ಸಾಹಸಸಿಂಹ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಅಪೂರ್ವ ನಟ. ನಾಗರಹಾವು ಸಿನಿಮಾದ ಚಿಗುರು ಮೀಸೆಯ ಬಿಸಿ ರಕ್ತದ ರಾಮಾಚಾರಿ ಪಾತ್ರದಿಂದ ಕೊನೆಯಲ್ಲಿ ಕಾಣಿಸಿಕೊಂಡ ಆಪ್ತರಕ್ಷಕನ ಪಾತ್ರದವರೆಗೆ ಪಾತ್ರವೇ ತಾವಾಗಿ ಕನ್ನಡ ಜನತೆಯ ಮನ ತುಂಬಿದವರು.
ಕನ್ನಡ ಸಿನಿಮಾ ರಂಗದಲ್ಲಿ ಅಚ್ಚಳಿಯದ ಹೆಸರಾಗಿರುವ ಇವರು ತಮ್ಮ ಹೆಸರಿನಲ್ಲಿ ಅದೆಷ್ಟೋ ದಾಖಲೆಗಳನ್ನು ಬರೆದು ಹೋಗಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಭಾರತದ ಎಲ್ಲಾ ಚಿತ್ರರಂಗಗಳಿಗೂ ಹೋಲಿಸಿದರೆ ಅತಿ ಹೆಚ್ಚು ದ್ವಿಪಾತ್ರದಲ್ಲಿ ಮತ್ತು ಅತಿ ಹೆಚ್ಚು ತ್ರಿಪಾತ್ರದಲ್ಲಿ ಕಾಣಿಸಿಕೊಂಡಿರುವ ಏಕೈಕ ನಟ ಎನ್ನುವ ಖ್ಯಾತಿ ಪಡೆದಿದ್ದಾರೆ ವಿಷ್ಣು ದಾದಾ.
ಈ ಸುದ್ದಿ ಓದಿ:- ಅದೊಂದು ಸಿನಿಮಾದಲ್ಲಿ ನಟಿಸಿದ ಬಳಿಕ ಅಣ್ಣಾವ್ರು ಮತ್ತೆಂದು ಪರಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಬಿಟ್ಟರು ಕಾರಣವೇನು ಗೊತ್ತಾ.?
ಇದರ ಜೊತೆಗೆ ವಿಷ್ಣುವರ್ಧನ್ ಅವರ ಹೆಸರಿನಲ್ಲಿರುವ ಮತ್ತೊಂದು ದಾಖಲೆ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ, ಕನ್ನಡಿಗರಾದ ಪ್ರತಿಯೊಬ್ಬರು ಹೆಮ್ಮೆಪಟ್ಟುಕೊಳ್ಳುವ ವಿಷಯ ಇದು ಈಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪವಾಗುತ್ತಿದೆ.
ಸಿನಿಮಾರಂಗದ ಯಾವುದೇ ಕ್ಷೇತ್ರವಾದರೂ ಕೂಡ ಅದರಲ್ಲಿ ದಾಖಲೆಗಳು ಆಗುವುದು ಹೊಸದಲ್ಲ ಮತ್ತು ಆ ದಾಖಲೆಗಳನ್ನು ಮದುವೆಯುವಂತಹ ಮತ್ತೊಂದು ರೆಕಾರ್ಡ್ ಬ್ರೇಕಿಂಗ್ ಆಗುವ ವಿಷಯವೂ ಕೂಡ ಹೊಸದೇನಲ್ಲ. ಆದರೆ ಇದುವರೆಗೂ ವಿಷ್ಣು ಸರ್ ಅವರ ಈ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಅಂತಹ ಒಂದು ವಿಶೇಷವಾದ ದಾಖಲೆ ಯಾವುದೆಂದರೆ ಇದು ನಾಗರಹಾವು ಸಿನಿಮಾ ಕುರಿತಾದ ದಾಖಲೆ ಆಗಿದೆ.
ಈ ಸುದ್ದಿ ಓದಿ:- ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ಅದ್ನೆಲ್ಲಾ ನಂಬುವಷ್ಟು ದಡ್ಡಿ ನಾನಲ್ಲ.! ಸ್ನೇಹಿತ್ ಮೇಲೆ ಗಂಭೀರ ಆರೋಪ ಮಾಡಿದ ನಮ್ರಾತ ಗೌಡ.!
ಕನ್ನಡದಲ್ಲಿ ನಾಗರಹಾವು ಎನ್ನುವ ಹೆಸರಿನಲ್ಲಿ ಮೂರು ಬಾರಿ ಸಿನಿಮಾ ಬಂದಿದೆ ಮತ್ತು ನಾಗರಹಾವು ಸಿನಿಮಾದಲ್ಲಿ ನಾಯಕ ಪಾತ್ರದಾರಿ ರಾಮಾಚಾರಿ ಎನ್ನುವ ಹೆಸರಿಗೆ ಒಂದು ಖದರ್ ಇದೆ. ವಿಷ್ಣುವರ್ಧನ್, ರವಿಚಂದ್ರನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅದೃಷ್ಟ ಬದಲಾಯಿಸಿದಂತಹ ಹೆಸರುಗಳಿವು ಎಂದರು ತಪ್ಪಾಗಲಾರದು.
