ನಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಎಂದರೆ ಚಂದನವನದ ಹಿರಿಯ ದಿಗ್ಗಜ ನಟರು. ಇವರು ಒಂದು ಸಿನಿಮಾವನ್ನು ರಿಜೆಕ್ಟ್ ಮಾಡಿರುತ್ತಾರೆ. ಇಂತಹ ಸ್ಟಾರ್ ನಟರೇ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಿ ಹೊಸ ಚರಿತ್ರೆಯನ್ನೇ ಸೃಷ್ಟಿಸುತ್ತಾರೆ. ಆ ಸಿನಿಮಾ ಯಾವುದು? ಅದರಲ್ಲಿ ರವಿಮಾಮ ಅವರ ಪಾತ್ರವೇನಾಗಿತ್ತು? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದುವುದರ ಮೂಲಕ ತಿಳಿದುಕೊಳ್ಳಿ.
ಚಿತ್ರಕಥೆಗಳನ್ನು ಎಲ್ಲಾ ನಟರು ಒಂದೇ ರೀತಿಯ ದೃಷ್ಟಿ ಕೋನಗಳಿಂದ ನೋಡುವುದಿಲ್ಲ. ಪ್ರತಿಯೊಬ್ಬರ ಅಭಿಪ್ರಾಯವು, ತಾನು ಈ ರೀತಿಯಾದ ಪಾತ್ರವನ್ನು ಮಾಡಬೇಕೆಂಬ ಕನಸುಗಳು ವಿಭಿನ್ನವಾಗಿಯೇ ಇರುತ್ತವೆ. ಒಬ್ಬ ಸ್ಟಾರ್ ನಟ ಅಥವಾ ನಟಿಯರಿಗಾಗಿ ಬರೆದ ಕಥೆಯನ್ನು ಬೇರೊಬ್ಬ ಸ್ಟಾರ್ ನಟ/ನಟಿ ಅಭಿನಯಿಸಿ ಚಿತ್ರವನ್ನು ಗೆಲ್ಲಿಸಿರುವ ಉದಾಹರಣೆಗಳು ಚಿತ್ರರಂಗದಲ್ಲಿ ಸಾಕಷ್ಟಿವೆ. ಅದೇ ರೀತಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಸ್ಟಾರ್ ನಟರು ನಿರಾಕರಿಸಿದ ಚಿತ್ರವನ್ನು ಒಪ್ಪಿಕೊಂಡು ಸಮಸ್ತ ಕನ್ನಡಿಗರ ಮನ ಅಪ್ಪುವಂತೆ ಮಾಡಿದ್ದರು.
ರವಿಚಂದ್ರನ್ ಅವರು ಚಿತ್ರರಂಗವನ್ನು ಗೌರವದಿಂದ ನೋಡುವಂತಹ ವ್ಯಕ್ತಿ ಎಂಬುದು ನಿಮಗೆಲ್ಲರಿಗೂ ತಿಳಿದೆ ಇದೆ. ಸಿನಿಮಾವನ್ನು ಜನ ಮೆಚ್ಚುವಂತೆ ಮಾಡಬೇಕು ಎಂಬುದೇ ಇವರ ಹಠ. ಹೆಚ್ಚಿನ ಸಂಖ್ಯೆಯಲ್ಲಿ ಪರಭಾಷಾ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿರುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಚಿತ್ರದಲ್ಲಿ ಅಳವಡಿಸುವ ಕಲೆಗಾರ ಇವರು. ರವಿಚಂದ್ರನ್ ಅವರ ಚಿತ್ರಗಳೆಂದರೆ ಜನರ ಮನಸ್ಸಿನ ಆಳಕ್ಕೆ ಮೊದಲು ಇಳಿಯುವುದು ಇವರ ಚಿತ್ರದ ಹಾಡುಗಳು.
