ಜಿಜೆಪಿ ಗ್ಯಾರಂಟಿ ಅಂದರೆ, ʻPM ಕಿಸಾನ್ ಸನ್ಮಾನ್ ಯೋಜನೆʼಯ ಬಗ್ಗೆ ಇಲ್ಲಿ ಇಂದು ನೋಡೋಣ ಬನ್ನಿ… ಪ್ರಧಾನ್ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯ ಅಡಿಯಲ್ಲಿ ಮಾಸಿಕವಾಗಿ ನೀಡಲಾಗುವ ಹಣದ ಪ್ರಮಾಣ ಎಷ್ಟು? ಯೋಜನೆಯ ಮುಖ್ಯ ಉದ್ದೇಶ ಏನು? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವ ಇನ್ನು ಅನೇಕ ಮಾಹಿತಿಯನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ. ಹಾಗಾಗಿ, ಈ ಲೇಖನವನ್ನು ಪೂರ್ತಿಯಾಗಿ ಓದಿ.
ಕೃಷಿ ಕ್ಷೇತ್ರ ಮತ್ತು ರೈತರಿಗಾಗಿ ನಮ್ಮ ಸರ್ಕಾರದ ವಾರ್ಷಿಕ ವೆಚ್ಚಾ 6.5 ಲಕ್ಷ ಕೋಟಿ ರೂಪಾಯಿ ಎಂದು ಹೇಳಿದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಪ್ರತಿ ರೈತನಿಗೆ ಪ್ರತಿ ವರ್ಷ ಸುಮಾರು 50 ಸಾವಿರ ರೂಪಾಯಿಗಳ ಲಾಭವನ್ನು ಖಾತ್ರಿ ಪಡಿಸಲಾಗಿದೆ ಎಂದು ಕಳೆದ ಶನಿವಾರ ತಿಳಿಸಿದ್ದಾರೆ.
ಇದು ಮೋದಿಯವರ ಜಿಜೆಪಿ ಗ್ಯಾರಂಟಿ. ನಾನು ಏನು ಮಾಡಿದ್ದೇನೆ ಎಂದು ನಿಮಗೆ ಹೇಳುವುದು ಬೇಕಿಲ್ಲ. ಏಕೆಂದರೆ, ನನ್ನ 9 ವರ್ಷದ ಪ್ರಧಾನ ಮಂತ್ರಿ ಹುದ್ದೆಯಲ್ಲಿ ನಾನು ನಮ್ಮ ದೇಶಕ್ಕಾಗಿ ಮಾಡಿರುವುದು ನಿಮಗೆ ಚೆನ್ನಾಗಿಯೇ ತಿಳಿದಿದೆ. ಕೇವಲ ಭರವಸೆ ನೀಡುವವರು ನಾವಲ್ಲ ಎಂದು ದೇಶದ ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ. 17 ನೇ ಭಾರತೀಯ ಸಹಕಾರಿ ಕಾಂಗ್ರೆಸ್ ಉದ್ದಘಟನೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2014 ಕ್ಕಿಂತ ಮೊದಲು ಸಣ್ಣ ಮತ್ತು ಮಧ್ಯಮ ರೈತರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದರು ಅದು ನಿಮಗೂ ಕೂಡ ತಿಳಿದಿದೆ.
ಬದಲಾದ ನೀತಿಗಳು ಕಳೆದ 9 ವರ್ಷಗಳಲ್ಲಿ ತೆಗೆದುಕೊಂಡ ನಿರ್ಧಾರದಿಂದ ಬಂದ ಬದಲಾವಣೆಗಳನ್ನು ನೀವು ಅನುಭವಿಸುತ್ತಿದ್ದೀರಾ ಎಂದು ತಿಳಿಸಿದ್ದಾರೆ. 2014 ಕ್ಕಿಂತ ಮೊದಲು ಜನರು ಸಂಕಷ್ಟದಲ್ಲಿ ವಾಸವನ್ನು ಮಾಡುತ್ತಿದ್ದರು. ಆದರೆ, ಇದೀಗ ದೇಶದಲ್ಲಿನ ಸ್ಥಿತಿ ಬದಲಾಗಿದೆ. ಅದು ನಿಮಗೂ ಕೂಡ ತಿಳಿದಿದೆ. 2014 ಕ್ಕಿಂತ ಮುಂಚೆ ಜನರಿಗೆ ನೇರವನ್ನು ಸರಿಯಾದ ರೀತಿಯಲ್ಲಿ ನೀಡುತ್ತಿರಲಿಲ್ಲ. ಆದರೆ, ಇದೀಗ ನಮ್ಮ ಬಿಜೆಪಿ ಸರ್ಕಾರ ಜಿಜೆಪಿ ಗ್ಯಾರಂಟಿ ಎಲ್ಲವನ್ನೂ ಓದಗಿಸುತ್ತಿದೆ.
