ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಹಲವಾರು ರೀತಿಯ ಬದಲಾವಣೆಗಳು ರಾಜ್ಯದಲ್ಲಿ ಕಂಡುಬರುತ್ತದೆ ಇದೀಗ ರಾಜ್ಯದಲ್ಲಿ ಇರುವಂತಹ 1.28 ಕೋಟಿ BPL ರೇಷನ್ ಕಾರ್ಡ್ ಗಳ ಪೈಕಿ 8 ಲಕ್ಷ BPL ಕಾರ್ಡ್ ಗಳನ್ನು ರದ್ದುಗೊಳಿಸಬೇಕು ಎಂದು ಆಹಾರ ಇಲಾಖೆ ಮುಂದಾಗಿದೆ ಈ ಕುರಿತಾದಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ನಕಲಿ BPL ಕಾರ್ಡ್ ಗಳನ್ನು ಮಾಡಿಸಿಕೊಂಡು ಅದರ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿರುವಂತಹ ಸರ್ಕಾರಿ ನೌಕರರು, ಮೂರು ಹೆಕ್ಟರಿಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವವರು, ಆದಾಯ ತೆರಿಗೆ ಪಾವತಿ ಮಾಡುವವರು, ಐಷಾರಾಮಿ ಕಾರುಗಳನ್ನು ಉಳ್ಳವರು ಹೀಗೆಯೇ ಆರ್ಥಿಕವಾಗಿ ಸಬಲರಾಗಿರುವಂತಹವರು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ
ಆದ ಕಾರಣದಿಂದಾಗಿ ಇಲಾಖೆಯು ಅಂತಹವರನ್ನು ಪತ್ತೆಹಚ್ಚಿ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಬೇಕು ಎಂದು ನಿರ್ಧಾರವನ್ನು ಕೈಗೊಂಡಿದೆ ಅಲ್ಲದೆ ಅಂತಹವರಿಗೆ ದಂಡ ಕೂಡ ವಿಧಿಸುತ್ತದೆ. ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸುಮಾರು 4.6 ಲಕ್ಷ ನಕಲಿ ಕಾರ್ಡ್ ಗಳನ್ನು ಕಂಡುಹಿಡಿದು ದಂಡವೆನ್ನು ವಿಧಿಸಿದೆ ಸಾರಿಗೆ ಇಲಾಖೆಯ ಸಹಾಯದಿಂದ 12,583 ಜನ ಬಿಪಿಎಲ್ ಕಾರ್ಡ್ ದಾರರು ಐಷಾರಾಮಿ ವೈಟ್ ಬೋರ್ಡ್ ಕಾರ್ಡುಗಳನ್ನು ಹೊಂದಿರುವುದು ಕಂಡುಬಂದಿದೆ.
ಇದೀಗ ಕರ್ನಾಟಕ ರಾಜ್ಯದಲ್ಲಿ ಒಟ್ಟು 1.28 ಕೋಟಿ BPL ಕಾರ್ಡ್‌ಗಳ ಪೈಕಿ 8 ಲಕ್ಷ ಕಾರ್ಡ್ ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಪಡೆಯುತ್ತಿಲ್ಲ ಎಂದು ಅಂದಾಜು ಮಾಡಲಾಗಿದೆ ಪಡೆದರು ಬೇರೆಯವರಿಗೆ ನೀಡುವುದು ಕಾಳಸಂತೆಯಲ್ಲಿ ಮಾರುವುದು ಕಂಡು ಬರುತ್ತಿದೆ ಇದನ್ನು ತಡೆಯುವಂತಹ ದೃಷ್ಟಿಯಿಂದ ಅಕ್ಕಿ ಪಡೆಯದವರನ್ನು ಪತ್ತೆಹಚ್ಚಿ ಉಚಿತ ಅಕ್ಕಿ ವಿತರಣೆಯಿಂದ ಹೊರಗಿಡಲು ಸರ್ಕಾರ ನಿರ್ಧರಿಸಿದೆ ಇದಕ್ಕಾಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.
ಯಾರಿಗೆಲ್ಲ ಬಿ ಕಾರ್ಡ್ ಸಿಗಲಿದೆ ಎಂದು ನೋಡುವುದಾದರೆ ರಾಜ್ಯದಲ್ಲಿ ಹಲವರು ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ ಮತ್ತಿತರ ಸರ್ಕಾರಿ ಸೌಲಭ್ಯಗಳಿಗೆ ಸೀಮಿತವಾಗಿ BPL ಕಾರ್ಡ್ ಬಳಸುತ್ತಾರೆ ಹೀಗಾಗಿ ಅಗತ್ಯವಿಲ್ಲದವರ ಹೆಸರಿನಲ್ಲಿ ಅಕ್ಕಿ ದು.ರ್ಬ.ಳಕೆ ಆಗುವುದನ್ನು ತಪ್ಪಿಸಲು ಸರ್ಕಾರ ನಿರ್ಧರಿಸಲಾಗಿದೆ.
ಈಗಾಗಲೇ ಕಳೆದ ಮೂರು ತಿಂಗಳಿಂದ ಪಡಿತರ ಅಕ್ಕಿ ಪಡೆಯದ BPL ಕಾರ್ಡ್ ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ನೀಡುವ ನಗದು ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆಂಧ್ರಪ್ರದೇಶದ ಮಾದರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಕಾರಣಕ್ಕೆ ‘ಬಿ’ ಕಾರ್ಡ್ ಹಾಗೂ ಪಡಿತರ ಪಡೆಯುವವರಿಗೆ ‘ಎ’ ಕಾರ್ಡ್ ವಿತರಣೆ ಮಾಡಲಾಗುತ್ತದೆ ತುರ್ತು ವೈದ್ಯಕೀಯ ಕಾರಣಗಳಿಗೆ ಹೊಸ ಪಡಿತರ ಚೀಟಿ ನೀಡಿಕೆಗೆ ಅನುಮತಿ ಕೊಡಲಾಗಿದೆ ಎಂದು ಮುನಿಯಪ್ಪ ಅವರು ತಿಳಿಸಿದ್ದಾರೆ.
ನಿಮ್ಮ ರೇಷನ್ ಕಾರ್ಡ್ ನ ವಿವರಗಳನ್ನು ತಿಳಿಯಲು
* ಮಾಹಿತಿ ಕಣಜ ಎಂಬ ವೆಬ್ಸೈಟ್ ಮೂಲಕ my ration card details ಅಥವಾ ನನ್ನ ಪಡಿತರ ಚೀಟಿ ವಿವರಗಳು ಎಂದು ಪುಟ ತೆರೆಯುತ್ತದೆ.
* ನಂತರ ನೀವು ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ
* ನಿಮ್ಮ ರೇಷನ್ ಕಾರ್ಡ್ ನ 12 ಸಂಖ್ಯೆಯ ನಂಬರ್ ಅನ್ನು ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
* ನಂತರ ಮೈ my ration shop details ಅಥವಾ ನನ್ನ ಪಡಿತರ ಅಂಗಡಿ ವಿವರ ಎಂದು ಕಾಣಸಿಗುತ್ತದೆ.
* my ration shop details box ನಲ್ಲಿ ನಿಮ್ಮ ತಾಲೂಕು, ಗ್ರಾಮ ಪಂಚಾಯಿತಿ, ಗ್ರಾಮ ಪ್ರದೇಶ, ಕಾರ್ಡ್ ಪ್ರಕಾರ, ಅಂಗಡಿ ಹೆಸರು ಹಾಗೂ ಕಾರ್ಡ್ಸ್ ಸ್ಥಿತಿಯ ವಿವರಗಳನ್ನು ಕಾಣಿಸುತ್ತವೆ.
* ಅಲ್ಲಿ ನಿಮಗೆ ಕಾರ್ಡ್ ಸ್ಟೇಟಸ್ (card status) ವಿವರದಲ್ಲಿ ಆಕ್ಟಿವ್ ಅಥವಾ ಸಕ್ರಿಯ ಎಂದು ಇರಬೇಕು ಅಂದರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇದೆ ಎಂದು ಅರ್ಥ.