ಮುದ್ದುಮುಖದ ಚೆಲುವೆ ಸಿಂಧು ಮೆನನ್ (Sindhu Menon) ಬಾಲ ನಟಿಯಾಗಿಯೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಣಿಸಿಕೊಂಡಿದ್ದರು (introduce to Industry as a Child Artist) ದೇವರಾಜ್ ಅವರ ನಟನೆಯ ಹುಲಿಯಾ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದ್ದ ಇವರು ನಂತರ ನಟಿ ಶ್ರುತಿ ಅವರ ರಶ್ಮಿ ಚಿತ್ರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದರು.
2000ನೇ ಇಯಯಸವಿ ನಂತರದ ದಿನಗಳಲ್ಲಿ ನಾಯಕ ನಟಿಯಾಗಿ ಬಡ್ತಿ ಪಡೆದ ಇವರು ದರ್ಶನ್ ಅವರೊಂದಿಗೆ ಧರ್ಮ ಸಿನಿಮಾದಲ್ಲಿ, ಕಿಚ್ಚ ಸುದೀಪ್ ಅವರೊಂದಿಗೆ ನಂದಿ ಸಿನಿಮಾದಲ್ಲಿ, ಆ ಸಮಯದಲ್ಲಿ ಟಾಪ್ ಹೀರೋ ಆಗಿದ್ದ ವಿಜಯ ರಾಘವೇಂದ್ರ ಅವರೊಂದಿಗೆ ವಿಕ್ರಂ, ಖುಷಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಯಶಸ್ವಿ ಚಿತ್ರಗಳ ಭಾಗವಾಗಿದ್ದರು.
ನಟಿ ತಮಿಳ, ತೆಲುಗು, ಮಲಯಾಳಂ ಚಿತ್ರರಂಗದಲ್ಲೂ ಕೂಡ ಗುರುತಿಸಿಕೊಂಡು ಒಳ್ಳೆಯ ಹೆಸರು ಮಾಡಿದ್ದರು. ಆದರೆ ಈಗ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿ ಬಿಟ್ಟಿದ್ದಾರೆ ಹಾಗಾದರೆ ನಟಿ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಗೊತ್ತಾ.?.
ಸಿನಿಮಾರಂಗದಲ್ಲಿ ಸಾಕಷ್ಟು ಅವಕಾಶಗಳು ಇದ್ದಾಗಲೇ ನಟಿ ಇದ್ದಕ್ಕಿದ್ದಂತೆ ಮಾಯವಾದರು ಎಂದೇ ಹೇಳಬಹುದು. ಹಿಂದೊಮ್ಮೆ ಇವರ ಎಂಗೇಜ್ಮೆಂಟ್ ವಿಷಯ ಕೇಳಿ ಬಂದಿತ್ತು. ನಂತರ ನಟಿ ಮದುವೆ ಬಗ್ಗೆ ಎಲ್ಲೂ ಪ್ರಸ್ತಾಪವಿರಲಿಲ್ಲ ಮತ್ತು ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳಲಿಲ್ಲ ಸರಿಯಾದ ಕಾರಣ ತಿಳಿಯದೆ ಅನೇಕರು ಅವರನ್ನು ಮರೆತೆ ಬಿಟ್ಟಿದ್ದರು.
ಈಗ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ನಲ್ಲಿ (Social Media) ಎಲ್ಲಾ ತಾರೆಗಳು ಕಾಣಿಸಿಕೊಳ್ಳುವ ಹಾಗೆ ನಟಿ ಕೂಡ ಆಕ್ಟಿವ್ ಆಗಿದ್ದಾರೆ ನಟಿ ಬಗ್ಗೆ ಹುಡುಕಾಡುತ್ತಿದ್ದ ಅಭಿಮಾನಿಗಳಿಗೆ ಇದು ಸಂತೋಷದ ಸುದ್ದಿಯಾಗಿದೆ. ನಟಿ instagram ಖಾತೆಯಲ್ಲಿ ಶೇರ್ ಮಾಡಿರುವ ಕೆಲ ಫೋಟೋಗಳ ಮೂಲಕ ನಟಿ ಈಗಾಗಲೇ ಮದುವೆಯಾಗಿದ್ದಾರೆ, ಮುದ್ದು ಮಕ್ಕಳ ಜೊತೆಗೆ ಸಂಸಾರದಲ್ಲಿ ಸಂತೋಷದಿಂದ ಇದ್ದಾರೆ ಎಂದು ಕಂಡುಬಂದಿದೆ.
ಬಲವಾದ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಆಕೆ ಎಂಗೇಜ್ಮೆಂಟ್ ಸುದ್ದಿ ನಿಜವಾಗಿತ್ತು, 2010ರಲ್ಲಿಯೇ ಡೊಮಿನಿಕ್ ಪ್ರಭು ಎಂಬುವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡು ರಾಜ್ಯದ ಮಾಹಿತಿ ತಂತ್ರಜ್ಞಾನ ವೃತ್ತಿಪರರಾದ ಪ್ರಭು ಅವರನ್ನು 2010ರ ಏಪ್ರಿಲ್ 25ರಂದು ವಿವಾಹವಾಗಿದ್ದರು, ದಂಪತಿಗೆ ಒಬ್ಬ ಮಗಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಪತಿ ಹಾಗೂ ಮಕ್ಕಳ ಜೊತೆಗೆ ಈಗ ಸಿಂಧು ಮೆನನ್ ವಿದೇಶದಲ್ಲಿ ನೆಲೆಸಿದ್ದಾರೆ. ಯುನೈಟೆಡ್ ಕಿಂಗ್ಡಮ್ನಲ್ಲಿ ತಮ್ಮ ಬೀಡು ಬಿಟ್ಟಿರುವ ನಟಿ ಸಾಮಾಜಿಕ ಜಾಲತಾಣದ ಮೂಲಕ ಭಾರತದ ಅಭಿಮಾನಿಗಳ ಜೊತೆ ಇನ್ನು ಸಹ ನಂಟು ಉಳಿಸಿಕೊಂಡಿದ್ದಾರೆ. ಸಿಂಧು ಅವರು ಆಗಾಗ ಹಂಚಿಕೊಳ್ಳುವ ಅವರ ಕುಟುಂಬದ ಫೋಟೋಗಳಿಗೆ ಇಲ್ಲಿನ ಅಭಿಮಾನಿಗಳು ತಪ್ಪದೇ ಲೈಕ್ ಕಮೆಂಟ್ ಮಾಡುತ್ತಿರುತ್ತಾರೆ.
ಆದರೆ ಇನ್ನು ಅನೇಕ ಅವರ ಅಭಿಮಾನಿಗಳಿಗೆ ಅವರು ಭಾರತದಲ್ಲಿಲ್ಲ ಎನ್ನುವ ವಿಚಾರವೇ ತಿಳಿದಿಲ್ಲ. ಎಷ್ಟೋ ಜನ ಬಿಗ್ ಬಾಸ್ (Bigboss) ಸುದ್ದಿ ಬಂದಾಗೆಲೆಲ್ಲಾ ಈ ನಟಿಯನ್ನು ಕೂಡ ನೆನಸಿಕೊಂಡು ಸಿಂಧು ಮೆನನ್ ಅವರನ್ನು ಬಿಗ್ ಬಾಸ್ ಗೆ ಕರೆಸಿ ಎನ್ನುತ್ತಿರುತ್ತಾರೆ. ನೀವು ಕೂಡ ಈ ರೀತಿ ಎಂದಾದರು ಬಿಗ್ ಬಾಸ್ ಮನೆಯಲ್ಲಿ ಸಿಂಧು ಮೆನನ್ ನೋಡಬೇಕು ಎಂದು ಬಯಸಿದ್ದಿರೇ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.