ತಿರುಪತಿ ತಿಮ್ಮಪ್ಪನ ಕ್ಷೇತ್ರ ದೇಶದಲ್ಲಿ ಅತೀ ಹೆಚ್ಚು ಭಕ್ತಾದಿಗಳು ಭೇಟಿ ಕೊಡುವ ಪುಣ್ಯಕ್ಷೇತ್ರ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗುವುದೇ ಒಂದು ಆನಂದ ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಯಾತ್ರೆ ಕೈಗೊಳ್ಳುತ್ತಾರೆ. ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ತಿಮ್ಮಪ್ಪನ ದೇವಸ್ಥಾನ ಇದ್ದರೂ ದೇಶದ ಎಲ್ಲ ರಾಜ್ಯಗಳಿಂದಲೂ ಕೂಡ ಭಕ್ತಾದಿಗಳ ದಂಡೇ ಇಲ್ಲಿಗೆ ಆಗಮಿಸುತ್ತದೆ ಇದರಲ್ಲಿ ದಕ್ಷಿಣ ಭಾರತದವರ ಪಾಲು ಹೆಚ್ಚು ಎಂದರೆ ಅದು ತಪ್ಪಾಗಲಾರದು.
ಕರ್ನಾಟಕದಲ್ಲಿ ಕೂಡ ಕೋಟ್ಯಂತರ ಕುಟುಂಬಗಳ ಆರಾಧ್ಯ ದೈವ ಈ ತಿರುಪತಿ ವೆಂಕಟೇಶ್ವರ ಹಾಗಾಗಿ ಕುಟುಂಬ ಸಮೇತ ವರ್ಷಕ್ಕೆ ಹಲವು ಬಾರಿ ಇಲ್ಲಿಗೆ ಪ್ರಯಾಣ ಬೆಳೆಸಿ ದರ್ಶನ ಮಾಡಿ ಬರುತ್ತಾರೆ. ಅವರಿಗೆ ಅನುಕೂಲ ಆಗಲಿ ಎಂದು ಸರ್ಕಾರ ವತಿಯಿಂದಲೂ ಅನೇಕ ಸೌಲಭ್ಯ ಮಾಡಿಕೊಡಲಾಗಿದೆ.
ಗಂಡ ಮನೆಗೆ ಬಾರದಿದ್ದರೆ ಮಕ್ಕಳಾಗುವುದು ಹೇಗೆ? ಅತ್ತೆ ಮನೆ ಎದುರು ಧರಣಿ ಕೂತಿರುವ ಸೊಸೆ.!
ಕರ್ನಾಟಕದ ಪ್ರತಿ ಜಿಲ್ಲೆ, ತಾಲೂಕಿನಿಂದಲೂ ಕೂಡ ತಿರುಪತಿಗೆ ಅತಿ ಹೆಚ್ಚು ನೇರವಾದ ಬಸ್ ವ್ಯವಸ್ಥೆ ಇದ್ದರೆ ಯಾತ್ರಾರ್ಥಿಗಳಿಗೆ ಅನುಕೂಲ ಎನ್ನುವುದು ಹಲವರ ಅಭಿಪ್ರಾಯ. ಯಾಕೆಂದರೆ ಅನೇಕರಿಗೆ ಬಸ್ ಗಾಗಿ ಅಲೆದಾಡುವುದೇ ಬಹಳ ಸಮಸ್ಯೆಯಾಗಿದೆ ಕೆಲವರು ಸ್ವಂತ ವಾಹನಗಳನ್ನು ಮಾಡಿಕೊಂಡು ಹೋಗುತ್ತಾರೆ, ಕೆಲವರು ಟ್ರೈನ್ ಮೂಲಕ ಹೋಗುತ್ತಾರೆ ಆದರೆ ಬಸ್ಗಳಲ್ಲಿ ಹೋಗುವವರಿಗೆ ಸ್ವಲ್ಪ ತೊಂದರೆಗಳಾಗುತ್ತಿವೆ.
ತಮ್ಮ ಊರು ಎಲ್ಲೋ ಇದ್ದರು ಸುತ್ತಿ ಬಳಸಿ ಬೇರೆ ಊರಿಗೆ ಹೋಗಿ ಅಲ್ಲಿಂದ ತಿರುಪತಿಗೆ ಹೋಗುತ್ತಾನೆ. ಈಗ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ, ರಾಜ್ಯದ ಕೆಲವು ಜಿಲ್ಲೆ ಹಾಗೂ ಕೆಲವು ತಾಲೂಕು ಕೇಂದ್ರಗಳಿಂದ ನೇರವಾಗಿ ತಿರುಪತಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆರಳಣಿಕೆಯಷ್ಟು ಬಸ್ ಗಳು ಓಡಾಡುತ್ತಿದೆ ಎನ್ನುವುದು ಸಮಾಧಾನ ತಂದಿದೆ.
