ಬ್ಯಾಂಕ್ ಈಗ ಎಲ್ಲರಿಗೂ ಅವಶ್ಯಕವಾಗಿರುವ ಒಂದು ಸೇವೆ. ಬ್ಯಾಂಕಿಂದ ಜನರಿಗೆ ಎಷ್ಟು ಉಳಿತಾಯವಾಗುತ್ತಿದೆ ಎಂದರೆ ಅವರು ಹಣವನ್ನು ಉಳಿಸುವುದಕ್ಕೆ, ಹಣ ಹೂಡಿಕೆ ಮಾಡುವುದಕ್ಕೆ, ಅಗತ್ಯಸಮಯಗಳಲ್ಲಿ ಸಾಲಗಳನ್ನು ಪಡೆದುಕೊಳ್ಳುವುದಕ್ಕೆ ಈ ರೀತಿ ನಾನಾ ಕಾರಣಕ್ಕೆ ಬ್ಯಾಂಕುಗಳು ಜನಸಾಮಾನ್ಯರಿಗೆ ಹತ್ತಿರವಾಗಿವೆ.
ಬ್ಯಾಂಕುಗಳು ಕೂಡ ತನ್ನಲ್ಲಿ ಖಾತೆ ತೆರೆದ ಗ್ರಾಹಕರಿಗೆ ಅನುಕೂಲವಾಗುವಂತೆ ಸದಾ ಒಂದಲ್ಲಾ ಒಂದು ಹೊಸ ಯೋಜನೆಯನ್ನು ಅಥವಾ ಬದಲಾವಣೆಯನ್ನು ಮತ್ತು ಇನ್ನು ವಿಶೇಷ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಮೂಲಕ ಗ್ರಾಹಕರನ್ನು ಉಳಿಸಿಕೊಂಡಿದೆ. ಹಾಗೂ ತನ್ನತ್ತ ಹೆಚ್ಚು ಗ್ರಾಹಕರು ಆಕರ್ಷಿತವಾಗುವಂತೆ ಮಾಡಿದೆ.
ಸದ್ಯಕ್ಕೆ ಈಗ ಬ್ಯಾಂಕ್ ವಿಷಯದಲ್ಲಿ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಎನ್ನುವ ವಿಚಾರಗಳು ಹೆಚ್ಚು ಚರ್ಚೆ ಆಗುತ್ತಿವೆ ಅದರ ಬಗ್ಗೆ ನೋಡುವುದಾದರೆ ಈ ಎಲ್ಲಾ ಅನುಕೂಲತೆಗಳಿಗೆ ಮೊಬೈಲ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದು ಮುಖ್ಯ. ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಗೆ ಸಂಖ್ಯೆಗೆ ಲಿಂಕ್ ಆಗಿದ್ದಾಗ ಮಾತ್ರ ನೀವು ನೆಟ್ ಬ್ಯಾಂಕಿಂಗ್ ಉಪಯೋಗಿಸಿ ಆನ್ಲೈನ್ ನಲ್ಲಿಯೇ ಹಣದ ವ್ಯವಹಾರ ಮಾಡಬಹುದು.
ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮುಂತಾದ ಸೇವೆಗಳನ್ನೆಲ್ಲ ಬಳಸಲು ಇದು ಅತ್ಯವಶ್ಯಕ. ಹಾಗೆಯೇ ಬ್ಯಾಂಕ್ ಅಕೌಂಟ್ ಗೆ ಮೊಬೈಲ್ ಸಂಖ್ಯೆ ನೋಂದಣಿಸುವುದರಿಂದ ನಿಮ್ಮ ಬ್ಯಾಂಕ್ ವಿವರಗಳನ್ನು ಸಂದೇಶಗಳ ಮೂಲಕ ಪಡೆಯಬಹುದು. ಉದಾಹರಣೆಗೆ ನಿಮ್ಮ ಖಾತೆಗೆ ಹಣ ಬಂದಾಗ ಅಥವಾ ನಿಮ್ಮ ಖಾತೆಯಲ್ಲಿ ಹಣ ಕಡಿತಗೊಂಡಾಗ ಅಥವಾ ಸರ್ವರ್ ಸಮಸ್ಯೆ ಆಗಿ ಬ್ಯಾಂಕ್ ಚಟುವಟಿಕೆ ನಡೆಯುತ್ತಿಲ್ಲ ಎಂದಾಗ ಈ ವಿಷಯಗಳಲ್ಲೆಲ್ಲ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶವಾಗಿ ಬರುತ್ತದೆ.
ಹೀಗಾಗಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸುವುದು ಮುಖ್ಯ. ನೀವು ಇನ್ನೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಲ್ಲ ಎಂದರೆ ಅಥವಾ ಹೊಸ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕು ಎಂದಿದ್ದರೆ ಈ ವಿಧಾನಗಳನ್ನು ಅನುಸರಿಸಿ ಬ್ಯಾಂಕಿಗೆ ಹೋಗದೆಯೇ ಮೊಬೈಲ್ ಸಂಖ್ಯೆ ಬದಲಾಯಿಸಬಹುದು.
● ಬ್ಯಾಂಕ್ ಶಾಖೆಗೆ ಭೇಟಿ ಕೊಡುವುದರಿಂದ:- ಮೊದಲನೇದಾಗಿ ನೀವು ಖಾತೆ ತೆರೆದ ಬ್ಯಾಂಕಿಗೆ ಹೋಗಲು ಸಾಧ್ಯವಾಗದೇ ಇದ್ದಾಗ ನಿಮ್ಮ ಬ್ಯಾಂಕಿನ ಯಾವುದೇ ಶಾಖೆಗೆ ಭೇಟಿ ಕೊಟ್ಟು ನಿಮ್ಮ ಮೊಬೈಲ್ ನಂಬರ್ ಚೇಂಜ್ ಮಾಡುವುದಕ್ಕೆ ಇರುವ ಅರ್ಜಿಯನ್ನು ಭರ್ತಿ ಮಾಡಿ ಅದಕ್ಕೆ ಕೇಳುವ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿದರೆ 24 ಗಂಟೆ ಒಳಗೆ ಈ ಕೆಲಸ ಪೂರ್ತಿ ಆಗಿರುತ್ತದೆ.
● ATM ಮೂಲಕ:- ಎರಡನೇ ವಿಧಾನದಲ್ಲಿ ನಿವೇನಾದರೂ ಬ್ಯಾಂಕ್ ಬ್ರಾಂಚ್ ಗಳಿಗೂ ಹೋಗುವ ಸಮಯ ಇಲ್ಲ ಎನ್ನುವುದಾದರೆ ATM ಗಳ ಮೂಲಕವೇ ನಿಮ್ಮ ಕೆಲಸವನ್ನು ಮಾಡಿಕೊಳ್ಳಬಹುದು. ನಿಮ್ಮ ಕಾರ್ಡ್ಗಳನ್ನು ATMನಲ್ಲಿ ಉಪಯೋಗಿಸಿದಾಗ ನವೀಕರಿಸುವ ಬಗ್ಗೆ ಆಪ್ಷನ್ಗಳಿರುತ್ತದೆ. ಅದರಲ್ಲಿ ಮೊಬೈಲ್ ಸಂಖ್ಯೆ ಬದಲಾವಣೆಗೆ ಇರುವ ಆಪ್ಷನ್ ಅನ್ನು ಹುಡುಕಿ ಆಯ್ಕೆ ಮಾಡಿ ಅಲ್ಲಿ ವಿವರಗಳನ್ನು ತಿಳಿಸುವುದರಿಂದ ಕೂಡ ಈ ಪ್ರಕ್ರಿಯ ಪೂರ್ತಿಗೊಳ್ಳುತ್ತದೆ.
●ನೆಟ್ ಬ್ಯಾಂಕಿಂಗ್ ಮೂಲಕ:- ನಿಮಗೆ ಬ್ಯಾಂಕುಗಳಿಗೆ ಹೋಗಲಾಗುತ್ತಿಲ್ಲ ಅಥವಾ ಎಟಿಎಂ ಗಳಿಗೂ ಹೋಗಲು ಆಗುತ್ತಿಲ್ಲ ಅಂದರೆ ಮನೆಯಲ್ಲಿಯೇ ಕುಳಿತು ಕೂಡ ನೀವು ನಿಮ್ಮ ಮೊಬೈಲ್ ಸಂಖ್ಯೆ ಬದಲಾಯಿಸಬಹುದು. ನೆಟ್ ಬ್ಯಾಂಕಿಂಗ್ ಅಲ್ಲೂ ಕೂಡ ಮೊಬೈಲ್ ಸಂಖ್ಯೆ ಬದಲಾವಣೆ ಅಥವಾ ನವೀಕರಣಕ್ಕೆ ಆಪ್ಷನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ವಿವರಗಳನ್ನು ತುಂಬಿಸಿ ಓಕೆ ಮಾಡುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಬಹುದು