ನಮಸ್ಕಾರ ಸ್ನೇಹಿತರೆ, ಚಿನ್ನದ ಠೇವಣಿ ಮೇಲೆ ಬಡ್ಡಿ ದರವನ್ನು ಜಾಸ್ತಿ ಮಾಡಲಾಗಿದ್ದು, ಚಿನ್ನ ಇರುವಂತಹ ಎಲ್ಲರು ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ ಎಫ್ ಡಿ ಮೇಲಿನ ಬಡ್ಡಿ ದರವನ್ನು ಜಾಸ್ತಿ ಮಾಡಿರುವ ಹಾಗೆ ಚಿನ್ನದ ಠೇವಣಿ ಮೇಲೆಯೂ ಸಹ ಇದೀಗ ಬಡ್ಡಿ ದರವನ್ನು ಏರಿಕೆ ಮಾಡಿದ್ದು ಚಿನ್ನವನ್ನು ಠೇವಣಿ ಇಟ್ಟರೆ ನಮಗೆ ಎಷ್ಟು ಬಡ್ಡಿದರ ಸಿಗುತ್ತದೆ ಹಾಗೆ ಏನೆಲ್ಲ ಲಾಭ ಪಡೆದುಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಭಾರತೀಯರು ಚಿನ್ನಪ್ರಿಯರು ಚಿನ್ನದ ಮೇಲೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ ಹಾಗೆ ಖರೀದಿ ಮಾಡುತ್ತಾರೆ ನಾವು ಖರೀದಿ ಮಾಡಿರುವಂತಹ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರ ಬದಲು ಅದನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ಅದರ ಮೇಲೆ ಬಡ್ಡಿ ದರವನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರೂ ಸಹ ಭವಿಷ್ಯಕ್ಕಾಗಿ ಸ್ವಲ್ಪ ಹಣ ಹೂಡಿಕೆ ಮಾಡಬೇಕು ಎಂದರೆ ಯಾವುದಾದರೂ ಒಳ್ಳೆ ಸ್ಕೀಮ್ ಅಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.
ಇನ್ನು ಹಣ ಗಳಿಸುವುದಕ್ಕೆ ಇನ್ನೂ ಒಂದು ಸುವರ್ಣ ಅವಕಾಶ ಇದೆ ದೇಶದ ಹಲವು ಬ್ಯಾಂಕ್ ಗಳಲ್ಲಿ ಚಿನ್ನದ ಠೇವಣಿ ಮೇಲೆ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತಿದೆ. ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕಿಂತ ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ಅದರ ಮೇಲೆ ಬರುವಂತಹ ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದು ಜೊತೆಯಲ್ಲಿ ಮನೆಯಲ್ಲಿ ಚಿನ್ನ ಇದ್ದರೆ ಕಳ್ಳರ ಭಯವೂ ಸಹ ಇರುತ್ತದೆ ಆದರೆ ಬ್ಯಾಂಕ್ ನಲ್ಲಿ ಠೇವಣಿ ಇಡುವುದರಿಂದ ನಿಮ್ಮ ಚಿನ್ನವೂ ಸುರಕ್ಷಿತವಾಗಿ ಇರುತ್ತದೆ ಹಾಗೆಯೇ ಅದರಿಂದ ಒಂದಷ್ಟು ಹಣವನ್ನು ಸಹ ಗಳಿಸಬಹುದು.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಸಾಕಷ್ಟು ಜನರು ಮಾಡುವ ಕೆಲಸ ಏನೆಂದರೆ ಬ್ಯಾಂಕ್ ಲಾಕರ್ ನಲ್ಲಿ ತಮ್ಮ ಚಿನ್ನವನ್ನು ಇಡುತ್ತಾರೆ ಬ್ಯಾಂಕ್ ಲಾಕರ್ ನ್ನಲ್ಲಿ ಚಿನ್ನ ಇಡುವುದರಿಂದ ಸುರಕ್ಷಿತವಾಗಿ ಇರುತ್ತದೆ ಆದರೆ ಅದರಿಂದ ಯಾವುದೇ ರೀತಿಯಾದಂತಹ ಹಣ ಉಳಿತಾಯ ಆಗುವುದಿಲ್ಲ ಜೊತೆಯಲ್ಲಿ ಲಾಕರ್ ನಲ್ಲಿ ಇಟ್ಟುಕೊಂಡಿದ್ದಕ್ಕಾಗಿ ನಿರ್ವಹಣಾ ವೆಚ್ಚವನ್ನು ಸಹ ನೀವು ನೀಡಬೇಕಾಗುತ್ತದೆ ಅದರ ಬದಲಾಗಿ ನೀವು ಬ್ಯಾಂಕ್ ನಲ್ಲಿ ಚಿನ್ನವನ್ನು ಠೇವಣಿ ಇಡಬಹುದು ಇದರಿಂದ ಹೆಚ್ಚಿನ ಬಡ್ಡಿಯೂ ಸಹ ನಿಮಗೆ ದೊರೆಯುತ್ತದೆ.
