ಕೇಂದ್ರ ಸರ್ಕಾರದ ನೌಕರರಿಗೆ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ನಿರೀಕ್ಷೆಯಲ್ಲಿದ್ದ ಸರ್ಕಾರಿ ಉದ್ಯೋಗಿಗಳು ದಸರಾ ಸಮಯದಲ್ಲಿ ಈ ಗಿಫ್ಟ್ ಪಡೆಯಲಿದ್ದಾರೆ. ಸರ್ಕಾರದಿಂದ ಹಲವು ಬಾರಿ ತುಟ್ಟಿಭತ್ಯೆ ಹೆಚ್ಚಳವಾದ ನೋಟಿಫಿಕೇಷನ್ ಗಳು ಹೊರ ಬಿದ್ದಿದ್ದರೂ ಜಾರಿಯಾದ ಬಗ್ಗೆ ಆದೇಶ ಪತ್ರ ಬಿಡುಗಡೆ ಆಗದೆ ಗೊಂದಲವಾಗಿತ್ತು.
ಆದರೆ ಈಗ ಅಂತಿಮವಾಗಿ 4% ತುಟ್ಟಿಭತ್ಯೆ ಹೆಚ್ಚಳವಾಗಲಿದೆ. 7ನೇ ವೇತನ ಆಯೋಗದಡಿ ಸದ್ಯಕ್ಕೆ ವೇತನ ಪಡುತ್ತಿರುವ ಸರ್ಕಾರಿ ನೌಕರರು ಈ ಬಾರಿಯ DA ಹೆಚ್ಚಳರಿಂದ ಇದು 46% ಗೆ ತಲುಪಲಿದೆ. ವರ್ಷಕ್ಕೆ ಎರಡು ಬಾರಿ ಈ ರೀತಿ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಈ ಬಾರಿ ಅಕ್ಟೋಬರ್ ತಿಂಗಳಿನಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ನೀಡುತ್ತಿದೆ.
ದೇಶ ಕಾಪಡಲು ಸ್ವಂತ ಮಗನ ಪ್ರಾಣವನ್ನು ಲೆಕ್ಕಿಸದೇ ಯುದ್ಧ ಭೂಮಿಗೆ ಕಳುಹಿಸಿ ಕೊಟ್ಟ ಇಸ್ರೇಲ್ ಪ್ರಧಾನಿ.!
ತುಟ್ಟಿಭತ್ಯೆ ಹೆಚ್ಚಳ ಮಾಡುವುದರ ಹಿಂದೆ ಕೂಡ ಬಲವಾದ ಕಾರಣ ಇರುತ್ತದೆ. ಏರುತ್ತಿರುವ ಬೆಲೆ ಏರಿಕೆ, ಹಣದುಬ್ಬರದ ಕಾರಣಗಳಿಂದಾಗಿ ಸರ್ಕಾರಿ ಉದ್ಯೋಗಿಗಳು ಹಾಗೂ ಪೆನ್ಷನ್ ಪಡೆಯುತ್ತಿರುವವರು ಮತ್ತು ಆ ಕುಟುಂಬಗಳು ತತ್ತರಿಸಿ ಹೋಗುತ್ತಿವೆ. ಹಾಗಾಗಿ ಇವರಿಗೆ ನೆರವಾಗಬೇಕು ಮತ್ತು ಈ ಮೂಲಕ ನಿಶ್ಚಿಂತೆಯಾಗಿ ಸರ್ಕಾರಿ ಉದ್ಯೋಗಿಗಳು ಸೇವೆ ಸಲ್ಲಿಸಲು ಸಕಾರಾತ್ಮಕ ವಾತಾವರಣ ಸೃಷ್ಠಿಸಿ ಕೊಡಬೇಕು ಎನ್ನುವ ಕಾರಣದಿಂದಾಗಿ ಸರ್ಕಾರ ಈ ರೀತಿ ಅವರ ತುಟ್ಟಿಭತ್ಯೆ ಹೆಚ್ಚಳ ಮಾಡುತ್ತಿದೆ.
CPI -IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಉದ್ಯೋಗಿಗಳಿಗೆ DA ಅನ್ನು ಪರಿಷ್ಕರಿಸಲಾಗುತ್ತದೆ. ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ನೌಕರರ ಮೂಲ ವೇತನದ ಆಧಾರದ ಮೇಲೆ ಲೆಕ್ಕ ಮಾಡಲಾಗುತ್ತದೆ. DA ಶೇ.4%ರಷ್ಟು ಹೆಚ್ಚಳವಾದರೆ ನೌಕರರ ವೇತನ ತಿಂಗಳಿಗೆ ಸುಮಾರು 600ರೂ. ಹೆಚ್ಚಾಗುತ್ತದೆ.
ಮೂರು ತಿಂಗಳಿಗೆ ಗೃಹಲಕ್ಷ್ಮಿ ಮುಕ್ತಾಯ ಮಾಜಿ CM – ಬಸವರಾಜ ಬೊಮ್ಮಾಯಿ
ಉದಾಹರಣೆಗೆ ಕೇಂದ್ರ ಸರ್ಕಾರದ ನೌಕರರ ಮೂಲ ವೇತನ 42% ಪ್ರಕಾರ, ಮಾಸಿಕ ರೂ.50,000 ಇದ್ದರೆ ಮೂಲ ವೇತನವು ತಿಂಗಳಿಗೆ ರೂ.15000 ಇರುತ್ತದೆ ಮತ್ತು ಅವರು ಈವರೆಗೆ ರೂ6,300 ತುಟ್ಟಿಭತ್ಯೆ ಪಡೆಯುತ್ತಿದ್ದರೆ, ಈಗ ಸರ್ಕಾರ 4% ವೇತನ ಹೆಚ್ಚಿಸಿದರುವುದರಿಂದ ಇನ್ನು ಮುಂದೆ ಉದ್ಯೋಗಿ DA ರೂ.6900 ಗಳನ್ನು ಪಡೆಯುತ್ತಾರೆ.
ಇದರಿಂದ ಒಂದು ಕೋಟಿಗೂ ಅಧಿಕ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಈ ಅಂಕಿ ಅಂಶದಲ್ಲಿ 47.58 ಲಕ್ಷ ಉದ್ಯೋಗಿಗಳು ಹಾಗೂ 69.76 ಲಕ್ಷ ಪಿಂಚಣಿದಾರರಿದ್ದಾರೆ. ತುಟ್ಟಿಭತ್ಯೆ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ ತಿಂಗಳಿಗೆ 12,815 ಕೋಟಿ ಹೊರೆ ಬೀಳಲಿದೆ. ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರ ಕಳೆದ ಹಲವು ದಿನಗಳ ಬೇಡಿಕೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿ ಅನುಕೂಲ ಮಾಡಿ ಕೊಟ್ಟಿದೆ.
ಫ್ರೀ ಟಿಕೆಟ್ ಪಡೆದು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಿದ ಗೀತಾ ಶಿವರಾಜ್ ಕುಮಾರ್.!
ಈ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಅಕ್ಟೋಬರ್ ತಿಂಗಳಿನಲ್ಲಿ ಜಾರಿ ಆದೇಶ ಬರುವುದರಿಂದ ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಹಣ ಕೈ ಸೇರಲಿದೆ. ಕೇಂದ್ರ ಸರ್ಕಾರದ ಉದ್ಯೋಗಗಳು ಮಾತ್ರವಲ್ಲದೆ ರಾಜ್ಯ ಸರ್ಕಾರದ ಉದ್ಯೋಗಿಗಳು ಕೂಡ ತುಟ್ಟಿಭತ್ಯೆ ಹೆಚ್ಚಳದ ಲಾಭವನ್ನು ಪಡೆಯುತ್ತಾರೆ ಆದರೆ ರಾಜ್ಯ ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು.
ಆಗ ರಾಜ್ಯ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರು ಹೆಚ್ಚಿನ DA ಪಡೆಯಬಹುದು ಮತ್ತು ಆ ಬಜೆಟ್ ನ ಹೊರೆಯನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ರಾಜ್ಯ ಸರ್ಕಾರದ ನೌಕರರು ಕೂಡ ಇದೇ ನಿರೀಕ್ಷೆಯಲ್ಲಿದ್ದಾರೆ.