ಸೆಲೆಬ್ರಿಟಿಗಳ ವಿಚಾರ ಯಾವಾಗಲೂ ಸುದ್ದಿಯಲ್ಲಿರುತ್ತದೆ, ಸೆಲೆಬ್ರೆಟಿಗಳ ಪ್ರತಿಯೊಂದು ವಿಷಯವನ್ನು ಕೂಡ ಮೀಡಿಯಾಗಳು ಗಮನಿಸುತ್ತಿರುತ್ತವೆ ಹಾಗೂ ಅವರ ಅಪಾರ ಅಭಿಮಾನಿ ಬಳಗ ಕೂಡ ತಮ್ಮ ನೆಚ್ಚಿನ ನಟ ನಟಿಯರ ಬಗ್ಗೆ ತಿಳಿದುಕೊಳ್ಳಲು ಸದಾ ಕಾತುರದಿಂದ ಇರುತ್ತಾರೆ. ಅವರ ಕುಟುಂಬದ ಬಗ್ಗೆ ಕೂಡ ತಿಳಿದುಕೊಳ್ಳಲು ಆಸಕ್ತಿ ತೋರುತ್ತಾರೆ.
ಸದ್ಯಕ್ಕೆ ಭಾರತದಲ್ಲಿ ಪ್ರತಿಷ್ಠಿತ ಕುಟುಂಬ ಎನಿಸಿಕೊಂಡ ಬಿ ಟೌನ್ ಬಿಗ್ ಬಾಸ್ ಬಚ್ಚನ್ ಅವರ ಕುಟುಂಬದ ಕುಡಿಯ ಕುರಿತು ಮಾತನಾಡುತ್ತಿದ್ದೇವೆ. ಅಮಿತಾಭ್ ಬಚ್ಚನ್ ಅವರ ಕುಟುಂಬ ತಾರೆಗಳಿಂದ ತುಂಬಿಕೊಂಡಿದೆ. ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯ ರೈ ಬಚ್ಚನ್, ಅಮಿತಾಬ್ ಬಚ್ಚನ್ ಸಿನಿಮಾರಂಗದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ.
ಹೀಗಾಗಿ ಭಾರತದ ಪ್ರತಿಯೊಬ್ಬರಿಗೂ ಪರಿಚಿತವಿರುವ ಪರಿವಾರ ಎಂದೇ ಹೇಳಬಹುದು ಇದರಲ್ಲಿ ಐಶ್ವರ್ಯ ರೈ ಅವರ ವಿಚಾರ ಇನ್ನು ಸ್ವಲ್ಪ ಹೆಚ್ಚಿನ ನಮಗೆ ಕನೆಕ್ಟ್ ಆಗುತ್ತದೆ. ಯಾಕೆಂದರೆ, ಕರ್ನಾಟಕದ ಮೂಲದವರಾದ ಐಶ್ವರ್ಯ ರೈ ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸುತ್ತಾ ಬದುಕು ಕಂಡುಕೊಂಡವರು.
1994ರಲ್ಲಿ ವಿಶ್ವ ಸುಂದರಿ ಎನ್ನುವ ಕಿರೀಟ ಕೂಡ ಮುಡಿಗೇರಿಸಿಕೊಂಡ ಈಕೆ ಈಗ ಅಭಿಷೇಕ್ ಅವರನ್ನು ಕೈ ಹಿಡಿದು ಅಮಿತಾಬ್ ಬಚ್ಚನ್ ಮನೆ ಸೊಸೆ ಆಗಿದ್ದಾರೆ. ಈಗಲೂ ಕೂಡ ಸದಾ ಬೇಡಿಕೆಯಲ್ಲಿರುವ ನಟಿಯಾಗಿರುವ ಐಶ್ವರ್ಯ ರೈ ಅವರ ಸಿನಿಮಾ ರಿಲೀಸ್ ಆಗುವುದನ್ನು ಅವರ ಅಸಂಖ್ಯಾತ ಅಭಿಮಾನಿಗಳು ಕಾಯುತ್ತಿರುತ್ತಾರೆ.
ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷ ಸಾಕು ಎಚ್ಚರಿಕೆ ನೀಡಿದ NTK ಮುಖ್ಯಸ್ಥ ಸೀಮಾನ್.!
ಇನ್ನು ಕೂಡ ಅದೇ ಗ್ಲಾಮರಸ್ ಉಳಿಸಿಕೊಂಡಿರುವ ಐಶ್ವರ್ಯ ರೈ ಅವರು ಎಂದಿಗೂ ಮಾರ್ಕೆಟ್ ಕಡಿಮೆಯಾದ ನಟಿಯಾಗಿದ್ದಾರೆ. ಆದ್ದರಿಂದ ನಾವು ಐಶ್ವರ್ಯ ಪುತ್ರಿ ಆರಾಧ್ಯ ಬಚ್ಚನ್ ಅವರ ಕುರಿತು ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನಾವು ಅನೇಕ ವಿಡಿಯೋಗಳಲ್ಲಿ ಫೋಟೋಶೂಟ್ ಗಳಲ್ಲಿ ಈ ಅಮ್ಮ ಮಗಳ ಜೋಡಿಯನ್ನು ನೋಡಿರುತ್ತೇವೆ.
ಅದರಲ್ಲಿ ಬಹುತೇಕ ಐಶ್ವರ್ಯ ರೈ ಅವರು ಸದಾ ತಮ್ಮ ಮಗಳನ್ನು ಕ್ಯಾಮರಗಳಿಂದ ರಕ್ಷಿಸುವ ದೃಶ್ಯವನ್ನೇ ಕಂಡಿದ್ದೇವೆ. ಹಾಗಾಗಿ ಇವರ ಬಗೆಗಿನ ಕುತೂಹಲ ಇನ್ನಷ್ಟು ಹೆಚ್ಚಾಗುತ್ತದೆ. ಆರಾಧ್ಯ ಅವರು ಈಗ ಎಂಟನೇ ತರಗತಿ ಓದುತ್ತಿದ್ದಾರೆ. ಇವರ ಸ್ಕೂಲ್ ಫೀಸ್ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಆರಾಧ್ಯ ಬಚ್ಚನ್ ಅವರು ದೇಶದ ಪ್ರತಿಷ್ಠಿತ ಶಾಲೆಯಾದ ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.
ಮಾಡ್ರನ್ ಡ್ರೆಸ್ ಧರಿಸಿದ್ದರು ಮಾಂಗಲ್ಯ ತೆಗೆಯದ ನಟಿ ಹರ್ಷಿಕಾ, ಶಭಾಷ್ ಎಂದ ನೆಟ್ಟಿಗರು.!
ಈ ಶಾಲೆಯಲ್ಲಿ ಏಳನೇ ತರಗತಿವರೆಗೂ ಪ್ರತಿ ವರ್ಷ 1.71 ಲಕ್ಷ ಶುಲ್ಕವಿರುತ್ತದೆ, 8-10ನೇ ತರಗತಿವರೆಗೆ 4.48 ಲಕ್ಷ ರೂ. ಮತ್ತು 11 ಹಾಗೂ 12ನೇ ತರಗತಿಗೆ 9.65 ಲಕ್ಷ ಶುಲ್ಕವಿದೆ. ಈ ಶಾಲೆಯಲ್ಲಿ ಆ ಹಣಕ್ಕೆ ತಕ್ಕ ಹಾಗೆ ವಿದ್ಯಾಭ್ಯಾಸವನ್ನು ಕೂಡ ನೀಡುತ್ತಾರೆ. ನುರಿತ ಶಿಕ್ಷಕ ತಂಡದಿಂದ ಬೋಧನೆ, ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ವಿಶೇಷವಾದ ಕಾಳಜಿ ಮತ್ತು ಗಮನ.
ಅತ್ಯುತ್ತಮ ಪಠ್ಯಕ್ರಮ, ಅತ್ಯಾಧುನಿಕ ಸೌಲಭ್ಯಗಳು ಪಠ್ಯೇತರ ಚಟುವಟಿಕೆಯಾಗಿ ಕಲೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ತರಬೇತಿ ಸೇರಿದಂತೆ ಎಲ್ಲವನ್ನು ಕಲಿಸಲಾಗುತ್ತದೆ. ಜೊತೆಗೆ ಸೆಲೆಬ್ರಿಟಿ ಮಗಳಾಗಿರುವ ಕಾರಣ ಆರಾಧ್ಯ ಬಚ್ಚನ್ ಅವರಿಗೆ ಹೆಚ್ಚಿನ ಭದ್ರತೆ ಕೂಡ ಒದಗಿಸಬೇಕಾಗುತ್ತದೆ. ಇದೆಲ್ಲವನ್ನು ಒಳಗೊಂಡಂತೆ ಒಂದು ವರ್ಷಕ್ಕೆ ಮಗಳ ಶಾಲೆಯ ಖರ್ಚಿಗಾಗಿ 5 ಲಕ್ಷ ಹಣವನ್ನು ಐಶ್ವರ್ಯ ರೈ ಅವರು ಖರ್ಚು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸಿದ್ರೆ, ಅವರು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಾರೆ.!