ಸಾಕಷ್ಟು ವಿರೋಧಗಳ ನಡುವೆಯೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ (Hubballi Idgah Maidan) ಹಿಂದೂ ಸಮಾಜದಿಂದ ಗಣೇಶನನ್ನು (Ganesha festival) ಪ್ರತಿಷ್ಠಾಪಿಸಿ ಅದ್ದೂರಿ ಆಚರಣೆಯಿಂದ ಅದೇ ರೀತಿ ಸಾಂಪ್ರದಾಯಿಕವಾಗಿ ವಿಸರ್ಜನೆ ಮಾಡಲಾಗಿದೆ. ವಿಸರ್ಜನೆ ಮಾಡುವ ಮುನ್ನ ಪೂಜೆ ನೆರವೇರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Shri Rama Sena founder Pramod Muthalik) ಅವರು ಮಾಧ್ಯಮಗಳ ಜೊತೆ (press meet) ಮಾತನಾಡಿದ್ದಾರೆ.
ಈ ವೇಳೆ ಅವರು ಈಗ ಮೈದಾನದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವುದರ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದವರು ಮತ್ತು ಇಲ್ಲಿ ಗಣೇಶನನ್ನು ಕೂರಿಸದಂತೆ ಬಹಿರಂಗವಾಗಿ ಸವಾಲು ಹಾಕಿದವರು ಮತ್ತು ಹಿಂದೊಮ್ಮೆ ರಾಷ್ಟ್ರಧ್ವಜ ಹಾರಿಸಲು ಅಡ್ಡ ಬಂದು ಸುಪ್ರೀಂ ಕೋರ್ಟ್ ನಲ್ಲಿ ಮುಖಭಂಗ ಮಾಡಿಸಿಕೊಂಡ ಅಂಜುಮನ್ ಸಂಸ್ಥೆ (Anjuman Islam Organization) ಇವುಗಳ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಕಾಶ್ ರಾಜ್ ಗೆ ಜೀವ ಬೆದರಿಕೆ, ವಿಕ್ರಂ ಟಿವಿ ವಾಹಿನಿ ವಿರುದ್ಧ FIR ದಾಖಲು.!
ಜೊತೆಗೆ ನಮ್ಮನ್ನು ಇದೇ ರೀತಿ ಕೆಣಕುತ್ತಿದ್ದರೆ ಮುಸ್ಲಿಮರ ಮಸೀದಿ ಒಳಗೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಮೂರು ದಿನಗಳ ಕಾಲ ನಾವು ಈಗ ಮೈದಾನದಲ್ಲಿ ಹಬ್ಬದ ಆಚರಣೆ ಮಾಡಿದ್ದೇವೆ. ಬಹಳ ಶಾಂತ ರೀತಿಯಲ್ಲಿ ಗಣೇಶನಿಗೆ ಪೂಜೆ ಪುನಸ್ಕಾರ ನಡೆದಿದೆ. ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ ಕಾರಣ ಈದ್ಗಾ ಮೈದಾನ ಪವಿತ್ರವಾಗಿದೆ, ಈಗ ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಯಾರು ಶತ್ರುಗಳು, ಅಧರ್ಮೀಯರು, ದೇಶದ್ರೋಹಿಗಳು ಎನ್ನುವುದು ಗೊತ್ತಾಗಿದೆ.
ಗಲಭೆಕೋರರು ಯಾರು? ಪ್ರಚೋದನೆ ಕೊಡುವವರು ಯಾರು? ಶಾಂತಿ ಪ್ರಿಯರು ಯಾರು ಎನ್ನುವ ವ್ಯತ್ಯಾಸ ತಿಳಿದಿದೆ ಇನ್ನು ಪ್ರತಿ ವರ್ಷ ಕೂಡ ಹಿಂದೂ ಸಮಾಜದವರೆಲ್ಲ ಒಟ್ಟಾಗಿ ಸೇರಿ ಇದೇ ರೀತಿ ಈದ್ಗಾ ಮೈದಾನದಲ್ಲಿ ಗಣೇಶನನ್ನು ಕೂರಿಸಿ ಹಬ್ಬವನ್ನು ಆಚರಣೆ ಮಾಡುತ್ತೇವೆ ಎಂದಿದ್ದಾರೆ. ಈ ಹಿಂದೆ ಅಂಜುಮನ್ ಇಸ್ಲಾಂ ಸಂಸ್ಥೆಯವರು ಇಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲು ವಿರೋಧಿಸಿದ್ದರು, ಮೈದಾನದಲ್ಲಿ ಹೇಗೆ ಕಾಲಿಡುತ್ತಿರಿ ನೋಡುತ್ತೇವೆ ಎಂದಿದ್ದರು.
ಅಂಜುಮನ್ ಇಸ್ಲಾಂ ಸಂಸ್ಥೆಯವರಿಗೆ ಸುಪ್ರೀಂ ಕೋರ್ಟ್ ಅಡ್ಡಿಪಡಿಸಲು ಇದು ಪಾಕಿಸ್ತಾನವಲ್ಲ ಪಾಲಿಕೆಯ ಆಸ್ತಿ ಎಂದು ಸ್ಪಷ್ಟವಾಗಿ ತಿಳಿಸಿದೆ. ದೇಶದ್ರೋಹಿಗಳು ಹಿಂದೂ ಧರ್ಮ ಆಚರಣೆ ಸಂಪ್ರದಾಯದ ವಿರುದ್ಧ ಕೈ ಹಾಕುತ್ತಾರೆ, ಅವರ ದುರುದ್ದೇಶ ಏನು ಎನ್ನುವುದು ಸ್ಪಷ್ಟವಾಗಿದೆ. ಅದನ್ನು ಮೆಟ್ಟಿ, ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ತೋರಿಸಿದ್ದೇವೆ. ಕೋರ್ಟ್ ಹೇಳಿದ ಮೇಲೂ ಇವರಿಗೆ ಎಷ್ಟು ಸೊಕ್ಕು ಇರಬೇಕು, ಮುಂದೆ ಆ ಸೊಕ್ಕನ್ನು ನಾವು ಮುರಿಯುತ್ತೇವೆ ಎನ್ನುವ ಹೇಳಿಕೆ ನೀಡಿದ್ದಾರೆ.
ಗಣೇಶನನ್ನು ಪ್ರತಿಷ್ಠಾಪನೆ ಮಾಡುವಾಗ ಕೋರ್ಟಿಗೆ ಹೋಗಿ ತೊಂದರೆ ಕೊಟ್ಟಿದ್ದೀರಿ, ಇದನ್ನು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ ಮುಂದೆ ನೀವು ಕೂಡ ಹೇಗೆ ಇಲ್ಲಿ ಹಬ್ಬ ಆಚರಣೆ ಮಾಡುತ್ತೀರಾ ಎಂದು ನಾವು ನೋಡುತ್ತೇವೆ. ನಮಗೂ ಕೂಡ ಕೋರ್ಟಿಗೆ ಹೋಗುವುದು ಗೊತ್ತಿದೆ ಎಂದು ನುಡಿದಿದ್ದಾರೆ.
ಈಗಲೂ ಕೂಡ ಅದು ಹೇಗೆ ನೀವು ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತೀರಿ ಎದ್ದು ಬಹಿರಂಗ ಸವಾಲು ಹಾಕಿದ್ದರು, ಅವರ ಮಸೀದಿಗಳಿಗೆ ನುಗ್ಗಿ ಗಣೇಶನ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿ ಮುಂದಿನ ದಿನಗಳಲ್ಲಿ ಅವರ ನಮಾಜ್ಗೂ ನಾವು ಅಡ್ಡಿಪಡಿಸಬೇಕಾಗುತ್ತೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ನಮಾಜ್ಗೆ ಅವಕಾಶ ಕೊಡದಂತೆ ನಾವು ಕೂಡ ಕೋರ್ಟ್ಗೆ ಹೋಗುತ್ತೇವೆ.
ಇದು ಪಾಕಿಸ್ತಾನವೂ ಅಲ್ಲ, ಅವರಪ್ಪನ ಆಸ್ತಿಯೂ ಅಲ್ಲ, ವಿರೋಧಿಗಳ ಸೊಕ್ಕಡಗಿಸುವ ತಾಕತ್ತು ನಮಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪರಿಣಾಮ ಈಗ ಇತರೆ ಧರ್ಮಗಳ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶದಿಂದ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದ ಮೇಲೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಪಡಿತರ ಚೀಟಿ ಫಲಾನುಭವಿಗಳಿಗೆ ರೇಷನ್ ಜೊತೆಗೆ 7,000 ಹಣ ಉಚಿತ, ಈ ಆಫರ್ ಅನ್ನು ಯಾರು ಮಿಸ್ ಮಾಡಿಕೊಳ್ಳಬೇಡಿ.