ನಟ ವಿನೋದ್ ರಾಜಕುಮಾರ್ (Vinod Rajkumar) ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಪ್ರತಿಭೆ ನಾಯಕ ಯಾಕೆ ಒಳ್ಳೆ ಸಿನಿಮಾಗಳಲ್ಲಿ ಮಿಂಚು ಬಿದ್ದ ಇವರು ಇದ್ದಕ್ಕಿದ್ದಂತೆ ಸಿನಿಮಾರಂಗದಲ್ಲಿ ಅವಕಾಶವಿಲ್ಲದೆ ಮರೆಯಾಗಿ ಹೋದರು ನಂತರ ನೆಲಮಂಗಲ ಸಮೀಪದ ಸೋಲದೇವನಹಳ್ಳಿಯಲ್ಲಿ (Soladevanhalli) ಕೃಷಿ ಭೂಮಿ ಖರೀದಿಸಿದ ಲೀಲಾವತಿಯ ಮತ್ತು ವಿನೋದ್ ರಾಜಕುಮಾರ್ ರವರು ಅದೇ ಭೂಮಿಯಲ್ಲಿ ಚಿನ್ನ ಬೆಳೆಯುತ್ತಾರೆ ಎಂದು ಹೇಳಬಹುದು ಅಷ್ಟರಮಟ್ಟಿಗೆ ಬದುಕು ಕಟ್ಟಿಕೊಂಡಿದ್ದಾರೆ.
ಸಾಲದಕ್ಕೆ ಸಮಾಜಕ್ಕಾಗಿ ಉಡುಗೊರೆ ಕೊಡುವ ಉದ್ದೇಶದಿಂದ ಚೆನ್ನೈನಲ್ಲಿದ್ದ ತಮ್ಮ ಆಸ್ತಿಯನ್ನು ಮಾರಿ ಸೋದೇವನಹಳ್ಳಿಯಲ್ಲಿ ಒಂದು ಸರ್ಕಾರಿ ಆಸ್ಪತ್ರೆ (Government hospital) ಹಾಗೂ ಪಶು ಆಸ್ಪತ್ರೆ ಒಂದನ್ನು ಕಟ್ಟಿಸಿದ್ದಾರೆ. ಲೆಕ್ಕಾಚಾರ, ಹಣಕಾಸಿನ ವಿಚಾರದಲ್ಲಿ ಯಾವುದೇ ಅಕೌಂಟೆಂಟ್ ಗಿಂತಲೂ ಕಡಿಮೆ ಇಲ್ಲದ ಜ್ಞಾನ ಹೊಂದಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯು ಏಕೆ ದುಡಿಯಬೇಕು, ದುಡಿದ ಹಣವನ್ನು ಯಾವ ರೀತಿ ಮತ್ತೆ ದುಡಿಸಿಕೊಳ್ಳಬೇಕು. ಈ ರೀತಿ ಹೇಗೆ ನಮ್ಮ ಬದುಕನ್ನು ಬ್ಯಾಲೆನ್ಸ್ ಮಾಡಬೇಕು ಈ ಹಾದಿಯಲ್ಲಿ ಎಷ್ಟು ಕಷ್ಟ ಮತ್ತು ಯಾವ ರೀತಿಯೆಲ್ಲಾ ಅವಕಾಶಗಳು ಸಿಗುತ್ತದೆ ಅವುಗಳನ್ನು ಹೇಗೆ ಬಳಸಕೊಳ್ಳಬೇಕು ಎನ್ನುವ ವಿಚಾರಗಳನ್ನು ಖಾಸಗಿ ಯೂಟ್ಯೂಬ್ ವಾಹಿನಿಯ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.
ಅವರು ಹೇಳಿದ ವಿಚಾರವನ್ನು ಸಿಂಪಲ್ ಆಗಿ ಹೇಳುವುದೇನೆಂದರೆ, ವಿನೋದ್ ರಾಜಕುಮಾರ್ ಅವರು ಬದುಕುವ ನೀತಿಯಿಂದ ಹಿಡಿದು ಹಣಕಾಸಿನ ವಿಚಾರದಲ್ಲಿ ಹೇಗಿರಬೇಕು ಎನ್ನುವ ಎಲ್ಲಾ ವಿದ್ಯೆಯನ್ನು ತಮ್ಮ ತಾಯಿಯಿಂದ ಕಲಿತಿದ್ದಾರಂತೆ. ಇಂಜಿನಿಯರಿಂಗ್ ವರೆಗೂ ವಿದ್ಯಾಭ್ಯಾಸ ಮಾಡಿರುವ ಇವರು ಸಿನಿಮಾ ರಂಗವನ್ನು ಆಯ್ದುಕೊಂಡರು ಸಿನಿಮಾ ರಂಗ ಆಪ್ಶನ್ A ಆಗಿದ್ದರೆ ಬದುಕಿನಲ್ಲಿ ಆಪ್ಷನ್ B ಆಗಿ ಕೈ ಹಿಡಿದಿದ್ದು ಕೃಷಿ.
