ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಸಾಕಷ್ಟು ಜನರಿಗೆ ಜೀರೋ ವಿದ್ಯುತ್ ಬಿಲ್ ಬಂದಿದೆ ಆದರೆ ಇನ್ನೂ ಬಹಳಷ್ಟು ಜನರಿಗೆ ಮುಂಚಿನ ದಿನಗಳಲ್ಲಿ ಬರುತ್ತಿದ್ದ ಹಾಗೆಯೇ ವಿದ್ಯುತ್ ಬೆಲ್ ಬಂದಿದೆ ಅಂದರೆ ಹಣವನ್ನು ಕಟ್ಟಲೇಬೇಕು ಎಂದು ವಿದ್ಯುತ್ ಬಿಲ್ಲನ್ನು ನೀಡಲಾಗಿದೆ ಇದರಿಂದ ಜನರಿಗೆ ಸಾಕಷ್ಟು ಗೊಂದಲಗಳು ಉಂಟಾಗುತ್ತಿದೆ.
ಬೆಸ್ಕಾಂ ಅವರು ಯಾವ ರೀತಿ ಲೆಕ್ಕ ಹಾಕುತ್ತಿದ್ದಾರೆ ಎಂದರೆ ಕಳೆದ ಏಪ್ರಿಲ್ 2022 ರಿಂದ ಮಾರ್ಚ್ 2023ರ ತನಕ ಒಂದು ವರ್ಷದಲ್ಲಿ ಸರಾಸರಿ ನೋಡಲಾಗುತ್ತಿದೆ ಆ ಒಂದು ವರ್ಷದಲ್ಲಿ ನೀವು 200 ಯೂನಿಟ್ ಕಿಂತ ಹೆಚ್ಚು ಬಳಕೆ ಮಾಡಿದ್ದರೆ ಆ ಒಂದು ವರ್ಷದಲ್ಲಿ ನೀವು ನಾಲ್ಕು ತಿಂಗಳು ಐದು ತಿಂಗಳು ಹೆಚ್ಚು ಬಳಕೆ ಮಾಡಿದ್ದರೆ ಕಳೆದ ಮೂರು ನಾಲ್ಕು ತಿಂಗಳಲ್ಲಿ ನೀವು ಕಡಿಮೆ ವಿದ್ಯುತ್ ಬಳಕೆ ಮಾಡಿದ್ದರೂ ಕೂಡ ನಿಮಗೆ ಉಚಿತ ವಿದ್ಯುತ್ ಸಿಗೋದಿಲ್ಲ.
ಗೃಹ ಜ್ಯೋತಿ ಯೋಜನೆಯಲ್ಲಿ ನೀವು ಉಚಿತ ಫಲಾನುಭವಿಗಳು ಆಗುವುದಿಲ್ಲ. ನೀವು ಜುಲೈ ತಿಂಗಳಲ್ಲಿ 100 ಯೂನಿಟ್ ಮಾತ್ರ ವಿದ್ಯುತ್ ಉಪಯೋಗ ಮಾಡಿರುತ್ತೀರಾ ಆದರೂ ಸಹ ನಿಮಗೆ ವಿದ್ಯುತ್ ಬಿಲ್ ಬಂದಿರುತ್ತದೆ ಆಗ ನಿಮಗೆ ಗೊಂದಲ ಉಂಟಾಗುತ್ತದೆ 200 ಯುನಿಟ್ ಗಿಂತ ಕಡಿಮೆ ಬಳಕೆ ಮಾಡಿದರು ಸಹ ಹಣ ಪಾವತಿ ಮಾಡಬೇಕೆ ಎಂದು ನಿಮಗೆ ಅನಿಸಬಹುದು
ಇವಾಗ ಬಂದಿರುವಂತಹ ರೂಲ್ಸ್ನ ಪ್ರಕಾರ ಬೆಸ್ಕಾಂ ಎಂಡಿ ಆದಂತಹ ಮಹಂತೇಶ್ ಬೀಳಂಗಿ ಡೈರೆಕ್ಟಾಗಿ ವಿಷಯವನ್ನು ತಿಳಿಸಿದ್ದಾರೆ. ಈಗ ನೀವು 100 ಅಥವಾ 50 ಯೂನಿಟ್ ಬಳಕೆ ಮಾಡಿರಬಹುದು ಆದರೆ ಒಂದು ವರ್ಷದಿಂದ ನೀವು 200 ಯೂನಿಟ್ ಕ್ರಾಸ್ ಮಾಡಿದ್ದಾರೆ ಅಂತಹವರಿಗೆ ಈ ಯೋಜನೆಯನ್ನು ಕೊಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದರಿಂದ ತುಂಬಾ ಜನರು ಗೃಹ ಜ್ಯೋತಿ ಯೋಜನೆಯಿಂದ ಹೊರಗೆ ಉಳಿಯುತ್ತಾರೆ ಉದಾಹರಣೆಗೆ ನೋಡುವುದಾದರೆ ನೀವು ಹೊಸದಾಗಿ ಒಂದು ಮನೆಗೆ ಬಾಡಿಗೆಗೆ ಹೋಗಿದ್ದರೆ ನಿಮಗಿಂತ ಮುಂಚೆ ಇದ್ದಂತಹ ಬಾಡಿಗೆದಾರರು 200 ಯೂನಿಟ್ ಕಿಂತ ಹೆಚ್ಚು ಬಳಕೆ ಮಾಡಿರುತ್ತಾರೆ ನೀವು ಆರು ತಿಂಗಳಿನಿಂದ 200 ಗಿಂತ ಕಡಿಮೆ ಉಪಯೋಗ ಮಾಡಿದ್ದರು ಸಹ ನಿಮಗೆ ಕರೆಂಟ್ ಬಿಲ್ ಫ್ರೀಯಾಗಿ ಸಿಗುವುದಿಲ್ಲ.
ಏಕೆಂದರೆ ಹಿಂದೆ ಬಾಡಿಗೆ ಮನೆಯಲ್ಲಿ ಇದ್ದವರು 200 ಯೂನಿಟ್ ಗಿಂತ ಹೆಚ್ಚು ವಿದ್ಯುತನ್ನು ಉಪಯೋಗ ಮಾಡಿರುತ್ತಾರೆ. ಆದ್ದರಿಂದ ನಿಮಗೆ ಉಚಿತ ವಿದ್ಯುತ್ ಸಿಗುವುದಿಲ್ಲ. ಕಾಂಗ್ರೆಸ್ ಸರ್ಕಾರ ಪ್ರಾರಂಭದ ದಿನಗಳಲ್ಲಿ ಎಲ್ಲರಿಗೂ ಸಹ ವಿದ್ಯುತ್ ಫ್ರೀ ಎಂದು ಹೇಳಲಾಗಿತ್ತು ಆದರೆ ಈ ರೀತಿಯಾದಂತಹ ಕೆಲವೊಂದಷ್ಟು ನಿಯಮಗಳನ್ನು ತಂದು ಸಾಕಷ್ಟು ಜನರು ಉಚಿತ ವಿದ್ಯುತ್ ಇಂದ ಹೊರಗೆ ಉಳಿಯುವಂತೆ ಮಾಡುತ್ತಿದ್ದಾರೆ.
ಯಾರೆಲ್ಲಾ ಜೀರೋ ಬ್ಯಾಲೆನ್ಸ್ ಬಂದಿಲ್ಲವೋ ಅಂತಹವರಿಗೆ ನಿರಾಸೆ ಖಂಡಿತವಾಗಿಯೂ ಆಗುತ್ತದೆ. ಬೆಸ್ಕಾಂ ಅವರು ಕಳೆದ ಒಂದು ವರ್ಷದಲ್ಲಿ ಉಪಯೋಗ ಮಾಡಿದಂತಹ ವಿದ್ಯುತ್ ಆಧಾರದ ಮೇಲೆ ಕರೆಂಟ್ ಬಿಲ್ಲನ್ನು ಈಗ ಪಾವತಿ ಮಾಡಬೇಕು ಅಥವಾ ಇಲ್ಲವೋ ಎಂಬುವಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇದರ ಅಡಿಯಲ್ಲಿ ಸಾಕಷ್ಟು ಜನರಿಗೆ ವಿದ್ಯುತ್ ಫ್ರೀಯಾಗಿ ಬಂದರೆ ಇನ್ನೂ ಸಾಕಷ್ಟು ಜನರಿಗೆ ಕಡಿಮೆ ವಿದ್ಯುತ್ತನ್ನು ಉಪಯೋಗಿಸಿದರು ಕೂಡ ಅವರು ಬಿಲ್ ಪಾವತಿ ಮಾಡಲೇಬೇಕು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