ಡಿ ಬಾಸ್ (D Boss) ಎಂದರೆ ಹಾಗೆ ಸ್ನೇಹಜೀವಿ ಮತ್ತು ಪ್ರೀತಿ ತುಂಬಿದ ಮನಸ್ಸು. ಯಾವುದೇ ರೀತಿಯ ಕಲ್ಮಶ ಇಲ್ಲದ ಈ ಮುಗ್ಧ ಹೃದಯ ಸಾಧ್ಯವಾದಷ್ಟು ಪ್ರತಿಯೊಬ್ಬರಿಗೂ ನೆರವಾಗಬೇಕು ಎಂದು ಬದುಕುತ್ತದೆ. ಅದು ಅವರ ಪ್ರೀತಿಯ ಸೆಲಬ್ರೆಟಿಗಳಿಗೇ ಆಗಿರಲಿ ಅಥವಾ ಸಿನಿಮಾರಂಗದವರಿಗೇ ಆಗಿರಲಿ ಹೀಗಾಗಿ ದರ್ಶನ್ ಅವರು ಅಂಬಿಯ ನಂತರ ಚಿತ್ರರಂಗದಲ್ಲಿ ಎರಡನೆಯ ಕರ್ಣ ಎನ್ನಬಹುದು.
ಇದಕ್ಕೆ ಅನೇಕ ಉದಾಹರಣೆಗಳನ್ನು ನಾವು ಈಗಾಗಲೇ ಸಾಕ್ಷಿಯಾಗಿ ಕಂಡಿದ್ದೇವೆ ಆದರೆ ಇದನ್ನು ಮೀರಿ ಬಲಗೈಕೆ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂದು ಸಾಕಷ್ಟು ಉಪಯೋಗವನ್ನು ಸಮಾಜಕ್ಕಾಗಿ ಹಾಗೂ ತಮ್ಮ ಸಹಕಲಾವಿದರಿಗಾಗಿ ಮಾಡಿದ್ದಾರೆ ಎನ್ನುವುದು ಖಂಡಿತ ಸತ್ಯ.
ಲವ್ಲಿ ಸ್ಟಾರ್ ಪ್ರೇಮ್ ನಿಂದ ಹಿಡಿದು ರಚಿತಾ ರಾಮ್ ಅವರು ಇಂಡಸ್ಟ್ರಿಗೆ ಬರುವ ಅವಕಾಶ ಕೊಟ್ಟಿದ್ದು ಸೇರಿ ಈ ರೀತಿಯಾಗಿ ಸಾಕಷ್ಟು ಕಲಾವಿದರು ಇವರ ತೂಗುದೀಪ ಪ್ರೊಡಕ್ಷನ್ ವತಿಯಿಂದ ಬೆಳೆದಿದ್ದಾರೆ. ಈಗ ಶ್ರೀಮುರಳಿ (ShriMurali) ಅವರು ಕೂಡ ದರ್ಶನ್ ಅವರು ಎಷ್ಟೆಲ್ಲಾ ಉಪಯೋಗ ಮಾಡಿ ಕೊಟ್ಟರು ಎನ್ನುವುದರ ಬಗ್ಗೆ ಮುಕ್ತವಾಗಿ ಖಾಸಗಿ ವಾಹಿನಿಯ ರಿಯಾಲಿಟಿ ಶೋ ವೇದಿಕೆ ಮೇಲೆ ಬಹಳ ಧನ್ಯತಾ ಮನೋಭಾವದಿಂದ ಹೇಳಿಕೊಂಡಿದ್ದಾರೆ.
ಶ್ರೀಮುರಳಿ, ಚಂದ್ರ ಚಕೋರಿ, ಕಂಠಿ ಯಶ್ವಂತ್ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಮುನ್ನುಗ್ಗುತ್ತಿದ್ದ ನಟ ಮುರುಳಿ ಆದರೆ ಇದ್ದಕ್ಕಿದ್ದಂತೆ ಏನಾಯ್ತೋ ಒಂದೇ ಬಾರಿಗೆ ಅವರು ಮಾಡುತ್ತಿದ್ದ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಲು ಶುರುವಾದವು ತಮ್ಮನಿಗಿಂತ ಮುಂದೆ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿ ಕಾಲೇಜು ಹೆಂಗಳೆಯರ ಡ್ರೀಮ್ ಬಾಯ್ ಎಂದು ಕರೆಸಿಕೊಂಡಿದ್ದ ವಿಜಯ ರಾಘವೇಂದ್ರ (Vijaya Ragavendra) ಕೂಡ ಕೆಲವು ವರ್ಷಗಳು ಕಾಲ ಟಾಪ್ ನಲ್ಲಿ ಇದ್ದು ಒಂದೇ ಬಾರಿಗೆ ಕುಸಿದು ಬಿಟ್ಟರು.
ಸಾಲದಕ್ಕೆ ಕಿಸ್ಮತ್ (Kismath) ಸಿನಿಮಾಗೆ ಡೈರೆಕ್ಷನ್ ಹಾಗೂ ನಿರ್ಮಾಣ ಮಾಡಲು ಹೋಗಿ ಆಸ್ತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದರು. ಪರಿಣಾಮವಾಗಿ ವಿಜಯರಾಘವೇಂದ್ರ ಅವರ ತಂದೆ ಚಿನ್ನಸ್ವಾಮಿ ಅವರು ಮನೆ ಮಾರಬೇಕಾಗಿ ಬಂತು ಕೂಡು ಕುಟುಂಬ ಒಡೆದು ಎಲ್ಲರೂ ಪ್ರತ್ಯೇಕವಾಗಿ ವಾಸಿಸಬೇಕಾದ ಸ್ಥಿತಿ ಬಂತು.
ನಂತರ ಶ್ರೀ ಮುರುಳಿ ಅದೃಷ್ಟ ಬದಲಾಯಿಸಲು ತಯಾರಾದ ಸಿನಿಮಾ ಉಗ್ರಂ(Ugram). ಶ್ರೀಮುರಳಿ ಅವರಿಗೆ ಹತ್ತಿರದ ಸಂಬಂಧಿಕರೇ ಆದ ಇಂದು ಪಾನ್ ಇಂಡಿಯಾ ಡೈರೆಕ್ಟಾಗಿ ಎಂದು ಕರೆಸಿಕೊಂಡಿರುವ ಪ್ರಶಾಂತ್ ನೀಲ್ (Prashanth Neel) ಅವರು ಶ್ರೀಮುರಳಿಗಾಗಿ ಉಗ್ರಂ ಸಿನಿಮಾವನ್ನು ತಯಾರಿಸಿ ಬಿಟ್ಟರು.
ಆದರೆ ಸಿನಿಮಾ ಡಿಸ್ಟ್ರಿಬ್ಯೂಟ್ (Cinema distribution problem) ಮಾಡಲು ಯಾರು ಒಪ್ಪುತ್ತಿರಲಿಲ್ಲ. ಎಷ್ಟೇ ಪ್ರೀಮಿಯಂ ಶೋಗಳನ್ನು ಅರೆಂಜ್ ಮಾಡಿದರು ಬಂದವರು ಸಿನಿಮಾ ಹೊಗಳಿ ಹೋಗುತ್ತಿದ್ದರು ಹೊರತು ಹೊಸ ಡೈರೆಕ್ಟರ್ ನಂಬಿ ಹಣ ಹಾಕಲು ಅಥವಾ ಮುರಳಿಗೆ ಮತ್ತೊಂದು ಚಾನ್ಸ್ ಕೊಡಲು ಮನಸ್ಸು ಮಾಡುತ್ತಿರಲಿಲ್ಲ.
ಇದೇ ಸಮಯದಲ್ಲಿ ಚೆನ್ನೈನಲ್ಲಿ ಸ್ಯಾಂಡಲ್ ವುಡ್ ನೂರು ವರ್ಷದ ಸಂಭ್ರಮ ಆಚರಿಸಿಕೊಳ್ಳುವ ಕಾರ್ಯಕ್ರಮ ಇತ್ತು. ಕಾರ್ಯಕ್ರಮದಲ್ಲಿ ದರ್ಶನ್ ಅವರನ್ನು ಕಂಡ ಮುರಳಿ ಅವರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರಂತೆ. ಈ ರೀತಿ ಉಗ್ರಂ ಸಿನಿಮಾ ಮಾಡಿದ್ದೇವೆ ನೀವು ನೋಡಿ ಹಾಗೂ ತಪ್ಪದೆ ನಿಮ್ಮ ತೂಗುದೀಪ ಪ್ರೊಡಕ್ಷನ್ ಇಂದ ವಿತರಣೆ ಮಾಡಿಕೊಡಿ ನಮ್ಮ ಸಿನಿಮಾ ಯಾರೂ ಕೊಂಡುಕೊಳ್ಳಲು ತಯಾರಿಲ್ಲ ಎಂದು ಕೇಳಿಕೊಂಡರಂತೆ.
ಸಿನಿಮಾ ನೋಡುವ ಮುನ್ನವೇ ಅವರು ಹೇಳಿದ ಒಂದೇ ಮಾತಿಗೆ ತಕ್ಷಣ ಹಿಂದು ಮುಂದು ಯೋಚಿಸದೆ ಒಪ್ಪಿಕೊಂಡು ಅಂದಿನಿಂದ ಸಿನಿಮಾ ಪ್ರಚಾರಕ್ಕೂ ಇಳಿದರು ದರ್ಶನ್. ನಂತರ ದರ್ಶನ್ ಆ ಸಿನಿಮಾದ ವಿತರಣೆ ಹಕ್ಕು ಹೊತ್ತಿಕೊಂಡು ಗೆಲ್ಲಿಸಿದರು, ಇಂದಿಗೆ 10 ವರ್ಷ ಕಳೆದರೂ ಅದೇ ಸಿನಿಮಾ ಮತ್ತೆ ರೀಮೇಕ್ ಆಗಿ ತೆಲುಗಿನಲ್ಲಿ ಮೂಡಿ ಬಂದು ಪ್ರಭಾಸ್ ಅವರಿಗೂ ಕೂಡ ಫಿನಿಕ್ ರೀತಿ ಎದ್ದು ಬರುವ ಶಕ್ತಿ ಕೊಡುತ್ತಿದೆ.
ಮತ್ತು ಪ್ರಶಾಂತ್ ನೀಲ್ ನಂತಹ ಡೈರೆಕ್ಟರ್ ನಂಬಿ ಕನ್ನಡ ಮಾತ್ರವಲ್ಲದೇ ಎಲ್ಲಾ ಇಂಡಸ್ಟ್ರಿಯಲ್ಲೂ ಹಣ ಹೂಡುತ್ತಿದ್ದಾರೆ ಎಂದರೆ ದರ್ಶನ್ ಕಾರಣ. ಉಗ್ರಂ ಸಿನಿಮಾ ಗೆದ್ದ ಕಾರಣಕ್ಕೆ KGF ಹಾಗೂ ಆ ಮೂಲಕ ಕನ್ನಡ ಇಂಡಸ್ಟ್ರಿ ಗ್ಲೋಬಲ್ ಲೆವೆಲ್ ಗೆ ಬೆಳೆಯಲು ಸಾಧ್ಯವಾಯಿತು. ಇದರ ಜೊತೆಗೆ ಮುರಳಿ ಅವರ ಹೆಸರಿನಲ್ಲಿ ಮದಗಜ ಸಿನಿಮಾ ತಯಾರಾಗುತ್ತಿದ್ದಾಗ ಅನೇಕರು ಇದಕ್ಕೆ ಅಡ್ಡಿಪಡಿಸಿದ್ದರು, ಗಜ ದರ್ಶನ್ ಅವರು ಮಾಡಿದ್ದಾರೆ ಮದಗಜ ಮುರಳಿ ಮಾಡಬಾರದು ಎಂದು ಹೇಳುತ್ತಿದ್ದರು.
ಆಗಲು ಸಹ ತಕರಾರು ಇಲ್ಲದೆ ಟೈಟಲ್ ಮುರಳಿಗೆ ಬಿಟ್ಟು ಕೊಟ್ಟಿದ್ದರು ದಚ್ಚು. ಇದು ದರ್ಶನ್ ಒಳ್ಳೆಯತನಕ್ಕೆ ಕೊಡುವ ಗೌರವ ಇವರ ಇದೇ ಗುಣ ಇಂದು ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದುವಂತೆ ಮಾಡಿರುವುದು. ದರ್ಶನ್ ರವರು ನೂರು ಕಾಲ ಸಂತೋಷವಾಗಿ ಬದುಕಲಿ ಆ ಮೂಲಕ ಇನ್ನಷ್ಟು ಜನರ ಬಾಳು ಬೆಳಗುವಂತಾಗಲಿ.