ಟಾಲಿವುಡ್ ನಟ ಪವನ್ ಕಲ್ಯಾಣ್ (Tollywood Hero Pawan Kayan) ರವರು ಒಂದಲ್ಲ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ತೊಡಗಿಕೊಂಡಿರುವ ಇವರು ಆಂಧ್ರಪ್ರದೇಶದಲ್ಲಿ ಜನಸೇನಾ ಪಕ್ಷದ (Jansena Party) ಅಧ್ಯಕ್ಷರಾಗಿದ್ದಾರೆ.
ಮುಂಬರಲಿರುವ ಆಂಧ್ರ ಚುನಾವಣೆ ಕಡೆ ಗಮನ ಹರಿಸಿರುವ ಇವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಸದ್ಯಕ್ಕೆ ರಾಜಕೀಯದ ಕಡೆ ಹೆಚ್ಚು ಆಸಕ್ತರಾಗಿರುವ ಇವರು ಪಕ್ಷ ಸಂಘಟನೆಯತ್ತ ಮುಖ ಮಾಡಿದ್ದಾರೆ. ಸಿನಿಮ ರಾಜಕೀಯ ಹೊರತುಪಡಿಸಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನವು ಕೂಡ ಅದರಲ್ಲಿ ಅವರ ಮದುವೆ ಬಗ್ಗೆ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಗಳು ಹರಿದಾಡುತ್ತಿರುತ್ತವೆ.
ಎಲ್ಲರಿಗೂ ತಿಳಿದಿರುವಂತೆ ಪವನ್ ಕಲ್ಯಾಣ್ ಅವರಿಗೆ ಮೂರು ಮದುವೆಯಾಗಿದೆ. ಎದುರಾಳಿ ಪಕ್ಷಗಳಂತೂ ಪವನ್ ಕಲ್ಯಾಣ್ 3 ಮದುವೆ ಆಗಿದ್ದಾರೆ ಎನ್ನುವ ವಿಚಾರವನ್ನೇ ದಾಳವಾಗಿಟ್ಟಕೊಂಡು ವಾಗ್ದಾಳಿ ನಡೆಸುತ್ತಿರುತ್ತವೆ, ಪವರ್ ಸ್ಟಾರ್ ಕಡೆಯಿಂದ ಮತ್ತು ಅವರ ಫ್ಯಾನ್ಸ್ ಗಳ ಕಡೆಯಿಂದ ತಿರುಗೇಟು ಸಿಗುತ್ತಲೇ ಇರುತ್ತದೆ.
ಎರಡು ವಿ’ಚ್ಛೇ’ದ’ನವಾಗಿರುವ ಪವನ್ ಕಲ್ಯಾಣ್ ಬದುಕಿನಲ್ಲಿ ಮತ್ತೊಂದು ಬಿರುಗಾಳಿ ಬೀಸಲಿದೆ ಈ ವರ್ಷದಲ್ಲಿ ಅವರು ತಮ್ಮ ಮೂರನೇ ಪತ್ನಿಗೂ ವಿ’ಚ್ಛೇ’ದ’ನ ಕೊಡಲಿದ್ದಾರೆ ಎನ್ನುವ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ನುಡಿದಿರುವುದು ಮತ್ತೊಮ್ಮೆ ಪವನ್ ಕಲ್ಯಾಣ್ ಕಲ್ಯಾಣದ ವಿಚಾರ ಮುನ್ನೆಲೆಗೆ ಬರುವುದಕ್ಕೆ ಕಾರಣವಾಗಿದೆ.
ಪವನ್ ಕಲ್ಯಾಣ್ 1997ರಲ್ಲಿ ನಂದಿನಿ ಮತ್ತು ಆ ಬಳಿಕ ಬದ್ರಿ ಸಿನಿಮಾದಲ್ಲಿ ತನ್ನ ಜೊತೆ ನಟಿಸಿದ ರೇಣು ದೇಸಾಯಿ ಇವರನ್ನು ಎರಡನೇ ಮದುವೆಯಾಗಿದ್ದರು. ಇಬ್ಬರ ಜೊತೆಗೂ ವಿ’ಚ್ಛೇ’ದ’ನವಾಗಿತ್ತು, ಈಗ ರಷ್ಯಾ ಮೂಲದ ನಟಿ ಅನ್ನಾ ಲೆಜ್ನೆವಾ ಕೈ ಹಿಡಿದು ಸಂತೋಷವಾಗಿದ್ದಾರೆ.
