ನಿಮ್ಮ ಮನೆಯಲ್ಲಿ ಗುಂಡು ತುಂಡು ಏನು ಇಲ್ವೇನಯ್ಯ ಎಂದು ಅಂಬರೀಶ್ ಅವರು ಕೇಳಿದ ಒಂದೇ ಒಂದು ಮಾತಿಗಾಗಿ ವಿಷ್ಣು ದಾದಾ ಏನು ಮಾಡಿದರು ಗೊತ್ತಾ.? ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಹಾಗೂ ರೆಬಲ್ ಸ್ಟಾರ್ ಅಂಬರೀಶ್ (Amabrish) ಇವರಿಬ್ಬರ ಕಾಂಬಿನೇಷನ್ನೇ ಡೆಡ್ ಆಪೋಸಿಟ್ ಕಾಂಬಿನೇಷನ್. ಇಬ್ಬರದು ಕೂಡ ವಿಭಿನ್ನ ವ್ಯಕ್ತಿತ್ವ ವಿಷ್ಣು ದಾದಾ ಶಾಂತಸ್ವರೂಪದ ತಾಳ್ಮೆಯ ಮೂರ್ತಿ, ರೆಬಲ್ ಸ್ಟಾರ್ ಅಂಬರೀಶ್ ಅವರು ಒರಟು ಮಾತಿನ ಹೃದಯ ವೈಶಾಲ್ಯ ಉಳ್ಳ ಕಲಿಯುಗದ ಕರ್ಣ.
ಆದರೆ ಆಪೋಸಿಟ್ ಪೋಲ್ಸ್ ಅರ್ ಆಲ್ವೇಸ್ ಅಟ್ರಾಕ್ಟಿವ್ ಎನ್ನುವ ಇಂಗ್ಲಿಷ್ ಸಾಲಿನಂತೆ ಇವರಿಬ್ಬರಲ್ಲೂ ಇದ್ದ ಸ್ವಚ್ಛ ಮನಸ್ಸು ಶುದ್ಧ ಹೃದಯ ಇಬ್ಬರು ಆತ್ಮೀಯ ಸ್ನೇಹಿತರಾಗುವಂತೆ ಸೆಳೆದಿತ್ತು. ಇಡೀ ಭಾರತೀಯ ಚತರಂಗದಲ್ಲಿಯೇ ಸಿನಿಮಾ ಇಂಡಸ್ಟ್ರಿಯ ದಿಗ್ಗಜರುಗಳು ಎಂದರೆ ವಿಷ್ಣು ಹಾಗೂ ಅಂಬಿ ಅವರ ಕಡೆಗೆ ಎಲ್ಲರೂ ನೋಡುತ್ತಾರೆ ಆ ರೀತಿ ಇಡೀ ನಾಡಿಗೆ ಇವರಿಬ್ಬರ ಬಾಂಧವ್ಯದ ಬಗ್ಗೆ ತಿಳಿದಿತ್ತು.
ಸ್ವತಃ ವಿಷ್ಣುವರ್ಧನ್ ಅವರೇ ಒಂದು ಬಾರಿ ಹೇಳಿದ್ದರು ನನ್ನ ಇಹಲೋಕದ ಯಾತ್ರೆ ಮುಗಿದ ಸುದ್ದಿ ತಿಳಿದ ತಕ್ಷಣವೇ ಎಲ್ಲಿದ್ದರೂ ಅಂಬಿ ಎಲ್ಲಿದ್ದರೂ ಬರುತ್ತಾನೆ, ನನ್ನ ಹೆ’ಣಕ್ಕೆ ಹೆಗಲಾಗಿ ಸಾಗಿಸುತ್ತಾನೆ ಎಂದು. ಅದ್ಯಾವ ವಿ’ಷ ಘಳಿಗೆಯಲ್ಲಿ ಆ ನುಡಿ ನುಡಿದಿದ್ದರೋ ಆಕಾಲಿಕ ಮ’ರ’ಣಕ್ಕೆ ತುತ್ತಾದ ವಿಷ್ಣು ಅವರ ಎದುರು ಕುಳಿತು ಅಂಬಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುವಂತಾಯಿತು. ಇಂದು ಇಬ್ಬರು ಮಹನೀಯರು ಈ ಭೂಮಿ ಮೇಲೆ ಇಲ್ಲವಾದರೂ ಇನ್ನು ಅದೆಷ್ಟೋ ಜನರೇಷನ್ ವರೆಗೂ ಸ್ನೇಹಕ್ಕೆ ಉದಾಹರಣೆ ಕೊಡುವಂತೆ ಇದ್ದು ತೋರಿಸಿ ಹೋಗಿದ್ದಾರೆ.
