ರಾಜ್ಯದಲ್ಲಿ ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮುಂಗಾರು ಮಳೆ ಬೀಳದೆ ಜಲಾಶಯಗಳ ನೀರು ಖಾಲಿಯಾಗಿರುವ ಕಾರಣ ಮತ್ತೊಮ್ಮೆ ಕಾವೇರಿ ವಿವಾದ (Cauvery water contreversy) ತಲೆದೋರಿದೆ. ರಾಜ್ಯದ ರೈತರೇ ನೀರಿಲ್ಲದೆ ಪರದಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ನೀರಿನ ಅಭಾವ ಗಂಭೀರವಾಗಬಹುದು ಹೀಗಾಗಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ಕರ್ನಾಟಕದ ಜನರು ಪಟ್ಟು ಹಿಡಿದಿದ್ದಾರೆ.
ನೀರಿನ ವಿಚಾರಕ್ಕೆ ಈಗಾಗಲೇ ಬಂದ್ ಗಳು ಕೂಡ ಯಶಸ್ವಿಯಾಗಿ ನಡೆದಿದ್ದು ಚಿತ್ರರಂಗ ಕೂಡ ಬೆಂಬಲಕ್ಕೆ ನಿಂತಿದೆ. ಶಿವಣ್ಣ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 29ರಂದು ಕನ್ನಡ ಚಲನಚಿತ್ರ ರಂಗದ ಕಲಾವಿದರೆಲ್ಲಾ ಸೇರಿ ಕರ್ನಾಟಕ ಬಂದ್ ದಿನ (Karnataka bandh) ಪ್ರತಿಭಟನೆ ನಡೆಸಿದ್ದಾರೆ.
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಇನ್ಮೇಲೆ ತಿರುಪತಿಯ ದರ್ಶನ ತುಂಬಾ ಸುಲಭ ಹೇಗೆ ಗೊತ್ತಾ.?
ಕರ್ನಾಟಕ ಚಿತ್ರಮಂಡಳಿ ಬಳಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಹಂಸಲೇಖ, ದರ್ಶನ್, ಧ್ರುವ ಸರ್ಜಾ, ಪ್ರಜ್ವಲ್, ರಘು ಮುಖರ್ಜಿ, ಶ್ರುತಿ, ಉಮಾಶ್ರೀ, ಪೂಜಾ ಗಾಂಧಿ, ಗಿರಿಜಾ ಲೋಕೇಶ್, ಅನು ಪ್ರಭಾಕರ್, ಪ್ರಥಮ್. ದುನಿಯಾ ವಿಜಯ್, ವಸಿಷ್ಠ, ಚಿಕ್ಕಣ್ಣ, ಲೂಸ್ ಮಾದ ಸೇರಿದಂತೆ ಸಾಕಷ್ಟು ಕಲಾವಿದೆಯರು ಪಾಲ್ಗೊಂಡಿದ್ದರು.
ಇನ್ನು ಕೆಲವು ಕಲಾವಿದರು ಖುದ್ದಾಗಿ ಹಾಜರಾಗಲು ಸಾಧ್ಯವಾಗದೇ ಇದ್ದರೂ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ನೆನಪಿರಲಿ ಪ್ರೇಮ್ ಅವರು ವಿಭಿನ್ನವಾಗಿ ಹೋರಾಟಕ್ಕೆ ಧನಿ ಆಗಿದ್ದಾರೆ ಆದರೆ ಅದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗುತ್ತಿದ್ದಾರೆ.
ಗಂಡ ಮನೆಗೆ ಬಾರದಿದ್ದರೆ ಮಕ್ಕಳಾಗುವುದು ಹೇಗೆ? ಅತ್ತೆ ಮನೆ ಎದುರು ಧರಣಿ ಕೂತಿರುವ ಸೊಸೆ.!
ಇನ್ಸ್ಟಾಗ್ರಾಮ್ ನಲ್ಲಿ ನಟ ನೆನಪಿರಲಿ ಪ್ರೇಮ್ (actor Nenapirali Prem) ಅವರು ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಪ್ರೇಮ್ ಅವರು ರಕ್ತದಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರಮೋದಿಗೆ (written a letter for PM Narendra Modi with blood) ಪತ್ರ ಬರೆದು ಆ ಪತ್ರದ ಮೂಲಕ ಕಾವೇರಿ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ, ದಯವಿಟ್ಟು ನಮ್ಮ ಕಾವೇರಿ ಮತ್ತು ಕರ್ನಾಟಕಕ್ಕೆ ನ್ಯಾಯ ಒದಗಿಸಿ. ಕಾವೇರಿ ನಮ್ಮದು. ಇಂತಿ ನೆನಪಿರಲಿ ಪ್ರೇಮ್ ಚಿತ್ರನಟ ಎಂದು ನಟ ಪ್ರೇಮ್ ಅವರು ರಕ್ತದಲ್ಲಿ ಪತ್ರ ಬರೆದಿದ್ದಾರೆ. ಈ ವಿಡಿಯೋ ಗೆ ಅವರದ್ದೇ ಸಿನಿಮಾ ಹಾಡಿನ ಸಾಲಾದ ಸಿದ್ಧ ಕಣೋ ಪ್ರಾಣ ಕೊಡೋಕೆ ಈ ನೆಲ ಜಲ ನಾಡು ನುಡಿಗೆ ಎನ್ನುವ ಕ್ಯಾಪ್ಶನ್ ಕೂಡ ಬರೆದಿದ್ದಾರೆ. ಈ ವಿಡಿಯೋಗೆ ಈಗ ವಿವಿಧ ರೀತಿಯ ಪ್ರತಿಕ್ರಿಯೆ ಸಿಗುತ್ತಿದೆ.
