ಹಾಸ್ಯನಟಿ ಉಮಾಶ್ರೀ (Umashree) ಹಲವು ದಶಕಗಳಿಂದ ಕನ್ನಡ ಚಲನಚಿತ್ರದಲ್ಲಿ ಹಾಸ್ಯ ನಟಿಯಾಗಿ, ಹಿರಿಯ ನಟಿಗಾಗಿ ಹತ್ತಾರು ಪಾತ್ರಗಳಿಗೆ ಜೀವ ತುಂಬಿ ಕನ್ನಡ ಚಿತ್ರರಂಗದಲ್ಲಿ ಶಾಶ್ವತ ಹೆಸರು ಪಡೆದ ನಟಿ. ಇಂದು ಕಿರುತೆರೆ ಮೂಲಕ ಕೂಡ ಕನ್ನಡಿಗರಿಗೆ ಹತ್ತಿರವಾಗಿ ಮನೆ ಮನೆ ಮಾತಾಗಿರುವ ನಟಿ ಉಮಾಶ್ರೀ ಸಿನಿಮಾದ ಸಾಧನೆ ಮಾತ್ರವಲ್ಲದೇ ಅವರ ಬದುಕಿನಲ್ಲೂ ಕೂಡ ಅನೇಕ ಕಷ್ಟ ನಷ್ಟಗಳನ್ನು ಮೆಟ್ಟಿನಿಂತು ಗೆದ್ದ ಛಲಗಾತಿ, ಗಟ್ಟಿಗಿತ್ತಿ.
ಇದೇ ಕಾರಣಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ಮಾಧ್ಯಮವೊಂದು ಇವರ ಸಂದರ್ಶನ ನಡೆಸಿತು. ಇದರಲ್ಲಿ ಅವರ ಹುಟ್ಟು, ಬಾಲ್ಯ, ಬದುಕು, ಮದುವೆ, ಪ್ರೀತಿ, ಮಕ್ಕಳು, ರಾಜಕೀಯ ಸಿನೆಮಾರಂಗ ಇದೆಲ್ಲದರ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ ನಟಿ.
ನಟಿ ಉಮಾಶ್ರೀ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಚಿಕ್ಕವರಾಗಿದ್ದಾಗಲೇ ಪತಿ ಇವರನ್ನು ಬಿಟ್ಟು ಹೋದರು ಅದು ಕೂಡ ಪ್ರೇಮ ವಿವಾಹ. ತಂದೆ ತಾಯಿ ಇಲ್ಲದೆ ಅನಾಥೆಯಾಗಿದ್ದ ಉಮಾಶ್ರೀ ಅವರನ್ನು ಸಂಬಂಧಿಕರಲ್ಲಿ ಮಕ್ಕಳಿಲ್ಲದ ದಂಪತಿ ಬಹಳ ಮುದ್ದಿನಿಂದ ಸಾಕಿದ್ದರಂತೆ.
ಅವರನ್ನು ಎದುರು ಹಾಕಿಕೊಂಡು ಮದುವೆ ಆಗಿದ್ದ ಇವರ ಮಡಿಲಿಗೆ ಎರಡು ಮಕ್ಕಳು ಬೀಳುತ್ತಿದ್ದಂತೆ ಪ್ರತಿ ಕೈಕೊಟ್ಟು ಹೋಗಿದ್ದರು ಸಾಲದಕ್ಕೆ ಮತ್ತೊಂದು ಮದುವೆಯಾಗಿ ಸಂತೋಷವಾಗಿದ್ದಾರೆ. ಇದೆಲ್ಲವೂ ಕಣ್ಣೆದುರೇ ನಡೆದಿದ್ದರೂ ಇಂದಿಗೂ ನಟಿ ಪತಿಯನ್ನು ದ್ವೇಷಿಸುವುದಿಲ್ಲ ತನಗೆ ತಂದ ಪರಿಸ್ಥಿತಿಗಾಗಿ ಶಪಿಸುವುದಿಲ್ಲ ಬದಲಾಗಿ ಅವರ ಬದುಕು ಅವರ ಇಚ್ಛೆ ಎಲ್ಲೋ ಚೆನ್ನಾಗಿರಲಿ ಬಿಡಿ ಎನ್ನುತ್ತಾರೆ.
