ಜನನ ಪ್ರಮಾಣಪತ್ರವು ಬಹಳ ಮುಖ್ಯವಾದ ದಾಖಲೆಯಾಗಿದೆ. ಜನನ ಪ್ರಮಾಣ ಪತ್ರ ಪಡೆಯುವಾಗ ಅರ್ಜಿ ನಮೂನೆಯಲ್ಲಿನ ಕೆಲವು ಸಣ್ಣಪುಟ್ಟ ತಪ್ಪುಗಳಿಂದಾಗಿ ನಾಗರಿಕರ ಜನನ ಪ್ರಮಾಣಪತ್ರದಲ್ಲಿ ಜನ್ಮ ದಿನಾಂಕ, ಪೋಷಕರ ಹೆಸರು, ಶಾಶ್ವತ ವಿಳಾಸ, ಜನ್ಮ ಸಮಯ ಇತ್ಯಾದಿ ದೋಷಗಳು ಆಗಾಗ್ಗೆ ಕಂಡುಬರುತ್ತವೆ. ಆದ್ದರಿಂದ, ಜನನ ಪ್ರಮಾಣಪತ್ರದಲ್ಲಿನ ಈ ದೋಷವನ್ನು ಸರಿಪಡಿಸಲು ಅಥವಾ ತಿದ್ದುಪಡಿ ಮಾಡಲು, ನಾಗರಿಕರು ತಮ್ಮ ಜನ್ಮ ಪ್ರಮಾಣಪತ್ರದಲ್ಲಿ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ತಿದ್ದುಪಡಿಯನ್ನು ಮಾಡಬಹುದು.
ಇಂದು ಈ ಲೇಖನದಲ್ಲಿ ಜನನ ಪ್ರಮಾಣಪತ್ರದಲ್ಲಿ ಏನಾದ್ರೂ ತಪ್ಪಿದ್ರೆ ಹೇಗೆ ತಿದ್ದುಪಡಿ ಮಾಡಬಹುದು? ಎಂದು ತಿಳಿಸಲಿದ್ದೇವೆ. ಜನನ ಪ್ರಮಾಣಪತ್ರದಲ್ಲಿ ತಿದ್ದುಪಡಿಗಾಗಿ ಲಗತ್ತಿಸಬೇಕಾದ ಅಗತ್ಯ ದಾಖಲೆಗಳು ಯಾವುವು. ಇದರೊಂದಿಗೆ, ಮನೆಯಲ್ಲಿ ಕುಳಿತುಕೊಂಡು ಆನ್ಲೈನ್ನಲ್ಲಿ ಜನನ ಪ್ರಮಾಣಪತ್ರ ತಿದ್ದುಪಡಿ ಫಾರ್ಮ್ ಅನ್ನು ಭರ್ತಿ ಮಾಡುವ ಪ್ರಕ್ರಿಯೆ ಏನು? ಎಂದು ನೋಡೋಣ ಬನ್ನಿ…
ಜನನ ಪ್ರಮಾಣಪತ್ರ ತಿದ್ದುಪಡಿಗೆ ಪ್ರಮುಖ ದಾಖಲೆಗಳು
* ಮಗುವಿನ ಹಳೆಯ ಜನನ ಪ್ರಮಾಣ ಪತ್ರ
* ತಂದೆ-ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
* ಇ-ಸ್ಟಾಂಪ್ ಪೇಪರ್ ಅಫಿಡವಿಟ್(ಇದರಲ್ಲಿ ಮುಖ್ಯವಾಗಿ ತಿದ್ದುಪಡಿಯನ್ನು ಏಕೆ ಮಾಡಿಸುತ್ತಿದ್ದೀರಿ ಎಂಬುದನ್ನ ನಮೂದಿಸಬೇಕು. ಇಲ್ಲಿ ಯಾವುದೇ ಸ್ಪೆಲ್ಲಿಂಗ್ ಮಿಸ್ಟೇಕ್ ಆಗದಂತೆ ನೋಡಿಕೊಳ್ಳಬೇಕು.)
* ಪುರ ಸಭೆ ಅಥವಾ ಸಿವಿಲ್ ಕೋರ್ಟ್ ಬಳಿಯಿರುವ ಅಂಗಡಿಗಳ ಬಳಿ ಈ ತಿದ್ದುಪಡಿಯನ್ನು ಮಾಡುತ್ತಾರೆ.
