ಕರ್ನಾಟಕದಲ್ಲಿ ಯೋಗಿ ಅಲಿಯಾಸ್ ಲೂಸ್ ಮಾದ ಎಂದೇ ಫೇಮಸ್ ಆಗಿರುವ ಲೂಸ್ ಮಾದ ಯೋಗೇಶ್ ಅವರು ತಮ್ಮದೇ ಆದ ವಿಶೇಷ ಮ್ಯಾನರಿಸಂ ಹಾಗೂ ವಿಭಿನ್ನ ಬಗೆಯ ಡೈಲಾಗ್ ಡೆಲವರಿ ಯಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹೀರೋ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಇವರು ಮೊಟ್ಟಮೊದಲಿಗೆ ದುನಿಯಾ ಸಿನಿಮಾದ ಮೂಲಕ ನಟನೆ ಪ್ರಾರಂಭ ಮಾಡಿ, ನಂತರ ನಂದ ಲವ್ಸ್ ನಂದಿತಾ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿ ಸಂಪೂರ್ಣ ನಾಯಕ ನಟನಾಗಿ ಹೊರ ಹೊಮ್ಮಿದರು.
ನಂತರದ ದಿನಗಳಲ್ಲಿ ನಾಯಕ ನಟನಾಗಿ ಅಭಿನಯಿಸಲು ಬಹಳ ಬೇಡಿಕೆ ಪಡೆದಿದ್ದರು ಹಾಗೂ ಹೆಂಗಳೆಯರ ನೆಚ್ಚಿನ ನಟನಾಗಿ ಇದ್ದರು. ತದನಂತರ ಇವರು ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನಾಗಿ ಅಭಿನಯಿಸಿದರು. ನಂದ ಲವ್ಸ್ ನಂದಿತ, ಅಂಬಾರಿ, ಅಲೆಮಾರಿ, ರಾವಣ, ಪ್ರೀತ್ಸೆ ಪ್ರೀತ್ಸೆ, ಲೂಸ್, ಸಿದ್ಲಿಂಗು ಹೀಗೆ ಅವರು ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟರು. ರಮ್ಯಾ, ಮೇಘನಾರಾಜ್, ಶಿವಣ್ಣ, ಪ್ರಕಾಶ್ ರಾಜ್, ಪುನೀತ್ ರಾಜಕುಮಾರ್ ಹಾಗೂ ಇತರೆ ಸ್ಟಾರ್ ಕಲಾವಿದರೊಂದಿಗೆ ತೆರೆ ಹಂಚಿಕೊಂಡ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಇವರಾಗಿದ್ದಾರೆ.
ಇವರು ಪುನೀತ್ ರಾಜಕುಮಾರ್ ಅವರ ಅಭಿನಯದ ಹುಡುಗರು ಮತ್ತು ಯಾರೇ ಕೂಗಾಡಲಿ ಸಿನಿಮಾದಲ್ಲಿ ಅಭಿನಯಿಸಿ ಮತ್ತೊಂದು ರೀತಿಯ ಶೇಡ್ ಅಲ್ಲಿ ಕಾಣಿಸಿಕೊಳ್ಳಲು ಪ್ರಾರಂಭ ಮಾಡಿದರು. ಇತ್ತೀಚೆಗೆ ಡಾಲಿ ಧನಂಜಯ್ ಅವರೊಂದಿಗೂ ಕೂಡ ಜೈರಾಜ್ ಅವರ ಜೀವನದ ಚಿತ್ರ ಎನಿಸಿಕೊಂಡ ಹೆಡ್ ಅಂಡ್ ಬುಷ್ ಎಂಬ ಸಿನಿಮಾದಲ್ಲಿಯೂ ಕೂಡ ಮುಖ್ಯ ಪಾತ್ರ ಒಂದನ್ನು ನಿರ್ವಹಿಸಿದ್ದಾರೆ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಜೊತೆಗೂ ಕೂಡ ಲೀಡರ್ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ನಂತರ ಚಿತ್ರರಂಗದಲ್ಲಿ ನಾಯಕನಾಗಿ ಬೇಡಿಕೆ ಕಡಿಮೆ ಆಗುತ್ತಿದ್ದ ಸಮಯದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳಲ್ಲೂ ಕೂಡ ಅಭಿನಯಿಸುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಆದ್ದರಿಂದ ಯೋಗಿ ಅವರ ಅಭಿಮಾನಿಗಳು ಅವರನ್ನು ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಅವರ ಜೊತೆ ಹೋಲಿಕೆ ಮಾಡುತ್ತಾರೆ. ಹೀಗೆ ಚಿತ್ರರಂಗದಲ್ಲಿ ಜೀವನ ರೂಪಿಸಿಕೊಂಡಿದ್ದ ಯೋಗಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿಯೂ ಕೂಡ ಯಾವುದೇ ವಿವಾದ ಇಲ್ಲದೆ ಬದುಕುತ್ತಿದ್ದರು. ಆದರೆ ಇವರ ದಾಂಪತ್ಯದಲ್ಲಿ ಈಗ ಬಿರುಗಾಳಿ ಎದ್ದಿದೆ.
ಯೋಗಿ ಅವರು ತನ್ನ ಬಾಲ್ಯ ಸ್ನೇಹಿತೆ ಆಗಿದ್ದ ಸಂಗೀತ ಎಂಬುವವರೊಂದಿಗೆ 2017 ರಲ್ಲಿ ಹಸೆಮಣೆ ಏರಿದ್ದರು. ಈ ಮುದ್ದಾದ ಜೋಡಿಗೆ ಒಂದು ಮುದ್ದಾದ ಮಗು ಕೂಡ ಇದೆ. ಇದೀಗ ಯೋಗಿ ಅವರ ಪತ್ನಿ ಮನೆ ಬಿಟ್ಟು ಹೋಗಿದ್ದಾರಂತೆ. ಈ ವಿಷಯವನ್ನು ಸ್ವತಃ ಯೋಗಿ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಲೂಸ್ ಮಾದ ಯೋಗಿ ಅವರು ನಾನು ಅದು ಮತ್ತು ಸರೋಜಾ ಎಂಬ ಸಿನಿಮಾ ಬಿಡುಗಡೆ ಸಮಯದಲ್ಲಿ ನೀಡಿದ ಸಂದರ್ಶನ ಒಂದರಲ್ಲಿ ಅವರು ಎಷ್ಟು ಬ್ಯುಸಿ ಎನ್ನುವುದನ್ನು ಹೇಳುತ್ತಿರುವಾಗ.
ಎಲ್ಲಾ ಹೆಂಡತಿಯರಿಗೂ ತಮ್ಮ ಗಂಡ ತಮಗೆ ಮತ್ತು ಮಕ್ಕಳಿಗೆ ಸಮಯ ಕೊಡಬೇಕು ಎಂಬ ಆಸೆ ಇರುತ್ತದೆ. ಆದರೆ ನಾವು ಸಿನಿಮಾ, ಶೂಟಿಂಗ್ ಅಂತ ಬ್ಯುಸಿ ಇರುತ್ತೇವೆ ಆದ ಕಾರಣ ನನ್ನ ಹೆಂಡತಿ ಕೋಪ ಮಾಡಿಕೊಂಡು ಮಗು ಕರೆದುಕೊಂಡು ತವರು ಮನೆಗೆ ಹೋಗಿ ಬಿಟ್ಟಿದ್ದಾಳೆ ಎಂದು ಹೇಳಿದ್ದಾರೆ. ಯೋಗಿ ಅವರ ತಂದೆಯು ಕೂಡ ಒಬ್ಬ ಹೆಸರಾಂತ ಪ್ರೊಡ್ಯೂಸರ್ ಆಗಿದ್ದು, ಅಣ್ಣನು ಸಹ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇವರ ತಾಯಿ ಅಂಬುಜ ಅವರು ಕಿರುತೆರೆಯ ಪುನರ್ ವಿವಾಹ, ಚುಕ್ಕಿ, ಯಾರೆ ನೀ ಮೋಹಿನಿ ಇನ್ನು ಮುಂತಾದ ಅನೇಕ ಧಾರಾವಾಹಿಗಳಲ್ಲಿ ಖಡಕ್ ಅತ್ತೆಯ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ.