ಕರ್ನಾಟಕದಲ್ಲಿರುವ ಎಲ್ಲಾ ಸಿನಿ ರಸಿಕರ ಮನಸ್ಸಿನಲ್ಲಿ ಇರುವುದು ಒಂದೇ ಒಂದು ಆಸೆ. ಏನೆಂದರೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಮತ್ತೆ ಒಂದಾಗಬೇಕು ಎನ್ನುವುದು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಯಾವುದೇ ಗಾಸಿಪ್ ಹರಿದಾಡಿದರು ಅದಕ್ಕೆ ದಾಖಲೆ ಮಟ್ಟದ ವೀಕ್ಷಣೆ ಹಾಗೂ ಲೈಕ್ ಮತ್ತು ಬರಪೂರ ಕಮೆಂಟ್ ಸುರಿಮಳೆಯ ಸುರಿಯುತ್ತದೆ.
ಯಾಕೆಂದರೆ ಇವರಿಬ್ಬರು ಕೂಡ ಮತ್ತೆ ಮೊದಲಿನ ರೀತಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ಮಾತನಾಡುವಂತಾಗಬೇಕು, ಸಾಧ್ಯವಾದರೆ ಒಟ್ಟಿಗೆ ಒಂದು ಸಿನಿಮಾವನ್ನು ಮಾಡಬೇಕು ಅದು ಕನ್ನಡ ಚಿತ್ರರಂಗದಲ್ಲಿ ಇತಿಹಾಸವಾಗಬೇಕು ಎನ್ನುವುದು ಅಭಿಮಾನಿಗಳ ಮನದ ಇಂಗಿತ.
ಈ ಬಗ್ಗೆ ಹರಿದಾಡಿದ ಗಾಸಿಪ್ ಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಸುದೀಪ್ ಹಾಗೂ ದರ್ಶನ್ (Yashas, Suddep and Darshan ) ಅವರನ್ನು ಒಂದು ಮಾಡುವುದಕ್ಕೆ ಸುಮಲತ ಅವರ ಬರ್ತಡೆಯಲ್ಲಿ (Sumalatha Ambarish birthday) ಪ್ರಯತ್ನ ಪಟ್ಟರು ಆದರೆ ಅದು ಆಗಲಿಲ್ಲ ಎನ್ನುವುದು ಒಂದು.
ಇದು ಕನ್ನಡ ಚಿತ್ರರಂಗದ ಟಾಪ್ ತ್ರೀ ಸ್ಟಾರ್ ಗಳಾದ ಯಶ್ ದರ್ಶನ್ ಮತ್ತು ಸುದೀಪ್ ಅವರ ಅಭಿಮಾನಿಗಳಿಗೆ ಸಂಬಂಧಪಟ್ಟ ವಿಚಾರ ಆಗಿತ್ತು ಇದನ್ನು ಬಹಳ ಅವರು ಮನಸ್ಸಿಗೆ ತೆಗೆದುಕೊಂಡಿದ್ದಾರೆ ಮತ್ತು ಇದಕ್ಕೆ ಸ್ಪಷ್ಟನೆ ಸಿಗದೇ ಗೊಂದಲದಲ್ಲಿದ್ದಾರೆ. ಈಗ ಈ ವಿಚಾರವಾಗಿ ಸುಮಲತ ಅಂಬರೀಶ್ ಹಾಗೂ ಅಂಬರೀಶ್ ಪತ್ರ ಅಭಿಷೇಕ್ ಅಂಬರೀಶ್ (Abhishek Ambarish) ಅವರೇ ಸ್ಪಷ್ಟತೆ ಕೊಟ್ಟಿದ್ದಾರೆ.
ಅಭಿಷೇಕ್ ಅಂಬರೀಶ್ ಅವರ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನರ್ಸ್ (Bad Manners Movie) ಸಂಬಂಧ ಪಟ್ಟ ಹಾಗೆ ಒಂದು ಖಾಸಗಿ ಯೌಟ್ಯೂಬ್ ಚಾನೆಲ್ ವಾಹಿನಿಗೆ ಸಂದರ್ಶನ ಕೊಟ್ಟ ಅಭಿಷೇಕ್ ಅಂಬರೀಶ್ ಅವರು ಆ ಸಮಯದಲ್ಲಿ ತಮ್ಮ ಸಿನಿಮಾ ಕುರಿತು ಹಾಗೂ ಇಂಡಸ್ಟ್ರಿಯಲ್ಲಿ ಈಗ ನಡೆಯುತ್ತಿರುವ ಗಾಸಿಪ್ ಗಳ ಕುರಿತು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಮಾತನಾಡಿದರು.
ಆಗ ಅವರಿಗೆ ಈ ವಿಚಾರವಾಗಿ ಕೂಡ ಪ್ರಶ್ನೆ ಎದುರಾಯಿತು. ಈ ರೀತಿ ಒಂದು ಗಾಸಿಪ್ ಹರಿದಾಡುತ್ತಿದೆ ಇದು ನಿಜವೇ ಎಂದು ಕೇಳಿದಾಗ ಅಭಿಷೇಕ್ ಅಂಬರೀಶ್ ಅವರು ಒಂದು ಕ್ಷಣ ನಕ್ಕುಸುಮ್ಮನಾದರು. ಯಾಕೆಂದರೆ ಇಲ್ಲಿ ನೀವು ಅಂದುಕೊಂಡಷ್ಟು ಯಾವುದು ಸುಲಭ ಅಲ್ಲ ಎಲ್ಲರೂ ಸಹ ಅವರವರ ಕೆಲಸಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ ಹಾಗಾಗಿ ಈ ರೀತಿ ಪ್ಲಾನ್ ಮಾಡಲು ಅಥವಾ ಅದು ವರ್ಕೌಟ್ ಆಗುತ್ತದೆ ಎಂದು ನಂಬಲು ಆಗುವುದಿಲ್ಲ.
ಹಾಗಾಗಿ ಖಂಡಿತವಾಗಿ ಈ ರೀತಿ ಏನು ನಡೆದಿಲ್ಲ ಮೂರು ಜನ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಹೆಸರಾಂತ ನಟರು. ದರ್ಶನ್ ಹಾಗೂ ಸುದೀಪ್ ಅವರು ಸುಮಲತಾ ಅವರ 60ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಕ್ಕೆ ಬಾಗಿಯಾಗಿ ಅವರಿಗೆ ಶುಭ ಹಾರೈಸಲು ಬಂದಿದ್ದರು ಅದಷ್ಟೇ ನಿಜ.
ನೀವು ಸ್ಪಷ್ಟವಾಗಿ ಗಮನಿಸಿದರೆ ಅಂದು ಯಶ್ ಅವರು ಬರಲಾಗಲಿಲ್ಲ ಅದಕ್ಕೆ ಅವರದ್ದೇ ಆದಕಾರಣ ಇತ್ತು ಹಾಗಾಗಿ ಇದೆಲ್ಲ ಗಾಳಿಸುದ್ದಿ ಎಂದಷ್ಟೇ ಹೇಳಬಹುದು. ಆದರೆ ಇದು ನಿಜವಾಗಲಿ ಎಂದು ಇಡೀ ಕರುನಾಡೆ ಕಾಯುತ್ತಿದೆ. ಅವರ ಅಭಿಮಾನಿಗಳ ಬಹಳ ದಿನಗಳ ಇಚ್ಛೆ ಕೂಡ ಇದೇ ಆಗಿದೆ, ಇದು ಶೀಘ್ರವೇ ನೆರವೇರಲಿ ಎಂದು ನಾನು ಕೂಡ ಬಯಸುತ್ತೇನೆ ಒಂದಲ್ಲ ಒಂದು ಇದು ಆಗುತ್ತದೆ ಎನ್ನುವ ನಂಬಿಕೆ ಇದೆ, ಆದರೆ ಇಂಡಸ್ಟ್ರಿಗೂ ಒಳ್ಳೆಯದು ಎಂದು ಹೇಳಿದ್ದಾರೆ.