ಮುಂಬರುವ ಲೋಕಸಭಾ ಚುನಾವಣಾ (Parliment Election-2023) ಉದ್ದೇಶದಿಂದಾಗಿ ರಾಜ್ಯದಲ್ಲಿ BJP ಜೊತೆ JDS ಮೈತ್ರಿ (Alliance) ಆಗಿರುವುದು ರಾಜ್ಯ ರಾಜಕೀಯದ ವಿಚಾರದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೆಟ್ ಮಾಡುತ್ತಿದೆ. ಈ ಮೈತ್ರಿ ಬಗ್ಗೆ BJP ನಾಯಕರು ಸಂತಸ ವ್ಯಕ್ತಪಡಿಸುತ್ತಿದ್ದರೆ JDS ಪಾಳಯದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿವೆ.
BJP ಕೋಮುವಾದ ಪಕ್ಷ ಹಾಗಾಗಿ ಆ ಪಕ್ಷದ ಪರವಾಗಿ ಕೆಲಸ ಮಾಡಲು ಇಷ್ಟ ಇಲ್ಲ ಎಂದು ಈಗಾಗಲೇ JDS ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ಸೈಯದ್ ಶಫಿವುಲ್ಲಾ ರಾಜೀನಾಮೆ ನೀಡಿದ್ದಾರೆ. ಬಳಿಕ ಶಿವಮೊಗ್ಗ ಘಟಕದ JDS ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಯುಟಿ ಆಯೇಷಾ ಫರ್ಜೇನಾ, ಕಾರ್ಪೊರೇಟರ್ ಗಳು, ಹಲವು ಕಾರ್ಯಕರ್ತರು ಮತ್ತು ಮುಖಂಡರು ಕೂಡ ಪಕ್ಷ ಬಿಡಲು ನಿರ್ಧರಿಸಿದ್ದಾರೆ.
ಕಾವೇರಿ ವಿಚಾರಕ್ಕೆ ರಕ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ನಟ ಪ್ರೇಮ್.! ವಿಡಿಯೋ ವೈರಲ್
ಈಗ ಮೊದಲ ಬಾರಿಗೆ JDS ಹಾಗೂ BJP ಮೈತ್ರಿ ವಿಚಾರವಾಗಿ JDS ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (Ibrahim) ಮೌನ ಮುರಿದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರವಾಗಿ ಅಕ್ಟೋಬರ್ 16 ರಂದು ಮಾತಾಡಬೇಕು ಎಂಬ ನಿರ್ಧಾರ ಮಾಡಿದ್ದೆ, ಅಲ್ಲಿವರೆಗೆ ದಯವಿಟ್ಟು ಅವಕಾಶ ಕೊಡಿ, ಅಂದಿನ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮಾಧ್ಯಮಗಳ ಜೊತೆ ಮಾತಾಡುತ್ತೇನೆ ಎಂದು ಹೇಳಿದ್ದಾರೆ.
ನಾನೊಂದು ಪಕ್ಷದ ಅಧ್ಯಕ್ಷ, ಹಾಗಿದ್ದರೂ ನನಗೆ ಮೈತ್ರಿಯ ವಿಷಯ ತಿಳಿದೇ ಇಲ್ಲ. ಮಾತುಕತೆ ಬಗ್ಗೆ ನನಗೆ ಒಂದು ಮಾತು ಕೂಡ ಹೇಳಿಲ್ಲ, ಏನು ಚರ್ಚೆ ಮಾಡಿದ್ದೀರಿ, ಈವರೆಗೆ ಮಾಹಿತಿ ಬಂದಿಲ್ಲ. ಮೈತ್ರಿ ಬಗ್ಗೆ ವೇದಿಕೆಗಳಲ್ಲಿ ಚರ್ಚೆಯಾಗಿಲ್ಲ, ಪಕ್ಷದವರ ಅಭಿಪ್ರಾಯ ಪಡೆದಿಲ್ಲ, ನಾನು ಅಧ್ಯಕ್ಷನ ನನ್ನ ಸಹಿ ಕೂಡ ಪಡೆದಿಲ್ಲ, ಕೋರ್ ಕಮಿಟಿ ಪ್ರವಾಸ ಆದ ನಂತರ ತೀರ್ಮಾನ ಅಂದ್ರು.
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಇನ್ಮೇಲೆ ತಿರುಪತಿಯ ದರ್ಶನ ತುಂಬಾ ಸುಲಭ ಹೇಗೆ ಗೊತ್ತಾ.?