ಅಂದು ಕಲ್ಲು ಬಂಡೆಯಂತಿದ್ದ ಪ್ರದೇಶದಲ್ಲಿ ಸಮೃದ್ಧವಾದ ತೋಟ ಮಾಡಿರುವ ಇವರು ತಿಂಗಳಿಗೆ ಲಕ್ಷಾಂತರ ಆದಾರವನ್ನು ತಮ್ಮ ಜಮೀನಿನಿಂದಲೇ ಪಡೆಯುತ್ತಿದ್ದಾರೆ. ಈ ರೀತಿ ಸಾಕಷ್ಟು ಆದಾಯಗಳನ್ನು ಹೊಂದಿರುವ ಇವರು ಹಣ ಉಳಿಸುವುದರ ಮತ್ತು ಅದನ್ನು ಹೆಚ್ಚು ಮಾಡುವುದರ ಬಗ್ಗೆ ಜನಸಾಮಾನ್ಯರಿಗೆ ಯಾವ ರೀತಿ ಸಲಹೆ ಕೊಡುತ್ತಾರೆ ಎಂದರೆ ನಿಮ್ಮ ಬಳಿ ಹತ್ತು ರೂಪಾಯಿ ಇದೆ ಎಂದರೆ ನೀವು ಅದರಲ್ಲಿ 6.5% ಹೂಡಿಕೆ ಮಾಡಬೇಕು.
ಮೊದಲಿಗೆ 2% ಪೆರ್ಸೆಂಟ್ ಯಾವುದೇ ಭೂಮಿ ಮೇಲೆ ಹಾಕಿ ಯಾಕೆಂದರೆ ಭೂಮಿ ಅಷ್ಟೇ ಇರುತ್ತದೆ ಜನಸಂಖ್ಯೆ ಬೆಳೆಯುತ್ತಿರುತ್ತದೆ ಹಾಗಾಗಿ ಭೂಮಿ ಮೇಲೆ ಹಾಕಿದ ಹಣ ಎಂದು ಲಾಸ್ ಆಗುವುದಿಲ್ಲಉಳಿದ ಹಣದಲ್ಲಿ 2% POMIS, SCSS, FD ಇವುಗಳಲ್ಲಿ ಹೂಡಿಕೆ ಮಾಡಿ ಇವುಗಳಿಂದ ಪ್ರತಿ ತಿಂಗಳು ಆದಾಯ ಬರುತ್ತದೆ ಆದರೆ ಇದನ್ನು ಮೂರು ತಿಂಗಳಿಗೊಮ್ಮೆ ತೆಗೆದುಕೊಳ್ಳಿ.
1% ನಿಮ್ಮ ಹೆಲ್ತ್ ಇನ್ಸೂರೆನ್ಸ್ ಟರ್ಮ್ ಇನ್ಸೂರೆನ್ಸ್, ಲೈಫ್ ಇನ್ಶೂರೆನ್ಸ್, NPS ಇವುಗಳ ಮೇಲೆ ಹೂಡಿಕೆ ಮಾಡಿ ದೀರ್ಘಕಾಲದಲ್ಲಿ ಅನುಕೂಲ ಮಾಡಿಕೊಡುತ್ತವೆ. ಇನ್ನೂ 1.5% ಧೈರ್ಯ ಮಾಡಿ ರಿಸ್ಕ್ ತೆಗೆದುಕೊಳ್ಳಬೇಕು ಆದರೆ ಒಳ್ಳೆಯ ಆರ್ಥಿಕ ಸಜ್ಞರ ಸಹಾಯ ತೆಗೆದುಕೊಂಡು ಈಕ್ವಿಟಿ ಮ್ಯೂಚುಯಲ್ ಫಂಡ್ ಅಥವಾ ಖಾಸಗಿ ಹೂಡಿಕೆ ಮಾಡಿ ಯಾಕೆಂದರೆ ಈ ಮೇಲೆ ತಿಳಿಸಿದವಲ್ಲ ಸರ್ಕಾರಿ ಯೋಚನೆಗಳು ಅವುಗಳಲ್ಲಿ ಹಣಕ್ಕೆ ಭದ್ರತೆ ಇರುತ್ತದೆ ಆದರೆ ಹಣಕಾಸಿನ ಏರಿಕೆ ಮಂದಗತಿಯಲ್ಲಿರುತ್ತದೆ.
ಪ್ರೈವೇಟ್ ನಲ್ಲಿ ಅಷ್ಟೇ ಬೇಗ ಹಣ ಹೆಚ್ಚಾಗುತ್ತದೆ ಎಂದು ಸಲಹೆ ಕೊಡುತ್ತಾರೆ ಅಲ್ಲದೆ ಉಳಿದ 3.5% ನ್ನು ಕೂಡ ಜೀವನಕ್ಕಾಗಿ ಖರ್ಚು ಮಾಡುವುದಾದರೆ ಮಾಡಬಹುದು. ಅದರಲ್ಲೂ ಉಳಿಸುವವರು ಸಣ್ಣ ಸಣ್ಣ ಸೈಟ್ ಮಾಡಬಹುದು ಬಂಗಾರ ಕೊಂಡುಕೊಳ್ಳಬಹುದು ಎಂದು ಸಲಹೆ ಕೊಡುತ್ತಾರೆ.
ಯಾವುದೇ ಸರ್ಕಾರಿ ಸೌಲಭ್ಯ ತೆಗೆದುಕೊಳ್ಳಲು ಹಿಂಜರಿಕೆ ಮಾಡಬೇಡಿ ಮತ್ತು ನೀವು ಚೆನ್ನಾಗಿ ಆದಾಗ ಸಮಾಜಕ್ಕೆ ಕೊಡಲು ಹಿಂದೆ ಮುಂದೆ ನೋಡಬೇಡಿ ಎನ್ನುವ ಸಲಹೆ ನೀಡುತ್ತಾರೆ. ಅವರ ಇಂತಹದೇ ಇನ್ನಷ್ಟು ಇಂಟರೆಸ್ಟಿಂಗ್ ಮಾತುಗಳನ್ನು ಈ ವಿಷಯ ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.