ಭೂಮಿ ಮೇಲೆ ಆಸ್ತಿ ಖರೀದಿಸಲು ಅವಶ್ಯಕತೆ ಅಥವಾ ಹೂಡಿಕೆ ಅಥವಾ ಇನ್ನಿತರ ಕಾರಣಗಳಿದ್ದರೆ ಭೂಮಿಯಿಂದ ಹೊರಗಿನ ಕಾಯಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುವುದು ಒಂದು ಪ್ರತಿಷ್ಠೆಯ ವಿಷಯವೇ ಸರಿ. ಭೂಮಿಯಿಂದ ಹೊರಗಿನ ಪ್ರಪಂಚದ ಬಗ್ಗೆ ಕುತೂಹಲ ಇದ್ದೇ ಇದೆ. ಅದಕ್ಕಾಗಿ ನಿರಂತರವಾಗಿ ಅಂತರಿಕ್ಷಯಾನಗಳನ್ನು ಕೈಕೊಂಡು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ.
ಇವುಗಳ ಯಶಸ್ವಿಯಾದ ಬೆನ್ನಲ್ಲೇ ಈ ವಿಷಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಇದಕ್ಕೆ ಉದಾಹರಣೆಯಾಗಿ ಎಲಾನ್ ಮಸ್ಕ್ (Elon Musk) ಅವರ ಸ್ಪೇಸ್ ಎಕ್ಸ್ (Space ex) ಸಂಸ್ಥೆಯ ಸ್ಟಾರ್ ಶಿಪ್ ಗಗನನೌಕೆ ಯೋಜನೆ (Starship) ಚಾಲ್ತಿಯಲ್ಲಿರುವುದನ್ನು ಹೇಳಬಹುದು. ಭೂಮಿಯಿಂದ ಅಂತರಿಕ್ಷಕ್ಕೆ ಕಾರ್ಗೊ ಮಾತ್ರವಲ್ಲದೆ ಮನುಷ್ಯರನ್ನೂ ಕೊಂಡೊಯ್ಯುವಂತಹ ಅನುಕೂಲತೆ ಮಾಡಿಕೊಡಲು ಸ್ಟಾರ್ ಶಿಪ್ ಗಗನ ನೌಕೆ ಯೋಜನೆ ರೂಪಿಸಲಾಗಿದೆ.
ಟೊಮೇಟೊ ಬೆಳೆ ಲಾಭದ ನಿರೀಕ್ಷೆ ಹುಸಿ, ಒಂದೇ ವೇಲಿಗೆ ನೇಣು ಬಿಗಿದುಕೊಂಡು ರೈತ ದಂಪತಿ ಆ-ತ್ಮಹ-ತ್ಯೆ
ಹಾಗೆಯೇ ನಮ್ಮ ದೇಶದ ಚಂದ್ರಯಾನ-3 (Chandrayana-3) ಯಶಸ್ವಿಯಾದ ಬೆನ್ನಲ್ಲೇ ಚಂದ್ರನ ಮೇಲೆ ಭೂಮಿ (Lunar land) ಖರೀದಿಸುವ ಆಕಾಂಕ್ಷೆ ಮತ್ತೆ ಗರಿಗೆದರಿದೆ. ಈ ಹಿಂದೆಯೂ ಕೂಡ ಬಾಲಿವುಡ್ ಖ್ಯಾತ ತಾರೆ ಶಾರುಖಾನ್ ಅವರಿಗೆ ಅಭಿಮಾನಿಯೊಬ್ಬರು ಚಂದ್ರನ ಮೇಲಿನ ಭೂಮಿ ಖರೀದಿಸಿ ಉಡುಗೊರೆಯಾಗಿ ಕೊಟ್ಟಿದ್ದರು.
ದಿವಂಗತ ನಟ ಬಹುಮುಖ ಪ್ರತಿಭೆ ಬಿ ಟೌನ್ ನ ಮತ್ತೊಬ್ಬ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ (Sharukh khan and SSR owns land on lunar) ಕೂಡ ಚಂದ್ರನ ಮೇಲೆ ಭೂಮಿ ಖರೀದಿಸಿದ್ದರು. ನಮ್ಮ ದೇಶವು ಸೇರಿದಂತೆ ಹಲವು ದೇಶಗಳ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಈಗಾಗಲೇ ಚಂದ್ರನ ಅಂಗಳದಲ್ಲಿ ತಮ್ಮ ಹೆಸರಿಗೆ ಜಾಗ ನೊಂದಹಿಸಿಕೊಂಡಿದ್ದಾರೆ.
ಟೊಮೇಟೊ ಬೆಳೆ ಲಾಭದ ನಿರೀಕ್ಷೆ ಹುಸಿ, ಒಂದೇ ವೇಲಿಗೆ ನೇಣು ಬಿಗಿದುಕೊಂಡು ರೈತ ದಂಪತಿ ಆ-ತ್ಮಹ-ತ್ಯೆ
ಈಗ ಗೋವಾದ ಥಾಣೆ ಸತ್ತಾರಿಯ ಯುವಕ ಪರಾಗ್ ದೇಸಾಯಿ (Parag Desai) ಅವರು ಚಂದ್ರನ ಮೇಲೆ ಸುಮಾರು ಒಂದು ಎಕರೆ ಭೂಮಿಯನ್ನು ಖರೀದಿಸಿ ಅದಕ್ಕೆ ಸಂಬಂಧಿಸಿದ ಕಾಗದ ಪತ್ರಗಳ ಜೊತೆ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದೇ ವಿಚಾರವೀಗ ವೈರಲ್ ಆಗಿದೆ.
ಬ್ಯಾಚುಲರ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್ ಅಧ್ಯಯನ ಮಾಡಿರುವ ಭಾರತ ಮೂಲದ ಪರಾಗ್ ರವರು ಈಗ ಜರ್ಮನಿಯಲ್ಲಿ USA ರಕ್ಷಣಾ ಇಲಾಖೆ ನೆಟ್‌ವರ್ಕ್ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ದಿ ಲೂನಾರ್ ರಿಜಿಸ್ಟ್ರಿಯಿಂದ ಚಂದ್ರನ ಮೇಲಿನ ಮನಿಲಿಯಸ್ ಕ್ರೇಟರ್ ಎಂಬ ಸ್ಥಳದಲ್ಲಿ 1 ಎಕರೆ ಜಾಗವನ್ನು ಖರೀದಿ ಮಾಡಿದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮದು ಮಹಿಳಾಪ್ರಿಯ ಸರ್ಕಾರ, ಮಧ್ಯದದಂಗಡಿ ತೆರೆಯುವುದಕ್ಕೆ ನಮ್ಮದು ವಿರೋಧವಿದೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.!
ಲೂನಾರ್ ಸೊಸೈಟಿ ಇಂಟರ್ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ಕಂಪನಿಗಳ (lunar society International and International Lunar lands) ಮೂಲಕ ಆಸಕ್ತಿ ಇರುವವರು ಆನ್‌ಲೈನ್‌ನಲ್ಲಿ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಬಹುದು. ನೇರವಾಗಿ ಈ ವೆಬ್‌ಸೈಟ್‌ಗೆ ಹೋಗುವ ಮೂಲಕ ಮೊದಲು ನೋಂದಾಯಿಸಿಕೊಳ್ಳಬೇಕು ನಂತರ ನಿರ್ದಿಷ್ಟ ಮೊತ್ತದ ಹಣ ಪಾವತಿಸಿ ಚಂದ್ರನ ಮೇಲೆ ಅನುಕೂಲ ಜಾಗವನ್ನು ನಿಮ್ಮದಾಗಿಸಿಕೊಳ್ಳಬಹುದು.
ಭಾರತೀಯರು ಕೂಡ ಇದೇ ಪ್ರಕ್ರಿಯೆಯ ಮೂಲಕ ಚಂದ್ರನ ಮೇಲಿನ ಜಾಗವನ್ನು ರಿಜಿಸ್ಟರ್ ಮಾಡಿಕೊಳ್ಳುತ್ತಿದ್ದಾರೆ. ಈ ವಿಶೇಷದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ದೇಸಾಯಿ ಚಂದ್ರನ ಮೇಲೆ ಭೂಮಿಯನ್ನು ಖರೀದಿಸುವುದು ದೊಡ್ಡ ವಿಶ್ವಕ್ಕೆ ಸಂಪರ್ಕದ ಮಾರ್ಗ ಎಂದು ನಾನು ನಂಬುತ್ತೇನೆ. ಬಾಹ್ಯಾಕಾಶ ತಂತ್ರಜ್ಞಾನವೂ ಮನುಷ್ಯರು ಚಂದ್ರನಂಗಳದಲ್ಲಿ ವಾಸಿಸಲು ಎಲ್ಲಾ ಸೌಲಭ್ಯ ಇದೆಯಾ ಎನ್ನುವ ಬಗ್ಗೆ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ ಮಹಿಳೆಯರಿಗೆ ಅಡ್ವೈಸ್ ಮಾಡಿದ – DK ಶಿವಕುಮಾರ್
ಚಂದ್ರನ ಮೇಲೆ ಒಂದು ತುಂಡು ಭೂಮಿಯನ್ನು ಹೊಂದಿರುವುದು ಆವಿಷ್ಕರಿಸುವ ಮತ್ತು ಅನ್ವೇಷಿಸುವ ಮಾನವೀಯತೆಯ ಮಹತ್ವಾಕಾಂಕ್ಷೆಯನ್ನು ಬೆಂಬಲಿಸುತ್ತದೆ. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಒಪ್ಪಂದಗಳು ಚಂದ್ರನ ಮೇಲಿನ ಆಸ್ತಿ ಹಕ್ಕುಗಳನ್ನು ಹೇಗೆ ಪರಿವರ್ತಿಸಲಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ ಎಂದು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.