ಈ ವರ್ಷ ಹಸೆಮಣೆ ಏರಿ, ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ್ದ ಅಭಿಷೇಕ್ ಅಂಬರೀಶ್ (Abhishek Ambareesh) ಅವರು ಸಿನಿಮಾ ಅಪ್ಡೇಟ್ ಕುರಿತು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಅಭಿಷೇಕ್ ಅಂಬರೀಶ್ ಅವರ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನಸ್ (Bad Maners) ಬಗ್ಗೆ ಹೇಳಿಕೊಂಡಿದ್ದಾರೆ.
ಅಮರ್ ಚಿತ್ರವಾದ ಬಳಿಕ ಅಭಿಷೇಕ್ ಅಂಬರೀಶ್ ಅವರ ಮತ್ಯಾವ ಚಿತ್ರವು ಕೂಡ ರಿಲೀಸ್ ಆಗಲಿಲ್ಲ ಸೂರಿ ಡೈರೆಕ್ಷನ್ (Director Soori) ಅಲ್ಲಿ ಅಭಿಷೇಕ್ ಅಂಬರೀಶ್ ಅವರು ಈಚಿತ್ರ ತಯಾರಾಗುತ್ತಿದೆ ಎಂದಷ್ಟೇ ಜನರಿಗೆ ತಿಳಿದಿತ್ತು, ಬಹಳ ಬೇಗ ಸಿನಿಮಾ ತೆರೆಗೆ ತರಬೇಕು ಎನ್ನುವ ಅಭಿಲಾಷೆಯಿದ್ದರೂ ಎರಡು ವರ್ಷಗಳ ಕರೋನ ಹಾವಳಿಗೆ ಚಿತ್ರೀಕರಣ ತಡವಾಯಿತು.
ಇದರ ಬಗ್ಗೆ ಖಾಸಗಿ ಯೂ ಟ್ಯೂಬ್ ವಾಹಿನಿ ಒಂದರ ಜೊತೆ ಮಾತನಾಡಿದ ನಾಯಕನಟ ಅಭಿಷೇಕ್ ಅಂಬರೀಶ್ ಅವರು ಇದರ ಬಗ್ಗೆ ಮಾತನಾಡಿ ವಿಷಯ ಹಂಚಿಕೊಂಡಿದ್ದಾರೆ. ಸಿನಿಮಾವನ್ನು ನಾವು ಸೆಟ್ ಹಾಕಿ ಮಾಡಬಹುದಿತ್ತು. ಆದರೆ ಕಥೆಗೆ ಬೇಕಾದ ನ್ಯಾಚುರಾಲಿಟಿ ಬರುತ್ತಿರಲಿಲ್ಲ. ಆ ಸಮಯದಲ್ಲಿ ನಾವು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸೆಟ್ ಗಳಿಗೆ ಎಲ್ಲರನ್ನು ಕರೆದುಕೊಂಡು ಹೋಗಿ ಶೂಟಿಂಗ್ ಮಾಡಲು ಆಗುತ್ತಿರಲಿಲ್ಲ.
ಕಥೆಗಾಗಿ ಹಾಗಿತ್ತು ಕಾಂಪ್ರಮೈಸ್ ಆಗಲೂ ಇಷ್ಟ ಇರ್ಲಿಲ್ಲ. ನಮಗೆ ಟೈಮ್ ಕಾಂಪ್ರಮೈಸ್ ಆಗಲು ಒಂದೇ ಅವಕಾಶ ಇದ್ದಿದ್ದರಿಂದ ನಾನು ಕೂಡ ಇದನ್ನು ಒಪ್ಪಿಕೊಂಡೆ, ಈಗ ಚಿತ್ರ ಅಂದುಕೊಂಡಂತೆ ತೆರೆಮೇಲೆ ತಂದ ಸಮಾಧಾನ ನಿರ್ದೇಶಕರಿಗೆ ಇದೆ, ನಾಯಕ ನಟನಾಗಿ ನನಗೂ ಖುಷಿ ಇದೆ ಎಂದು ಮಾತನಾಡಿದ ಅವರು ಈಗ ಬಿಗ್ ಬಾಸ್ (Bigboss) ಬಗ್ಗೆ ಪ್ರಶ್ನೆ ಕೇಳಿದಾಗ ತಮ್ಮ ಅಭಿಪ್ರಾಯ ಏನು ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ನಿರೂಪಕರು ನಿಮ್ಮನ್ನು ಬಿಗ್ ಸ್ಕ್ರೀನ್ ಮೇಲೆ ನೋಡುವ ಆಸೆ ಇದೆ ಆದರೂ ಬಿಗ್ ಬಾಸ್ ಮನೆಗೆಹೋಗುತ್ತತೀರ ಎಂದುಕೊಳ್ಳೋಣ. ನೀವು ಯಾವ ರೀತಿ ಆಟ ಆಡುತ್ತೀರಾ? ನಿಮ್ಮ ಜೊತೆ ಯಾರನ್ನೆಲ್ಲಾ ಕರೆದುಕೊಂಡು ಹೋಗುತ್ತೀರಿ ಎಂದು ಕೇಳಿದ್ದಕ್ಕೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸುತ್ತಿರುವುದು ಸುದೀಪ್ ಅವರಾಗಿರುವುದರಿಂದ ಅವರನ್ನೇ ನನ್ನ ಜೊತೆ ಕಳುಹಿಸಿ ಎಂದು ಕೇಳುತ್ತೇನೆ ಎಂದಿದ್ದಾರೆ.
