ಹೆಣ್ಣು ಎಂದರೆ ಸಂಸ್ಕಾರ, ಹೆಣ್ಣು ಅಂದರೆ ದೇವತೆಯ ರೂಪ, ಹೆಣ್ಣು ಎಂದರೆ ಲಕ್ಷಣ ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗಿರುವ ಚೌಕಟ್ಟು ಬಹಳ ಶ್ರೇಷ್ಠವಾದದ್ದು. ಸ್ವಾಮಿ ವಿವೇಕಾನಂದರು ಅವರಿದ್ದ ಕಾಲದಲ್ಲಿಯೇ ವಿದೇಶಿಕನೊಬ್ಬನ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದರು. ವಿದೇಶಿಗನೊಬ್ಬ ನಿಮ್ಮ ಭಾರತ ದೇಶದಲ್ಲಿ ಯಾಕೆ ಹೆಣ್ಣು ಮಕ್ಕಳು ಕೈಕುಲುಕಿ ವಿಶ್ ಮಾಡುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ ವಿವೇಕಾನಂದರು ನಮ್ಮ ದೇಶದಲ್ಲಿ ಮಹಾರಾಣಿಯರು ಬೇರೆಯವರ ಕೈ ಸ್ಪರ್ಶ ಮಾಡುವ ಪದ್ಧತಿ ಇಲ್ಲ.
ಆ ಕಾರಣಕ್ಕಾಗಿ ಅವರು ಪರಪುರುಷರನ್ನು ಮುಟ್ಟುವುದಿಲ್ಲ ಎಂದು ಹೇಳಿ ಭಾರತೀಯರ ಎಲ್ಲಾ ನಾರಿಯರು ಮಹಾರಾಣಿಯರಿಗೆ ಸಮಾನ ಯಾಕೆಂದರೆ ಅವರಿಗಿರುವ ಸಂಸ್ಕಾರವೇ ಅವರ ಸಿರಿ ಎಂದು ಈ ಮಾತಿನ ಮೂಲಕ ಸಾರಿದ್ದರು. ವಿದೇಶಿಗಳು ಕೂಡ ಆಸಕ್ತಿಯಿಂದ ನಮ್ಮ ಆಚಾರ ವಿಚಾರ ಕಲಿತು ಅನುಸರಿಸಲು ಹಾತೊರೆಯುತ್ತಿರುವ ಈ ಕಾಲದಲ್ಲಿ ಇಲ್ಲಿಯವರೇ ಈಗ ಅತಿರೇಕದಿಂದ ವರ್ತಿಸುತ್ತಿದ್ದಾರೆ.
ಅದರಲ್ಲೂ ಸಿನಿಮಾಗಳು, ಮಾಡಲಿಂಗ್, ಸೋಶಿಯಲ್ ಮೀಡಿಯಾ ಈ ರೀತಿ ಬಂದ ಮೇಲೆ ನಮ್ಮ ದೇಶದ ನಾರಿಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರಿ ಹೋಗಿ ಪಾಶ್ಚಿಮಾತ್ಯರು ಕೂಡ ನಾಚುವ ಹಾಗೆ ಅಸಭ್ಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಅ.ಶ್ಲೀ.ಲ.ತೆ.ಯು ಮಿತಿ ಮೀರಿದ್ದು ಇಡೀ ದೇಶವೇ ಇಂತಹ ಕೆಲವರ ಕೆಲಸದಿಂದ ತಲೆತಗ್ಗಿಸುವಂಥಾಗಿದೆ. ಈ ಸಾಲಿನಲ್ಲಿ ಮಹಿಳೆಯರೇ ಹೆಚ್ಚಾಗಿರುವುದು ಅದರಲ್ಲಿ ಯುವಜನತೆ ಈ ರೀತಿ ಹಾಳಾಗಿರುವುದು ದೇಶದ ಘನತೆಗೆ ಮಾ.ರ.ಕ. ಸೆಲೆಬ್ರಿಟಿಗಳು ಎಂದು ಗುರುತಿಸಿಕೊಂಡಿರುವವರು ಈ ರೀತಿ ನಡೆದುಕೊಂಡರೆ ಮುಗಿದೇ ಹೋಯಿತು.
ನಮ್ಮ ದೇಶದಲ್ಲಿ ಸಿನಿಮಾದಲ್ಲಿ ಬಣ್ಣ ಹಚ್ಚಿ ನಟನೆ ಮಾಡುವವರನ್ನು ಜೀವನದ ರೋಲ್ ಮಾಡಲಾಗಿ ತೆಗೆದುಕೊಂಡಿರುವುದೇ ದೊಡ್ಡ ದುರಂತ. ಇನ್ನು ಅವರ ಅಭಿಮಾನಿಗಳು ಅನುಯಾಯಿಗಳು ಎಂದು ಹೇಳಿಕೊಂಡು ಅವರು ಮಾಡಿದ್ದನ್ನೇ ಫಾಲೋ ಮಾಡಲು ಹೋಗಿ ಬದುಕು ದುರಂತವಾಗಿಸಿಕೊಳ್ಳುತ್ತಿದೆ ಯುವ ಸಮೂಹ ಮೊದಲೆಲ್ಲಾ ಬಾಲಿವುಡ್ ವಲಯವನ್ನು ಈ ರೀತಿ ದೂಷಿಸಲಾಗುತ್ತಿದ್ದು ಅಲ್ಲಿನ ನಟಿಯರು ಈ ರೀತಿ ಅರ್ಧಂಬರ್ಧ ಬಟ್ಟೆ ಧರಿಸಿ ಅಥವಾ ಸಿನಿಮಾ ಸೀನ್ ಗಳಲ್ಲಿ ಅವಶ್ಯಕತೆಗಿಂತ ಜಾಸ್ತಿ ಎಕ್ಪೋಸ್ ಆಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಆರೋಪ ಅಲ್ಲಿಯವರ ಮೇಲೆ ಇತ್ತು ನಿಧಾನಕ್ಕೆ ಆ ಗಾಳಿ ದಕ್ಷಿಣ ಕಡೆಗೂ ಸುಳಿದಿದೆ.
ದಕ್ಷಿಣ ಸಿನಿಮಾ ಇಂಡಸ್ಟ್ರಿ ಮೊದಲಿನಿಂದಲೂ ಸಿನಿಮಾಗಳ ವಿಚಾರವಾಗಿ ಒಳ್ಳೆ ಹೆಸರು ಮಾಡಿತ್ತು. ಈ ಸಿನಿಮಾಗಳ ಮೂಲ ಕೌಟುಂಬಿಕ, ಪೌರಾಣಿಕ ಮತ್ತು ಸಮಾಜದ ಕುರಿತು ಸಹಜವಾದ ಕಥೆ ಹೊಂದಿರುತ್ತಿದ್ದ ಕಾರಣ ಜನರ ಮನಸ್ಸಿಗೆ ಬಹಳ ಹತ್ತಿರವಾಗಿರುತ್ತಿದ್ದವು. ಈಗಲೂ ಸಹ ಸೌತ್ ಇಂಡಸ್ಟ್ರಿಗಳ ಸಿನಿಮಾಗಳು ನಂಬರ್ ಒನ್ ಸ್ಥಾನದಲ್ಲೇ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಆದ ಮೇಲೆ ಹೆಚ್ಚು ಗೆಲ್ಲುತ್ತಿರುವುದು ದಕ್ಷಿಣ ಸಿನಿಮಾಗಳೇ. ಆದರೆ ಈಗ ಇಲ್ಲೂ ಸಹ ಸಿನಿಮಾಗಳಲ್ಲಿ ನಗ್ನತೆ ಹೆಚ್ಚಾಗುತ್ತಿದ್ದು ಜೊತೆಗೆ ಸಿನಿಮಾದವರ ವರ್ತನೆಗೆ ನಾಗರಿಕರ ತಾಳ್ಮೆ ಕಟ್ಟೆಯೊಡೆದಿದೆ.
