ಯುವ ಪೀಳಿಗೆಯನ್ನು ಬೆಂಬಲಿಸುವಂತಹ ಯೋಜನೆ ಇದಾಗಿದ್ದು ಇದರ ಅಡಿಯಲ್ಲಿ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಸಾಲ ಪ್ರಯೋಜನವನ್ನು ಪಡೆದುಕೊಳ್ಳಬಹುದು ಕರ್ನಾಟಕದಲ್ಲಿ ಸಾಕಷ್ಟು ಯುವಕ ಮತ್ತು ಯುವತಿಯರು ನಿರುದ್ಯೋಗಿಗಳಾಗಿ ಮನೆಯಲ್ಲಿ ಕುಳಿತಿದ್ದಾರೆ ಅಂತಹವರಿಗೆ ಸರ್ಕಾರ ಹಣವನ್ನು ನೀಡಿ ಸ್ವಂತ ಉದ್ಯೋಗವನ್ನು ಕಂಡುಕೊಳ್ಳಬಹುದು.
ಅಥವಾ ಸ್ವಂತ ಬಿಜಿನೆಸ್ ಅನ್ನು ಪ್ರಾರಂಭ ಮಾಡಿ ಯಶಸ್ವಿಯಾಗಬೇಕು ಎಂದು ಅವಕಾಶವನ್ನು ಕಲ್ಪಿಸಿಕೊಡುತ್ತಿದೆ ಈ ಯೋಜನೆಯ ಅಡಿಯಲ್ಲಿ ನೇರ ಸಾಲ ಅವಕಾಶವನ್ನು ನೀಡಲಾಗುತ್ತಿದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಉದ್ಯಮಶೀಲರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಸಹಾಯ ಮಾಡಲು ನೇರ ಸಾಲ ಯೋಜನೆ ಹುಟ್ಟು ಹಾಕಿದೆ ಯುವ ಪೀಳಿಗೆಗೆ ಹೊಸ ಆದಿಯನ್ನು ಕಂಡುಕೊಳ್ಳಲು ದಾರಿಯಾಗಿದೆ ಈ ಯೋಜನೆ ಅಡಿಯಲ್ಲಿ ಯುವಕ ಮತ್ತು ಯುವತಿಯರು ತಮ್ಮ ಉದ್ಯಮ ಹಾಗೂ ವ್ಯಾಪಾರ ಕಾರ್ಯಕ್ಕೆ ಸಾಲ ಪಡೆಯಬಹುದು.
ಯೋಚನೆ ಅಡಿಯಲ್ಲಿ ಸಾಲ ಪಡೆದುಕೊಳ್ಳಲು ತಿಳಿಯಬೇಕಾದಂತಹ ಮುಖ್ಯ ಅಂಶಗಳು
* ನಿಗಮದ ಅಡಿಯಲ್ಲಿ ನೀಡಲಾದ ಅರ್ಹತೆಗಳ ಮಾಪನಗಳ ಮೇಲೆ ಯೋಜನೆಯಲ್ಲಿ ಸಾಲ ಪಡೆಯಲು ಅರ್ಹರಾಗಿರುತ್ತಾರೆ.
* ಸಾಲ ಪಡೆಯಲು ಅಜ್ಜಿದಾರರ ವಯಸ್ಸು 18 ರಿಂದ 55 ವರ್ಷದ ಒಳಗೆ ಇರಬೇಕು
* ಅರ್ಜಿದಾರರ ಕುಟುಂಬದ ಮಾಸಿಕ ಆದಾಯವು 8 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು.
* ಆಸ್ತಿ ಅಡಮಾನ ಅಥವಾ ಭೂಮಿಯ ಮೌಲ್ಯ ಸಾಲದ ಮೊತ್ತಕ್ಕಿಂತ ಕಡಿಮೆಯಾಗಿರಬಾರದು.
* ಕಟ್ಟಡ ಖಾತಾದಾರನಾದ ಯಾವ ವ್ಯಕ್ತಿಗೂ ಸಾಲ ನೀಡಲಾಗುವುದು.
* ಅರ್ಜಿದಾರರು ಕೆಎಮ್‌ಡಿಸಿ (KMDC) ಡೀಫಾಲ್ಟರ್ ಆಗಿರಬಾರದು.
* ಶೇಕಡವಾರು % ರಷ್ಟು ಬಡ್ಡಿ ದರದಲ್ಲಿ 20 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತದೆ.
ಸಾಲ ಪಡೆದುಕೊಳ್ಳಲು ಬೇಕಾಗಿರುವಂತಹ ಮುಖ್ಯ ದಾಖಲಾತಿಗಳು
° ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
° ಗುತ್ತಿಗೆ ಪತ್ರ
° ವಿಭಜನಾ ಪತ್ರ
° ಬಿಡುಗಡೆ ಪತ್ರ
° ಬಾಡಿಗೆ ಪತ್ರ
° ಆಸ್ತಿ ಮಾರಾಟ ಪತ್ರ
° ಮರುಪಾವತಿಯ ಪತ್ರ
° ಸಾಲ ಒಪ್ಪಂದ ಪರಿಗಣನೆ ರಶೀದಿ
° ಪಹಣಿ ಆರ್ ಟಿ ಸಿ ಗೆ ಸಂಬಂಧಿಸಿದ ಪತ್ರ
° ಕಟ್ಟಡ ಖಾತಾಸಾರ ಮತ್ತು ಖಾತಾ ಪ್ರಮಾಣ ಪತ್ರ
° ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ
° ಪತ್ರ ಸಕ್ಷಮ ಪ್ರಾಧಿಕಾರದಿಂದ ನೀಡಿದ ಆದಾಯ ಪ್ರಮಾಣ ಪತ್ರ
° ಕಟ್ಟಡ ನುಂದಾಯಿತ ಮೌಲ್ಯಮಾಪಕರಿಂದ ಮೌಲ್ಯಮಾಪನ ಪ್ರಮಾಣ ಪತ್ರ.
ಈ ಯೋಜನೆ ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವತಿ ಮತ್ತು ಯುವಕರಿಗೆ ವಿಶೇಷವಾಗಿ ಸೌಲಭ್ಯ ನೀಡಲು ರೂಪಿತಗೊಂಡಿದೆ ಯುವಕರು ತಮ್ಮ ಉದ್ಯಮ ಪ್ರಯತ್ನದ ಕನಸುಗಳನ್ನು ಈ ಯೋಜನೆಯ ಮೂಲಕ ಈಡೇರಿಸಿಕೊಳ್ಳಬಹುದು ಯೋಜನೆಯ ಲಾಭವನ್ನು ಪಡೆದುಕೊಂಡು ರಾಜ್ಯದಲ್ಲಿ ಉದ್ಯಮಶೀಲರನ್ನು ಹುಟ್ಟು ಹಾಕಬೇಕು ಎನ್ನುವುದೇ ಸರ್ಕಾರದ ಉದ್ದೇಶ.
ಯೋಜನೆಯ ಅಡಿಯಲ್ಲಿ ಉದ್ಯಮಿಗಳ ಕಾರ್ಯಾಚರಣೆಯ ಮೂಲಕ ಕಾಣಿಸಿಕೊಂಡಾಗ ಕರ್ನಾಟಕದ ಯುವಕ ಮತ್ತು ಯುವತಿಗೆ ಉದ್ದೇಶಗಳನ್ನು ಸಾಕಷ್ಟು ಬಳಸಿಕೊಳ್ಳಬಹುದಾಗಿದೆ.
ಆರ್ಥಿಕವಾಗಿ ಪ್ರಗತಿಯನ್ನು ಕಂಡುಕೊಳ್ಳುವ ಯೋಜನೆಯ ಮೂಲಕ ಯುವಕರು ತಮ್ಮ ಕನಸುಗಳನ್ನು ಸಾಕಷ್ಟು ಪೂರೈಸಬಹುದು
ಈ ಯೋಜನೆ ಅವರಿಗೆ ಅದ್ಭುತವಾದ ಪ್ರಯೋಜನಗಳನ್ನು ನೀಡಿ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಈ ಯೋಜನೆ ಅಡಿಯಲ್ಲಿ ಸರ್ಕಾರ ಸಾಲ ಸೌಲಭ್ಯವನ್ನು ನೀಡಿ ಯುವ ಜನತೆಯನ್ನು ಪ್ರೋತ್ಸಾಹಿಸಲು ಸೃಷ್ಟಿಸಿದೆ. ಈ ಯೋಜನೆಯ ಇನ್ನಷ್ಟು ಮಾಹಿತಿಗಾಗಿ ನಾವಿಲ್ಲಿ ತಿಳಿಸುವ ಲಿಂಕ್ ತೆರೆದು ತಿಳಿಯಿರಿ https://kmdc.karnataka.gov.in/33/business-direct-credit-scheme/en ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.