ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಶುಭ ಘಳಿಗೆ ನೋಡಿ ಕಣ್ತುಂಬಿಕೊಳ್ಳಲು ಇಡೀ ಕರುನಾಡು ಕಾಣುತ್ತಿದೆ. ಅದೆಷ್ಟೋ ಶತಮಾನದಿಂದ ಈ ನೆಲದ ಜನರು ಕಾಯುತ್ತಿದ್ದ ಸಮಯ ಸನ್ನಿಹಿವಾಗುತ್ತಿದ್ದು, ಈಗಾಗಲೇ ದೇಶದಾದ್ಯಂತ ಮನೆ ಮನಗಳಲ್ಲಿ ಸಂಭ್ರಮ ತುಂಬಿಕೊಂಡಿದೆ.
ಇಂತಹದೊಂದು ಇತಿಹಾಸದ ದಿನಕ್ಕೆ ಸಾಕ್ಷಿಯಾಗುತ್ತಿರುವುದು ನಿಜವಾಗಿಯೂ ಕೋಟಿ ಭಾರತೀಯರ ಅದೆಷ್ಟೋ ಜನ್ಮದ ಪುಣ್ಯದ ಫಲ ಎಂದರೆ ತಪ್ಪಾಗಲಾರದು ಮತ್ತು ಈ ಶುಭದಿನದ ನೆನಪು ಶಾಶ್ವತವಾಗಿ ಆಕಾಶ ಭೂಮಿ ಇರುವವರೆಗೂ ಕೂಡ ಇರುತ್ತದೆ. ಇದೇ ದಿನ ತಮ್ಮ ಬದುಕಿನ ಮುಖ್ಯ ವಿಚಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮುನ್ನಡೆಸಲು ರಾಮನ ಭಕ್ತರು ನಿರ್ಧರಿಸಿದ್ದಾರೆ.
ಹಾಗಾಗಿ ದೇಶದಲ್ಲಿ 22 ಜನವರಿ 2024 ಸೋಮವಾರದಂದು ಅದೆಷ್ಟೋ ಮದುವೆಗಳು, ಗೃಹಪ್ರವೇಶಗಳು, ಮಕ್ಕಳ ನಾಮಕರಣ ಮತ್ತು ನಿಶ್ಚಿತಾರ್ಥದಂತಹ ಕಾರ್ಯಗಳು ನಡೆಯುತ್ತಿವೆ. ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Druvasarja) ಕೂಡ ರಾಮನ ಬಂಟನಾದ ಹನುಮನ ಪರಮ ಭಕ್ತ.
ತಮ್ಮ ಉಸಿರು ಉಸಿರಿನಲ್ಲಿಯೂ ಆಂಜನೇಯನನ್ನು ಸ್ಮರಿಸುವ ಧ್ರುವ ಸರ್ಜಾ ಅವರು ತಮ್ಮ ಬಾಸ್ ಗೆ ಪ್ರಾಣವಾದ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಇದೇ ದಿನದಂದು ತಮ್ಮ ಮಕ್ಕಳ ನಾಮಕರಣ ಮಾಡಲು ನಿರ್ಧರಿಸಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಸಹೋದರನನ್ನು ಕಳೆದುಕೊಂಡು ಮತ್ತು ಕುಟುಂಬದ ಹಿರಿಯರನ್ನು ಕಳೆದುಕೊಂಡು ಸಿನಿಮಾಗಳ ಕಾಂಟ್ರವರ್ಸಿಯಿಂದ ಸರಣಿ ನೋವುಗಳಿಂದ ನೊಂ’ದುಕೊಂಡಿದ್ದ ಕುಟುಂಬದಲ್ಲಿ ಈಗ ಮಕ್ಕಳ ಕಾರಣದಿಂದಾಗಿ ವಾತಾವರಣ ಹಸುರಾಗಿದೆ.