ಇನ್ನು, ಜನನ ಪ್ರಮಾಣಪತ್ರ ತಿದ್ದುಪಡಿಗಾಗಿ ಇದರೊಂದಿಗೆ ಮತ್ತೊಂದು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದನ್ನು ಜೆರಾಕ್ಸ್ ಅಂಗಡಿಯಲ್ಲಿ ತೆಗೆದುಕೊಂಡು ಅದನ್ನು ಭರ್ತಿ ಮಾಡಬೇಕಾಗುತ್ತದೆ. ಈ ಮೇಲಿನ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನೀವು ಜನನ ಪ್ರಮಾಣಪತ್ರವನ್ನು ಎಲ್ಲಿ ಮೊದಲು ಮಾಡಿಸಿದ್ದೀರೋ ಅಲ್ಲಿಗೆ ಹೋಗಿ ಜನನ ಪ್ರಮಾಣಪತ್ರ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬೇಕು. ನೀವು ಅರ್ಜಿ ಸಲ್ಲಿಸೋದು ಪುರ ಸಭೆ ಆಗಿದ್ರೆ, ಜನನ ಪ್ರಮಾಣಪತ್ರ ನಿಮಗೆ ಬೇಗ ಸಿಗುತ್ತದೆ. ಆದ್ರೆ, ಮಹಾನಗರ ಪಾಲಿಕೆಯಾಗಿದ್ರೆ ತಡವಾಗಿ ನಿಮ್ಮ ಕೈ ಸೇರಲಿದೆ. ಇಲ್ಲಿ ಪ್ರತೀ ಪುಟಕ್ಕೆ 5 ರಿಂದ 7 ರೂ. ಚಾರ್ಜ್ ಮಾಡಲಾಗುತ್ತದೆ. ಈ ಹಣವನ್ನು ಪಾವತಿಸಿ ನಿಮಗೆ ಎಷ್ಟು ಬೇಕೋ ಅಷ್ಟು ಜನನ ಪ್ರಮಾಣಪತ್ರ ಪ್ರತಿಯನ್ನು ಪಡೆದುಕೊಳ್ಳಬಹುದು.
ಜನನ ಪ್ರಮಾಣಪತ್ರದಲ್ಲಿ ತಂದೆ/ತಾಯಿ ಹೆಸರು ಬದಲಾವಣೆ
ನಾವು ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ: ನೀವು ವಿಚ್ಛೇದಿತರನ್ನು ಮದುವೆಯಾಗಿದ್ದೀರಿ ಮತ್ತು ನಿಮ್ಮ ಸಂಗಾತಿ (ಹೆಂಡತಿ) ಈಗಾಗಲೇ ಮಗುವನ್ನು ಹೊಂದಿದ್ದಾರೆ. ಇದಲ್ಲದೆ, ನೀವು ಈಗ ಜೈವಿಕ ತಂದೆಗಿಂತ ಹೆಚ್ಚಾಗಿ ಮಗುವಿನ ಮಲತಂದೆಯಾಗಿದ್ದೀರಿ. ಮಗುವಿನ ಜನನ ಪ್ರಮಾಣಪತ್ರದಲ್ಲಿ ನೀವು ತಂದೆಯ ಹೆಸರನ್ನು ಬದಲಾಯಿಸಲು ಬಯಸುತ್ತೀರಿ. ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರನ್ನು ಬದಲಾಯಿಸಲು ನೀವು ಈಗ ವಿನಂತಿಸಬಹುದು.
ಆದಾಗ್ಯೂ, ನೀವು ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರನ್ನು ಬದಲಾಯಿಸಲು ಬಯಸಿದರೆ, ನೀವು ಮಗುವನ್ನು ದತ್ತು ತೆಗೆದುಕೊಳ್ಳಬೇಕಾಗಬಹುದು ಮತ್ತು ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರನ್ನು ಬದಲಾಯಿಸಲು ನೀವು ಅರ್ಜಿ ಸಲ್ಲಿಸುವ ಮೊದಲು ನ್ಯಾಯಾಲಯದ ಆದೇಶದ ಮೂಲಕ ದತ್ತು ನೋಂದಾಯಿಸಿ ಮತ್ತು ಘೋಷಿಸಬೇಕು. ನೀವು ಬೇರೇನಾದರೂ ಮಾಡುವ ಮೊದಲು, ದತ್ತು ಅರ್ಹತೆಯ ಅವಶ್ಯಕತೆಗಳನ್ನು ಪರಿಶೀಲಿಸಿ ಎಂದು ಖಚಿತಪಡಿಸಿಕೊಳ್ಳಿ. ಜನನ ಪ್ರಮಾಣಪತ್ರದಲ್ಲಿ ತಾಯಿಯ ಹೆಸರನ್ನು ಬದಲಾಯಿಸಲು ಅದೇ ವಿಧಾನವನ್ನು ಅನುಸರಿಸಬೇಕಾಗಬಹುದು.