ಸಿನಿಮಾ ನಿರ್ಮಾಣದಲ್ಲಿ ಎಂತಹ ಸವಾಲುಗಳೇ ಎದುರಾದರು ಜಗ್ಗದೆ ಬಗ್ಗದೆ ಮುನ್ನಡೆಯುವುದೊಂದೆ ರವಿಚಂದ್ರನ್ ಅವರ ಗುರಿ. ರವಿಚಂದ್ರನ್ ಅವರ ಇಂತಹ ಗುಣಗಳು ಮತ್ತು ಛಲವೇ ಅವರನ್ನು ಜನರು ಎಂದಿಗೂ ಹಾಡಿ ಹೊಗಳಿ ಮನಸ್ಸಿನಲ್ಲಿ ಇರಿಸಿಕೊಂಡಿರಲು ಕಾರಣ ಎನ್ನಬಹುದು. ಕನ್ನಡ ಚಿತ್ರರಂಗದ ಮೇಲೆ ಸಾಕಷ್ಟು ಆಸಕ್ತಿಯನ್ನು ರವಿಚಂದ್ರನ್ ಅವರು ಬೆಳೆಸಿಕೊಂಡಿದ್ದರು.
ಹೀಗಿರಲು ಅದೊಂದು ಸಿನಿಮಾವನ್ನು ಸ್ಟಾರ್ ನಟರು ನಿರಾಕರಿಸಿರುವ ವಿಷಯವು ರವಿಮಾಮ ಅವರ ಕಿವಿ ತಲುಪುತ್ತದೆ. ಆ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ತಾನೇ ಹೊರಬೇಕೆಂದು ನಿರ್ಧರಿಸಿ ತಂದೆ ವೀರಸ್ವಾಮಿಯವರ ಬಳಿಯಲ್ಲಿ ಒಪ್ಪಿಗೆಯನ್ನು ಕೇಳುತ್ತಾರೆ. ಆದರೆ ಸ್ವಾಮಿಯವರು ಇದನ್ನು ಒಪ್ಪಲೆ ಇಲ್ಲ. ಆದರೂ ಹಠಬಿಡದೆ ರವಿಚಂದ್ರನ್ ಅವರು ಆ ಚಿತ್ರವನ್ನು ನಿರ್ಮಾಣ ಮಾಡಿ ಗೆಲ್ಲುತ್ತಾರೆ.
ಆ ಚಿತ್ರ ಬೇರೆ ಯಾವುದೂ ಅಲ್ಲ. ಚಕ್ರವ್ಯೂಹ. ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಅಂಬಿಕಾ ಅವರು ನಾಯಕ ನಾಯಕ್ಯರಾಗಿ ತೆರೆಯ ಮೇಲೆ ಕಾಣಿಸಿಕೊಂಡ ಚಿತ್ರವಿದು. 1983 ರಲ್ಲಿ ತೆರೆಕಂಡ ಈ ಚಿತ್ರವು ಬಹುದೊಡ್ಡ ಮಟ್ಟದಲ್ಲಿ ಗೆಲುವನ್ನು ಕಂಡಿತ್ತು. ಹೂಡಿಕೆ ಮಾಡಿದ ಹಣದ ದುಪ್ಪಟ್ಟು ಲಾಭವನ್ನು ಗಳಿಸಿ ಗೆದ್ದು ಬೀಗಿದ ರವಿಚಂದ್ರನ್ ಅವರಿಗೆ ಅವರ ತಂದೆ, ವೀರ ಸ್ವಾಮಿಯವರ ಶ್ಲಾಘನೆಗಳು ದೊರಕಿತ್ತು.
” ಚಳಿ ಚಳಿ ತಾಳೆನು ಈ ಚಳಿಯಾ.. ಆಹಾ.. ಓಹೋ” ಈ ಹಾಡಿನ ಸಾಲುಗಳನ್ನು ಗುನುಗದವರೇ ಇರಲಿಲ್ಲ. ಪ್ರತಿಯೊಬ್ಬರೂ ಈ ಚಿತ್ರವನ್ನು ಇಷ್ಟಪಟ್ಟು ಚಪ್ಪಾಳೆ ಹೊಡೆದಿದ್ದರು. ರವಿಚಂದ್ರನ್ ಅವರು ಸಿನಿಮಾ ಮಾಡುವಲ್ಲಿ ತೋರಿದ ಒಲವೇ ಅವರನ್ನು ಎತ್ತರದ ಮಟ್ಟಕ್ಕೆ ಕೊಂಡೊಯ್ದ್ದಿತ್ತು. ಹೀಗೆ ರವಿಚಂದ್ರನ್ ಅವರು ನಡೆದು ಬಂದಿರುವ ದಾರಿಯಲ್ಲಿ ರೋಚಕ ಕಥೆಗಳು ಅಡಗಿವೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.