ಈ ಹಿಂದೆ ಮಕ್ಕಳ ವಿಷಯವಾಗಿ ದುಃ’ಖ ಪಟ್ಟಿದ್ದ ದಂಪತಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಎರಡು ವರ್ಷದ ಹಿಂದೆ ಹೆಣ್ಣು ಮಗುವಿನ ತಂದೆಯಾಗಿದ್ದ ಧ್ರುವ ಕುಟುಂಬಕ್ಕೆ ಕಳೆದ ವರ್ಷ ಪುತ್ರನ ಆಗಮನವು ಆಗಿದೆ. ಕಾರಣಾಂತರದಿಂದ ಇಬ್ಬರು ಮಕ್ಕಳಿಗೂ ದ್ರುವ ಸರ್ಜಾ ಅವರು ಹೆಸರಿಡಲು ಆಗಿರಲಿಲ್ಲ.
ಮನೆಯಲ್ಲಿ ಪ್ರೀತಿಯಿಂದ ಬೇರೆ ಹೆಸರಿನಿಂದ ಮುದ್ದಾಗಿ ಕರೆಯುತ್ತಿದ್ದ ಮನೆ ಮಂದಿ ಈಗ ಅಧಿಕೃತವಾಗಿ ಮಕ್ಕಳ ಹೆಸರನ್ನು ಘೋಷಣೆ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅದ್ದೂರಿ ಕಾರ್ಯಕ್ರಮವನ್ನು ಕೂಡ ಏರ್ಪಡಿಸುತ್ತಿದ್ದಾರೆ ಈ ವಿಶೇಷತೆಯಲ್ಲಿನ ಮತ್ತೊಂದು ವಿಶೇಷತೆ ಏನೆಂದರೆ ಅಯೋಧ್ಯೆಯ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ದಿನದಂದೇ ತಮ್ಮ ಮಕ್ಕಳಿಗೂ ಇಂತಹದೇ ಒಂದು ಪೌರಾಣಿಕ ಹಿನ್ನೆಲೆಯುಳ್ಳ ರಾಮಾಯಣ ಹಾಗೂ ಮಹಾಭಾರತದಲ್ಲಿ ಬಳಕೆಯಾಗಿರುವ ಹೆಸರುಗಳನ್ನು ಆರಿಸಿ ಇಡಲು ದಂಪತಿಗಳು ನಿರ್ಧರಿಸಿದ್ದಾರಂತೆ.
ಕುಟುಂಬದ ಆಪ್ತ ಮೂಲಗಳಿಂದಲೇ ವಿಷಯ ತಿಳಿದು ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಅರ್ಜುನ್ ಸರ್ಜಾ ತಮಿಳುನಾಡಿನಲ್ಲಿ ಆಂಜನೇಯನ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಅರ್ಜುನ್ ಸರ್ಜಾ ಕುಟುಂಬ ಮೊದಲಿನಿಂದಲೂ ಆಂಜನೇಯನ ಬಹಳ ನಂಬಿ ಆರಾಧಿಸುತ್ತಾ ಬಂದಿದ್ದಾರೆ.
ತಮ್ಮ ಪ್ರತಿ ನಡೆ ನುಡಿಯಲ್ಲೂ ಆಂಜನೇಯನನ್ನು ನೆನೆಯುವ ಧ್ರುವ ಸರ್ಜಾ ಅವರಿಗೆ ಇದೇ ವಿಶೇಷ ದಿನದಂದು ಮಕ್ಕಳಿಗೆ ಹೆಸರಿಡುವ ಅವಕಾಶ ಸಿಕ್ಕಿರುವುದು ಸಂತಸವನ್ನು ಇಮ್ಮಡಿ ಮಾಡಿದೆ. ಧ್ರುವ ಸರ್ಜಾ ಅವರ ಬದುಕಿಗೆ 2024 ಸಾಕಷ್ಟು ಶುಭ ತರುವಂತಹ ಮುನ್ಸೂಚನೆ ಆರಂಭದಲ್ಲಿಯೇ ಸಿಗುತ್ತಿದೆ. ಬಹುನಿರೀಕ್ಷಿತ ಅವರ KD ಹಾಗೂ ಮಾರ್ಟಿನ್ ಎರಡು ಸಿನಿಮಾಗಳು ಕೂಡ ವರ್ಷಾಂತ್ಯದೊಳಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಕುಟುಂಬಕ್ಕೆ ಎಲ್ಲವೂ ಒಳ್ಳೆಯದಾಗಲಿ ಎಂದು ನಾವು ಕೂಡ ಬಯಸೋಣ.