ಭಾರತೀಯ ಜೀವ ವಿಮಾ ನಿಗಮ (LIC) ವಿಶೇಷವಾಗಿ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ವಿನ್ಯಾಸಗೊಳಿಸಲಾದ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. LICಯ ಹಲವು ಯೋಜನೆಗಳನ್ನು ಅನೇಕರು ಪಡೆದುಕೊಳ್ಳುತ್ತುದ್ದಾರೆ. LIC ಆಗಾಗ್ಗೆ ಒಳ್ಳೆಯ ಯೋಜನೆಗಳನ್ನು ಪರಿಚಯಿದಸುತ್ತಲೇ ಇರುತ್ತದೆ. ಇದೀಗ ಪರಿಚಯಿಸಲಾದ
ಎಲ್ಐಸಿ ಕನ್ಯಾದಾನ ನೀತಿ(Kanyadan Policy)ಯು ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಹಣಕಾಸಿನ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಎಲ್ಐಸಿ ಕನ್ಯಾದಾನ ಉಳಿತಾಯ ಯೋಜನೆಯು ಹೆಣ್ಣು ಮಗುವಿನ ತಂದೆಯಿಂದ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ, ಮಗುವಿಗೆ ಖಾತೆಗೆ ಪ್ರವೇಶವಿಲ್ಲ. ಯೋಜನೆಯು ತಂದೆಯ ಮರಣಾನಂತರದ ಪ್ರಯೋಜನಗಳನ್ನು ಮಗಳಿಗೆ ಒದಗಿಸುತ್ತದೆ. ಇದು ಕುಟುಂಬಕ್ಕೆ ಮತ್ತು ವಿಶೇಷವಾಗಿ ಹೆಣ್ಣು ಮಗುವಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತದೆ. ಇದು 25 ವರ್ಷಗಳ ಅವಧಿಯನ್ನು ಹೊಂದಿದೆ. ವಿಮೆಯ ಕನಿಷ್ಠ ಅವಧಿ 13 ವರ್ಷಗಳು, ಗರಿಷ್ಠ 25 ವರ್ಷಗಳು. ಮಗುವಿನ ತಂದೆಯ ವಯಸ್ಸು 18 ರಿಂದ 50 ರ ನಡುವೆ ಇರಬೇಕು.
ಹೌದು, ಒಂದು ಮನೆಯಲ್ಲಿ ಒಬ್ಬಳು ಹೆಣ್ಣು ಮಗು ಜನಿಸಿದರೆ, ಆಕೆಯ ಭವಿಷ್ಯದ ಕುರಿತು ಆಗಲೇ ಸಾಕಷ್ಟು ಚರ್ಚೆಗಳು ಶುರುವಾಗುತ್ತದೆ. ಇನ್ನು ಆಕೆಯ ಮದುವೆಯ ಕುರಿತು ಸಹ ಸಾಕಷ್ಟು ಮಾತುಗಳು ಕೇಳಿ ಬರುತ್ತದೆ. ಇನ್ನು ಇದೀಗ ಎಲ್ ಐ ಸಿ ಕನ್ಯಾದಾನ್ ಪಾಲಿಸಿಯೊಂದಿಗೆ ಒಂದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಒಂದು ಹೊಸ ಸ್ಕೀಮ್ ಜಾರಿಗೆ ತಂದಿದೆ. ಈ ಸ್ಕೀಮ್ ಮೂಲಕ ಹೆಣ್ಣು ಮಕ್ಕಳ ಮದುವೆಗೆ ಈ ಮೂಲಕ ಹಣವನ್ನು ಪೋಷಕರು ಸೇರಿಸಿಡಬಹುದಾಗಿದೆ. ಇನ್ನು ಈ ಕನ್ಯಾದಾನ್ ಸಾಕಷ್ಟು ಲಾಭಗಳಿದ್ದು, ಈ ಮೂಲಕ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಇದೊಂದು ಅದ್ಭುತ ಸ್ಕೀಮ್ ಎಂದರೆ ತಪ್ಪಾಗುವುದಿಲ್ಲ.