ಜೊತೆಗೆ ಇನ್ಯಾರು ಬೇಕು ಎಂದು ಕೇಳಿದಾಗ ಎಲ್ಲರೂ ಇರೋಣ ಅವರು ಬೇಡ ಇವರು ಬೇಡ ಎಂದು ಯಾಕೆ ಹೇಳಬೇಕು ಓಪನ್ ವೋಟಿಂಗ್ ಬಿಡೋಣ ಯಾರಿಗೆ? ಯಾರು ಬೇಡ ಅವರು ಆಚೆ ಬರಲಿ, ಆದರೆ ನಾವೆಲ್ಲ ಒಂದೇ ಮನೆಗೆ ಸೇರಿದರೆ ಖಂಡಿತ ಅದು ಬಿಗ್ ಬಾಸ್ ಮನೆ ಆಗುವುದಿಲ್ಲ ಪಾರ್ಟಿ ಆಗಿಬಿಡುತ್ತದೆ ಎಂದು ತಮಾಷೆ ಮಾಡಿದ್ದಾರೆ.
ಹೀಗೆ ಅಭಿಮಾನಿಗಳ ಕಮೆಂಟ್ ಬಗ್ಗೆ ಮಾತನಾಡುತ್ತಾ ಅಭಿಮಾನಿಗಳು ಹೇಳಿದ್ದನ್ನು ತೆಗೆದುಕೊಳ್ಳಲೇಬೇಕು. ಪಬ್ಲಿಕ್ ಲೈಫಲ್ಲಿ ಇದ್ದರೆ ನಮ್ಮ ಲೈಫ್ ಓಪನ್ ಬುಕ್ ಇದ್ದಂತೆ, ಸಾರ್ವಜನಿಕವಾಗಿ ಬದುಕುವಾಗ ನಮ್ಮನ್ನು ಗುರುತಿಸುವವರಿಂದ ಏನೇ ಅಭಿಪ್ರಾಯ ಬಂದರೂ ಅದನ್ನು ಒಪ್ಪಿಕೊಳ್ಳಲೇ ಬೇಕು. ಅಭಿಮಾನಿಗಳ ಮೆಚ್ಚುಗೆ ನಮಗೂ ಒಂದು ಅವಾರ್ಡ್ ಇದ್ದಂತೆ ಅದನ್ನು ತೆಗೆದುಕೊಂಡಂತೆ ನೆಗೆಟಿವ್ ಕೂಡ ತೆಗೆದುಕೊಳ್ಳಬೇಕು.
ಆದರೆ ಅದರಲ್ಲಿ ಕೆಲವರು ಪ್ರಾಮಾಣಿಕವಾಗಿ ಏನು ಇಂಪ್ರೂ ಆಗಬೇಕು ಎನ್ನುವುದನ್ನು ಹೇಳುತ್ತಾರೆ. ಅದು ನಮ್ಮನ್ನು ತಿದ್ದುವುದಕ್ಕೆ ಇನ್ನು ಕೆಲವರು ಫೋನಿದೆ ನೆಟ್ವರ್ಕ್ ಇದೆ ಎಂದು ಕಮೆಂಟ್ ಮಾಡುತ್ತಾರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.