ಉಪ್ಪಿನಂಗಡಿ ಮೇಸ್ತ್ರಿಗೆ ಕೇರಳದ ಅದೃಷ್ಟ ಲಾಟರಿಯಲ್ಲಿ ಒಲಿಯಿತು, 50 ಲಕ್ಷ ರೂಪಾಯಿ
ಇದುವರೆಗೂ ಉತ್ತರ ಕನ್ನಡದವರಿಗೆ ತಿರುಪತಿಗೆ ಹೋಗಲು ನೇರವಾಗಿ ಯಾವುದೇ ಬಸ್ ಇರಲಿಲ್ಲ, ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಕರ್ನಾಟಕ ಸಾರಿಗೆ ಸಂಸ್ಥೆ ಕುಮಟದಿಂದ ನೇರವಾಗಿ ತಿರುಪತಿಗೆ ಬಸ್ ಹಾಕುವುದಕ್ಕೆ ಸಿದ್ಧತೆ ನಡೆಸಿದೆ. ಇನ್ನು ಮುಂದೆ ಅವರೆಲ್ಲರೂ ನೇರವಾಗಿ ನಿಶ್ಚಂತೆಯಾಗಿ ಆರಾಮಾಗಿ ತಿರುಪತಿಗೆ ಹೋಗಿ ಬರಬಹುದು. ಕುಮಟಾದಿಂದ ಶಿರಸಿ ಮಾರ್ಗವಾಗಿ ಸಂಜೆ 4 ಗಂಟೆಗೆ ಹೊರಡುವ ಈ ಬಸ್ ಶಿರಸಿಗೆ 5:30ಕ್ಕೆ ತಲುಪುತ್ತದೆ ನಂತರ 7:30ಕ್ಕೆ ಸಾಗರ ಮಾರ್ಗವಾಗಿ 9:30ಕ್ಕೆ ಶಿವಮೊಗ್ಗ ತಲುಪುತ್ತದೆ.
ಅಲ್ಲಿಂದ ಬೆಂಗಳೂರಿಗೆ ಬೆಳಗಿನ ಜಾವ 4:30ಗೆ ತಲುಪುತ್ತದೆ, ಅಲ್ಲಿಂದ ಬೆಳಿಗ್ಗೆ 9:30ಗೆ ತಿರುಪತಿಯನ್ನ ತಲುಪಲಿದೆ ಎಂದು ವರದಿಯ ಮೂಲಗಳು ತಿಳಿಸಿವೆ. ತಿಮ್ಮಪ್ಪನ ದರ್ಶನ ಮುಗಿಸಿಕೊಂಡು ಮರುದಿನ ಸಂಜೆ 4 ಗಂಟೆಗೆ ತಿರುಪತಿಯನ್ನ ಬಿಟ್ಟರೆ ಅದರ ಮುಂದಿನ ದಿನ ಬೆಳಿಗ್ಗೆ 10:30ಗೆ ಕುಮಟವನ್ನ ಪುನಃ ತಲುಪಲಿದೆ.
ಕರಾವಳಿಯ ಜನರಿಗೆ ತಿಮ್ಮಪ್ಪನನ್ನು ದರ್ಶಿಸಲು ಇದೊಂದು ಸುವರ್ಣವಕಾಶ ಎಂದು ಹೇಳಬಹುದು. ಆ ಭಾಗದ ಜನರಿಗೆಲ್ಲರಿಗೂ ಈ ಮಾಹಿತಿ ತಿಳಿಯುವಂತೆ ಶೇರ್ ಮಾಡಿ. ಈ ಅನುಕೂಲತೆಯಿಂದ ವಯಸ್ಸಾದವರು, ಚಿಕ್ಕ ಮಕ್ಕಳು ಇರುವವರು ಈಗ ಆರಾಮಾಗಿ ಪಯಣ ಮಾಡಬಹುದಾಗಿದೆ. ಕರ್ನಾಟಕ ಸಾರಿಗೆ ಸಂಸ್ಥೆಯ ಇಂತಹ ನಿರ್ಧಾರಗಳಿಂದಲೇ ಅದು ಜನರಿಗೆ ಇನ್ನಷ್ಟು ಹತ್ತಿರವಾಗಿದೆ.
ಇಡೀ ಭಾರತದಲ್ಲಿಯೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಕರೆಸಿಕೊಂಡಿರುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಈಗ ಕರ್ನಾಟಕದ ಮಹಿಳೆಯರಿಗೆ ಕರ್ನಾಟಕದ ಗಡಿಯೊಳಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿವಾರಿಸುತ್ತಿರುವುದರ ಜೊತೆಗೆ ಇಂತಹ ಜನಸಾಮಾನ್ಯರ ಸಮಸ್ಯೆಯನ್ನು ಅರಿತು ಸ್ಪಂದಿಸುತ್ತಿರುವುದು ಪ್ರಶಂಸಾರ್ಹವಾಗಿವೆ. ಹಾಗಾಗಿ ನಮ್ಮ ಸಾರಿಗೆ ಸಂಸ್ಥೆಗೆ ಹೆಮ್ಮೆಯಿಂದ ಧನ್ಯವಾದ ಹೇಳೋಣ.