ನಾವೀಗ 21ನೇ ಶತಮಾನದಲ್ಲಿ ಇದ್ದೇವೆ. ಗಂಡಿಗೆ ಸರಿಸಮವಾಗಿ ಎಲ್ಲಾ ಕ್ಷೇತ್ರದಲ್ಲಿ ನಾರಿಮಣಿ ಕೂಡ ಗುರುತಿಸಿಕೊಂಡಿದ್ದಾಳೆ. ಜ್ಞಾನದಿಂದ ರಾಜಕೀಯದವರೆಗೆ, ಉದ್ಯೋಗದಿಂದ ಉದ್ಯಮದ ವರೆಗೆ ಸೈ ಎನಿಸಿಕೊಂಡಿದ್ದರು ಸಾಂಸಾರಿಕ ಕಟ್ಟುಪಾಡುಗಳಲ್ಲಿ ಆಕೆಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನಬಹುದು.
ಇದಕ್ಕೆ ಪುಷ್ಠೀಕರಿಸುವಂತೆ ಪ್ರತಿದಿನ ನಾವು ಸುದ್ದಿ ಪತ್ರಿಕೆ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಮಹಿಳೆಯನ ಮೇಲೆ ಆಗುತ್ತಿರುವ ನಿರಂತರ ಶೋ’ಷ’ಣೆ ಬಗ್ಗೆ ವರದಿ ಆಗುತ್ತಿರುವುದರ ಬಗ್ಗೆ ನೋಡುತ್ತಲೇ ಇದ್ದೇವೆ. ಹಿಂದೆ ಹೆಣ್ಣು ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದಳು. ಆಕೆಗೆ ಕಾನೂನಿನ ಬಗ್ಗೆ ಆಗಲಿ ತನ್ನ ಹಕ್ಕುಗಳ ಬಗ್ಗೆ ಆಗಲಿ ಅರಿವಿರಲಿಲ್ಲ. ಗಂಡನ ಮನೆಯಲ್ಲಿ ತಾನೊಬ್ಬ ಜೀತದ ಆಳಿಗಿಂತ ಹೆಚ್ಚಾಗಿ ದುಡಿಯುತ್ತಿದ್ದಳು.
ಉಪ್ಪಿನಂಗಡಿ ಮೇಸ್ತ್ರಿಗೆ ಕೇರಳದ ಅದೃಷ್ಟ ಲಾಟರಿಯಲ್ಲಿ ಒಲಿಯಿತು, 50 ಲಕ್ಷ ರೂಪಾಯಿ
ಆದರೆ ಈಗ ಆಕೆ ವಿದ್ಯಾವಂತಳಾಗಿ ತನಗಾಗುವ ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಹೊಂದಿದ್ದಾಳೆ. ಹಠದಿಂದ ಹಾಗೂ ಹೋರಾಟದಿಂದ ಸಂಸಾರ ಸರಿಪಡಿಸಿಕೊಳ್ಳಲು ಆಗುವುದಿಲ್ಲ ಎನ್ನುವುದು ನಿಜ ಎನಿಸುತ್ತದೆ. ಆದರೂ ಇಲ್ಲೊಬ್ಬ ಮಹಿಳೆಯು ತನಗಾದ ಅ’ನ್ಯಾ’ಯವನ್ನು ಪ್ರಶ್ನಿಸಲು ಅತ್ತೆ ಮನೆ ಎದುರಿಗೆ ಜಾಂಡ ಹೂಡಿದ್ದಾಳೆ. ಈಕೆಯ ಧರಣಿಗೆ ಸುಸ್ತಾಗಿ ಹೋದ ಅತ್ತೆ ಹಾಗೂ ಪತಿ ತಾವೇ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.
ಸದ್ಯಕ್ಕೆ ಮಹಿಳೆ ಏಳುತ್ತಿರುವ ಹೇಳಿಕೆ ಪ್ರಕಾರ ಆಕೆಗೆ ಅ’ನ್ಯಾ’ಯವಾದಂತೆ ಕಾಣುತ್ತದೆ. ಇಷ್ಟೆಲ್ಲ ಹೈಡ್ರಾಮಾ ನಡೆದಿರುವುದು ಚಿಕ್ಕಬಳ್ಳಾಪುರ ನಗರದ ಮುನ್ಸಿಪಾಲ್ ಬಡಾವಣೆಯಲ್ಲಿ. ಜಬಿನ್ ತಾಜ್ ಎನ್ನುವ ಮಹಿಳೆಯು ತನ್ನ ಅತ್ತೆ ನ್ಯಾಮತ್ ಬೇಗಂ ಹಾಗೂ ಗಂಡ ಅಕ್ತರ್ ಮಹಮ್ಮದ್ ವಿರುದ್ಧ ಗಂಡನ ಮನೆ ಎದುರು ನ್ಯಾಯಕ್ಕಾಗಿ ಥರಣಿ ಕುಳಿತಿದ್ದಾಳೆ ಈ ಪ್ರಕರಣದ ವಿವರ ಹೇಗಿದೆ ನೋಡಿ.
ಕೆಲ ವರ್ಷಗಳ ಹಿಂದೆ ಅಕ್ತರ್ ಮಹಮ್ಮದ್ ಜೊತೆ ಮದುವೆ ಆಗಿರುವ ಜಬಿನ್ ತಾಜ್ ಅತ್ತೆ ಮನೆಯಲ್ಲಿ ಇದ್ದರು. ಆದರೆ ಅತ್ತೆ ಸೊಸೆ ನಡುವೆ ಹೊಂದಾಣಿಕೆ ಬಾರದೆ ಕಾ’ಟ ಕೊಟ್ಟು ಮನೆಯಿಂದ ಹೊರ ಹಾಕುವ ಪ್ರಯತ್ನ ಮಾಡಿದ್ದಾರೆ. ಸೊಸೆ ಬಗ್ಗದೇ ಇದ್ದಾಗ ಪತಿ ನಾಜೂಕಾಗಿ ಮನೆಯಿಂದ ಹೊರ ತರುವ ಪ್ಲಾನ್ ಮಾಡಿದ್ದಾನೆ. ಬಾಡಿಗೆ ಮನೆಯಲ್ಲಿ ಇಬ್ಬರೇ ಇರೋಣ ಎಂದು ನೈಸ್ ಮಾಡಿ ನಗರದ ಇನ್ನೊಂದು ಭಾಗದಲ್ಲಿ ಮನೆ ಮಾಡಿದ್ದಾನೆ.
ಆದರೆ ಅದಕ್ಕೆ ಯಾವ ರೀತಿ ಸೌಕರ್ಯವನ್ನು ಮಾಡಿಕೊಟ್ಟಿಲ್ಲ, ದಿನ ಕಳೆದಂತೆ ಮನೆಗೆ ಬರುವುದನ್ನು ಕಡಿಮೆ ಮಾಡಿದ ಕೊನೆಗೊಮ್ಮೆ ಸಂಪೂರ್ಣವಾಗಿ ಮನೆಯನ್ನೇ ಮರೆತು ಅಮ್ಮನ ಮನೆಗೆ ಬಂದು ಆರಾಮಾಗಿ ಇದ್ದಾನೆ. ಇದುವರೆಗೂ ಇಂದು ಸರಿಯಾಗುತ್ತದೆ ನಾಳೆ ಸರಿಯಾಗುತ್ತದೆ ಎಂದು ಎಲ್ಲವನ್ನು ಸಹಿಸಿಕೊಂಡ ಜಮೀನ್ ತಾಜ್ ತಾಳ್ಮೆಯ ಕಟ್ಟೆಯೋಡೆದು ಅತ್ತೆ ಮನೆ ಎದುರಿಗೆ ಕೂತು ನಾನು ಕೂಡ ಇದೇ ಮನೆಯಲ್ಲಿರುತ್ತೇನೆ, ನಿಮ್ಮ ಜೊತೆ ಇರುತ್ತೇನೆ ಎಂದು ಸತ್ಯಾಗ್ರಹ ಮಾಡುತ್ತಿದ್ದಾರೆ.
ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಬಳಸಿದ ಪರಿಣಾಮ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾ’ವು.!
ಮನೆಯಿಂದ ಹೊರ ಹಾಕಲು ಸೊಸೆ ಮೇಲೆ ಪ್ರೀತಿ ಇಲ್ಲದಿರಲು ಕಾರಣ ಏನೆಂದು ಕೇಳಿದಾಗ ಮಕ್ಕಳಾಗಿಲ್ಲ ಎನ್ನುವ ಕಾರಣ ಕೊಡುತ್ತಾರೆ. ಆದರೆ ಪತಿ ನನ್ನ ಜೊತೆ ಎಂಟು ತಿಂಗಳಿಂದ ಇಲ್ಲ, ಹೇಗೆ ತಾನೇ ಮಕ್ಕಳಾಗಲು ಸಾಧ್ಯ, ಅದೇನು ಹಿಟ್ಟಿನಿಂದ ಮಾಡುವ ಬೊಂಬೆಗೆ ಎಂದು ಖಾರವಾಗಿ ಎಂದು ಪ್ರಶ್ನಿಸಿದ್ದಾರೆ. ನನಗೆ ಯಾವ ತೊಂದರೆಯೂ ಇಲ್ಲ ಇದಕ್ಕೆ ಬೇಕಾದರೆ ವೈದ್ಯಕೀಯ ಪುರಾವೆ ತಂದು ಕೊಡುತ್ತೇನೆ ಎನ್ನುತ್ತಿದ್ದಾರೆ ಜಮೀನ್ ತಾಜ್.
ಸದ್ಯಕ್ಕೆ ಸೊಸೆ ಆಡುವ ಮಾತುಗಳನ್ನು ಕೇಳುವುದಾದರೆ ಆಕೆ ಮಾತಿನಲ್ಲಿ ಸತ್ಯಾಂಶ ಇದೆ ಎಂದು ಎನಿಸುತ್ತದೆ. ಆದರೆ ಸಂಸಾರ ಎನ್ನುವುದು ಪ್ರೀತಿಯಿಂದ ನಡೆಯುತ್ತದೆ ಹೊರತು ಅದನ್ನು ಹಠದಿಂದ ಹೋರಾಟದಿಂದ ಬಲವಂತವಾಗಿ ಪಡೆದುಕೊಳ್ಳಲಾಗದು. ಅತ್ತೆ ಹಾಗೂ ಪತಿ ಅವರನ್ನು ಅರ್ಥ ಮಾಡಿಕೊಂಡು ಸೊಸೆಯನ್ನು ಬರ ಮಾಡಿಕೊಳ್ಳುತ್ತಾರೋ ಅಥವಾ ಮುಂದೆ ಎದುರಾಗುವ ಪರಿಣಾಮ ಎದುರಿಸುತ್ತಾರೋ ನೋಡೋಣ. ಸದ್ಯಕ್ಕೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಭೇಟಿಕೊಟ್ಟು ವಿಚಾರಣೆ ನಡೆಸುತ್ತಿದ್ದಾರೆ.