ಆದರೆ ಮೊದಲೇ ಹೋಗಿ ಕುಮಾರಸ್ವಾಮಿಯವರ ದೆಹಲಿಗೆ ಹೋಗಿ ಮೀಟ್ ಆಗಿ ಬಂದಿರುವುದು ಬಹಳ ಬೇಸರ ತಂದಿದೆ. ಮೈತ್ರಿಗಾಗಿ BJP ಯವರೇ ದೇವೇಗೌಡರ ಬಳಿ ಬರಬೇಕಿತ್ತು, ಆದರೆ ಇವರೇ ದೆಹಲಿಗೆ ಹೋಗಿರುವುದು ಕೂಡ ಸರಿ ಇಲ್ಲ ಎಂದರು ನಾನು ಜನತಾದಳ ಸೇರಲು ದೇವೇಗೌಡರೇ ಕಾರಣ.
ಕುಮಾರಸ್ವಾಮಿ ಹಾಗೂ ದೇವೇಗೌಡರ ಜೊತೆ ಮಾತಾಡಿಯೇ ಮುಂದಿನ ನಿರ್ಧಾರ ಕೈಗೊಳ್ತೀನಿ. ನಾನು JDS ಗೆ ಬಂದಿದ್ದು ಕರ್ತವ್ಯ ಮಾಡಲು, ಮುಂದೆಯೂ ಪಕ್ಷದ ಅಧ್ಯಕ್ಷನಾಗಿ ಕರ್ತವ್ಯ ಮಾಡುವ ಇಚ್ಛೆಯಿದೆ, ಅವರು ಭೇಟಿಗಾಗಿ ದೆಹಲಿಗೆ ಹೋಗಿದ್ದರು ನನ್ನ ಬಳಿ ಒಂದು ಮಾತಾಡಿ ಹೋಗಿದ್ದರೆ ಏನಾಗ್ತಾ ಇತ್ತು ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರ ನಡೆಯ ಬಗ್ಗೆ ಭಾರಿ ಆಕ್ರೋಶ ಹೊರಹಾಕಿದರು ಸ್ವಲ್ಪ ಖಾರವಾಗಿಯೇ ಅವರ ನಡೆಯನ್ನು ಖಂಡಿಸಿದರು.
ಗಂಡ ಮನೆಗೆ ಬಾರದಿದ್ದರೆ ಮಕ್ಕಳಾಗುವುದು ಹೇಗೆ? ಅತ್ತೆ ಮನೆ ಎದುರು ಧರಣಿ ಕೂತಿರುವ ಸೊಸೆ.!
ಅ.16 ಸಭೆಯ ಉದ್ದೇಶದ ಬಗ್ಗೆ ಕೂಡ ತಿಳಿಸಿದ ಅವನು ಈಗಾಗಲೇ ಮೈತ್ರಿ ಬಗ್ಗೆ ಪಕ್ಷದಲ್ಲಿ ಅನೇಕರಿಗೆ ಅಸಮಾಧಾನವಿದೆ ಹಾಗಾಗಿ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಜೊತೆಗೆ ಮೈತ್ರಿಯಾದ ಬಳಿಕ ದೆಹಲಿ ಕಾಂಗ್ರೆಸ್ ನವರು ಕಾಂಟಾಕ್ಟ್ ಮಾಡಿದ್ದಾರೆ, ಶರತ್ ಪವರ್ ಮತ್ತು ಆಪ್ ಪಕ್ಷದವರು ಮಾತನಾಡಿದ್ದಾರೆ, ಸಿದ್ದರಾಮಯ್ಯ ಅವರು ಸಂಪರ್ಕಿಸಿಲ್ಲ.
ಸಭೆ ಬಳಿಕ ಮೈತ್ರಿ ಸರಿಯಲ್ಲ ಎಂದರೆ ನಿತೀಶ್ ಕುಮಾರ್ ಜೊತೆ ಹೋಗೋದಾ ಅಥವಾ ಶರದ್ ಪವರ್ ಜೊತೆ ಹೋಗೋದಾ ಅನ್ನೋ ತೀರ್ಮಾನ ಮಾಡ್ತೀನಿ ಎಂದಿದ್ದಾರೆ. ಹಾಗಾಗಿ ಸಿಎಂ ಇಬ್ರಾಹಿಂ ಮುಂದಿನ ನಡೆ ಸಾಕಷ್ಟು ಕುತೂಹಲವನ್ನುಂಟು ಮಾಡಿದೆ.
ಉಪ್ಪಿನಂಗಡಿ ಮೇಸ್ತ್ರಿಗೆ ಕೇರಳದ ಅದೃಷ್ಟ ಲಾಟರಿಯಲ್ಲಿ ಒಲಿಯಿತು, 50 ಲಕ್ಷ ರೂಪಾಯಿ