ಕರ್ನಾಟಕದಲ್ಲಿ ದರ್ಶನ್ (Darshan) ಎಂದರೆ ಅವರ ಹೆಸರೇ ಒಂದು ಬ್ರಾಂಡ್. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಒಂದು ಫೋಟೋ ಅಥವಾ ಅವರ ಯಾವುದಾದರೂ ಒಂದು ಅಪ್ಡೇಟ್ ಹಾಕಿದರೆ ಸಾಕು ಮಿಲಿಯನ್ ಕಟ್ಟಲೇ ವೀವ್ಸ್ ಹೋಗುವುದರಲ್ಲಿ ಅನುಮಾನವೇ ಇಲ್ಲ ಇದನ್ನು ಬಂಡವಾಳ ಮಾಡಿಕೊಂಡ ಮೀಡಿಯಾ ಗಳು TRP ಗಾಗಿ ದರ್ಶನ್ ಹೆಸರು ಬಳಸಿಕೊಳ್ಳುತ್ತಾರೆ ಎನ್ನುವ ವಾದ ವಿವಾದ ಇದ್ದೇ ಇದೆ.
ಇದೆಲ್ಲದರ ನಡುವೆ ದರ್ಶನ್ ಅವರ ಒಂದು ಕಾಸ್ಟ್ಯೂಮ್ ನಿಂದ ಲಕ್ಷ ಲಕ್ಷ ದುಡಿಯಬಹುದು ಎಂದು ಕೂಡ ಗೊತ್ತಾಗಿದೆ. ಕಾಟೇರ ಸಿನಿಮಾ (Katera Movie) ನೋಡಿದ ಅವರ ಅಭಿಮಾನಿಯೊಬ್ಬ ದಚ್ಚು ಸಿನಿಮಾ ಫೈಟಿಂಗ್ ದೃಶ್ಯವೊಂದರಲ್ಲಿ ಹಾಕಿದ್ದ ಕಾಸ್ಟ್ಯೂಮ್ (Costume buisness) ತಯಾರಿಸಿ ಅಭಿಮಾನಿಗಳಿಗೆ ಕೊಟ್ಟು ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್ ಇವರ ಸಂದರ್ಶವನ್ನು ಕೂಡ ಮಾಡಿದೆ. ಅವರ ಈ ಐಡಿಯಾ ಬಗ್ಗೆ ಅವರು ಹೇಳುವುದು ಇಷ್ಟೇ, ಕರ್ನಾಟಕದಲ್ಲಿ ಡಿ ಬಾಸ್ ಅಭಿಮಾನಿಗಳ ಕ್ರೇಝ್ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತು. ನಾನು ಸಿನಿಮಾ ಟ್ರೈಲರ್ ನೋಡಿದಾಗಲೇ ಅವರು ಫೈಟಿಂಗ್ ಸೀನ್ ನಲ್ಲಿ ಹಾಕಿಕೊಂಡು ಬರುವ ಆ ಶರ್ಟ್ ಮತ್ತು ಚಾಮುಂಡೇಶ್ವರಿ ಡಾಲರ್ ತುಂಬಾ ಅಟ್ರಾಕ್ಟಿವ್ ಆಗಿ ಕಾಣಿಸಿತು ನನಗೂ ಕೂಡ ಆ ರೀತಿ ಹಾಕಿಕೊಳ್ಳಬೇಕು ಎನಿಸಿತು.
ನನಗೆ ಈ ರೀತಿ ಅನಿಸಿದ ಮೇಲೆ ನನ್ನಂತೆ ಕರ್ನಾಟಕದಲ್ಲಿರುವ ಕೋಟ್ಯಾಂತರ ಅಭಿಮಾನಿಗಳು ಕೂಡ ಹೀಗೆ ಅಂದುಕೊಳ್ಳುತ್ತಾರೆ. ಹಾಗಾಗಿ ನಾವೇ ಶರ್ಟ್ ತಯಾರಿಸಿ ಮಾರಾಟ ಮಾಡೋಣ ಎನ್ನುವ ಸಣ್ಣ ಐಡಿಯಾ ಬಂತು ಆದ್ರೆ ದರ್ಶನ್ ಅಭಿಮಾನಿಗಳ ಕಾರಣದಿಂದಾಗಿ ಇದು ಕ್ಲಿಕ್ ಆಗಿ ಲಕ್ಷ ದುಡಿಯುತ್ತಿದ್ದೇನೆ.
ಸಿನಿಮಾ ತಯಾರಾಗಿ ವಾರವಾಗಿದೆ ಅಷ್ಟೇ ನಮ್ಮ ತಂಡ ದೊಡ್ಡದಿದೆ ಅದರಲ್ಲಿ ನಾನೊಬ್ಬನೇ ಐನೂರು ಶರ್ಟ್ ತನಕ ಮಾರಾಟ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಒಂದೆಡೆ ಕಾಟೇರ ಸಿನಿಮಾ ಎಲ್ಲಾ ರೆಕಾರ್ಡ್ ಗನ್ನು ಧೂಳಿಪಟ ಮಾಡಿ ಮತ್ತೊಂದು ರೆಕಾರ್ಡ್ ಕ್ರಿಯೇಟ್ ಮಾಡುತ್ತಿದೆ. ಕಲೆಕ್ಷನ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ ಯಾವತ್ತಿದ್ದರೂ ಮುಂದೆ ಈಗ ತನ್ನ ಸೆಲೆಬ್ರಿಟಿ ಬದುಕಿನ ಅದೃಷ್ಟವನ್ನು ಕೂಡ ಪರೋಕ್ಷವಾಗಿ ಈ ರೀತಿ ಬದಲಾಯಿಸಿಬಿಟ್ಟಿದ್ದಾರೆ.
ಈ ಹಿಂದೆಯೂ ಕೂಡ ಹಲವಾರು ಬಾರಿ ಈ ರೀತಿ ಸಿನಿಮಾ ನೋಡಿ ಆ ಕಾಸ್ಟ್ಯೂಮ್ ಫಾಲೋ ಮಾಡುವುದು, ಅವರು ಸಿನಿಮಾದಲ್ಲಿ ಹಾಕಿದ ಬಟ್ಟೆಯನ್ನು ಸೇಲ್ ಮಾಡಿದಾಗ ಖರೀದಿಸುವುದು, ಇದೆಲ್ಲ ನಡೆದಿರುವ ಉದಾಹರಣೆ ಇದೆ. ಆದರೆ ಅದು ಈ ಮಟ್ಟಕ್ಕೆ ಸಾಮಾನ್ಯನೊಬ್ಬನ ಬದುಕಿನಲ್ಲಿ ಲಾಭ ತಂದು ಕೊಟ್ಟಿರುವುದು ಇದೆ ಮೊದಲು ಎಂದರೆ ತಪ್ಪಾಗಲಾರದು.
ಯಾಕೆಂದರೆ ಅಭಿಮಾನಿಗಳು ಅದೇ ಕಾಸ್ಟ್ಯೂಮ್ ನಲ್ಲಿ ಸಿನಿಮಾ ನೋಡಲು ಬಯಸುತ್ತಿದ್ದಾರಂತೆ ಅದಕ್ಕಾಗಿ ದಿನದಿಂದ ದಿನಕ್ಕೆ ಗುಂಪು ಗುಂಪಲ್ಲಿ ಬಂದು ಅಭಿಮಾನಿಗಳು ಆರ್ಡರ್ ಕೊಡುತ್ತಿದ್ದಾರೆ ಅವರ ಬೇಡಿಕೆಗೆ ಸರಿಯಾದ ಸಮಯಕ್ಕೆ ಪೂರೈಕೆ ಮಾಡುವುದೇ ಕಷ್ಟವಾಗುತ್ತಿದೆ ಎಂದು ಹೇಳುತ್ತಿದ್ದಾರೆ ತಯಾರಕರು.
QR Code ಸ್ಕ್ಯಾನ್ ಮಾಡುವ ಮೂಲಕ ಕೂಡ ಆರ್ಡರ್ ಮಾಡಬಹುದು. ಇನ್ಸ್ಟ, Reeliv app ನಿಂದ ಕೂಡ ಈ ಶರ್ಟ್ ಮತ್ತು ಚಾಮುಂಡೇಶ್ವರಿ ಡಾಲರ್ ಗಳನ್ನು ಆರ್ಡರ್ ಮಾಡಬಹುದು. ಸಿಂಗಲ್ ಪೀಸ್ ಖರೀದಿಸುವವರಿಗೆ 600ರೂ. 10ಕ್ಕಿಂತ ಹೆಚ್ಚು ಆರ್ಡರ್ ಕೊಡುವವರಿಗೆ ರಿಯಾಯಿತಿ ಕೂಡ ಇದೆ.
ಒಟ್ಟಿನಲ್ಲಿ ದರ್ಶನ್ ರವರಿಂದ ಇದೇ ರೀತಿ ಕಾಟಿರ ಸಿನಿಮಾದಂತಹ ಇನ್ನಷ್ಟು ಸಿನಿಮಾಗಳು ಬರಲಿ ಆ ಮೂಲಕ ಮನುಷ್ಯರ ಮನ ಪರಿವರ್ತನೆ ಆಗುವುದರ ಜೊತೆಗೆ ಸಮಾಜದಲ್ಲಿ ಬದಲಾವಣೆಗಳಾಗಲಿ. ಇದೇ ರೀತಿ ಹೊಸ ಹೊಸ ಐಡಿಯಾಗಳು ಯುವ ಜನತೆಯಲ್ಲಿ ಹುಟ್ಟಿ ಅವರ ಬದುಕು ಬಂಗಾರವಾಗಲಿ ಎಂದು ಹರಸೋಣ ನೀವು ಡಿ ಬಾಸ್ ಅಭಿಮಾನಿ ಆಗಿದ್ದರೆ ಸಿನಿಮಾ ಬಗ್ಗೆ ತಪ್ಪದೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.!