ದಕ್ಷಿಣದಲ್ಲಿ ಮಲಯಾಳಂ ಚಿತ್ರರಂಗವು (Mallywood) ತನ್ನದೇ ಆದ ಒಂದು ವಿಶೇಷತೆಯನ್ನು ಹೊಂದಿದೆ. ಮಲಯಾಳಂ ಸಿನಿಮಾಗಳು ಹೆಚ್ಚು ಸಸ್ಪೆನ್ಸ್ ಆಧಾರಿತ ಚಿತ್ರಗಳು ಆಗಿರುತ್ತವೆ, ಜೊತೆಗೆ ವಿಶೇಷ ಸಿನಿಮಾಟೋಗ್ರಫಿ ವಿಷುವಲ್ಸ್ ಇಂದ ಜನರಿಗೆ ಥ್ರಿಲ್ಲಿಂಗ್ ಅನುಭವವನ್ನು ನೀಡುವುದರಲ್ಲಿ ಈ ಚಿತ್ರರಂಗ ಗೆದ್ದಿದೆ. ಇನ್ನು ಇಲ್ಲಿ ಅಭಿನಯಿಸುವ ನಟಿಮಣಿಯರ ವಿಚಾರ ಹೇಳುವುದಾದರೆ ಇವರೆಲ್ಲರೂ ಸಹಜ ಸುಂದರಿಯರೇ ಎಂದು ಹೇಳಬಹುದು. ಮೇಕಪ್ ಇಲ್ಲದೇ ಇದ್ದಾಗಲೂ ಮಿಂಚುವ ಇವರ ಸೌಂದರ್ಯಕ್ಕೆ ಮಾರು ಹೋಗದವರೆಲ್ಲ.
ಇದೇ ಕಾರಣಕ್ಕೆ ಮಲಯಾಳಂ ಇಂದ ಬಂದ ಮೀರಾಜಾಸ್ಮಿನ್, ಭಾವನ ಮೆನನ್, ಪಾರ್ವತಿ ಮೆನನ್ ದೇಶದಾದ್ಯಂತ ಹೆಸರುವಾಸಿಯಾಗಿದ್ದಾರೆ. ಈ ಸಾಲಿಗೆ ಸೇರುವ ಮತ್ತೊಂದು ಹೆಸರು ಜಾನಕಿ ಸುಧೀರ್ (Janaki Sudeer) . 2017ರಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ಇವರು ಅನೇಕ ಧಾರಾವಾಹಿಗಳು, ಕಿರುತೆರೆ ರಿಯಾಲಿಟಿ ಶೋಗಳು ಮತ್ತು ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ. ಮಲಯಾಳಂ ಬಿಗ್ ಬಾಸ್ ಸೀಸನ್ 4 (Malayalam bigboss S4) ಅಲ್ಲಿ ಈಕೆ ಕಂಟೆಸ್ಟೆಂಟ್ ಕೂಡ ಆಗಿದ್ದರು. ಅದಾದ ಬಳಿಕ ಈಕೆ ಹೆಸರು ಇನ್ನಷ್ಟು ಪ್ರಖ್ಯಾತಿ ಆಯಿತು.
ಸೋಶಿಯಲ್ ಮೀಡಿಯಾದಲ್ಲೂ ಬಹಳ ಆಕ್ಟಿವ್ ಆಗಿರುವ ಇವರು ಆಗಾಗ ಹೊಸ ಫೋಟೋ ಶೂಟ್ಸ್ (new photoshoot and video’s) ಮಾಡಿಸಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇದುವರೆಗೆ ಅವರ ಎಲ್ಲಾ ಪೋಸ್ಟ್ ಗೂ ಲೈಕ್ ಮಾಡುತ್ತಿದ್ದವರು ಈಗ ಕ್ಯಾಕರಿಸಿ ಉಗಿಯುವ ರೀತಿ ಮಾಡಿಕೊಂಡಿದ್ದಾರೆ ಜಾನಕಿ ಸುಧೀರ್. ಇದೇ ಕಾರಣಕ್ಕಾಗಿ ಇವರು ದೇಶದಾದ್ಯಂತ ಟ್ರೋಲ್ (troll) ಕೂಡ ಆಗುತ್ತಿದ್ದಾರೆ. ಯಾಕೆಂದರೆ ನಟಿಮಣಿಯು ಟಾಪ್ ಲೆಸ್ (bold photos) ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತನ್ನ ದೇಹದ ಮೇಲ್ಭಾಗವನ್ನು ಇಂಚು ಬಟ್ಟೆ ಇಲ್ಲದೆ ಬರಿ ಬಂಗಾರದ ಒಡವೆಗಳಿಂದ ಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿರುವ ಈ ಫೋಟೋಶೂಟ್ ನೋಡಿ ನೆಟ್ಟಿಗಳು ಸೋಶಿಯಲ್ ಮೀಡಿಯಾದಲ್ಲಿ ಜಾನಕಿ ಸುಧೀರ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅವರ ಈ ಫೋಟೋಶೂಟ್ ಮತ್ತು ವಿಡಿಯೋಗಳನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ನೀವು ತಿಳಿಸಿ.