ಭಾರತ್ ಜೋಡೋ ಯಾತ್ರೆ (Bharath jodo) ಕಾರ್ಯಕ್ರಮ ಮುಗಿದ ಮಾತ್ರಕ್ಕೆ ರಾಹುಲ್ ಗಾಂಧಿಯವರ (Rahul Gandhi) ಯಾತ್ರೆ ಮುಗಿದಿಲ್ಲ, ಬಹಳ ವಿಶೇಷವಾದ ರೀತಿಯಲ್ಲಿ ಮತ್ತೆ ಮತ್ತೆ ಅವರು ಜನರ ನಡುವೆ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳಗಳ ಹಿಂದೆ ಗ್ಯಾರೇಜ್ ಒಂದರಲ್ಲಿ ಮೆಕಾನಿಕ್ ಜೊತೆ ಸಮಯ ಕಳೆದು ನಂತರ ಮಧ್ಯರಾತ್ರಿಯಲಿ ಲಾರಿ ಡ್ರೈವರ್ ಜೊತೆ ಹೈವೇಯಲ್ಲಿ ಡೈವರ್ ಸೀಟ್ ಪಕ್ಕದಲ್ಲಿ ಕುಳಿತು ಪ್ರಯಾಣ ಬೆಳೆಸಿ ಡ್ರೈವರ್ ನ ಕ’ಷ್ಟ ಸುಖ ಅರಿಯುವ ಪ್ರಯತ್ನ ಮಾಡಿದ್ದರು.
ಈಗ ಕೆಲವು ದಿನಗಳ ಹಿಂದೆಯಷ್ಟೇ ಗದ್ದೆಗಿಳಿದು ರೈತರ ಸಮಸ್ಯೆಗಳನ್ನು ಆಲಿಸಿ ನಾಟಿ ಕೂಡ ಮಾಡಿದ್ದರು. ಕಳೆದ ಗುರುವಾರ ಮತ್ತೊಂದು ರೂಪದಲ್ಲಿ ಪ್ರತ್ಯಕ್ಷವಾಗುವ ಮೂಲಕ ತಮ್ಮ ಭಾರತ್ ಜೋಡೋ ಯಾತ್ರೆ ಮುಂದುವರೆಯುತ್ತದೆ ಎಂದಿದ್ದಾರೆ. ಭಾರತದ ಎಲ್ಲಾ ವರ್ಗದವರ ಜೊತೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿ ಅರಿತು ಪರಿಹಾರ ಮಾಡಬೇಕು ಎನ್ನುವ ಅಭಿಲಾಷೆಯನ್ನು ಹೊಂದಿರುವ ರಾಹುಲ್ ಗಾಂಧಿಯವರು ಈ ರೀತಿಯಾಗಿ ಜನಸಾಮಾನ್ಯರ ಜೊತೆ ಬೆರೆಯುವ ಪ್ರಯತ್ನ ಮಾಡುತ್ತಿದ್ದಾರೆ.
ನಮ್ಮನ್ನ ಕೆಣಕಿದ್ರೆ ಮಸೀದಿಲೂ ಗಣೇಶನನ್ನು ಕೂರಿಸ್ತಿವಿ ಅಷ್ಟೇ, ಪ್ರಮೋದ್ ಮುತಾಲಿಕ್ ರಿಂದ ಎಚ್ಚರಿಕೆಯ ಸಂದೇಶ.!
ಇದನ್ನು ಗಮನಿಸಿ ರಾಹುಲ್ ಗಾಂಧಿಯವರ ಮನಸ್ಸನ್ನು ಅರಿತಿದ್ದ ರೈಲ್ವೆ ನಿಲ್ದಾಣಗಳಲ್ಲಿ (Railway Station) ಕೆಲಸ ಮಾಡುವ ಹಮಾಲಿಗಳು (Coolie) ಕಳೆದ ತಿಂಗಳು ತಾವು ಸಹ ರಾಹುಲ್ ಗಾಂಧಿಯವರನ್ನು ಭೇಟಿ ಆಗಬೇಕು ಅವರ ಜೊತೆ ಕುಳಿತು ಮಾತನಾಡಿ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಬಯಸಿದ್ದರು. ಈ ವಿಷಯ ರಾಹುಲ್ ಗಾಂಧಿಯವರಿಗೆ ತಿಳಿಯುತ್ತಿದ್ದಂತೆ ಕೇವಲ 36 ದಿನಗಳ ಒಳಗೆ ಹಮಾಲಿಗಳನ್ನು ಭೇಟಿ ಆಗುವ ಕೆಲಸ ಮಾಡಿದ್ದಾರೆ.
ದೆಹಲಿಯ ಆನಂದ್ ವಿಹಾರ ರೈಲ್ವೆ ನಿಲ್ದಾಣದಲ್ಲಿ ಕಾಣಿಸಿಕೊಂಡ ರಾಗಾ ಹಮಾಲಿಗಳ ಕೆಂಪು ವಸ್ತ್ರವನ್ನು (wear red shirt) ಧರಿಸಿ, ತಲೆ ಮೇಲೆ ಸೂಟ್ ಕೇಸ್, ಸಾಮಾನು ಸರಂಜುಗಳನ್ನು ಹೊತ್ತು (lift luggage) ಅವರ ಕ’ಷ್ಟ ಅರಿವ ಪ್ರಯತ್ನ ಮಾಡಿದ್ದಾರೆ. ಹಲವು ಸಮಯದವರೆಗೆ ಅವರ ಜೊತೆ ಕುಳಿತು ಸಮಸ್ಯೆಗಳನ್ನು ಆಲಿಸಿದ ಅವರು ನಂತರ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದಲೂ ಕೂಡ ಇವರನ್ನು ಭೇಟಿ ಆಗಬೇಕು ಎನ್ನುವ ಆಸೆ ಇತ್ತು.
ಪ್ರಕಾಶ್ ರಾಜ್ ಗೆ ಜೀವ ಬೆದರಿಕೆ, ವಿಕ್ರಂ ಟಿವಿ ವಾಹಿನಿ ವಿರುದ್ಧ FIR ದಾಖಲು.!
ಅವರುಗಳು ಸಹ ಬಹಳ ಪ್ರೀತಿಯಿಂದ ನನ್ನನ್ನು ಆಹ್ವಾನ ಮಾಡಿದ್ದರು, ಈ ದಿನ ಅದಕ್ಕೆ ಸಾಧ್ಯವಾಯಿತು ಬಹಳ ಕಷ್ಟಪಟ್ಟು ದುಡಿಯುವ ಅವರ ಕ’ಷ್ಟಗಳನ್ನು ಅವರಂತೆ ಇದ್ದು ಅನುಭವಿಸುವ ಪ್ರಯತ್ನ ಮಾಡಿದೆ. ಇಷ್ಟು ಸಮಸ್ಯೆಯಲ್ಲಿ ಇರುವ ಭಾರತದ ಈ ಸಹೋದರರ ಆಷೋತ್ತರಗಳನ್ನು ಯಾವುದೇ ಬೆಲೆಯನ್ನಾದರು ತೆತ್ತು ಈಡೇರಿಸಲೇಬೇಕು ಎಂದು ರಾಹುಲ್ ಗಾಂಧಿಯವರು ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನ ಕಾಂಗ್ರೆಸ್ ಪಕ್ಷದ ಅಫೀಷಿಯಲ್ ಖಾತೆಯಲ್ಲಿ (Congress share photos and video on X account) ರಾಹುಲ್ ಗಾಂಧಿಯವರು ದಿಢೀರ್ ಭೇಟಿ ಕೊಟ್ಟು ಹಮಾಲಿಗಳ ಜೊತೆ ಸಮಯ ಕಳೆದ ವಿಡಿಯೋ ಹಾಗೂ ಅವರು ಸಹ ಕೂಲಿಯಂತೆ ಸೂಟ್ ಕೇಸ್ ಹೊತ್ತು ನಡೆದ ಫೋಟೋ ಶೇರ್ ಮಾಡಲಾಗಿದೆ.
ರಾಹುಲ್ ಗಾಂಧಿ ಅವರು ಸಹಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮತ್ತು ಹಮಾಲಿಗಳ ಭೇಟಿ ಕುರಿತ ವಿಷಯವನ್ನು ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿಯವರು ಕೂಲಿಯಂತೆ ಕೆಂಪು ಶರ್ಟ್ ತೊಟ್ಟು ಸೂಟ್ ಕೇಸ್ ತಲೆ ಮೇಲೆ ಹೊತ್ತು ರೈಲ್ವೆ ನಿಲ್ದಾಣದಲ್ಲಿ ಹೆಜ್ಜೆ ಹಾಕಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಅನೇಕರು ಇದನ್ನು ಬಿಡದೆ ಟ್ರೋಲ್ ಮಾಡಿದರೆ, ಪ್ರತಿಪಕ್ಷಗಳು ಇದು ಸಹ ಚುನಾವಣೆ ಗಿಮಿಕ್ ಎಂದು ಕಾಲೆಳೆದಿವೆ.