ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಕಾಟೇರ ಸಿನಿಮಾ (Katera) ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ರಿಲೀಸ್ ಆದ ಎರಡೇ ವಾರಗಳಲ್ಲಿ 157 ಕೋಟಿ ಗಳಿಕೆ ಮಾಡಿದ್ದು ಇಲ್ಲಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಗಳು ಮೂಡಿಬರುತ್ತವೆ. ಈ ಸಂಭ್ರಮವನ್ನು ಆಚರಿಸಲು ಜನವರಿ 3ರಂದು ಸೆಲೆಬ್ರಿಟಿ ಶೋ ಕೂಡ ಏರ್ಪಡಿಸಲಾಗಿತ್ತು, ಕನ್ನಡದ ಬಹುತೇಕ ಎಲ್ಲಾ ಗಣ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅದು ಕಾರ್ಯಕ್ರಮವಾದ ನಂತರ ಜೆಟ್ ಲಾಗ್ ಪಬ್ ನಲ್ಲಿ ತಡರಾತ್ರಿವರೆಗೆ ಪಾರ್ಟಿ (Darshan Party controversy) ಮಾಡಿದ್ದಾರೆ ಎಂದು ನಟ ದರ್ಶನ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ನಿನಾಸಂ ಸತೀಶ್, ಧನಂಜಯ್, ತರುಣ್ ಸುಧೀರ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕ ದರ್ಶನ್ ಆತ್ಮೀಯರಿಗೆ ನೋಟಿಸ್ ಕಳುಹಿಸಲಾಗಿದೆ.
ದರ್ಶನ್ ದುಬೈನಲ್ಲಿಯೂ ಕಾಟೇರ ತೆರೆಕಂಡಿರುವುದರಿಂದ ಅಲ್ಲಿಗೆ ತೆರಳಿದ್ದರು, ಈ ಕಾರಣಕ್ಕಾಗಿ ವಿಚಾರಣೆಗೆ ಹಾಜರಾಗಿರಲು ಆಗಿರಲಿಲ್ಲ. ಈಗ ಒಟ್ಟಾಗಿ ಅಂದು ಪಾರ್ಟಿಯಲ್ಲಿದ್ದ ಎಲ್ಲರೂ ವಿಚಾರಣೆ ಭಾಗಿಯಾಗಿದ್ದಾರೆ. ಬಳಿಕ ಮಾಧ್ಯಮದವರು ಎದುರಾಗಿ ಅನೇಕ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾರೆ. ನಡೆದ ಈ ಘಟನೆಯಿಂದ ಬಹಳ ನೊಂ’ದು ಕೊಂಡು ರೊಚ್ಚಿಗೆದ್ದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rockline Venkatesh) ಅವರು ದರ್ಶನ್ ಹೆಸರು ಹಾಳು ಮಾಡಲು ಆತನ ಇಮೆಜ್ ಗೆ ಮಸಿ ಬಳಿಯಲು ಕು’ತಂ’ತ್ರ ಮಾಡುತ್ತಿದ್ದಾರೆ.
ಕಾಟೇರ ಸಿನಿಮಾ ಸಕ್ಸಸ್ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕಾಗಿ ಈ ರೀತಿ ಚಿಲ್ಲರೆ ಕೆಲಸ ಮಾಡಿದ್ದಾರೆ. ದರ್ಶನ್ ನನ್ನಂತೆ ಎಲ್ಲರೂ ಬೆಳೆಯಬೇಕು ಎಂದು ಎಲ್ಲರಿಗೂ ಸಪೋರ್ಟ್ ಮಾಡುವ ಒಳ್ಳೆಯ ಮನಸ್ಸಿರುವ ನಟ. ಅವರ ಹೆಸರು ಕೆಡಿಸಿ ನಿಮಗೆ ಏನು ಸಿಗುತ್ತದೆ. ದರ್ಶನ್ ಮಾತ್ರವಲ್ಲ ಕನ್ನಡದ ಯಾವ ಚಿತ್ರಗಳು ಸಕ್ಸಸ್ ಕಂಡರು ಸಂತೋಷ ಪಡಬೇಕು ಅದನು ನ ಬಿಟ್ಟು ಈ ರೀತಿ ಮಾಡಬಾರದು ಎಂದು ಖಾ’ರವಾಗಿ ನುಡಿದಿದ್ದಾರೆ.
ಅಂದು ನಾವು ಪಾರ್ಟಿ ಮಾಡಿಲ್ಲ, ಶೋ ಮುಗಿದ ಮೇಲೆ ದರ್ಶನ್ ಹೊರಟಿದ್ದರು ಆದರೆ ಇನ್ನು ಅನೇಕರು ಕಾಯುತ್ತಿದ್ದಾರೆ ಊಟಕ್ಕೆ ಹೋಗೋಣ ಎಂದು ಅವರನ್ನು ವಾಪಸ್ಸು ಕರೆಸಿ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿದ್ದು ನಾನು. ನಾವು ಹೋದ ಸಮಯದಲ್ಲಿ ಅಲ್ಲಿ ಸಿಬ್ಬಂದಿಗಳು ಕಡಿಮೆ ಇದ್ದರೂ ಊಟ ತಯಾರಿಸಿ ನಮಗೆ ಬಡಿಸುವುದು ಲೇಟಾಯ್ತು.
ನಾವು ಕೂಡ ಒಂದು ಗಂಟೆ ಒಳಗೆ ಬರಬೇಕು ಎಂದುಕೊಂಡೆ ಹೋಗಿದ್ದು ಆದರೆ ಅಲ್ಲಿಗೆ ಹೋದ ಮೇಲೆ ಈ ರೀತಿ ಆಯಿತು. ನಾವು ಯಾವುದೇ ರೀತಿ ವೈ’ಲೆ’ನ್ಸ್ ಮಾಡಿಲ್ಲ, ಅಕ್ಕ ಪಕ್ಕದವರಿಗು ಕೂಡ ತೊಂದರೆ ಮಾಡಿಲ್ಲ, ಅಲ್ಲಿರುವ ಸಿಬ್ಬಂದಿಗಳಿಗೂ ಗಲಾಟೆ ಮಾಡಿಲ್ಲ, ನಮ್ಮ ಪಾಡಿಗೆ ನಾವು ಊಟ ಮಾಡಿಕೊಂಡು ವಾಪಸ್ಸು ಬಂದಿದ್ದೇವೆ ಆ ಸಮಯದಲ್ಲಿ ಯಾವುದೇ ಪೊಲೀಸ್ ಆಗಲಿ ಅಬಕಾರಿ ಇಲಾಖೆ ಅಧಿಕಾರಿಗಳು ಆಗಲಿ ಅಲ್ಲಿ ಬಂದು ಕೇಳಲಿಲ್ಲ.
ಇದಾದ ಬಳಿಕ ಎಲ್ಲರಿಗೂ ನೋಟಿಸ್ ಕಳುಹಿಸುತ್ತಾರೆ ಎಂದರೆ ಈ ರೀತಿ ಇದುವರೆಗೆ ಯಾರೆಲ್ಲಾ 1 ಗಂಟೆ ಮೇಲೆ ಬಾರ್ ಓಪನ್ ಮಾಡಿ ಇಟ್ಟುಕೊಂಡೇ ಇರಲಿಲ್ಲವಾ? ಎಷ್ಟು ಜನರಿಗೆ ನೋಟಿಸ್ ಕೊಟ್ಟಿದ್ದಾರೆ ನಿಮ್ಮ ಟಾರ್ಗೆಟ್ ದರ್ಶನ್ ಮಾತ್ರಾನ? ಎಂದು ಕೇಳಬೇಕೆನಿಸುತ್ತದೆ. ಇಲಾಖೆ ಬೇರೆ ಅಲ್ಲ, ಸರ್ಕಾರ ಬೇರೆ ಅಲ್ಲ ನಾವು ಊಟಕ್ಕಾಗಿ ಹೋದಿದ್ದು, ಯಾಕೆ ತಡವಾಯಿತು ಎನ್ನುವುದನ್ನು ಹೇಳಿದ್ದೇವೆ ಊಟ ಮಾಡಲು ಹೋಗಿದ್ದೆ ತಪ್ಪು ಎನ್ನುವುದು ಆದರೆ ನಾವು ಆ ನ್ಯಾಯಕ್ಕೆ ತಲೆಬಾಗುತ್ತೇವೆ.
ಇದನ್ನೆಲ್ಲ ಯಾರು ಮಾಡುತ್ತಿದ್ದಾರೆ ಎಂದು ನನಗೂ ಗೊತ್ತು, ಇಡೀ ಕರ್ನಾಟಕಕ್ಕೂ ಗೊತ್ತು ಅವರಂತೆ ನಾವು ಆದರೆ ಇದು ಎಲ್ಲೆಲ್ಲೋ ಹೋಗಿ ಮುಟ್ಟುತ್ತದೆ. ಆದರೆ ದರ್ಶನ್ ಅವರಿಗೆ ಇದನ್ನು ಇಲ್ಲಿಗೆ ಮುಗಿಸಲು ನೋಡುತ್ತಿದ್ದಾರೆ ನಮ್ಮಿಂದ ಎಲ್ಲಾ ಹೀರೋಗಳಿಗೂ ತೊಂದರೆ ಆಗುತ್ತದೆ ಬೇಡ ಎಂದು ಅವರು ಇದನ್ನು ದೊಡ್ಡದು ಮಾಡುತ್ತಿಲ್ಲ ಖಂಡಿತವಾಗಿಯೂ ಈ ನಡೆಯನ್ನು ನಾವೆಲ್ಲ ಖಂ’ಡಿ’ಸು’ತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.