ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಮತಕ್ಷೇತ್ರವಾದ ವಾರಣಾಸಿಯಲ್ಲಿ (Varanasi) ಅಂತರಾಷ್ಟ್ರೀಯ ಕ್ರೀಡಾಂಗಣ (International Statium) ತಲೆ ಎತ್ತುತ್ತಿದೆ. ಇದೇ ಶನಿವಾರದಂದು ಈ ಕಾರ್ಯಕ್ಕೆ ಪ್ರಧಾನ ಮಂತ್ರಿಗಳು ಶಂಕು ಸ್ಥಾಪನೆ ಮಾಡಿ ನಾಂದಿ ಹಾಡಲಿದ್ದಾರೆ.
ಈ ವೇಳೆ, ದೇಶದ ಕ್ರಿಕೆಟ್ ಇತಿಹಾಸದಲ್ಲಿ ದಂತಕಥೆಗಳಾಗಿರುವ ನಾಯಕರುಗಳಾದ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ತಾರೆಯರು ಪ್ರಧಾನಿ ಮೋದಿಯವರ ಜೊತೆ ಉಪಸ್ಥಿತರಿರುತ್ತಾರೆ ಇಂದು ಮಾಧ್ಯಮಗಳ ಮೂಲಗಳು ತಿಳಿಸಿವೆ. ಇದರ ವಿಶೇಷತೆ ಏನೆಂದರೆ ಶಿವನನ್ನೇ ಹೋಲುವ ಶಿವನ ಥೀಮ್ ನಲ್ಲಿ (Lord Shiva Theme) ಸ್ಟೇಡಿಯಂ ರೆಡಿಯಾಗುತ್ತಿದೆ ಹಾಗಾಗಿ ಭಾರತೀಯರ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ರೈಲು ನಿಲ್ದಾಣದಲ್ಲಿ ಸೂಟ್ ಕೇಸ್ ಹೊತ್ತು, ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ.!
ಕಳೆದ ತಿಂಗಳಷ್ಟೇ ನರೇಂದ್ರ ಮೋದಿಯವರು ನಮ್ಮ ಭಾರತದ ISBO ವಿಜ್ಞಾನ ಸಂಸ್ಥೆ ಚಂದ್ರನ ಅಂಗಳಕ್ಕೆ ಕಳುಹಿಸಿದ್ದ ವಿಕ್ರಂ ಲ್ಯಾಂಡರ್ ಮೊದಲು ಇಳಿದ ಸ್ಥಳವನ್ನು ಶಿವಶಕ್ತಿ ಕೇಂದ್ರ (Shivashakthi Kendra) ಎಂದು ಹೆಸರಿಸಿ ಶಿವ ಭಗವಾನ್ ನನ್ನು ನೆನೆದಿದ್ದರು, ಮುಂದುವರೆದು ಈಗ ತಮ್ಮ ಕ್ಷೇತ್ರದಲ್ಲಿ ಶಿವನಿಂದ ಸ್ಪೂರ್ತಿ ಪಡೆದ ಕ್ರೀಡಾಂಗಣ ಕಟ್ಟಲು ಅನುಮತಿ ನೀಡಿ ದೇಶದಲ್ಲಿ ಅತಿ ಹೆಚ್ಚು ಜನರು ಆರಾಧಿಸುವ ದೈವವಾದ ಶಿವನ ಭಕ್ತರಿಗೆ ಸಂತಸವನ್ನುಂಟು ಮಾಡಿದ್ದಾರೆ.
ಸದ್ಯದಲ್ಲೇ ಇದರ ಕುರಿತು ಗ್ರಾಫಿಕ್ ಪ್ರಿಂಟ್ (Graphic print) ಕೂಡ ತಯಾರಾಗಲಿದ್ದು ಇದರ ಸಂಬಂಧಿತ ಫೋಟೋ ಮತ್ತು ವಿಡಿಯೋಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೋಡುಗರೆಲ್ಲರೂ ಕೂಡ ಈ ವಿಭಿನ್ನ ವಿನ್ಯಾಸವನ್ನು ಕಂಡು ನಿಬ್ಬೆರಗಾಗಿ ಹೋಗಿದ್ದಾರೆ. ಶಿವನನ್ನು ಸೂಚಿಸುವ ಢಮರುಗ, ತ್ರಿಶೂಲ ಹಾಗೂ ಅರ್ಧಚಂದ್ರ ಆಕೃತಿಯಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು.
ತ್ರಿಶೂಲ್ ಆಕಾರದ ಫ್ಲಡ್ಲೈಟ್ಗಳು, ಢಮರುಗ ಆಕಾರದ ಮಾಧ್ಯಮ ಕೇಂದ್ರ, ಚಂದ್ರನ ಆಕಾರದ ಛಾವಣಿಯು 450 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ. ವಾರಣಾಸಿಯ ರಿಂಗ್ ರೋಡ್ ಬಳಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಸುಮಾರು 120 ಕೋಟಿ ರೂ. ಮತ್ತು BCCI 330 ಕೋಟಿ ರೂ. ವೆಚ್ಚ ಬರಿಸಲು ಒಪ್ಪಂದವಾಗಿದೆ ಎಂದು ಹೇಳಲಾಗುತ್ತಿದೆ.
ಈ ಕ್ರೀಡಾಂಗಣವು ಎಲ್ಲ ರೀತಿಯಲ್ಲೂ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದು, ಸ್ನಾನ ಘಟ್ಟದ ಮೆಟ್ಟಿಲುಗಳ ಮಾದರಿಯಲ್ಲಿ 30,000 ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಮತ್ತು ಒಳಚರಂಡಿ ವ್ಯವಸ್ಥೆ ಹಾಗೂ ಕ್ಲಬ್ಹೌಸ್ ಸೇರಿದಂತೆ ಇತರ ಎಲ್ಲಾ ಈಗಿನ ಸೌಕರ್ಯಗಳನ್ನು ಹೊಂದಿರುತ್ತದೆ.
ನಮ್ಮನ್ನ ಕೆಣಕಿದ್ರೆ ಮಸೀದಿಲೂ ಗಣೇಶನನ್ನು ಕೂರಿಸ್ತಿವಿ ಅಷ್ಟೇ, ಪ್ರಮೋದ್ ಮುತಾಲಿಕ್ ರಿಂದ ಎಚ್ಚರಿಕೆಯ ಸಂದೇಶ.!
ಈ ಕ್ರೀಡಾಂಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಹಾಗೂ ದೇಶೀಯ ಪಂದ್ಯಗಳು ಮಾತ್ರವಲ್ಲದೇ ಇತರ ಕ್ರೀಡಾಕೂಟಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಹಾಗಾಗಿ ಇದು ಇನ್ನು ಮುಂದೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಬೆಳದು ವಾರಣಾಸಿ ನಗರ (Varanasi City) ಮತ್ತು ಉತ್ತರ ಪ್ರದೇಶ (UP State) ರಾಜ್ಯದ ಆರ್ಥಿಕ ಬೆಳವಣಿಗೆಗೆ ಇದು ಕಾರಣವಾಗುತ್ತದೆ ಎಂದು ಸಹ ಊಹಿಸಲಾಗಿದೆ.
ಈ ಪ್ರದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಕೂಡ ನೆರವಾಗುವ ಭರವಸೆ ನೀಡಿದ್ದು ಇನ್ನೆರಡು ವರ್ಷಗಳಲ್ಲಿ ಅಂದರೆ 2025ರ ಡಿಸೆಂಬರ್ ಒಳಗೆ ಇದು ಉದ್ಘಾಟನೆಯಾಗುತ್ತದೆ ಎಂದು ಹೇಳಲಾಗುತ್ತಿದೆ ಮೊದಲು ಈ ಕ್ರೀಡಾಂಗಣವನ್ನು ಮೊಟೆರಾ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು.
ಆದರೆ ಅದನ್ನು ನವೀಕರಿಸಿ, ಸಂಪೂರ್ಣ ಬದಲಾವಣೆಗಳೊಂದಿಗೆ ಅದನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಯಿತು. ಸ್ಟೇಡಿಯಂ ಸುತ್ತಲೂ ಕಾರ್ಪೊರೇಟ್ ಮನೆಗಳೂ ನಿರ್ಮಾಣವಾಗಿದ್ದು, ಅವುಗಳ ಉದ್ಘಾಟನೆ ಕೂಡ ಸೆಪ್ಟೆಂಬರ್ 30ರಂದು ನಡೆಯಲಿದೆ. ಈ ಬಾರಿ ನೂತನ ಕ್ರೀಡಾಂಗಣ ತಲೆ ಎತ್ತುತ್ತಿರುವ ಸಂಭ್ರಮವನ್ನು ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲದೆ ಶಿವನ ಭಕ್ತರ ದಂಡು ಕೂಡ ಕಣ್ಣು ತುಂಬಿಕೊಳ್ಳಲು ಕಾಯುತ್ತಿದ್ದೆ ಎನ್ನುವುದು ಮತ್ತೊಂದು ವಿಶೇಷತೆಯಾಗಿದೆ.! ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ.!
ಪ್ರಕಾಶ್ ರಾಜ್ ಗೆ ಜೀವ ಬೆದರಿಕೆ, ವಿಕ್ರಂ ಟಿವಿ ವಾಹಿನಿ ವಿರುದ್ಧ FIR ದಾಖಲು.!