ಕನ್ನಡ ಸಿನಿಮಾ ಇಂಡಸ್ಟ್ರಿಯ ಟೈಗರ್ ಎಂದೇ ಹೆಸರಾದ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಅವರು ಒಬ್ಬ ಹೀರೋ ಆಗಿ ಮಾತ್ರ ಅಲ್ಲದೆ ಹಲವು ವಿಷಯವಾಗಿ ಯುವ ಜನತೆಗೆ ಸ್ಪೂರ್ತಿ ಆಗುತ್ತಾರೆ. ಎಷ್ಟೇ ಸೋಲು ಎದುರಾದರು, ಮತ್ತೆ ಗೆದ್ದು ನಿಲ್ಲುವ ಉತ್ಸಾಹ ಇರಬೇಕು, ಆ ಬಗೆಗೆ ನಂಬಿಕೆ ಇರಬೇಕು, ಅದರ ಸಲುವಾಗಿ ಮತ್ತಷ್ಟು ಪರಿಶ್ರಮ ಹಾಕಿ ಕೆಲಸ ಮಾಡಬೇಕು ಎನ್ನುವುದಕ್ಕೆ ವಿನೋದ್ ಪ್ರಭಾಕರ್ ಅವರ ಬದುಕು ಉದಾಹರಣೆ.
ಆದರೆ ವೈಯಕ್ತಿಕ ಜೀವನದಲ್ಲಿ ಎಷ್ಟು ಸಂತೋಷವಾಗಿರಬೇಕು ಹಾಗೆ ಇರಲು ಏನು ಬೇಕು ಎನ್ನುವುದಕ್ಕೆ ಮತ್ತೊಂದು ರೀತಿ ಉದಾಹರಣೆಯಾಗಿ ವಿನೋದ್ ಪ್ರಭಾಕರ್ ಮತ್ತು ಅವರ ಪತ್ನಿ ನಿಶಾ ವಿನೋದ್ ಪ್ರಭಾಕರ್ ಕಾಣ ಸಿಗುತ್ತಾರೆ. ವಿನೋದ್ ಪ್ರಭಾಕರ್ ಅವರು 2014ರಲ್ಲಿ ತಾವು ಪ್ರೀತಿಸಿದ ಹುಡುಗಿ ಆದ ನಿಶಾ ಅವರನ್ನು ವಿವಾಹ ಆಗುತ್ತಾರೆ. ಇವರಿಬ್ಬರದು ಪ್ರೇಮ ವಿವಾಹ ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ಆದರೂ ಕೂಡ ಆ ಹಂತ ತಲುಪುವ ತನಕ ಇಬ್ಬರು ಸಾಕಷ್ಟು ಸಂಘರ್ಷಗಳನ್ನು ಎದುರಿಸಿದ್ದಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನೂ ಸಹ ವಿನೋದ್ ಪ್ರಭಾಕರ್ ಅವರಿಗೆ ಗಟ್ಟಿಯಾದ ನೆಲೆ ಇರಲಿಲ್ಲ. ತಾವೇ ಇಲ್ಲಿ ಹೆಸರು ಮಾಡುವುದಕ್ಕೆ ಬಹಳ ಸ್ಟ್ರಗಲ್ ಮಾಡುತ್ತಿದ್ದ ಸಮಯ ಅದು ಹಾಗಾಗಿ ನಿಶಾ ಅವರ ಮನೆ ಕಡೆಯಿಂದ ಮದುವೆಗೆ ಒಪ್ಪಿಗೆ ಇರಲಿಲ್ಲ. ಒಂದು ಸಮಯದಲ್ಲಂತೂ ಬೇಡವೇ ಬೇಡ ಎಂದು ನಿರ್ಧರಿಸಿದ್ದರು. ಒಮ್ಮೊಮ್ಮೆ ಕುಟುಂಬದ ಸಲುವಾಗಿ ಬ್ರೇಕ್ ಅಪ್ ಮಾಡಿಕೊಳ್ಳುವ ರೀತಿ ಪ್ರಯತ್ನ ಪಡುವುದು ಆದರೆ ಒಮ್ಮೊಮ್ಮೆ ಪ್ರೀತಿಸಿದ ಹೃದಯವನ್ನು ಮರೆಯಲಾಗದೆ ಅದಕ್ಕಾಗಿ ಮಿಡಿಯುವುದು ಈ ತೊಳಲಾಟ ಎದುರಿಸಿದ ನಿಶಾ ಅವರು ಗಟ್ಟಿ ನಿರ್ಧಾರ ಮಾಡಿ ವಿನೋದ್ ಪ್ರಭಾಕರ್ ಅವರನ್ನು ಮದುವೆ ಆಗೆ ಬಿಡಬೇಕು ಎಂದು ನಿರ್ಧಾರ ಮಾಡಿ ಬಿಡುತ್ತಾರೆ.
ಇನ್ನು ಹೆಚ್ಚಿಗೆ ದಿನ ಕಳೆದರೆ ಏನಾಗುತ್ತದೆಯೋ ಎನ್ನುವ ಗೊಂದಲದಲ್ಲಿದ್ದ ಇಬ್ಬರು 2014ರಲ್ಲಿ ಮದುವೆ ಆಗಿ ಬಿಡಲು ದೃಢ ನಿಶ್ಚಯ ಕೈಗೊಂಡು ಅದಕ್ಕೆ ತಯಾರು ಮಾಡಿಕೊಳ್ಳುತ್ತಾರೆ. ಆಗ ವಿನೋದ್ ಪ್ರಭಾಕರ್ ಅವರು ಶಿವಣ್ಣ ಅವರ ಬೆಳ್ಳಿ ಸಿನಿಮಾದಲ್ಲಿ ಅವರ ಸ್ನೇಹಿತನ ಪಾತ್ರ ಮಾಡಿರುತ್ತಾರೆ. ಆ ಸಿನಿಮಾಗಾಗಿ ಬಂದ ಹಣದಲ್ಲಿ ಮದುವೆ ಆಗಲು ನಿರ್ಧಾರ ಮಾಡುತ್ತಾರೆ. ಆದರೆ ಆ ಹಣ ಸಾಕಾಗುವುದಿಲ್ಲ ಎನ್ನುವುದನ್ನು ಮನಗಂಡ ಪತ್ನಿ ನಿಶಾ ಅವರು ಕೂಡ ಆ ಮದುವೆಗಾಗಿ ಹಣ ಕೊಡುತ್ತಾರೆ.
ಬಹಳ ಸರಳವಾಗಿ ಸಂಪ್ರದಾಯ ಬದ್ಧವಾಗಿ ಮತ್ತು ಬಂದ ಎಲ್ಲರೂ ಕೂಡ ಸಂತೋಷಪಡುವಂತೆ, ತಮ್ಮ ಇಬ್ಬರ ಬಳಿ ಇದ್ದ ಹಣದಲ್ಲಿ ಒಟ್ಟು 5 ಲಕ್ಷ ಖರ್ಚು ಮಾಡಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇಂದು ಅದರ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುವ ಅವರು ಮದುವೆಗೆ ಹಿರಿಯರ ಆಶೀರ್ವಾದ ಬೇಕು, ಜೊತೆಗೆ ನಾವು ಸಹ ಅತಿಥಿಯಾಗಿ ಬಂದವರಿಗೆ ಗೌರವ ಕೊಡುವ ಸಲುವಾಗಿ ಅವರಿಗೆ ಊಟೋಪಚಾರ ನೋಡಿಕೊಳ್ಳಬೇಕು, ಅಷ್ಟನ್ನು ಮಾಡಿದ್ದೇವೆ ಸಾಕು.
ಆನಂತರ ಬದುಕು ಹೇಗೆ ಕಟ್ಟಿಕೊಳ್ಳುತ್ತೇವೆ ಎನ್ನುವುದು ಮುಖ್ಯ ಅಲ್ಲವೇ ಈ ದಿನದವರೆಗೂ ಕೂಡ ನಮಗೆ ಆಡಂಭರದ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲ ಎಂದು ಹೇಳಿಕೊಳ್ಳುವ ಅವರು ಆ ದಿನ ಅಂದು ಶುರು ಮಾಡಿದ ಇಬ್ಬರ ದಾಂಪತ್ಯವನ್ನು ಇಂದು ಲಂಕಾಸುರ ಎನ್ನುವ ಸಿನಿಮಾವನ್ನು ಒಟ್ಟಿಗೆ ಸಿನಿಮಾ ನಿರ್ಮಾಣ ಮಾಡುವ ಮಟ್ಟಿಗೆ ಜೊತೆಜೊತೆಯಾಗಿ ಒಬ್ಬರಿಗೊಬ್ಬರು ಹೇಗಲಾಗಿ ನಿಂತು ತಂದು ನಿಲ್ಲಿಸಿದ್ದಾರೆ. ಪ್ರೀತಿಸಿ ಮದುವೆಯಾಗಿ, ಪ್ರೀತಿ ನಂಬಿಕೆ ಮೇಲೆ ಬದುಕು ಕಟ್ಟಿಕೊಳ್ಳುವ ಅನೇಕರಿಗೆ ಈ ಜೋಡಿ ಮದುವೆ ಸ್ಪೂರ್ತಿ ಆಗಬಹುದು.