಲೆ ಇದ್ದರು ಒಬ್ಬರಿಗೊಬ್ಬರು ಮುಖ ನೋಡದಂತೆ ಮಾತಾಡದಂತೆ ಮಾಡಿಬಿಟ್ಟಿತ್ತು. ಈಗ ಆ ಕೆಟ್ಟ ಸಮಯ ಕಳೆದು ಒಂದೊಳ್ಳೆ ಸೂಚನೆ ಕಂಡು ಬರುತ್ತಿದೆ.
ಕಳೆದ ವರ್ಷ ದರ್ಶನ್ ಅವರ ಬದುಕಿನಲ್ಲಾದ ಕಹಿ ಘಟನೆಗಳ ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ತನ್ನ ದೋಸ್ತ್ ಬಗ್ಗೆ ವಕಾಲತ್ತು ವಹಿಸಿ ಸುದೀರ್ಘ ಬರಹ ಬರೆದುಕೊಂಡು ಹಂಚಿಕೊಂಡಿದ್ದರು ಸುದೀಪ್ ಮತ್ತು ಇದಕ್ಕೆ ಧನ್ಯವಾದಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು ದರ್ಶನ್.
ಇವರಿಬ್ಬರನ್ನು ಮತ್ತೆ ಮೊದಲಂತೆ ಕಾಣಲು ಇಬ್ಬರ ಫ್ಯಾನ್ಸ್ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ ಈಗ ಸುದೀಪ್ ಅವರು ಕಾಟೇರ ಸಿನಿಮಾ ನೋಡೋದಕ್ಕೆ ಕಾಯುತ್ತಿದ್ದಾರೆ ಹಾಗೂ ಶೀಘ್ರದಲ್ಲೇ ಸಿನಿಮಾ ನೋಡಲಿದ್ದಾರೆ ಎನ್ನುವುದನ್ನು ನಿರ್ದೇಶಕ ತರುಣ್ ಸುಧೀರ್ (Director Tharun Sudheer) ಅವರು ಸುದ್ದಿ ಮಾಧ್ಯಮದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದು ಮುಂದೊಂದು ದಿನ ಜನ ಆಸೆ ಪಟ್ಟಿದ್ದು ನಡೆಯಲಿದೆ ಎನ್ನುವುದರ ನಂಬಿಕೆ ಹೆಚ್ಚಿಸುತ್ತಿದೆ. ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ರವರು (Producer Rockline Venkatesh) ಕಳೆದ ವಾರ ಸೆಲೆಬ್ರಿಟಿ ಶೋ ಏರ್ಪಡಿಸಿದ್ದರು, ಚಿತ್ರರಂಗದಿಂದ ಬಹುತೇಕರು ಭಾಗಿಯಾಗಿದ್ದರು.
ಸ್ವತಃ ನಿರ್ಮಾಪಕರೆ ಸುದೀಪ್ ಅವರಿಗೂ ಕರೆ ಮಾಡಿ ಆಹ್ವಾನಿಸಿದ್ದರು. ಆದರೆ ಸುದೀಪ್ ಅವರಿಗೆ ಮ್ಯಾಕ್ಸ್ ಸಿನಿಮಾ (Max Movie) ಶೂಟಿಂಗ್ ತಮಿಳುನಾಡಿನ ಮಹಾಬಲಿಪುರಂನಲ್ಲಿ ಇದ್ದ ಕಾರಣ ಆ ಕಾರ್ಯಕ್ರಮಕ್ಕೆ ಬರಲಾಗಿರಲಿಲ್ಲ ಆದರೆ ಆದಷ್ಟು ಬೇಗ ಸಾಧ್ಯವಾದರೆ ಇದೇ ವಾರದಲ್ಲಿ ಸಿನಿಮಾ ನೋಡಲಿದ್ದೇನೆ ಎಂದು ಹೇಳಿದ್ದಾರಂತೆ ಕಿಚ್ಚ.
ಹೀಗೆ ಮುಂದೊಂದು ದಿನ ಇಬ್ಬರು ಒಟ್ಟಿಗೆ ತೆರೆ ಹಂಚಿಕೊಳ್ಳುವ ದಿನವೂ ಬರಲಿ, ಇಡೀ ಕನ್ನಡ ಚಿತ್ರರಂಗ ಕಾಯುತ್ತಿರುವ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಸಿನಿಮಾ ಬರಲಿ ಎನ್ನುವುದೇ ನಮ್ಮ ಇಚ್ಛೆ ಕೂಡ. ನಿಮಗೂ ಇವರಿಬ್ಬರ ಕಾಂಬಿನೇಷನ್ ಸಿನಿಮಾ ನೋಡುವ ಕನಸಿದ್ದರೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.