ಹೆಣ್ಣು ಮಕ್ಕಳಿಗಾಗಿ ಎಲ್ ಐ ಸಿ ಯಲ್ಲಿ ವಿಶೇಷವಾಗಿ, ಎಲ್ಐಸಿ ಜೀವನ್ ತರುಣ್(LIC Jeevan Tarun), ಎಲ್ಐಸಿ ಕನ್ಯಾದಾನ್ ಪಾಲಿಸಿ(LIC Kanyadan policy), ಎಲ್ಐಸಿ ಚೈಲ್ಡ್ ಫ್ಯೂಚರ್ ಪ್ಲಾನ್(LIC Child Future Plan), ಎಲ್ಐಸಿ ಸಿಂಗಲ್ ಪ್ರೀಮಿಯಮ್ ಚೈಲ್ಡ್ ಪ್ಲಾನ್(LIC Single Premium Child Plan) ಎಂದು ಸಾಕಷ್ಟು ಪಾಲಿಸಿಗಳಿವೆ. ಹೆಣ್ಣು ಮಕ್ಕಳು ದೊಡ್ಡವರಾದಾಗ ಅವರ ಶಿಕ್ಷಣ ಹಾಗೂ ಅವರ ಮದುವೆಯ ವೆಚ್ಚವನ್ನು ಈ ಪಾಲಿಸಿಯ ಮೂಲಕ ಪಡೆಯಬಹುದಾಗಿದೆ. ಹೌದು, ಇದೀಗ ಕನ್ಯಾದಾನ್ ಪಾಲಿಸಿ ಎಲ್ಲೆಡೆ ಬಹು ಸದ್ದು ಮಾಡುತ್ತಿದೆ. ಹೆಣ್ಣು ಮಕ್ಕಳ ತಂದೆ ತಾಯಿ ಅಥವಾ ಅವರನ್ನು ಸಾಕುತ್ತಿರುವ ಯಾರಾದರೂ ಈ ಪಾಲಿಸಿಯನ್ನು ಪ್ರಾರಂಭಿಸಬಹುದಾಗಿದೆ. ಇನ್ನು ಈ ಪಾಲಿಸಿಯ ಅವಧಿ 13 ರಿಂದ 25 ವರ್ಷವಾಗಿದೆ.
ಪಾಲಿಸಿ ಪಡೆಯುವ ಹೆಣ್ಣು ಮಗುವಿನ ವಯಸ್ಸು ಒಂದು ವರ್ಷಕ್ಕಿಂತ ಹೆಚ್ಚಿರಬೇಕು, ಹಾಗೆ ಆ ಹೆಣ್ಣು ಮಗುವಿನ ಹೆಸರಿನಲ್ಲಿ ಪಾಲಿಸಿ ಆರಂಭಿಸುವ ವ್ಯಕ್ತಿಯ ವಯಸ್ಸು 18 ರಿಂದ 50 ವರ್ಷದೊಳಗಿರಬೇಕು. ಪ್ರತಿ ಒಂದು ಅಥವಾ ಮೂರು, ಆರು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಪ್ರೀಮಿಯಂ(Premium) ಕಟ್ಟುವ ಅವಕಾಶ ಇರುತ್ತದೆ. ದಿನಕ್ಕೆ 75 ರೂಪಾಯಿಯಂತೆ ನೀವು 25 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಸುಮಾರು 14 ಲಕ್ಷ ರೂಪಾಯಿಯನ್ನ ಪಾಲಿಸಿಯ ಕೊನೆಯಲ್ಲಿ ಪಡೆಯುತ್ತೀರಿ. ಪಾಲಿಸಿಯ ಅವಧಿಗಿಂತ ಕೇವಲ ಮೂರು ವರ್ಷಗಳವರೆಗೂ ಮಾತ್ರ ಪ್ರೀಮಿಯಂ ಪಾವತಿಸಬೇಕಾಗಿದೆ.