ಹ್ಯಾಟ್ರಿಕ್ ಹೀರೋ ಶಿವಣ್ಣ (Hatric Hero Shivanna) ಹಾಗೂ ತಮಿಳು ನಟ ಧನುಷ್ (Danush) ಅವರು ಅಭಿನಯಿಸಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾವು (Captain Millar Movie) ತಮಿಳುನಾಡಿನ ಪ್ರಮುಖ ಹಬ್ಬವಾದ ಸಂಕ್ರಾಂತಿ ಸುಗ್ಗಿಗೆ ಪ್ರೇಕ್ಷಕರ ಎದುರು ಪ್ರದರ್ಶನ (release) ಕಾಣುತ್ತಿದೆ.
ಈ ಸಿನಿಮಾದಲ್ಲಿ ಧನುಷ್ ರವರು ನಾಯಕ ನಟರಾಗಿದ್ದು ಶಿವಣ್ಣ ಕೂಡ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಂಬಂಧಿತ ಪ್ರಮೋಷನ್ ಗಾಗಿ (promotions) ಸದ್ಯಕ್ಕೆ ಚೆನ್ನೈನಲ್ಲಿ ಶಿವಣ್ಣ ಬೀಡು ಬಿಟ್ಟಿದ್ದಾರೆ ಎಂದು ಹೇಳಬಹುದು. ಇತ್ತೀಚೆಗೆ ಇವೆಂಟ್ ನಲ್ಲಿ ಈರಪ್ಪನ ಹಾಡಿಗೆ (Earappa Song) ಇವರ ಸ್ಟೆಪ್ ಹಾಕಿದ್ದು ಕೂಡ ವೈರಲ್ ಆಗಿ ಸೆನ್ಸೇಷನ್ ಕ್ರಿಯೆಟ್ ಮಾಡುತ್ತಿದೆ.
ಶಿವಣ್ಣ ಸಹ ಚೆನ್ನೈನಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮುಗಿಸಿದವರು ಹೀಗಾಗಿ ತಮಿಳು ಚಿತ್ರ ರಂಗವನ್ನು ಹತ್ತಿರದಿಂದ ಬಲ್ಲವರು. ಆದರೆ ಈ ಬಗ್ಗೆ ಮಾತನಾಡುವಾಗ ವಿ’ವಾ’ದಾ’ದ್ಮಕ ಹೇಳಿಕೆ (Contreversy statement ) ಕೊಟ್ಟು ಕನ್ನಡಿಗರ ಬೇಸರಕ್ಕೆ ಕಾರಣವಾಗಿದ್ದಾರೆ.
ಸಂದರ್ಶನವೊಂದರಲ್ಲಿ ತಮಿಳು ಚಿತ್ರರಂಗದ (Kollywood) ಬಗ್ಗೆ ಶಿವಣ್ಣ ಮಾತನಾಡುತ್ತಾ ತಮಿಳು ಚಿತ್ರರಂಗ ದೊಡ್ಡದಾಗಿ ಬೆಳೆಯುತ್ತಿದೆ. ಕನ್ನಡ ಚಿತ್ರರಂಗ (Sandalwood) ಕಳೆದ ಐದಾರು ವರ್ಷಗಳಿಂದ ಬಹಳ ದೊಡ್ಡದಾಗಿ ಸದ್ದು ಮಾಡ್ತಿದೆ ಆದರೆ ತಮಿಳು ಚಿತ್ರರಂಗ ಮೊದಲಿನಿಂದ ದೊಡ್ಡದಾಗಿದೆ.
ಫಿಲ್ಮ್ ಮೇಕರ್ಸ್ ಆಲೋಚನೆಗಳು ದೊಡ್ಡದಾಗಿದೆ. ಎಂದಿರುವ ಮಾತು ಕನ್ನಡದ ಸಿನಿ ರಸಿಕರ ಮನಸಿಗೆ ಕಾರಣವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ಹೇಳಿಕೆ ಖಂಡಿಸಿ ಕನ್ನಡ ಅಭಿಮಾನಿಗಳು ಮತ್ತು ಕನ್ನಡ ಸಿನಿ ರಸಿಕರು ಅಣ್ಣಾವ್ರ ಕಾಲದಲ್ಲಿದಿಂದಲೂ ಕನ್ನಡ ಚಿತ್ರರಂಗ ಸದ್ದು ಮಾಡುತ್ತಿತ್ತು ಎನ್ನುವಂತ ಕಾಮೆಂಟ್ ಮಾಡಿ ಕೋ’ಪ ತೋರುತ್ತಿದ್ದಾರೆ.
ಹಿಂದೆ ಥಿಯೇಟರ್ ಹಂಚಿಕೆ ವಿಷಯದಲ್ಲೂ ಕೂಡ ಇದೇ ರೀತಿಯ ಧೋರಣೆ ತೋರಿದ್ದರು ಪದೇ ಪದೇ ಈ ರೀತಿ ಹೇಳಿಕೆ ಕೊಟ್ಟು ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಸುತ್ತಿದ್ದಾರೆ. ಇತ್ತೀಚಿಗೆ ಶಿವಣ್ಣ ತಮಿಳು ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೆರಡು ಸಿನಿಮಾಗಳು ಕೈಯಲ್ಲಿದ್ದು ಇದರಲ್ಲಿ ಬೈರತಿ ರಣಗಲ್ ಶೇ 60% ಚಿತ್ರೀಕರಣ ಮುಕ್ತಾಯವಾಗಿದೆ .
ಆದರೆ ಶಿವಣ್ಣ ಅವರ ಪೂರ್ತಿ ಹೇಳಿಕೆ ಈ ರೀತಿ ಇತ್ತು. ತಮಿಳಿನಲ್ಲಿ ಬಾಲಚಂದರ್ ಸರ್, ಭಾಗ್ಯರಾಜ್ ಸರ್, ಭಾರತೀರಾಜಾ ಎಲ್ಲರೂ ವಿಭಿನ್ನ ಆಲೋಚನೆಗಳಿರುವ ಫಿಲ್ಮ್ ಮೇಕರ್ಸ್ ಆಗಿದ್ದರು, ಇವರ ಬಳಿಕ ಮಣಿರತ್ನಂ, ಶಂಕರ್, ನೆಲ್ಸನ್, ವೆಟ್ರಿಮಾರನ್, ಲೋಕೇಶ್ ಕನಕರಾಜ್ ಎಲ್ಲರೂ ತಮ್ಮದೇ ಆದ ರೀತಿಯ ಸಿನಿಮಾ ಮೇಕಿಂಗ್ ಮಾಡ್ತಾ ಗೆದ್ದಿದ್ದಾರೆ.
ವಿಜಯ್, ಸೂರ್ಯ, ಧನುಷ್, ಕಾರ್ತಿ, ಆರ್ಯ, ಅಜಿತ್ ಸರ್ ಜೊತೆಗೆ ಈಗಲೂ ಕಮಲ್ ಸರ್, ರಜನಿ ಸರ್ ರವರು ಟಫ್ ಪೈಪೋಟಿ ಕೊಡುತ್ತಿದ್ದಾರೆ. ಕನ್ನಡದಲ್ಲಿ ಹಿರಿಯರು ಇರಬೇಕು ಎನ್ನುವ ಮಾತಿದೆ. ಅದರಂತೆ ಹಿರಿಯರ ನೆರಳಿನಲ್ಲಿ ಬೆಳೆಯಬೇಕು ಎಂದಿದ್ದಾರೆ.
ಕನ್ನ ಚಿತ್ರರಂಗದ ಬಗ್ಗೆ ಮಾತನಾಡಲು ಕೂಡ ಶಿವಣ್ಣ ಮರೆಯಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಪುಟ್ಟಣ್ಣ ಕಣಗಾಲ್ ಸರ್, ಪಂತುಲು, ವಿಜಯ ರೆಡ್ಡಮಶೇಖರ್ ಸರ್, ಸಿಂಗೀತಂ ಶ್ರೀನಿವಾಸ್, ಸಿದ್ದಲಿಂಗಯ್ಯ ಹೀಗೆ ದಿಗ್ಗಜ ನಿರ್ದೇಶಕರಿದ್ದರು. ಬಳಿಕ ಬಂದ ಪ್ರೇಮ್, ಓಂ ಪ್ರಕಾಶ್, ಉಪೇಂದ್ರ ಕೂಡ ತಮ್ಮ ಆಲೋಚನೆಗಳಿಂದ ಕನ್ನಡಿಗರನ್ನು ರಂಜಿಸಿದ್ದಾರೆ.
ಅದರಲ್ಲೂ ಉಪೇಂದ್ರ ಮಾಡಿದ ‘ಓಂ’ ಸಂಚಲನ ಸೃಷ್ಟಿಸಿತ್ತು, ಇವತ್ತಿಗೂ ಅದು ಅಪ್ಡೇಟೆಡ್ ಸಿನಿಮಾ. ಅದನ್ನು ಯಾರು ಯೋಚಿಸುವುದಕ್ಕೂ ಸಾಧ್ಯವಿಲ್ಲ, ಅದನ್ನು ರೀಮೇಕ್ ಮಾಡಬಹುದು ಅಷ್ಟೇ. ಈಗಿನ ಎ. ಹರ್ಷ, ಪ್ರಶಾಂತ್ ನೀಲ್, ರಾಜ್ ಬಿ. ಶೆಟ್ಟಿ, ರಿಷಬ್ ಶೆಟ್ಟಿ ಹೀಗೆ ಅವರೂ ಸಹ ಎಕ್ಸ್ಪರಿಮೆಂಟಲ್ ಚಿತ್ರಗಳನ್ನು ಕೊಡುತ್ತಾ ಬಂದಿದ್ದಾರೆ ಎಂದು ನಮ್ಮವರನ್ನು ನೆನೆದಿದ್ದಾರೆ. ಆದರೆ ಇದರ ನಡುವೆ ಬಂದ ಅದೊಂದು ಮಾತು ಕೊಂಚ ಬೇ’ಸ’ರವನ್ನುಂಟು ಮಾಡಿದೆ.