ಸದ್ಯಕ್ಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಟ್ರೆಂಡಿಗ್ ನಲ್ಲಿರುವ ವಿಷಯ ಎಂದರೆ ಬಿಗ್ ಬಾಸ್. ಈ ಬಿಗ್ ಬಾಸ್ ಸೀಸನ್ ಆರಂಭವಾದಾಗಲಿಂದ ಮೂರು ತಿಂಗಳವರೆಗೆ ಒಂದು ದಿನವು ಎಪಿಸೋಡ್ ಮಿಸ್ ಮಾಡಿಕೊಳ್ಳದಂತೆ ನೋಡುವಷ್ಟು ಕುತೂಹಲ ಹಿಡಿದಿಟ್ಟಿರುತ್ತದೆ. ಇದಕ್ಕೆ ಕಾರಣಗಳು ಸಾಕಷ್ಟಿವೆ, ಇನ್ನು ಈ ಸೀಸನ್ ಬಗ್ಗೆ ಹೇಳುವುದಾದರ ಬಿಗ್ ಬಾಸ್ ಸೀಸನ್ 10 ಶುರುವಾಗಿ 25 ದಿನಗಳನ್ನು ಮುಗಿಸಿದೆ.
ಈಗಾಗಲೇ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಮತ್ತೊಬ್ಬರ ಬಲ ಹಾಗೂ ಬಲಹೀನತೆ ಬಗ್ಗೆ ಗುಣವಾಗುಣಗಳ ಬಗ್ಗೆ ಪರಿಚಯವಾಗಿ ಅವರವರಲ್ಲೇ ಪ್ರೀತಿ, ಸ್ನೇಹ, ದುಷ್ಮನಿ ಎಲ್ಲವೂ ಆಗಿ ಹೋಗಿದೆ. ಇನ್ನು ಟಾಸ್ಕಳ ವಿಚಾರವಾಗಿ ಹೇಳುವುದಾದರೆ ಕಳೆದ ಬಾರಿ ಎರಡು ಟಾಸ್ಕ್ ಗಳು ರದ್ದಾಗಿ ಹೋದರು ಟಾಸ್ಕ್ ವೇಳೆ ನಡೆದುಕೊಂಡ ರೀತಿಗೆ ಸಿಕ್ಕ ಕ್ಲಾಸ್ ಮಾಸ್ ಆಗಿತ್ತು.
ಈ ವಾರ ಆದರೂ ಹೊಂದಾಣಿಕೆಯಾಗಲಿ ಎನ್ನುವ ಕಾರಣಕ್ಕಾಗಿ ಬಿಗ್ ಬಾಸ್ ಮತ್ತೊಮ್ಮೆ ತಮ್ಮ ತಮ್ಮ ತಂಡದಲ್ಲೇ ಆಡುವ ಅವಕಾಶ ಹಾಗೂ ಒಪ್ಪದಿದ್ದವರಿಗೆ ಬದಲಾಯಿಸಿಕೊಳ್ಳುವ ಅವಕಾಶ ನೀಡುತ್ತಾರೆ. ಅಂತಿಮವಾಗಿ ಎರಡು ತಂಡಗಳು ತಮ್ಮ ತಂಡಗಳಲ್ಲಿ ಉಳಿದು ಈ ವಾರದ ಆಟ ಆಡಲು ಒಪ್ಪಿಕೊಂಡು ಪ್ರತಾಪ್ ಹಾಗೂ ಸಿರಿ ಎರಡು ತಂಡಗಳ ಕ್ಯಾಪ್ಟನ್ ಆಗಿ ಪ್ರತಾಪ್ ತಂಡ ಗಂಧದಗುಡಿ ಮತ್ತು ಸಿರಿ ತಂಡ ವಜ್ರಕಾಯ ಹೆಸರಿಟ್ಟುಕೊಂಡು ಅಖಾಡಕ್ಕಿಳಿದಿವೆ.
ವಾರದ ಮೊದಲ ಎರಡು ಟಾಸ್ಕ್ಗಳಲ್ಲಿ ಗಂಧದ ಗುಡಿ ತಂಡ ಗೆದ್ದಿದ್ದು ಈ ವಾರ ಸಿಕ್ಕ ವಿಶೇಷದಲ್ಲೇ ವಿಶೇಷವಾದ ಅಧಿಕಾರದ ಪ್ರಕಾರ ನಾಮಿನೇಟ್ ಆದವರಲ್ಲಿ ಪ್ರತಾಪ್ ತಂಡದಿಂದ ಭಾಗ್ಯಶ್ರೀ ಹಾಗೂ ಸಂಗೀತ ಇಬ್ಬರು ಸೇವ್ ಆಗಿ ಎದುರಾಳಿ ವಜ್ರಕಾಯ ತಂಡದಿಂದ ಸ್ನೇಹಿತ್ ಸೇಫ್ ಆಗದಂತೆ ನಿರ್ಬಂಧಿತರಾಗಿದ್ದಾರೆ.
ಈ ವಾರದ ಗೆಲುವು ಲಕ್ಸೂರಿ ಬದಲು ನೇರವಾಗಿ ನಾಮಿನೇಟ್ ಬೆಲೆ ಪರಿಣಾಮ ಬೀರುತ್ತಿರುವುದರಿಂದ ನೋಡುಗರಿಗೂ ಅಷ್ಟೇ ಕುತೂಹಲ ಮೂಡಿಸಿದೆ. ನೆನ್ನೆ ನಡೆದ ಎರಡು ಟಾಸ್ಕ್ ಗಳು ಕೂಡ ದೈಹಿಕ ಬಲದ ಬದಲು ಬುದ್ಧಿವಂತಿಕೆಯಿಂದ ಆಡುವ ಆಟವಾಗಿದ್ದು ಇಂದು ಸಹ ಅದೇ ಮುಂದುವರೆಯುವ ಲಕ್ಷಣ ಇದೆ.