ಇಡೀ ಇಂಡಸ್ಟ್ರಿಯಲ್ಲಿ ಅಂಬಿ ಬಿಟ್ಟರೆ ತನಗೆ ಯಾರು ಇಲ್ಲ ಎನ್ನುವಷ್ಟು ವಿಷ್ಣುವರ್ಧನ್ ಅವರು ಅಂಬರೀಶ್ ಅವರನ್ನು ಹಚ್ಚಿಕೊಂಡಿದ್ದರು. ಅಂಬರೀಶ್ ಅವರು ವಿಷ್ಣು ಅವರನ್ನು ಅದೇ ರೀತಿ ಹೃದಯದಲ್ಲಿ ಇಟ್ಟು ಸ್ನೇಹಿತನಿಗಿಂತಲೂ, ಸಹೋದರನಿಗಿಂತಲೂ ಮಿಗಿಲಾಗಿ ಪ್ರೀತಿಸುತ್ತಿದ್ದರು. ನಾಗರಹಾವು (Nagarahavu) ಸಿನಿಮಾದಿಂದಲೇ ಇವರಿಬ್ಬರ ಸ್ನೇಹ ಆರಂಭವಾಗಿತ್ತು. ನಾಗರಹಾವು ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ಹೀರೋ ರಾಮಚಾರಿ (Ramachari) ಆಗಿ ಇಂಚಿದ್ದರು ಮತ್ತು ಅಂಬರೀಶ್ ಅವರು ಜಲೀಲ (Jaleela) ಪಾತ್ರದಲ್ಲಿ ಖಳನಾಯಕನಾಗಿ ಮೊದಲ ಬಾರಿಗೆ ಮೇಲೆ ಕಾಣಿಸಿಕೊಂಡಿದ್ದರು.
ಕೊನೆಯ ದಿಗ್ಗಜರು (Diggajaru) ಸಿನಿಮಾ ಅಂತೂ ಇವರಿಬ್ಬರ ಜೀವನದ ಸಾರಕ್ಕೆ ಹಿಡಿದ ಕೈಗನ್ನಡಿಯ ರೀತಿ ಇತ್ತು. ನಮ್ಮ ಕರ್ನಾಟಕದ ಕೋಟ್ಯಾನು ಕೋಟಿ ವಿಷ್ಣು ಹಾಗೂ ಅಂಬಿ ಅಭಿಮಾನಿಗಳು ಇನ್ನು ನೂರು ವರ್ಷ ಕಳೆದರೂ ಈ ಸಿನಿಮಾ ಬಗ್ಗೆ ಮಾತನಾಡುತ್ತಾರೆ. ಅಷ್ಟರಮಟ್ಟಿಗೆ ದಿಗ್ಗಜರು ಸಿನಿಮಾ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಹೀಗೆ ಅಂಬಿ ಹಾಗು ವಿಷ್ಣು ಅವರ ಸ್ನೇಹದ ಬಗ್ಗೆ ಬರೆದರೆ ಪುಟಗಳ ಸಾಲದು. ವಿಷ್ಣುವರ್ಧನ್ ಅವರು ಅಂಬರೀಷ್ ಅವರಿಗಾಗಿ ಏನನ್ನು ಮಾಡಲು ಬೇಕಾದರು ತಯಾರಾಗಿದ್ದರು. ಅದಕ್ಕೆ ಸಾಕ್ಷಿಯ ರೀತಿ ಇದೆ ಈ ಘಟನೆ.
ವಿಷ್ಣುದಾದಾ ಅವರ ಮನೆಗೆ ಅಂಬರೀಶ್ ಅವರು ಯಾವಾಗಲೂ ಹೋಗುತ್ತಿದ್ದರು. ಹೀಗೆ ಒಮ್ಮೆ ಹೋದಾಗ ನಿಮ್ಮ ಮನೆಯಲ್ಲಿ ಗುಂಡು ತುಂಡು (Drinks) ಏನು ಇಲ್ವೇನಯ್ಯ ಎಂದು ಕೇಳಿದ್ದರು. ವಿಷ್ಣುವರ್ಧನ್ ಅವರಿಗೆ ಗೊತ್ತಿತ್ತು ಅಂಬರೀಶ್ ಗೆ ಇವೆರಡು ತುಂಬಾ ಇಷ್ಟ ಅಂತ. ಆದರೆ ವಿಷ್ಣುವರ್ಧನ್ ಅವರು ಇದನ್ನು ಮುಟ್ಟುತ್ತಿರಲಿಲ್ಲ ಆ ಕಾರಣಕ್ಕಾಗಿ ಅವರ ಮನೆಯಲ್ಲಿ ಇರಲಿಲ್ಲ. ಆದರೆ ತನ್ನ ಆತ್ಮೀಯ ಸ್ನೇಹಿತರಿಗೆ ಇಷ್ಟವಾದ್ದದ್ದು ತನ್ನ ಮನೆಯಲ್ಲಿ ಇಲ್ಲವಲ್ಲ ಎನ್ನುವ ಕಾರಣಕ್ಕಾಗಿ ಒಂದು ಬಾರ್ ಕೌಂಟರನ್ನು (Bar counter) ತಮ್ಮ ಮನೆಯಲ್ಲಿ ಓಪನ್ ಮಾಡಿಸೇ ಬಿಟ್ಟರು.
ವಿಷ್ಣುವರ್ಧನ್ ಅವರು ಅಂಬರೀಷ್ ಸ್ನೇಹಕ್ಕೆ ಎಷ್ಟು ಮಹತ್ವ ಕೊಡುತ್ತಿದ್ದರು ಎನ್ನುವುದನ್ನು ತಿಳಿಸುವುದಕ್ಕೆ ಈ ಘಟನೆಗಿಂತ ಉತ್ತಮ ಉದಾಹರಣೆ ಇಲ್ಲ ಎಂದೇ ಹೇಳಬಹುದು. ಇಂದು ಕರುನಾಡು ಇಂತಹ ಇಬ್ಬರು ಲೆಜೆಂಡ್ಗಳನ್ನು (Legend) ಕಳೆದುಕೊಂಡು ಬಡವಾಗಿದೆ.