ಆಗಿನಿಂದ ಒಬ್ಬಂಟಿಯಾಗಿಯೇ ಬದುಕು ಕಳೆದು ಬಿಟ್ಟಿದ್ದಾರೆ ಇವರು. ಮಕ್ಕಳು ಚಿಕ್ಕವರಿದ್ದಾಗ ಅವರನ್ನು ಸಾಕುವುದಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಭಿನರದಲ್ಲಿ ಬಾಲ್ಯದಿಂದಲೂ ಆಸಕ್ತಿ ಇದ್ದ ನಟಿ ನಾಟಕ ರಂಗಭೂಮಿ ಕಡೆ ಮನಸ್ಸು ಮಾಡಿದರು. ಕಲಾ ಸರಸ್ವತಿ ಕೈ ಹಿಡಿದ ಕಾರಣ ಚಿತ್ರರಂಗದಲ್ಲಿ ಇವರಿಗೆ ಬಹಳ ದೊಡ್ಡ ಅವಕಾಶವೆ ಸಿಕ್ಕಿತ್ತು, ಅವಕಾಶಕ್ಕೆ ತಕ್ಕ ಹಾಗೆ ನಮ್ಮ ಪರಿಶ್ರಮದಿಂದ ಇವರು ಕೂಡ ಗೆದ್ದರು.
ಸಿನಿಮಾ ರಂಗಕ್ಕೆ ಬಂದು ಸ್ವಲ್ಪ ಹೆಸರು ಬಂದ ಮೇಲೆ ಸಿನೆಮಾ ರಂಗದಲ್ಲಿ ಬಹಳ ಆತ್ಮೀಯರಾಗಿ ಸ್ನೇಹಿತರಾದವರೆಲ್ಲರೂ ಬದುಕಿನಲ್ಲಿ ಈಗ ಎಲ್ಲವು ಇದೆ, ಆದರೆ ನೀನು ಒಬ್ಬಂಟಿ. ನಿನಗಾಗಿ ಅಲ್ಲದೆ ಇದ್ದರೂ ಮಕ್ಕಳಿಗಾಗಿ ಮತ್ತೊಂದು ಮದುವೆಯಾಗು ಅಮ್ಮನಾಗಿ ನೀನಿದ್ದೀಯ ತಂದೆಯಾಗಿ ಯಾರಾದರೂ ಇರಬೇಕು ಅಲ್ಲವೇ ಎನ್ನುವ ಸಲಹೆ ಕೊಟ್ಟಿದ್ದರಂತೆ.
ಆದರೆ ನಟಿಗೆ ಮತ್ತೊಂದು ಮದುವೆ ಆಗುವ ಆಲೋಚನೆ ಬರಲೇ ಇಲ್ಲವಂತೆ. ಅದರಲ್ಲೂ ಮಗಳಿಗೆ ಈ ವಿಚಾರವಾಗಿ ಸ್ವಲ್ಪ ಕೂಡ ಇಷ್ಟವಿಲ್ಲದ ಕಾರಣ ಅದರ ಗೋಜಿಗೆ ಹೋಗಲಿಲ್ಲ ಬದಲಾಗಿ ಈ ರೀತಿ ಆಲೋಚನೆ ಬರಲು ಬಿಡಲೇ ಇಲ್ಲ ಬದುಕಿನಲ್ಲಿ ಬಹಳಷ್ಟು ನಾನು ಬಿಝಿ ಆಗಿ ಹೋದೆ. ನನ್ನ ಆಲೋಚನೆ, ಸಮಯ, ಯೌವ್ವನ ಎಲ್ಲವೂ ಕೂಡ ಸಿನಿಮಾದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ನಟಿಸುತ್ತಲೇ ಕಳೆದು ಹೋಗಿತ್ತು.
ದೇವರು ಅಷ್ಟು ಬಿಝಿ ಇಟ್ಟಿದ್ದಕ್ಕೆ ಧನ್ಯವಾದಗಳು ಹೇಳಬೇಕು ಹಾಗೆ ಮಕ್ಕಳನ್ನು ಬೆಳೆಸುತ್ತಾ ಸಮಯವೇ ಕಳೆದು ಹೋಯಿತು ಮಕ್ಕಳು ಸೆಟ್ಲ್ ಆದ ಮೇಲೆ ಸ್ವಲ್ಪ ಫ್ರೀ ಎನಿಸಿದ ಮೇಲೆ ಈಗ ಯಾವ ಯೋಚನೆಯೂ ಬರಬಾರದು ಎಂದು ರಾಜಕೀಯದಲ್ಲಿ ತೊಡಗಿಕೊಂಡೆ. ಈಗಲೂ ಕೂಡ ಒಂದಲ್ಲ ಒಂದು ವಿಚಾರವಾಗಿ ಬಹಳ ಬ್ಯುಸಿ ಇದ್ದು ಆ ಯೋಚನೆಯನ್ನು ದೂರ ಇಡುತ್ತೇನೆ ಎಂದು ಬದುಕಿನ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ ಅವರು.
ಉಮಾಶ್ರೀ ಅವರು ಈಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಹಿಂದೆ ಒಮ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಕೂಡ ಸದ್ದು ಮಾಡಿದ್ದರು ಅವರ ರಾಜಕೀಯ ಭವಿಷ್ಯ ಹಾಗೂ ಸಿನಿಮಾ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ನಾವು ಬಯಸೋಣ.