ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆ (Karnataka Assembly election-2023) ಮುಗಿದು ಕಾಂಗ್ರೆಸ್ ಪಕ್ಷ (Congress party) ಸ್ಪಷ್ಟ ಬಹುಮತ ಪಡೆದ ಮೇಲೆ ರಾಜ್ಯದ ಮುಖ್ಯಮಂತ್ರಿ (Chief Minister post) ಗದ್ದುಗೆ ಯಾರು ಏರಲಿದ್ದಾರೆ ಎನ್ನುವ ವಿಚಾರ ಬಹಳ ಚರ್ಚೆಯಲ್ಲಿತ್ತು.
ಈ ವಿಚಾರವಾಗಿ ಪಕ್ಷದಲ್ಲಿಯೇ ಭಿನ್ನಾಭಿಪ್ರಾಯವಿದೆ ಎನ್ನುವ ಗುಮಾನಿ ಕೂಡ ಹಬ್ಬಿತು. ಇದ್ದವರ ಪೈಕಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ (Siddaramaih and D K Shivakumar) ಅವರ ಹೆಸರು ಹೆಚ್ಚು ಕೇಳಿ ಬಂದಿತ್ತು, ಸಿಎಂ ರೇಸ್ ನಲ್ಲಿ ಇವರಿಬ್ಬರಿದ್ದಾರೆ ಎನ್ನುವುದು ಜಗಜಾಹಿರಾಗಿತ್ತು. ಅಂತಿಮವಾಗಿ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದು ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಪಕ್ಷದ ಒಳಗೆ ಅಧಿಕಾರ ಹಂಚಿಕೆ ಸೂತ್ರ ಯಾವ ರೀತಿ ತಯಾರಾಗಿದೆಯೋ ಗೊತ್ತಿಲ್ಲ ಆದರೆ ಹೈಕಮಾಂಡ್ ಮಾತ್ರ ಬಹಿರಂಗವಾಗಿ ಎಂದು ಈ ವಿಷಯ ಚರ್ಚಿಸುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿತ್ತು. ಆದರೂ ಕೂಡ ಈಗಲೂ ಸಿದ್ದರಾಮಯ್ಯರವರು ಅಲ್ಪಾವಧಿ ಸಿ.ಎಂ ಮಾತ್ರ, ಎರಡೂವರೆ ವರ್ಷಗಳ ಕಾಲ ಅಧಿಕಾರ ಇರುತ್ತದೆ ನಂತರ ಡಿ.ಕೆ ಶಿವಕುಮಾರ್ ರವರು ಮುಖ್ಯಮಂತ್ರಿಗಳಾಗುತ್ತಾರೆ ಎನ್ನುವ ಗಾಳಿ ಮಾತಿಗಳು ತೂರಿ ಬರುತ್ತಿವೆ.
ಎಂಬಿ ಪಾಟೀಲ್, ಎಚ್ ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿಯವರು ಸಿದ್ದರಾಮಯ್ಯರವರೇ ಪೂರ್ಣಾವಧಿ ಸಿಎಂ ಆಗಿರುತ್ತಾರೆ ಎಂದು ಕೂಗಿ ಹೇಳುತ್ತಿರುವುದು, ಇದಕ್ಕೆ ಡಿಕೆಶಿ ಬಳಗದವರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿದೆ ಮತ್ತು ಈ ವಿಚಾರವಾಗಿ ರಾಜ್ಯದ ಜನತೆಯ ಮತ್ತು ವಿರೋಧ ಪಕ್ಷಗಳ ಗಮನವನ್ನು ಕೂಡ ಸೆಳೆಯುತ್ತಿದೆ.
ಆರಂಭದಲ್ಲಿ ಪೂರ್ಣಾವಧಿ ಸಿಎಂ ಚರ್ಚೆ ಬಹಳ ಜೋರಾಗಿಯೇ ನಡೆದಿತ್ತು, ಈಗ ಹೈಕಮಾಂಡ್ ಸೂಚನೆ ಬಂದ ಮೇಲೆ ಸ್ವಲ್ಪ ಮಟ್ಟದಲ್ಲಿ ತಣ್ಣಗಾಗಿದೆ ಎಂದೇ ಹೇಳಬಹುದು ಆದರೂ ಈ ಕುರಿತಾದ ಒಂದು ಕುತೂಹಲ ಇದ್ದೇ ಇದೆ. ಇದರ ಕುರಿತು ಇರುವ ಗೊಂದಲಗಳಿಗೆ ಈಗ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ಬಹಳ ನೇರ ನೇರವಾದ ಉತ್ತರ ಕೊಟ್ಟು ಎಲ್ಲ ಊಹಾಪೋಹಗಳಿಗು ತೆರೆ ಎಳೆದಿದ್ದಾರೆ.
ಜನಪ್ರಿಯ ಕನ್ನಡ ವಾಹಿನಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ (Public tv Belaku program) ಇನ್ನೂರು ಸಂಚಿಕೆಗಳ ಸಂಭ್ರಮ. ಈ ಕಾರ್ಯಕ್ರಮದ ವಿಶೇಷ ಸಂಚಿಕೆಯ ಅತಿಥಿಯಾಗಿ ಭಾಗಿಯಾದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಅನೇಕ ವಿಚಾರಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು ಮತ್ತು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ಇದೆ ವೇಳೆ ಅವರಿಗೆ ಸಿಎಂ ಅಧಿಕಾರ ಹಂಚಿಕೆ ಕುರಿತು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್ ರಂಗನಾಥ್ (H.R Ranganath) ರವರಿಂದ ಪ್ರಶ್ನೆ ಎದುರಾಯಿತು. ಇದಕ್ಕೆ ಸಿದ್ದರಾಮಯ್ಯರವರು ಕೊಟ್ಟ ಉತ್ತರ ಹೀಗಿದೆ. ಈ ಅವಧಿ ಮುಗಿದ ಮೇಲೆ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಆದರೆ ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.
ನಾನು ಜನರಿಗೆ ಮತ್ತು ನಮ್ಮ ಕ್ಷೇತ್ರದಲ್ಲೂ ಇದನ್ನೇ ಹೇಳಿದ್ದೇನೆ. ಈ ಅವಧಿ ಮುಗಿದ ಮೇಲೆ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಅಷ್ಟೆ, ಆದರೆ ಅಧಿಕಾರ ಬಿಡುತ್ತೇನೆ ಎಂದು ಹೇಳಿಲ್ಲ ಎನ್ನುವ ಮೂಲಕ ಇದುವರೆಗೆ ಇದ್ದ ಸಿಎಂ ಸ್ಥಾನದ ಗೊಂದಲಗಳಿಗೆ ಸಿದ್ದರಾಮಯ್ಯರವರು ಫುಲ್ ಸ್ಟಾಪ್ ಇಟ್ಟಿದ್ದಾರೆ. ಈ ಮೂಲಕವಾಗಿ ಪೂರ್ಣಾವಧಿಗೆ ಸಿಎಂ ನಾನೇ ಆಗಿರುತ್ತೇನೆ ಎನ್ನುವುದನ್ನು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಂತರದ ಬೆಳವಣಿಗೆಗಳು ಏನಾಗಲಿದೆಯೋ ಕಾದು ನೋಡೋಣ.