ಸೆಲೆಬ್ರಿಟಿಗಳ ವೃತ್ತಿ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಬಗ್ಗೆ ಮಾತನಾಡಿ ಜ್ಯೋತಿಷಿ ವೇಣುಸ್ವಾಮಿ ಜನಪ್ರಿಯತೆ ಗಳಿಸಿದ್ದಾರೆ. ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗಿದ್ದಾರೆ. ನಾಗಚೈತನ್ಯಾ, ಸಮಂತಾ, ಪವನ್ ಕಲ್ಯಾಣ್, ರಶ್ಮಿಕಾ ಮಂದಣ್ಣ, ಪ್ರಭಾಸ್ ಸೇರಿದಂತೆ ಹಲವರ ಬಗ್ಗೆ ವೇಣುಸ್ವಾಮಿ ಮಾತನಾಡಿ ಚರ್ಚಗೆ ಗ್ರಾಸವಾಗಿದ್ದರು.
ಆದರೆ ಇವರು ಹೇಳಿದಂತೆ ಅನೇಕ ಬಾರಿ ಘಟನೆಗಳು ನಡೆದಿದೆ. ನಾಗಚೈತನ್ಯಾ ಹಾಗೂ ಸಮಂತಾ ನಡುವೆ ಡಿ’ವೋ’ರ್ಸ್ ಆಗುತ್ತದೆ ಎಂದು ವೇಣು ಸ್ವಾಮಿ ಹಿಂದೆಯೇ ಹೇಳಿದ್ದರು. ಅದು ನಿಜವಾದ ಬಳಿಕ ಹಲವರು ಇವರ ಮಾತಿಗೆ ಬೆಲೆ ಕೊಡಲು ಶುರು ಮಾಡಿದರು.
ಹೊಸ ವರ್ಷದ ಆರಂಭದಲ್ಲಿ 2024ರಲ್ಲಿ ಟಾಲಿವುಡ್ ಸೆಲೆಬ್ರೆಟಿಗಳ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಆಗ ಪವನ್ ಕಲ್ಯಾಣ್ ಬದುಕಿನ ಬಗ್ಗೆ ಮಾತನಾಡಿ ಪವನ್ ಕಲ್ಯಾಣ್ ಮತ್ತೆ ಡಿ’ವೋ’ರ್ಸ್ ಪಡೆಯುತ್ತಾರೆ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟಿದ್ದಾರೆ.
ಚಿತ್ರರಂಗದಲ್ಲಿಯೇ ಪವರ್ ಸ್ಟಾರ್ಗೆ ಒಳ್ಳೆ ಭವಿಷ್ಯ ಇದೆ, ಆದರೆ ವೈಯಕ್ತಿಕ ವಿಚಾರಗಳಲ್ಲಿ ವಿ’ವಾ’ದಗಳು ಎದುರಾಗುತ್ತದೆ. ಅದನ್ನು ಪವನ್ ಕಲ್ಯಾಣ್ ಎದುರಿಸಲೇಬೇಕು ಎಂದಿದ್ದಾರೆ. ಪವನ್ ಕಲ್ಯಾಣ್ಗೆ ತಿಳಿ ಹೇಳುವವರು ಯಾರು ಇಲ್ಲ. ಹಾಗಾಗಿ ರಾಜಕೀಯರಂಗಕ್ಕಿಳಿದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಆತ ಬರೀ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮಾತುಗಳನ್ನು ಮಾತ್ರ ಕೇಳುತ್ತಾರೆ.
ತ್ರಿವಿಕ್ರಮ್ ಶ್ರೀನಿವಾಸ್ ಪರ್ಸನಲ್ ಲೈಫ್ ಬಗ್ಗೆ ಅಡ್ವೈಸ್ ಮಾಡಲಾಗುವುದಿಲ್ಲ. ಪವನ್ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಏನು ಮಾಡಿದರೆ ಮುಖ್ಯಮಂತ್ರಿ ಆಗ್ತೀನಿ ಎನ್ನುವ ಬಗ್ಗೆ ಚಿಂತಿಸಬೇಕು. ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ನಾನು ಸಹಾ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಇದೇ ವೇಣುಸ್ವಾಮಿ ಸಲಾರ್ ಸಿನಿಮಾ ಕೂಡ ಸೋಲುತ್ತದೆ ಎಂದು ಹೇಳಿ ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಈಗ ಸಿನಿಮಾ ಸಕ್ಸಸ್ ಕಂಡಿದೆ. ಹಾಗಾಗಿ ಈ ಭವಿಷ್ಯವನ್ನು ಎಷ್ಟು ಜನ ನಂಬುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ.