ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಎಂಟಿಎಸ್, ಹವಾಲ್ದಾರ್ ನೇಮಕಾತಿ 2023 ಗೆ ಅರ್ಜಿ ಪ್ರಕ್ರಿಯೆಯನ್ನು ಜೂನ್ 30 ರಂದು ಪ್ರಾರಂಭಿಸಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ವಿಂಡೋದೊಳಗೆ ಅರ್ಜಿ ಸಲ್ಲಿಸಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್ನ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಇಂದಿನಿಂದ ಅಂದರೆ ಜೂನ್ 30 ರಂದು ssc.nic.in ಎಸ್ಎಸ್ಸಿಯ ಅಧಿಕೃತ ವೆಬ್ಸೈಟ್ ಮೂಲಕ ತಮ್ಮ ಅರ್ಜಿ ನಮೂನೆಗಳನ್ನು ಸಲ್ಲಿಸಬೇಕಾಗುತ್ತದೆ ಮತ್ತು ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಇಂದೇ (ಜುಲೈ 22, 2023) ಕೊನೆ ದಿನ ಆಗಿದೆ. ಈ ನೇಮಕಾತಿ ಡ್ರೈವ್ ಅಡಿಯಲ್ಲಿ ಒಟ್ಟು 1558 ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಪೈಕಿ ಸುಮಾರು 1,198 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು 360 ಹವಾಲ್ದಾರ್ ಹುದ್ದೆಗಳು ಸಿಬಿಐಸಿ ಮತ್ತು ಸಿಬಿಎನ್ ನಲ್ಲಿ ಖಾಲಿ ಇವೆ. ಅಭ್ಯರ್ಥಿಗಳು ವಯಸ್ಸಿನ ಮಿತಿ, ವಿದ್ಯಾರ್ಹತೆ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು.
ಎಸ್ಎಸ್ಸಿ ಎಂಟಿಎಸ್, ಹವಾಲ್ದಾರ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ssc.nic.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ, ನಿಮ್ಮ ವಿವರಗಳನ್ನು ಬಳಸಿಕೊಂಡು ಲಾಗ್ ಇನ್ ಮಾಡಿ.
ಹಂತ 3: ಈಗ ಎಸ್ಎಸ್ಸಿ ಎಂಟಿಎಸ್ ಮತ್ತು ಹವಾಲ್ದಾರ್ ನೇಮಕಾತಿ ಪ್ರಕ್ರಿಯೆಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 4: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
ಹಂತ 5: ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿ ಮತ್ತು ಹೆಚ್ಚಿನ ಬಳಕೆಗಾಗಿ ಅದನ್ನು ಉಳಿಸಿ.
ಜುಲೈ 26 ರಿಂದ ಜುಲೈ 28, 2023 ರವರೆಗೆ ಅಭ್ಯರ್ಥಿಗಳಿಗೆ ಅರ್ಜಿ ತಿದ್ದುಪಡಿ ವಿಂಡೋ ತೆರೆದಿರುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಸೆಪ್ಟೆಂಬರ್ನಲ್ಲಿ ನಡೆಯಲಿದೆ.
ಡೈರೆಕ್ಟ್ ಲಿಂಕ್: ಇಲ್ಲಿ ಅರ್ಜಿ ಸಲ್ಲಿಸಿ : https://ssc.nic.in/ ಜುಲೈ 26 ರಿಂದ ಜುಲೈ 28, 2023 ರವರೆಗೆ ಅಭ್ಯರ್ಥಿಗಳಿಗೆ ಅರ್ಜಿ ತಿದ್ದುಪಡಿ ವಿಂಡೋ ತೆರೆದಿರುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಸೆಪ್ಟೆಂಬರ್ನಲ್ಲಿ ನಡೆಯಲಿದೆ.
ಹುದ್ದೆಯ ಮಾಹಿತಿ
* ಮಲ್ಟಿ ಟಾಸ್ಕಿಂಗ್ ಸ್ಟಾಫ್- 1198
* ಹವಲ್ದಾರ್ – 360
* ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅನುಸಾರ ಕರ್ನಾಟಕದಲ್ಲಿ 52 ಹುದ್ದೆಗಳು ಖಾಲಿ ಇವೆ.
ಎಸ್ಎಸ್ಸಿ ಎಂಟಿಎಸ್, ಹವಾಲ್ದಾರ್ ನೇಮಕಾತಿ 2023: ಅರ್ಹತಾ ಮಾನದಂಡಗಳು
* ವಿದ್ಯಾರ್ಹತೆ
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು.
* ವಯೋಮಿತಿ
ಎಂಟಿಎಸ್, ಹವಾಲ್ದಾರ್ (ಸಿಬಿಎನ್) ಹುದ್ದೆಗಳಿಗೆ 18 ರಿಂದ 25 ವರ್ಷ, ಎಂಟಿಎಸ್ ಮತ್ತು ಹವಾಲ್ದಾರ್ (ಸಿಬಿಐಸಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
* ವಯೋಮಿತಿ ಸಡಿಲಿಕೆ
-ಒಬಿಸಿ ಅಭ್ಯರ್ಥಿಗಳು- 3 ವರ್ಷ
-SC/ST ಅಭ್ಯರ್ಥಿಗಳು- 5 ವರ್ಷ
-PwBD (ಸಾಮಾನ್ಯ) ಅಭ್ಯರ್ಥಿಗಳು- 10 ವರ್ಷ
-PwBD (OBC) ಅಭ್ಯರ್ಥಿಗಳು-13 ವರ್ಷ
-PwBD (SC/ST) ಅಭ್ಯರ್ಥಿಗಳು- 15 ವರ್ಷ
* ವೇತನ
ನಿಗದಿಪಡಿಸಿಲ್ಲ. ಅಭ್ಯರ್ಥಿಗಳ ಅನುಭವ & ಕಾರ್ಯಕ್ಷಮತೆಯ ಆಧಾರದ ಮೇಲೆ ಸಂಬಳ ಕೊಡಲಾಗುತ್ತದೆ.
* ಉದ್ಯೋಗದ ಸ್ಥಳ
ಭಾರತದಲ್ಲಿ ಎಲ್ಲಿ ಬೇಕಾದರೂ
* ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಹಿಳಾ ಅಭ್ಯರ್ಥಿಗಳು ಮತ್ತು ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಮತ್ತು ಇಎಸ್ಎಂಗೆ ಸೇರಿದವರು ಮೀಸಲಾತಿಗೆ ಅರ್ಹರಾಗಿದ್ದಾರೆ ಮತ್ತು ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಇತರ ಯಾವುದೇ ಮಾಹಿತಿಗಾಗಿ, ಅರ್ಜಿದಾರರು ಅಧಿಸೂಚನೆ ಮತ್ತು ವೆಬ್ಸೈಟ್ ಅನ್ನು ಪರಿಶೀಲಿಸಲು ಸೂಚಿಸಲಾಗಿದೆ.
* ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ
ದೈಹಿಕ ದಕ್ಷತೆ ಪರೀಕ್ಷೆ (PET)/ದೈಹಿಕ ಪ್ರಮಾಣಿತ ಪರೀಕ್ಷೆ (PST)
ಸಂದರ್ಶನ
SSC- ಹುದ್ದೆಯ ಮಾಹಿತಿ
ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ನೋಟಿಫಿಕೇಶನ್ ಚೆಕ್ ಮಾಡಿ.