ಇಂದಿನ ಪ್ರೋಮೋಗಳಲ್ಲಿ ಟಾಸ್ಕ್ ಒಂದರಲ್ಲಿ ಸಂಗೀತ್ ಹಾಗೂ ಕಾರ್ತಿಕ್ ವಿರುದ್ಧ ಎದುರಾಳಿ ತಂಡದ ನಮ್ರತ, ಇಶಾನಿ, ವಿನಯ್ ಹಾಗೂ ಸ್ನೇಹಿತ್ ಅವರು ಮಾತಿನಲ್ಲಿ ಮುಗಿಬಿದ್ದಿರುವುದು ಕಾಣುತ್ತಿದೆ. ಟಾಸ್ಕ್ ನಲ್ಲಿ ಕಾರ್ತಿಕ್ ಹಾಗೂ ಸಂಗೀತಾಗೆ ರಿಯಾಕ್ಟ್ ಮಾಡದೆ ಶಾಂತವಾಗಿರಬೇಕು ಮತ್ತು ಅವರನ್ನು ಕೆರಳಿಸಿ ರಿಯಾಕ್ಟ್ ಮಾಡುವಂತೆ ಎದುರಾಳಿ ತಂಡ ಮಾಡಬೇಕು ಎಂದು ಬಹುಶಃ ಬಿಗ್ ಬಾಸ್ ಟಾಸ್ಕ್ ಕೊಟ್ಟಿರಬಹುದು.
ಹಾಗಾಗಿ ಅವರು ಕೆರಳಿ ರಿಯಾಕ್ಟ್ ಆಗುವಂತೆ ಮಾಡಲು ಅವರ ಪರ್ಸನಲ್ ವಿಚಾರಗಳನ್ನು ವಜ್ರಕಾಯ ತಂಡದ ಸ್ಪರ್ಧಿಗಳು ಮಾತನಾಡಿದ್ದಾರೆ. ಸಂಗೀತಾಗೆ ನಮ್ರತ ಯಾರನ್ನು ಚಮಚ ಎನ್ನುತ್ತಿದ್ದೀಯ ನೀನು ಚಮಚ ಅಲ್ಲಿ ಕುಳಿತಿರುವವರು ಚಮಚ ಎಂದು ಹೇಳಿ ಕೆರಳಿಸುವ ಪ್ರಯತ್ನ ಮಾಡಿದ್ದಾರೆ, ಇನ್ನು ಕಾರ್ತಿಕ್ ಗೆ ವಿನಯ್ ಇಲ್ಲಿ ಯಾರಿಗೂ ಯಾರು ಜೊತೆಯಲ್ಲ ಸಾ.ಯುವವರೆಗೂ ಮನುಷ್ಯ ಒಬ್ಬಂಟಿ ಎಂದು ಅವರಿಬ್ಬರ ನಡುವೆ ಆಗಿದ್ದ ಮಾತುಕತೆ ನೆನಪಿಸಿ ಮಾತನಾಡಿಸುವ ಪ್ರಯತ್ನ ಮಾಡಿದರೆ.
ಸ್ನೇಹಿತ್ ತೀರ ವಿಪರೀತವಾಗಿ ಕಾರ್ತಿಕ್ ನನ್ನು ಮಾತಿನಲ್ಲಿ ಚುಚ್ಚಿದ್ದಾರೆ. ಗಂಡಸ್ತನದ ಬಗ್ಗೆ ಮಾತನಾಡುತ್ತಿಯಲ್ಲ ಮನೆಯಿಂದ ಆಚೆ ಹೋದ ಮೇಲೆ ಸ್ಲೋ ಮೋಷನ್ ನಲ್ಲಿ ನಾನು ನಿನ್ನನ್ನು ಹೇಗೆ ಕುಸ್ತಿಯಲ್ಲಿ ಎತ್ತಿ ಆಚೆ ಎಸದೆ ಎನ್ನುವುದನ್ನು ನೋಡು ಕೆಳಗೆ ಶೂ ಏನು ನೋಡುತ್ತಿದ್ದೀಯ ನಿನ್ನ ದೃಷ್ಟಿ ಅಲ್ಲಿಯೇ ಇರಬೇಕು.
ಅವಳ್ಯಾರೋ ಕರ್ನಾಟಕ ಕ್ರಶ್ ಅಂತೆ ಕ್ರ್ಯಾಶ್ ಆದವಳ ಹಿಂದೆ ಸುತ್ತುತ್ತಿದ್ದೀಯಾ ಎಂದೆಲ್ಲಾ ಹೇಳಿ ಪ್ರವೋಕ್ ಮಾಡುವ ಪ್ರಯತ್ನ ಮಾಡಿದ್ದಾರೆ. ಇದರ ಪರಿಣಾಮ ಏನಾಗುತ್ತದೆ ಎಂದು ನೋಡಲು ನಾವು ಇಂದಿನ ಎಪಿಸೋಡ್ ಟೆಲಿಕಾಸ್ಟ್ ಆಗುವವರೆಗೂ ಕಾಯಲೇಬೇಕು.
https://youtu.be/R0Fc0cxekZQ?si=T570hi5RSTTvcWcH