ಬಿಗ್ ಬಾಸ್ (Bigboss) ಮನೆಯ ಬ್ಯೂಟಿ ನಮ್ರತ ಗೌಡ (Namratha Gowda) ಅವರು ಬಿಗ್ ಬಾಸ್ ಗೆ ಹೋಗುವುದಕ್ಕೂ ಮುನ್ನ ನಾಗಿಣಿ ಎಂದು ಕರೆಸಿಕೊಳ್ಳುತ್ತಿದ್ದರು. ಈಗ ಬಿಗ್ ಬಾಸ್ ನಮ್ರತಾ ಎಂದು ಕರೆಸಿಕೊಳ್ಳುವಷ್ಟು ಬಿಗ್ ಬಾಸ್ ಕಾರ್ಯಕ್ರಮ ಅವರ ಜನಪ್ರಿಯತೆಯನ್ನು ಇಮ್ಮಡಿಗೊಳಿಸಿದೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಮ್ಮದೇ ಆದ ರೀತಿಯಲ್ಲಿ ತೊಡಗಿಕೊಂಡಿದ್ದ ನಮ್ರತಾ ಗೌಡ ಅವರು ಕಡೆ ದಿನಗಳಲ್ಲಿ ಮನೆಯಿಂದ ಹೊರ ಬಿದ್ದಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಸತತವಾಗಿ ಮಾಧ್ಯಮಗಳ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ರಮದಲ್ಲೂ ಕಾಮನ್ ಆಗಿ ಅವರಿಗೆ ಕೇಳಲಾಗುತ್ತಿರುವ ಪ್ರಶ್ನೆ ಅವರ ಪ್ರೀತಿ ಹಾಗೂ ಮದುವೆಯ ಬಗ್ಗೆ ಇದಕ್ಕವರು ಉತ್ತರವನ್ನು ಕೂಡ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಸಹಸ್ಪರ್ಧಿ ಸ್ನೇಹಿತ್ (Snehith) ಅವರು ಸಾಕಷ್ಟು ಬಾರಿ ನಮ್ರತಾ ಅವರ ಮನ ಒಲಿಸಲು ಪ್ರಯತ್ನಪಟ್ಟಿದ್ದರು, ಅವರಿಗೆ ಡೈರೆಕ್ಟ್ ಆಗಿ ಪ್ರಪೋಸ್ ಕೂಡ ಮಾಡಿದ್ದರು, ಆಚೆ ಕೂಡ ಕಾಯುತ್ತೇನೆ ಎಂದು ಹೇಳಿದ್ದರು. ಆದರೆ ನಮ್ರತ ಮಾತ್ರ ಇದ್ಯಾವುದಕ್ಕೂ ಕೇರ್ ಮಾಡಿರಲಿಲ್ಲ ಮತ್ತು ಅವರ ಮುಖದ ಮೇಲೆ ಕನಸು ಕಾಣಬೇಡಿ ಎಂದು ಹೇಳಿಬಿಡುತ್ತಿದ್ದರು.
ಈ ಸುದ್ದಿ ಓದಿ :- ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!
ಈಗ ಆಚೆ ಬಂದು ಎಪಿಸೋಡ್ ಗಳನ್ನು ನೋಡಿದ ಮೇಲೆ ಅವರ ಮೇಲೆ ಅಭಿಪ್ರಾಯ ಬದಲಾಗಿದೆಯಾ ಎನ್ನುವ ಪ್ರಶ್ನೆ ಸಹಜವಾಗಿ ನಮ್ರತಾ ಅವರಿಗೆ ಎದುರಾಗುತ್ತಿದೆ ಹಾಗೂ ಇಲ್ಲ ಅಂದಮೇಲೆ ಇವರ ಕನಸಿನ ಹುಡುಗ ಹೇಗಿರಬೇಕು ಎಂದು ತಿಳಿದುಕೊಳ್ಳುವ ಕುತೂಹಲ ಅನೇಕ ರೀತಿ ಇದೆ ಅದಕ್ಕೆ ಇವರ ಕಡೆಯಿಂದ ಬಂದಿರುವ ಉತ್ತರ ಹೀಗಿದೆ.
ನನಗೆ ಮದುವೆ ಮೇಲೆ ನಂಬಿಕೆ ಹೋಗಿದೆ ನನಗೆ ಮತ್ತೆ ಆ ರೀತಿ ಭಾವನೆಗಳಲ್ಲಿ ಭರವಸೆ ಹುಟ್ಟಿಸುವಂತಹ ಹುಡುಗ ಸಿಗಬೇಕು ಅವರು ಸಿಗುತ್ತಾರೋ ಇಲ್ಲವೋ ಅದು ಕೂಡ ನನಗೆ ಗೊತ್ತಿಲ್ಲ ನೋಡೋಣ. ಆದರೆ ಯಾವುದೋ ಒಂದು ರಿಯಾಲಿಟಿ ಶೋ ಗೆ ಬಂದು ನೀನು ನನಗೆ ಇಷ್ಟ ಮದುವೆಯಾಗುತ್ತೇನೆ ಎಂದು ಹೇಳಿದರೆ ತಕ್ಷಣ ಒಪ್ಪಿಕೊಂಡು ಅವರ ಜೊತೆ ಬದುಕು ಕಟ್ಟಿಕೊಳ್ಳಲು ರೆಡಿಯಾಗುವಷ್ಟು ದಡ್ಡಿ ಅಂತು ನಾನು ಖಂಡಿತ ಅಲ್ಲ.
ಅದನ್ನು ನಾನು ನಂಬುವುದಿಲ್ಲ, ಒಪ್ಪುವುದು ಇಲ್ಲ. ಹಾಗೆ ನನಗೆ ಅರೆಂಜ್ ಮ್ಯಾರೇಜ್ ನಲ್ಲೂ ಕೂಡ ನಂಬಿಕೆ ಇಲ್ಲ. ಅಪ್ಪ ಅಮ್ಮ ನೋಡಿದ ಯಾರನ್ನೋ ಬ್ಲೆಂಡ್ ಆಗಿ ಒಪ್ಪಿಕೊಂಡು ಏನು ಗೊತ್ತಿಲ್ಲದೆ ಅವರ ಜೊತೆ ಬದುಕು ಕಟ್ಟಿಕೊಳ್ಳುವುದು ಕೂಡ ಕಷ್ಟದ ಕೆಲಸ. ನಾನು ಚಿಕ್ಕ ವಯಸ್ಸಿನಿಂದ ಬಹಳಷ್ಟು ನೋಡಿಕೊಂಡು ಬಂದಿದ್ದೇನೆ ಹಾಗಾಗಿ ನನಗೆ ನನ್ನದೇ ಆದ ನಿರೀಕ್ಷೆಗಳಿವೆ ಅದನ್ನು ಪೂರೈಸುವಂತವರು ಸಿಗಬೇಕು.
ಈ ಸುದ್ದಿ ಓದಿ :- ಕಾರ್ತಿಕ್ ಗೆದ್ರೆ ನಾನ್ಯಾಕೆ ಖುಷಿ ಪಡಬೇಕು.? ಸಂದರ್ಶನದಲ್ಲಿ ಖಡಕ್ ಉತ್ತರ ಕೊಟ್ಟ ನಟಿ ಸಂಗೀತಾ.!
ಅವರ ಭಾವನೆಗಳನ್ನು ಕನ್ನಡದಲ್ಲಿ ಹೇಳುವವರು, ಕನ್ನಡವನ್ನು ತುಂಬಾ ಚೆನ್ನಾಗಿ ಬಲ್ಲವರು, ಯಾರ ಜೊತೆ ಹೇಗೆ ನಡೆದುಕೊಂಡು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ಅರಿತವರು, ಯಾವುದೇ ವಿಷಯ ಆದರೂ ಕೂಡ ಅದಕ್ಕೆ ವಿಷಯ ತೇಲಿಸದೆ ಸರಿಯಾಗಿ ಎದುರು ಉತ್ತರ ಹೇಳುವವರು, ಕಣ್ಣಿನಲ್ಲಿ ಪ್ರಾಮಾಣಿಕತೆಯ ಸ್ಪಾರ್ಕ್ ಹೊಂದಿರುವವರು ಸಿಗಬೇಕು.
ಇದಿಷ್ಟೇ ನನ್ನ ನಿರೀಕ್ಷೆ ಅವರಿಗೆ ಅಷ್ಟು ದುಡ್ಡಿರಬೇಕು, ಇಷ್ಟು ದುಡ್ಡಿರಬೇಕು, ನೋಡಲು ಆಗಿರಬೇಕು, ಹೀಗಿರಬೇಕು, ಇದೇ ಕೆಲಸ ಮಾಡಬೇಕು, ಈ ರೀತಿ ಯಾವುದೇ ಡಿಮ್ಯಾಂಡ್ ಇಲ್ಲ ನೋಡಿ ಇಷ್ಟ ಆಗಿ ಪ್ರೀತಿ ಮಾಡಿ ನಂತರ ಒಟ್ಟಿಗೆ ಬದುಕು ಕಟ್ಟಿಕೊಳ್ಳುವ ಆಸೆ ಇದೆ ಅಂತವರು ಸಿಕ್ಕಾಗ ನೋಡೋಣ ಎಂದು ಹೇಳಿದ್ದಾರೆ.