ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಬಹು ಮುಖ್ಯ ಯೋಜನೆಯಾಗಿದೆ ಇದು ಹೆಣ್ಣು ಮಕ್ಕಳನ್ನು ಸಬಲೀಕರಣ ಗೊಳಿಸಬೇಕು ಎನ್ನುವಂತಹ ದೃಷ್ಟಿಯಿಂದ ಈ ಒಂದು ಯೋಜನೆಯನ್ನು ಕೈಗೊಂಡಿದ್ದು. ಗೃಹಲಕ್ಷ್ಮಿ ಯೋಜನೆಗೆ ಇದೀಗ ಒಂದು ಭರ್ಜರಿ ಗುಡ್ ನ್ಯೂಸ್ ಹೊರ ಬಂದಿದೆ ಅರ್ಜಿ ಸಲ್ಲಿಸಲು ಲಿಂಕ್ ಗಳನ್ನು ಇದೀಗ ಬಿಡುಗಡೆ ಮಾಡಲಾಗಿದೆ ಆಧಾರ್ ಸಂಖ್ಯೆ ಉಪಯೋಗಿಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಅರ್ಜಿ ತುಂಬಿಸ ಬಹುದು ಅಥವಾ ಪಡಿತರ ಚೀಟಿಯ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದು ಈ ಎರಡು ರೀತಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವಂತಹ ಸರ್ಕಾರದ ಯೋಜನೆ ಇದಾಗಿದ್ದು ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದೆ. ಸೇವಾ ಸಿಂಧೂ ನಲ್ಲಿ ನೀವು ಸರ್ವಿಸ್ ಓಪನ್ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆ ಹಾಗೆ ಗೃಹಲಕ್ಷ್ಮಿ ಫ್ರೀ ಅಪ್ಪ್ರೋಡ್ ಯೋಜನೆ ಈ ಎರಡು ಲಿಂಕ್ ಗಳನ್ನು ಓಪನ್ ಮಾಡಿಕೊಂಡು. ನೀವು ಸೇವಾ ಸಿಂಧೂಗೆ ಲಾಗಿನ್ ಆದ ನಂತರ ಈ ಯೋಜನೆಯ ಸರ್ವಿಸ್ ಪಡೆದುಕೊಳ್ಳಬಹುದು
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ನಮ್ಮ Facebook ಪೇಜ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಇದರಲ್ಲಿ ನೀವು ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ರೇಷನ್ ಕಾರ್ಡ್ ಮೂಲಕ ಸಹ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಗೃಹಲಕ್ಷ್ಮಿ ಫ್ರೀ ಅಪ್ಪ್ರೋಡ್ ಮೇಲೆ ಕ್ಲಿಕ್ ಮಾಡಿದ ನಂತರ ರೇಷನ್ ಕಾರ್ಡ್ ಅಪ್ಲಿಕೇಶನ್ ನಿಮಗೆ ತೆರೆಯುತ್ತದೆ. ಪಡಿತರ ಸಂಖ್ಯೆ ನಮೂದಿಸಿ ವರ್ಗ ಸೆಲೆಕ್ಟ್ ಮಾಡಿಕೊಳ್ಳಬೇಕು. ಅರ್ಜಿದಾರರ ಹೆಸರನ್ನು ನಮೂದಿಸಿ ನಂತರ ಬ್ಯಾಂಕ್ ಖಾತೆಯ ವಿವರಕ್ಕಾಗಿ ಎರಡು ಆಪ್ಷನ್ ಇರುತ್ತದೆ. ಆಧಾರ್ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಗೆ ಮೊತ್ತ ಬರಬೇಕು ಎಂದರೆ ಹೌದು ಎಂದು ಕ್ಲಿಕ್ ಮಾಡಿ.
ಬೇರೆ ಬ್ಯಾಂಕ್ ಖಾತೆಗೆ ಮೊತ್ತ ಬರಬೇಕು ಅದರಲ್ಲಿ ನಿಮಗೆ ಐ ಎಫ್ ಎಸ್ ಸಿ ಕೋಡ್ ಬ್ಯಾಂಕ್ ಹೆಸರು ಅಕೌಂಟ್ ನಂಬರ್ ಇನ್ನಿತರ ಮಾಹಿತಿಯನ್ನು ನೀವು ಸಲ್ಲಿಸಬೇಕು. ನಂತರ ಇಲ್ಲಿ ನೀವು ಸ್ವಯಂ ಘೋಷಣೆಯನ್ನು ಕೊಡಬೇಕಾಗುತ್ತದೆ ನಾನು ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿದಾರರಾಗಿರುತ್ತೇವೆ ಹೌದು ಅಥವಾ ಇಲ್ಲ ಎಂಬ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಬೇಕು ನಂತರ ನೀವು ಜಿ ಎಸ್ ಟಿ ರಿಟರ್ನ್ ಸಲ್ಲಿಸುತ್ತಿದ್ದರೆ ಅದನ್ನು ಸಹ ಇಲ್ಲಿ ದೃಢೀಕರಿಸಬೇಕು.