ಸಿನಿಮಾ ಕುರಿತ ವಿಶೇಷವಾದ ಸಂಗತಿ ಏನೆಂದರೆ ಎಲ್ಲರಿಗೂ ತಿಳಿದಿರುವಂತೆ ನಾಗರಹಾವು ಸಿನಿಮಾ 29 ಡಿಸೆಂಬರ್ 1972 ರಲ್ಲಿ ತೆರೆ ಕಂಡಿತ್ತು. ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ವಿಷ್ಣುವರ್ಧನ್, ಅಂಬರೀಶ್, ಆರತಿ ಅಶ್ವಥ್ ಮುಂತಾದ ಬಹುತಾರಾಗಣ ಹೊಂದಿದ್ದ ಈ ಚಿತ್ರದ ಮೂಲಕ ಕನ್ನಡಕ್ಕೆ ಭರವಸೆಯ ಅದೆಷ್ಟೋ ಕಲಾವಿದರು ದಕ್ಕಿದರು, ಈ ರೀತಿ ಸಿಕ್ಕಿದ ರತ್ನಗಳಲ್ಲಿ ವಿಷ್ಣುವರ್ಧನ್ ಕೂಡ ಒಬ್ಬರು.
ಈ ಸುದ್ದಿ ಓದಿ:-ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!
ಅಗಷ್ಟೇ ಕಪ್ಪು ಬಿಳಿಪು ಸಿನಿಮಾದಿಂದ ಕಲರ್ ಚಿತ್ರಗಳತ್ತ ಕನ್ನಡ ಚಿತ್ರರಂಗ ಮುಖ ಮಾಡುತ್ತಿತ್ತು. ಸಿನಿ ಪ್ರೇಕ್ಷಕರ ನಿರೀಕ್ಷೆಗೆ ಮತ್ತು ಕಾಲಘಟ್ಟಕ್ಕೆ ಹೊಂದುವಂತಹ ಸಿನಿಮಾ ಆಗಿದ್ದರಿಂದ ಸಿನಿಮಾ ಸೂಪರ್ ಹಿಟ್ ಆಗಿ ದೊಡ್ಡ ದಾಖಲೆ ಬರೆದಿತ್ತು. ಇದರಲ್ಲಿ ಗ್ರೇಟ್ ಏನೆಂದರೆ ಮತ್ತೊಮ್ಮೆ 45 ವರ್ಷಗಳಾದ ಬಳಿಕ 20 ಜುಲೈ 2018ರಲ್ಲೂ ಡಿಜಿಟಲ್ ರೂಪದಲ್ಲಿ ಮತ್ತೆ ಬಿಡುಗಡೆ ಮಾಡಲಾಗಿತ್ತು.
ಆಗಲೂ ಕೂಡ ನಾಗರಹಾವು ಇನ್ನೊಮ್ಮೆ ಸೂಪರ್ ಹಿಟ್ ಆಯಿತು ಈ ಮೂಲಕ ನಟ ವಿಷ್ಣುವರ್ಧನ್ (Vishnuvardhan) ರವರು ಮರಣೋತ್ತರವಾಗಿಯೂ ಹೊಸ ದಾಖಲೆಗೆ ಪಾತ್ರರಾದರು. 45 ವರ್ಷಗಳ ಬಳಿಕ ನಾಗರಹಾವು ಬಿಡುಗಡೆ ಮಾಡಿದಾಗ ಅದೇ ದಿನ ಮೂರು ಹೊಸ ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ, ಹೊಸ 3 ಚಿತ್ರಗಳ ಒಂದು ವಾರದ ಕಲೆಕ್ಷನ್ಗಿಂತ ನಾಗರಹಾವು ಚಿತ್ರದ ಒಂದು ದಿನದ ಕಲೆಕ್ಷನ್ ಹೆಚ್ಚಾಗಿತ್ತು.
ಈ ಸುದ್ದಿ ಓದಿ:-ಕಾರ್ತಿಕ್ ಗೆದ್ರೆ ನಾನ್ಯಾಕೆ ಖುಷಿ ಪಡಬೇಕು.? ಸಂದರ್ಶನದಲ್ಲಿ ಖಡಕ್ ಉತ್ತರ ಕೊಟ್ಟ ನಟಿ ಸಂಗೀತಾ.!
ನಾಗರಹಾವು 169 ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ರೀ ರೀಲೀಸ್ ಆದ ಸಿನಿಮಾ ನರ್ತಕಿ ಥೀಯೇಟರ್ನಲ್ಲಿ 6 ದಿನಗಳಿಗೆ ಮುಂಗಡ ಬುಕಿಂಗ್ ಆಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಸ್ಟಾರ್ಗಳ ಹೊಸ ಚಿತ್ರಗಳೇ ಒಂದು ವಾರಕ್ಕೆ ಬುಕ್ ಆಗುವುದು ಕಷ್ಟ. ಅಂಥದ್ದರಲ್ಲಿ 45 ವರ್ಷದ ಹಿಂದಿನ ಚಿತ್ರವನ್ನು ಬಿಡುಗಡೆ ಮಾಡಿದಾಗಲೂ ವಿಷ್ಣುವರ್ಧನ್ ಅವರ ಸಿನಿಮಾಗೆ ಈ ಮಟ್ಟದ ಪ್ರತಿಕ್ರಿಯೆ ಸಿಕ್ಕಿತ್ತು. ರೀ ರಿಲೀಸ್ ಆದಾಗಲೂ ಈ ಪರಿ ಸಾಧನೆ ಮಾಡಿದ ಮೊದಲ ಸಿನಿಮಾ ನಾಗರಹಾವು ಆಗಿದೆ.