ಮೊದಲು ರೈತರಿಗೆ ಯಾವುದೇ ಸಹಾಯ ಬೇಕಾದಲ್ಲಿ ಅವರು ತಮ್ಮ ಮಧ್ಯವರ್ತಿಗಳಲ್ಲಿ ಕೇಳಿ ಪಡೆದುಕೊಳ್ಳಬೇಕಾಗಿತ್ತು. ಆದರೆ, ಇದೀಗ ಯಾವುದೇ ಮಧ್ಯವರ್ತಿಯ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸರ್ಕಾರದ ಯೋಜನೆಗಳಿಂದ ವಂಚಿರಾಗುತ್ತಿದ್ದರು. ಆದರೆ, ಕಳೆದ 9 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ ಇಂದು ಕೋಟ್ಯಂತರ ರೈತರು ಕಿಸಾನ್ ಸನ್ಮಾನ್ ನಿಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಮಧ್ಯವರ್ತಿಗಳಿಲ್ಲ, ಭೋಗಸ್ ಫಲನುಭವಿಗಳಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 2.5 ಲಕ್ಷ ಕೋಟಿ ರೂಪಾಯಿಯನ್ನು ವರ್ಗಯಿಸಲಾಗಿದೆ ಎಂದು ಮೋದಿಯವರು ತಿಳಿಸಿದ್ದಾರೆ. ವಿಶ್ವದ್ಯಂತ ರಸಗೊಬ್ಬರ ಮತ್ತು ರಸಾಯನಿಕಗಳ ಬೆಲೆ ಹೆಚ್ಚಾಳದಿಂದ ನಮ್ಮ ರೈತರಿಗೆ ಹೊರೆಯಾಗುವುದಿಲ್ಲ ಎಂದು ಭರವಸೆಯನ್ನು ನೀಡಲಾಗಿದೆ.
ಇದು ಮೋದಿಯವರ ಗ್ಯಾರಂಟಿ ಇದು ಕೇಂದ್ರದ ಬಿಜೆಪಿ ಸರ್ಕಾರ ನೀಡಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದ್ದಾರೆ. ಪಾರದರ್ಶಕತೆ ಮತ್ತು ಭ್ರಷ್ಟಚಾರ ಮುಕ್ತ ಆಡಳಿತದ ಮಾದರಿಯಾಗುವಂತೆ ಸಹಕಾರಿ ಸಂಸ್ಥೆಗಳಿಗೆ ಪ್ರಧಾನ ಮಂತ್ರಿಯಾವರು ಇದೇ ಸಮಯದಲ್ಲಿ ಕರೆ ನೀಡಿದರು ಮತ್ತು ದೇಶವು ಅಡುಗೆ ಎಣ್ಣೆಯಲ್ಲಿ ಸ್ವಾವಲಂಭಿಯಾಗಲು ಸಹಯ ಮಾಡಿದರು.
ರಸಾಯನಿಕ ಮುಕ್ತ ಕೃಷಿಯನ್ನು ಪ್ರಚಾರ ಮಾಡುವ ಹಾಗೂ ಪರ್ಯಾಯ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ PM ಪ್ರಣಮ್ ಯೋಜನೆಯನ್ನು ಮೋದಿಯವರು ತಿಳಿಸಿದ್ದಾರೆ.