ನಂತರ I agree ಮೇಲೆ ಕ್ಲಿಕ್ ಮಾಡಿಕೊಂಡು ನಂತರ ನೀವು ಆಧಾರದೃಢೀಕರಣ ಮಾಡಬೇಕು ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಿದರೆ ಓಟಿಪಿ ಬರುತ್ತದೆ ನಂತರ ನಿಮ್ಮ ಅಪ್ಲಿಕೇಶನ್ ದೃಢೀಕರಣ ಆಗಿದೆ ಎಂದು ನಿಮಗೆ ತಿಳಿಯುತ್ತದೆ ಇದು ನೀವು ರೇಷನ್ ಕಾರ್ಡ್ ಉಪಯೋಗಿಸಿಕೊಂಡು ಅರ್ಜಿ ಸಲ್ಲಿಸುವ ಪ್ರಕ್ರಿಯೆ.
ಆಧಾರ್ ಕಾರ್ಡ್ ಮೂಲಕವೂ ಸಹ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಮೊದಲಿಗೆ ಆಧಾರ್ ದೃಢೀಕರಣ ಮಾಡಿಕೊಳ್ಳಬೇಕು ಆಧಾರ್ ಸಂಖ್ಯೆಯನ್ನು ಹಾಕಿ ಓಟಿಪಿ ಅನ್ನು ಹಾಕಬೇಕು ಅರ್ಜಿ ಮುಂದುವರಿಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ವಿವರಗಳು ಅಲ್ಲಿ ಬರುತ್ತದೆ ಇಲ್ಲಿಯೂ ಸಹ ಪಡಿತರ ಚೀಟಿಯ ಸಂಖ್ಯೆ ವರ್ಗ ಬ್ಯಾಂಕ್ ಖಾತೆಯ ಸಂಖ್ಯೆ ನಂತರ ನೀವು ಇದರಲ್ಲಿ ಫೋಟೋವನ್ನು ಸಲ್ಲಿಸಬೇಕು ಅಥವಾ ಅಪ್ಲೋಡ್ ಮಾಡಬೇಕಾಗುತ್ತದೆ.
ಹಾಗೆಯೇ ಮನೆಯಲ್ಲಿ ಇರುವಂತಹ ಸದಸ್ಯರ ಸಂಖ್ಯೆ ಲಿಂಗ ಎಲ್ಲವನ್ನು ಸೆಲೆಕ್ಟ್ ಮಾಡಿಕೊಂಡು ಮನೆಯ ಯಜಮಾನನ ಸ್ಟೇಟಸ್ ಯಾವ ರೀತಿ ಇದೆ ಎಂಬುದನ್ನು ನೀವು ತಿಳಿಸಬೇಕು. ನಂತರ I agree ಕೊಟ್ಟು ಕ್ಯಾಪ್ಚರ್ ಕೋಡ್ ನೀಡಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರವು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹೀಗೆ ಬೇರೆ ಬೇರೆ ಕಡೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಅನುಮೋದನೆ ನೀಡಲಾಗಿದೆ ಅವರಿಗೆ ಡೆಮೋ ನೀಡಲು ಅಥವಾ ಟೆಸ್ಟ್ ಮಾಡಲು ಈ ಒಂದು ಲಿಂಕ್ ಗಳನ್ನು ಬಿಡುಗಡೆ ಮಾಡಲಾಗಿದೆ ಯಾರು ಸಹ ಮನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಡಿ.
ಇದು ಕೇವಲ ಸರ್ಕಾರವು ಟೆಸ್ಟ್ ಗೆ ನೀಡಿರುವಂತಹ ಲಿಂಕ್ ಆಗಿದ್ದು ಇದು ಸಕ್ಸಸ್ ಆದ ನಂತರ ಈ ವೆಬ್ಸೈಟ್ ಲಿಂಕ್ ಗಳನ್ನು ಸರ್ಕಾರವೇ ಬಿಡುಗಡೆ ಮಾಡುತ್ತದೆ. ಇನ್ನು ಕೆಲವೇ ಸಮಯದಲ್ಲಿ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ನೀಡಲು ಅನುಮೋದನೆಯನ್ನು ನೀಡುತ್ತದೆ ಇದರ ಮೂಲಕ ಮಹಿಳೆಯರ ಖಾತೆಗೆ ತಿಂಗಳಿಗೆ 2000 ಬರಲಿದೆ ಮಹಿಳೆಯರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶ ಆಗಿದ್ದು ಮಹಿಳೆಯರ ಸಬಲೀಕರಣ ಇದರಿಂದ ಆಗುತ್ತದೆ ಎಂದು ಸರ್ಕಾರ ಈ ಘೋಷಣೆಯನ್ನು ಮಾಡಲಾಗಿದೆ.
ಸರ್ಕಾರಿ ಉದ್ಯೋಗಗಳು, ಸರ್ಕಾರಿ ಯೋಜನೆಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ ಮಿತ್ರ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಸೇರಿ
ನಮ್ಮ ವಾಟ್ಸಾಪ್ ಗ್ರೂಪ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್‌ಗೆ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ನಮ್ಮ Facebook ಪೇಜ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |