ಭಾರತದಲ್ಲಿ ವ್ಯವಸಾಯವು ಮಳೆ ಜೊತೆ ಆಡುವ ಜೂಜಾಟ ಎಂದು ಹೇಳಲಾಗುತ್ತಿತ್ತು. ಆದರೆ ಸದ್ಯಕ್ಕೆ ರೈತರ ಬದುಕು ತಾನು ಬೆಳೆದ ಬೆಳೆಗಳ ಬೆಲೆಗಳ ಜೊತೆ ಆಡುವ ಜೂಜಾಟ ಎಂದರೆ ತಪ್ಪಾಗಲಾರದು. ಯಾಕೆಂದರೆ, ಯಾವ ಬೆಳೆಗೆ ಯಾವಾಗ ಬೆಲೆ ಇಳಿಯುತ್ತದೆ ಯಾವಾಗ ಬಂಗಾರದ ಬೆಲೆ ಬರುತ್ತದೆ ಎನ್ನುವುದೇ ತಿಳಿಯದಂತಾಗಿದೆ.
ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಈಗ ಕೆಲ ತಿಂಗಳ ಹಿಂದೆಯಷ್ಟೇ ಭಾರತದಲ್ಲಿ ಟಮೋಟೊ kg 150ರೂ. ದಾಟಿ ಆಪಲ್ ಬೆಲೆಗೆ ಮಾರಾಟವಾಗಿದ್ದನ್ನು ಉದಾಹರಿಸಬಹುದು. ಇದೇ ಮೊದಲ ಬಾರಿಗೆ ಇದುವರೆಗೂ ಇದ್ದ ರೆಕಾರ್ಡ್ ಬ್ರೇಕ್ ಮಾಡಿ ಇಷ್ಟು ದೊಡ್ಡ ಬೆಲೆಗೆ ಟಮೋಟೊ ಮಾರಾಟವಾಗಿತ್ತು ಆದರೆ ನೀರಿನ ಗುಳ್ಳೆಯಂತೆ ಆ ಪರಿಸ್ಥಿತಿ ದಿಢೀರ್ ಎಂದು ಬದಲಾಯಿತು.
ನಮ್ಮದು ಮಹಿಳಾಪ್ರಿಯ ಸರ್ಕಾರ, ಮಧ್ಯದದಂಗಡಿ ತೆರೆಯುವುದಕ್ಕೆ ನಮ್ಮದು ವಿರೋಧವಿದೆ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.!
ಸಾಮಾನ್ಯವಾಗಿ ತರಕಾರಿಗಳ ಬೆಲೆಗಳು ಯಾವಾಗಲೂ ರೈತನಿಗೆ ಲಾಭ ತಂದು ಕೊಡುವುದಿಲ್ಲ ಅಪರೂಪಕೊಮ್ಮೆ ಮಾತ್ರ ಈ ರೀತಿಯ ಅದೃಷ್ಟ ಬರುತ್ತದೆ ಇದನ್ನು ನಂಬಿಕೊಂಡು ಇದೇ ರೇಟ್ ಇರುತ್ತದೆ ಅಥವಾ ಕಡಿಮೆಯಾದರೂ ಲಾಭದ ಬೆಲೆಗಾದರೂ ಮಾರಾಟವಾಗುತ್ತದೆ ಎಂದುಕೊಂಡು ಸಾಲ ಸೋಲ ಮಾಡಿ ಜಮೀನು ತುಂಬಾ ಟಮೋಟೋ (tomato) ಬೆಳೆಯನ್ನೇ ಬೆಳೆದ ರೈತರೀಗ (farmer) ಕಂಗಾಲಾಗಿ ಹೋಗಿದ್ದಾರೆ.
ರಾಜ್ಯದ ಯುವ ರೈತ ದಂಪತಿಗಳು ಇದೇ ರೀತಿಯ ಕನಸು ಕಂಡು ಟಮೋಟೋ ಬೆಳೆದು ಈಗ ಬೆಲೆ ಕುಸಿದ ಕಾರಣ ಸಾಲಬಾಧೆಗೆ ಹೆದರಿ ಆ’ತ್ಮ’ಹ’ತ್ಯೆ (Suicide) ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಪಾವಗಡ (Pavagada) ಭಾಗದ ರೊಪ್ಪ ಎನ್ನುವ ಗ್ರಾಮದ ಮನು ಮತ್ತು ಪವಿತ್ರ ಎನ್ನುವ ದಂಪತಿಗಳು ಮೃ’ತ ದುರ್ದೈವಿಗಳು.
ಅನೈತಿಕ ಸಂಬಂಧ ಹೊಂದಿರುವ ಪತ್ನಿಯು ಪತಿಯಿಂದ ಜೀವನಾಂಶ ಕೊರುವಂತಿಲ್ಲ – ಹೈಕೋರ್ಟ್ ಆದೇಶ
ಎರಡು ಮೂರು ತಿಂಗಳ ಹಿಂದೆ ಟೋಮೋಟೋಗೆ ಬೆಲೆ ಸಿಕ್ಕಿದ ರೀತಿಯೇ ಬೆಲೆ ಇರುತ್ತದೆ ಎನ್ನುವ ನಂಬಿಕೆ ರೈತನಲ್ಲಿ ಬಲವಾಗಿತ್ತು. ಹೀಗಾಗಿ ಇದುವರೆಗೆ ಇರುವ ಸಾಲವನ್ನು ತೀರಿಸಿಕೊಳ್ಳಲು ಒಳ್ಳೆ ಅವಕಾಶ ಎಂದುಕೊಂಡು ಈ ಬಾರಿ ಕೂಡ ತಮ್ಮ ಶಕ್ತಿ ಮೀರಿ ಸಾಲ ಪಡೆದು ಟಮೋಟೋ ಕೃಷಿ ಮಾಡಿದ್ದರು.
ಟೊಮೆಟೊ ಬೆಳೆ ಕೂಡ ಉತ್ತಮವಾಗಿ ಬಂದು ರೈತನ ಕೈ ಹಿಡಿದಿತ್ತು ಆದರೆ ಬೆಲೆ ಕುಸಿದ ಕಾರಣ ರೈತ ಕಂಗಾಲಾಗಿ ಹೋಗಿದ್ದಾನೆ. ಪರಿಸ್ಥಿತಿ ಹೀಗಾಗಿತ್ತಲ್ಲ ಎಂದು ಹೆದರಿ ಪತ್ನಿ ಜೊತೆ ಆ’ತ್ಮ’ಹ’ತ್ಯೆ ಮಾಡಿಕೊಂಡಿದ್ದಾನೆ ಪತಿ ಹಾಗೂ ಪತ್ನಿ ಒಂದೇ ಬಟ್ಟೆನಲ್ಲಿ ನೇಣು ಬಿಗಿದುಕೊಂಡು ಮೃ’ತ ಪಟ್ಟಿದ್ದಾರೆ.
ರೊಪ್ಪ ಗ್ರಾಮದ ಮನು ಪಾಲ ಗುಂಟೆಯ ಪವಿತ್ರ ಎನ್ನುವವರನ್ನು ಮೂರು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು. ಪವಿತ್ರಗೇಮ್ ಕೇವಲ 24 ಹಾಗೂ ಮನು ಇನ್ನೂ 27ರ ಯುವಕ. ಇವರಿಗೆ 2 ವರ್ಷದ ಹೆಣ್ಣು ಮಗಳಿದ್ದಾಳೆ. ಇನ್ನು ಸಹ ಬದುಕಿ ಬಾಳಬೇಕಿದ್ದ ವಯಸ್ಸು ಆದರೆ ದಂಪತಿಗೆ ಸಾಲಮಾದೆ ಸಾ’ವಿ’ನ ಮಾರ್ಗ ತೋರಿಸಿದೆ. ಲಾಭದ ನಿರೀಕ್ಷೆಯಲ್ಲಿದ್ದ ದಂಪತಿಗಳು ಇಂತಹ ದುಡುಕಿನ ನಿರ್ಧಾರವನ್ನು ಕೈಗೊಂಡಿದ್ದಾರೆ.
ತಮ್ಮದೇ ತೋಟದ ಮನೆಯಲ್ಲಿ ಇಬ್ಬರು ಒಂದೇ ವೇಲಿಗೆ ಕೊರಳುತ್ತಿದ್ದಾರೆ. ಕಳೆದ ಗುರುವಾರ ತಡರಾತ್ರಿ ಘಟನೆ ನಡೆದಿದೆ, ಶುಕ್ರವಾರ ಬೆಳಗ್ಗೆ ಎಷ್ಟೇ ಹೊತ್ತಾದರೂ ಮನೆ ಬಾಗಿಲು ತೆಗೆಯದೆ ಇದ್ದದ್ದನ್ನು ಗಮನಿಸಿದ ಅಕ್ಕ ಪಕ್ಕದವರು ಕಿಟಕಿಯಿಂದ ನೋಡಿ ತಕ್ಷಣವೇ ಪಾವಗಡ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ಆ’ತ್ಮ’ಹ’ತ್ಯೆ’ಗೆ ಕಾರಣ ತಿಳಿದು ಬಂದಿದೆ. ಸದ್ಯಕ್ಕೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.