ಉಪ್ಪಿನಂಗಡಿ ಮೇಸ್ತ್ರಿಗೆ ಕೇರಳದ ಅದೃಷ್ಟ ಲಾಟರಿಯಲ್ಲಿ ಒಲಿಯಿತು, 50 ಲಕ್ಷ ರೂಪಾಯಿ
ನಟ ಪ್ರೇಮ್ ಅವರ ಈ ಅಭಿಮಾನಕ್ಕೆ ಹಾಗೂ ಪ್ರಯತ್ನಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲ ಜನರು ಪ್ರೇಮ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇಲ್ಲಿ ಸಮಸ್ಯೆ ಇರುವುದು ಕರ್ನಾಟಕ ಸರ್ಕಾರದ್ದು, ಕರ್ನಾಟಕ ಸರ್ಕಾರಕ್ಕೆ ಪ್ರಶ್ನೆ ಕೇಳಬೇಕು, ಪ್ರಧಾನ ಮಂತ್ರಿಗಳನ್ನ ಇಲ್ಲಿ ಎಳೆದು ತರುವ ಅವಶ್ಯಕತೆ ಇಲ್ಲ ಎಂದು ಜನರು ಪ್ರೇಮ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ತಲೇಲಿ ಬುದ್ಧಿ ಇದ್ದವರು ಇಲ್ಲಿಯ ಸರ್ಕಾರವನ್ನು ಕೇಳಬೇಕು, ಮೋದಿನ ಮಧ್ಯ ಯಾಕೆ ತರ್ತಿರಾ, ಊಟ ಬೇಕಾದರೆ ಹೋಟೆಲ್‌ಗೆ ಹೋಗಬೇಕು ಬಂಗಾರದ ಅಂಗಡಿಗಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ತಪ್ಪಿರೋದು ರಾಜ್ಯ ಸರ್ಕಾರದ್ದು ರಾಜ್ಯ ಸರ್ಕಾರಕ್ಕೆ ಪ್ರಶ್ನೆಸಿ ಮೊದಲು ಮೋದಿಗಲ್ಲ ಸಿದ್ದುಗೆ ಕೇಳು ಎಂದು ಒಬ್ಬರು ಬರೆದಿದ್ದರೆ ಮತ್ತೊಬ್ಬರು ಉಪೇಂದ್ರ ಅವರ ಮಾತು ಒಮ್ಮೆ ಕೇಳಿ ಗೊತ್ತಾಗುತ್ತೆ, ಎಲ್ಲಿ ಹೇಳಿದ್ರೆ ಪ್ರಾಬ್ಲಂ ಸಾಲ್ವ್ ಆಗುತ್ತೆ ಅಂತ ಎಂದಿದ್ದಾರೆ.
ರಾಜ್ಯ ಸರ್ಕಾರವನ್ನ ಏಕೆ ಪ್ರಶ್ನಿಸುವುದಿಲ್ಲ? ಯಾರನ್ನ ಕೇಳಬೇಕು ಯಾರನ್ನ ಕೇಳ್ತಾ ಇದ್ದೀರಾ, ಸಿನಿಮಾದವರು ಕಾಂಗ್ರೆಸ್ ಏಜೆಂಟ್ ಡಿ.ಕೆ ಶಿವಕುಮಾರ್ ಏಜೆಂಟ್ ಗಳಂತೆ ವರ್ತಿಸುವುದು ನಿಲ್ಲಿಸಿ ಎಂದು ಇನ್ನೊಬ್ಬರು ಕಮೆಂಟ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸೆಲೆಬ್ರಿಟಿಗಳು ಸ್ವಲ್ಪವೂ ಕೂಡ ಸಾಮಾನ್ಯ ಜ್ಞಾನ ಹೊಂದಿಲ್ಲ, ತೆರೆ ಮೇಲೆ ಅಷ್ಟೇ ಇವರು ಹೀರೋಗಳು ಎಂದೊಬ್ಬರು ಅಲ್ಲಗಳೆದಿದ್ದಾರೆ.
ಏನೇ ಆಗಲಿ ಸೆಲೆಬ್ರಿಟಿ ಆಗಿದ್ದರೂ ಕೂಡ ನಮ್ಮ ಕಾವೇರಿ ವಿಚಾರಕ್ಕಾಗಿ ರಕ್ತದಲ್ಲಿ ಮೋದಿ ಅವರಿಗೆ ಪತ್ರ ಬರೆದದ್ದು ನಿಜಕ್ಕೂ ಹೆಮ್ಮೆಯ ವಿಚಾರವೇ ಎಂದು ಇನ್ನು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.! ಈ ವಿಚಾರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.