SBI ನಲ್ಲಿ ಚಿನ್ನದ ಠೇವಣಿ ಯೋಜನೆ ಆರಂಭವಾಗಿದ್ದು ದೇಶದ ಅತಿ ದೊಡ್ಡ ಸಾಲದಾತ ಬ್ಯಾಂಕ್ ಆಗಿರುವ SBI ಚಿನ್ನದ ಠೇವಣಿ ಯೋಜನೆಯನ್ನು ಆರಂಭಿಸಿದೆ ಹೆಚ್ಚಿನ ಹಣ ಗಳಿಸಲು ಅವಕಾಶ ಮಾಡಿಕೊಟ್ಟಿದೆ ಇಲ್ಲಿ ನಿಮ್ಮ ಚಿನ್ನದ ಠೇವಣಿಗೆ ಉತ್ತಮ ಬಡ್ಡಿ ದೊರೆಯುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನದ ಠೇವಣಿ ಯೋಜನೆ ಚಿನ್ನದ ಸ್ಥಿರ ಠೇವಣಿ ಯೋಜನೆಯಂತೆ ಇರುತ್ತದೆ ಈ ಯೋಜನೆಯ ಅಡಿಯಲ್ಲಿ ಗ್ರಾಹಕರು ತಮ್ಮ ಮನೆಯಲ್ಲಿ ಇರುವಂತಹ ಚಿನ್ನವನ್ನು ಭದ್ರತೆ ದೃಷ್ಟಿಯಿಂದ ಬ್ಯಾಂಕ್ ನಲ್ಲಿ ಇಡಬಹುದು ಇದರಿಂದ ನಿಮಗೆ ತೆರಿಗೆ ವಿನಾಯಿತಿಯು ಸಹ ನೀಡುತ್ತದೆ ಅಲ್ಲದೆ ಬಡ್ಡಿಯನ್ನು ಸಹ ಪಡೆದುಕೊಳ್ಳಬಹುದು
SBI ಪ್ರಾರಂಭಿಸಿರುವಂತಹ ಚಿನ್ನದ ಠೇವಣಿಯಲ್ಲಿ ಮೂರು ಭಾಗಗಳಿವೆ ಒಂದು ವರ್ಷದಿಂದ ಮೂರು ವರ್ಷದ ವರೆಗೆ ಠೇವಣಿ ಇಡುವುದನ್ನು ಅಲ್ಪಾವಧಿ ಠೇವಣಿ ಎಂದು ಕರೆಯುತ್ತಾರೆ. ಐದು ವರ್ಷದಿಂದ ಏಳು ವರ್ಷದವರೆಗೆ ಚಿನ್ನದ ಠೇವಣಿ ಇಡುವುದನ್ನು ಮಧ್ಯಮಾವಧಿ ಠೇವಣಿ ಎಂದು ಕರೆಯುತ್ತಾರೆ. 12 ವರ್ಷದಿಂದ 15 ವರ್ಷಗಳು ಬ್ಯಾಂಕಿನಲ್ಲಿ ಚಿನ್ನ ಠೇವಣಿ ಇಡುವುದನ್ನು ದೀರ್ಘಾವಧಿಯ ಠೇವಣಿ ಎಂದು ಕರೆಯಲಾಗುತ್ತದೆ. ನೀವು ಯಾವ ಅವಧಿಯಲ್ಲಿ ಚಿನ್ನವನ್ನು ಠೇವಣಿ ಇಡುತ್ತೀರಾ ಎಂಬುದರ ಆಧಾರದ ಮೇಲೆ ನಿಮ್ಮ ಬಡ್ಡಿ ನಿರ್ಧಾರವಾಗುತ್ತದೆ
ಉದಾಹರಣೆಗೆ ಅಲ್ಪಾವಧಿ ಚಿನ್ನವನ್ನು ಇರಿಸಿದರೆ 0.5% ನಿಂದ 0.60% ವರೆಗೆ ಬಡ್ಡಿ ಸಿಗುತ್ತದೆ ಒಂದು ವರ್ಷದವರೆಗೆ ಚಿನ್ನವನ್ನು ಠೇವಣಿ ಇಟ್ಟರೆ 0.50% ನಷ್ಟು ಬಡ್ಡಿ ಸಿಗುತ್ತದೆ ಹಾಗೆಯೇ ಒಂದು ವರ್ಷಕ್ಕಿಂತ ಹೆಚ್ಚು ಹಾಗೂ ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ ಚಿನ್ನ ಇಟ್ಟರೆ 0.55% ಬಡ್ಡಿ ಹಾಗೂ ಎರಡು ವರ್ಷಗಳಿಗಿಂತ ಹೆಚ್ಚು ಮತ್ತು ಎರಡು ವರ್ಷಗಳವರೆಗೆ ಚಿನ್ನವನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ ವಾರ್ಷಿಕವಾಗಿ 0.60% ಬಡ್ಡಿ ಪಡೆಯಬಹುದು. ದೀರ್ಘಾವಧಿಯ ಠೇವಣಿ ಹೂಡಿಕೆ ಮಾಡುವುದು ತುಂಬಾ ಒಳ್ಳೆಯದು. ದೀರ್ಘಾವಧಿಯಲ್ಲಿ ಠೇವಣಿ ಮಾಡಿದರೆ 2.50% ನಷ್ಟು ಬಡ್ಡಿ ನಿಮಗೆ ದೊರೆಯುತ್ತದೆ.
ಬ್ಯಾಂಕ್ ನಲ್ಲಿ ಚಿನ್ನ ಠೇವಣಿ ಇಡಲು ಬೇಕಾಗಿರುವಂತಹ ದಾಖಲಾತಿಗಳು
*ಗುರುತಿನ ಚೀಟಿ
*ವಿಳಾಸದಪುರವೇ
*ಪ್ಯಾನ್ ಕಾರ್ಡ್
*ಆಧಾರ್ ಕಾರ್ಡ್
*ಪಾಸ್ಪೋರ್ಟ್ ಸೈಜ್ ಫೋಟೋ
30 ಗ್ರಾಂ ಚಿನ್ನಕ್ಕಿಂತ ಅಧಿಕವಾಗಿ ನೀವು ಬ್ಯಾಂಕ್ ನಲ್ಲಿ ಠೇವಣಿ ಇಡಬೇಕಾಗುತ್ತದೆ ಹಾಗೆಯೇ 995 ಶುದ್ಧತೆಯ ಚಿನ್ನವನ್ನು ಮಾತ್ರ ಬ್ಯಾಂಕ್ ನಲ್ಲಿ ಇಟ್ಟುಕೊಳ್ಳಲಾಗುತ್ತದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |