ನಾವು ಇಲ್ಲಿ ತಿಳಿಸುವಂತಹ ರೆಸಿಪಿ ನೋಡಲು ಎಷ್ಟು ಚೆನ್ನಾಗಿದೆಯೋ ಅದಕ್ಕಿಂತ ಹೆಚ್ಚಾಗಿ ರುಚಿ ಮತ್ತು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇದನ್ನು ಸ್ವಲ್ಪ ತಿಂದರೂ ಕೂಡ ಮಳೆಗಾಲದಲ್ಲಿ ಉಂಟಾಗುವ ನೆಗಡಿ ಮತ್ತು ಕೆಮ್ಮು ಹತ್ತಿರವು ಸಹ ಸುಳಿಯುವುದಿಲ್ಲ ಇದರಲ್ಲಿ ಪ್ರೋಟೀನ್, ಫೈಬರ್ ಇದ್ದು ದೊಡ್ಡವರು ಚಿಕ್ಕವರು ಎಲ್ಲಾ ವಯಸ್ಸಿನವರು ಸಹ ಸೇವನೆ ಮಾಡಬಹುದು.
ಈ ರೆಸಿಪಿಯನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಸಾಮಗ್ರಿಗಳು
ಹುರಿಗಡಲೆ ಒಂದು ಕಪ್,
ಒಂದು ಕಪ್ಪು ಬೆಲ್ಲ
ಎರಡು ಟೇಬಲ್ ಸ್ಪೂನ್ ತುಪ್ಪ
ಎರಡು ಟೇಬಲ್ ಸ್ಪೂನ್ ಎಣ್ಣೆ
ಅರ್ಧ ಟೇಬಲ್ ಸ್ಪೂನ್ ಏಲಕ್ಕಿ ಪುಡಿ
ಚಿಟಿಕೆ ಉಪ್ಪು
ಕಡಲೆಯಲ್ಲಿ ಪ್ರೋಟೀನ್ ಮತ್ತು ಫೈಬರ್ ಜಾಸ್ತಿ ಪ್ರಮಾಣದಲ್ಲಿ ಇರುತ್ತದೆ ಇದರಲ್ಲಿ ಇರುವಂತಹ ಸತ್ವ ನಮ್ಮ ಇಮ್ಯೂನಿಟಿ ಪವರ್ ಬೂಸ್ಟ್ ಮಾಡಲು ಸಹಾಯ ಮಾಡುತ್ತದೆ ಇದನ್ನು ತಿನ್ನುವುದರಿಂದ ನಮ್ಮ ಡೈಜೆಸ್ಟಿವ್ ಸಿಸ್ಟಮ್ ಇಂಪ್ರೂವಾಗುತ್ತದೆ ಹಾಗಾಗಿ ವೈದ್ಯರು ಇದನ್ನು ತಿನ್ನಬೇಕು ಎಂದು ಸಲಹೆ ನೀಡುತ್ತಾರೆ. ಮಳೆಗಾಲದಲ್ಲಿ ಬೆಲ್ಲ ಉಪಯೋಗ ಮಾಡುವುದರಿಂದ ಉಷ್ಣತೆಯನ್ನು ಕೊಡುತ್ತದೆ.
ಮಾಡುವಂತಹ ವಿಧಾನ
ಮೊದಲಿಗೆ ಕಡಲೆಯನ್ನು ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ನಂತರ ಒಂದು ಕಪ್ ಬೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಅದೇ ಕಪ್ ಅಳತೆಯಲ್ಲಿ ನೀರನ್ನು ಹಾಕಿ ಒಂದು ಎಳೆ ಪಾಕ ಬರುವ ತನಕ ಕರಗಿಸಿಕೊಳ್ಳಿ. ನಂತರ ಒಂದು ಬಾಣಲೆಯ ಮೇಲೆ ಎರಡು ಟೇಬಲ್ ಸ್ಪೂನ್ ತುಪ್ಪ ಹಾಗೆ ಎರಡು ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿ ಕರಗಿಸಿ ನಂತರ ಹುರಿಗಡಲೆ ಪುಡಿಯನ್ನು ಹಾಕಿ ಲೋ ಫ್ಲೇಮ್ ನಲ್ಲಿ ಗ್ಯಾಸ್ ಅನ್ನು ಇಟ್ಟು ಚೆನ್ನಾಗಿ ಉರಿದುಕೊಳ್ಳಿ.
ಗ್ಯಾಸ್ ಅನ್ನು ಲೋ ಫ್ಲೇಮ್ ನಲ್ಲಿ ಇಟ್ಟು ಘಮ ಬರುವವರೆಗೂ ಕಲರ್ ಚೇಂಜ್ ಆಗುವವರೆಗೂ ಚೆನ್ನಾಗಿ ಹುರಿಯಿರಿ ನಂತರ ಕರಗಿಸಿ ಇಟ್ಟಿರುವಂತಹ ಬೆಲ್ಲದ ನೀರನ್ನು ಅರ್ಧದಷ್ಟು ಶೋಧಿಸಿ ಹಾಕಿ ನೀವು ಅದನ್ನು ಚೆನ್ನಾಗಿ ಕಲಸಬೇಕು ಚೆನ್ನಾಗಿ ಕಲಸಿದರೆ ಅದು ಗಂಟು ಹೊಡೆಯುತ್ತದೆ ನಂತರ ಉಳಿದಂತಹ ಬೆಲ್ಲದ ನೀರನ್ನು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿ.
ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಒಂದು ಚಿಟಿಕೆ ಉಪ್ಪು ಮತ್ತು ಅರ್ಧ ಟೇಬಲ್ ಸ್ಪೂನ್ ಏಲಕ್ಕಿ ಪುಡಿಯನ್ನು ಹಾಕಿ ಮೀಡಿಯಂ ಫ್ಲೇಮ್ ನಲ್ಲಿ ಸ್ಟವ್ ನನ್ನು ಇಟ್ಟು ಗಟ್ಟಿ ಆಗುವ ತನಕ ಚೆನ್ನಾಗಿ ಮಿಕ್ಸ್ ಮಾಡಿ ಗಟ್ಟಿಯಾದ ನಂತರ ಸ್ಟೀವ್ ಅನ್ನು ಆಫ್ ಮಾಡಿ ಒಂದು ಚಿಕ್ಕ ಸಾಂಬಾರ್ ಸೌಟ್ ನ ಸಹಾಯದಿಂದ ಅದನ್ನು ಒಂದು ತಟ್ಟೆಗೆ ಹಾಕಿ.
ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಜಾಸ್ತಿ ಇರುವುದರಿಂದ ಮೂಳೆಗಳು ಗಟ್ಟಿ ಮಾಡುತ್ತದೆ ಇದನ್ನು ಬೆಳೆಯುವ ಮಕ್ಕಳಿಗೆ ಮಾಡಿಕೊಡುವುದರಿಂದ ಅನೀಮಿಯ, ಸ್ಟ್ರೆಸ್, ಹಾರ್ಮೋನಲ್ ಇಂಬ್ಯಾಲೆನ್ಸ್, ಬೆನ್ನು ನೋವು ಈ ಎಲ್ಲವನ್ನು ಕಡಿಮೆ ಮಾಡುತ್ತದೆ ಇದು ತೂಕ ಇಳಿಸಿಕೊಳ್ಳಲು ತುಂಬಾ ಸಹಾಯಕಾರಿ.
ನೋಡಲು ಎಷ್ಟು ಸುಂದರವಾಗಿ ಕಾಣುತ್ತದೆಯೋ ತಿನ್ನಲು ಸಹ ಅಷ್ಟೇ ರುಚಿಕರವಾಗಿ ಇರುತ್ತದೆ ಮಳೆಗಾಲದಲ್ಲಿ ಯಾವುದೇ ಶೀತ ಕೆಮ್ಮು ನೆಗಡಿ ಏನು ಬರಬಾರದು ಎಂದರೆ ಈ ರೀತಿಯಾದ ಒಂದು ರೆಸಿಪಿಯನ್ನು ಮಾಡಿ ನೀವು ದಿನ ತೆಗೆದುಕೊಳ್ಳುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು. ಪ್ರತಿಯೊಬ್ಬರೂ ಸಹ ಈ ರೆಸಿಪಿಯನ್ನು ಮನೆಯಲ್ಲಿ ಟ್ರೈ ಮಾಡಿ ಮತ್ತು ಈ ರೆಸಿಪಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ.