ರಾತ್ರೋರಾತ್ರಿ ಶ್ರೀಮಂತರಾಗಬೇಕು ಎಂದರೆ ಲಾಟರಿಯೇ ಹೊಡೆಯಬೇಕು. ಯಾಕೆಂದರೆ ಹಳ್ಳದ ಕಡೆಗೆ ನೀರು ಹರಿವುವುದು, ಹಣವಂತರಿಗೆ ಹಣ ಸೇರುವುದು. ಹಣ ಇಲ್ಲದವನು ಒಂದೇ ಬಾರಿಗೆ ಈ ರೀತಿ ಎಲ್ಲವನ್ನು ಪಡೆದು ನೆಮ್ಮದಿಯಾಗಿರಬೇಕು ಎಂದರೆ ಆತನಿಗೆ ಲಾಟರಿ ಮೂಲಕ ಅದೃಷ್ಟ ಕುಲಾಯಿಸಬೇಕು. ಲಾಟರಿ ಎನ್ನುವುದರ ಮೂಲಕ ಹಣೆಬರಹ ಬದಲಾಯಿಸಿಕೊಂಡ ಜನರಿಗಿಂತ ಬದುಕು ಬರ್ಬಾದ್ ಮಾಡಿಕೊಂವರೇ ಹೆಚ್ಚು.
ಲಾಟರಿ ಎನ್ನುವುದು ಯಾವುದೇ ಜೂಜಿಗಿಂತ ಕಡಿಮೆ ಇಲ್ಲ, ಈ ಗೀಳು ಹತ್ತಿದರೆ ಮನೆ ಮಠ ಮಾರಿ ಲಾಟರಿ ಟಿಕೆಟ್ ಖರೀದಿಸುವವರು ಇದ್ದಾರೆ. ಈ ಕಾರಣದಿಂದಾಗಲೇ ನಮ್ಮ ರಾಜ್ಯದಲ್ಲಿ ದಶಕಗಳ ಹಿಂದೆಯೇ ಲಾಟರಿ ಟಿಕೆಟ್ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಹಲವು ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ. ಕೆಲವು ರಾಜ್ಯಗಳಲ್ಲಿ ಸರ್ಕಾರವೇ ಲಾಟರಿ ಟಿಕೆಟ್ ನಡೆಸುತ್ತದೆ.
ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲೂ ಕೂಡ ಲಾಟರಿ ಟಿಕೆಟ್ ಮಾರಾಟ ಮಾಡಲಾಗುತ್ತದೆ, ಅಲ್ಲಿನ ಸರ್ಕಾರವೇ ಇದರ ನೇತೃತ್ವ ವಹಿಸಿಕೊಂಡಿದೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಹಬ್ಬ ಆಚರಣೆಗಳಲ್ಲಿ ಕೇರಳ ಸರ್ಕಾರವು ಲಾಟರಿ ಟಿಕೆಟ್ ಆಯೋಜಿಸುತ್ತದೆ. ಗಡಿ ಜಿಲ್ಲೆಗಳಲ್ಲಿರುವ ಅನೇಕರು ಕೇರಳಕ್ಕೆ ಹೋಗಿ ಲಾಟರಿ ಟಿಕೆಟ್ ಖರೀದಿಸುತ್ತಾರೆ, ಈ ಮೂಲಕ ತಮ್ಮ ಅದೃಷ್ಟವನ್ನು ಚೆಕ್ ಮಾಡಿಕೊಳ್ಳುತ್ತಾರೆ.
ಈ ಬಾರಿ ಅದೇ ರೀತಿ ಪ್ರಯತ್ನ ಮಾಡಿದ ತಕ್ಷಣ ಕನ್ನಡದ ಮೇಸ್ತ್ರಿ ಒಬ್ಬರಿಗೆ ಅದೃಷ್ಟ ಕುಲಾಯಿಸಿ ರಾತ್ರೋರಾತ್ರಿ ರಾಜ್ಯದ ಎಲ್ಲರ ಗಮನ ಅವರ ಮೇಲೆ ಬೀಳುವಂತಾಗಿದೆ. ಕೇರಳದಲ್ಲಿ ಕಳೆದ ತಿಂಗಳು ಕೇರಳ ಓಣಂ ಹಬ್ಬ ಆಚರಿಸಲಾಯಿತು. ಈ ವೇಳೆ ವಾಡಿಕೆಯಂತೇ ಬಂಪರ್ ಲಾಟರಿ ಆಯೋಜಿಸಿತ್ತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್ ಖರೀದಿ ಮಾಡಿ ತಮ್ಮ ಲಕ್ ಚೆಕಾ ಮಾಡಲು ಕಾತುರರಾಗಿದ್ದರು. ಸರ್ಕಾರ ಒಂದು ಟಿಕೆಟ್ಗೆ 500 ರೂ. ನಿಗದಿ ಮಾಡಿತ್ತು. ಸೆ. 22ರಂದು ಇದರ ಫಲಿತಾಂಶ ಪ್ರಕಟವಾಗಿದೆ.
ಇದರಲ್ಲಿ ತಮಿಳುನಾಡಿನ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ, ಹಾಗೆಯೇ ಕರ್ನಾಟಕದ ಒಬ್ಬ ವ್ಯಕ್ತಿಗೂ ಇದರಿಂದ ರಾತ್ರೋರಾತ್ರಿ ಅದೃಷ್ಟ ಬದಲಾಗಿದೆ. ಇದೇ ಓಣಂ ಲಾಟರಿಯಲ್ಲಿ ನಮ್ಮ ರಾಜ್ಯದ ದಕ್ಷಿಣ ಕನ್ನಡದ ಉಪ್ಪಿನಂಗಡಿ ಮೂಲದ ಮೇಸ್ತ್ರಿ ಒಬ್ಬರು ಯಾರೇ ಟಿಕೆಟ್ ಖರೀದಿಸಿದ್ದರು. ಅದು ಯಾವ ಜನ್ಮದ ಪುಣ್ಯವೋ ಅವರಿಗೆ ಇದರಿಂದ ಅದೃಷ್ಟ ಒಲಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಇಳಂತಿಲ ನಿವಾಸಿ ಚಂದ್ರಯ್ಯ ಎಂಬುವರು ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದರು. ಆ ವೇಳೆ ಓಣಂ ವಿಶೇಷ ಲಾಟರಿ ಮಾರುತ್ತಿರುವುದು ತಿಳಿದು ತಾವು ಸಹ ಅದರಲ್ಲಿ ಒಂದು ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಆ ಟಿಕೆಟ್ ನಂಬರ್ ಗೆ ಬಂಪರ್ ಪ್ರೈಸ್ ಹೊಡೆದಿದೆ. ಚಂದ್ರಯ್ಯ ಅವರು 50 ಲಕ್ಷ ರೂ. ನಗದು ಬಹುಮಾನವನ್ನು ಈ ಮೂಲಕ ಗೆದ್ದಿದ್ದಾರೆ.
ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಬಳಸಿದ ಪರಿಣಾಮ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾ’ವು.!
ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ 500 ರೂ. ಕೊಟ್ಟು ಚಂದ್ರಯ್ಯ ಟಿಕೆಟ್ ಖರೀದಿಸಿದ್ದರು. ಇದೀಗ ಅವರಿಗೂ ಬಹುಮಾನ ಬಂದಿದ್ದು, ಚಂದ್ರಯ್ಯ ಅವರ ಬದುಕು ಬದಲಾಗಿದೆ. ಚಂದ್ರಯ್ಯ ಲಾಟರಿ ಗೆದ್ದಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು ಎಲ್ಲರೂ ಚಂದ್ರಯ್ಯ ಅವರ ಅದೃಷ್ಟವನ್ನು ಹಾಡಿ ಹೊಗಳುತ್ತಿದ್ದಾರೆ. ಈ ರೀತಿ ಅದೃಷ್ಟ ಕುಲಾಯಿಸುವುದಕ್ಕೂ ಋಣ ಇರಬೇಕು ಎನ್ನೋಣ.